ಸಮಾನ ಕೃತಿ ಕಾರ್ಯಕ್ರಮದ ಅಂತರ್ಗತ ದೇಶಾದ್ಯಂತ ಆಂದೋಲನ, ಹಿಂದೂ ಧರ್ಮಜಾಗೃತಿ ಸಭೆ, ಪ್ರದರ್ಶನಗಳ ಆಯೋಜನೆ ಮಾಡುವೆವು !

ಅಧಿವೇಶನದಲ್ಲಿ ಪಾಲ್ಗೊಂಡ ಹಿಂದುತ್ವನಿಷ್ಠರು ಹಿಂದೂಸಂಘಟನೆ, ಧರ್ಮರಕ್ಷಣೆ ಮತ್ತು ಧರ್ಮಜಾಗೃತಿ ಈ ಉದ್ದೇಶದಿಂದ ವಿವಿಧ ಉಪಕ್ರಮಗಳನ್ನು ಸಮಾನ ಕೃತಿ ಕಾರ್ಯಕ್ರಮದ ಅಂತರ್ಗತ ಆಯೋಜಿಸಲು ನಿಶ್ಚಯಿಸಲಾಗಿದೆ. ಈ ಕೃತಿ ಕಾರ್ಯಕ್ರಮದ ಅಂತರ್ಗತ ಧರ್ಮ ಮತ್ತು ರಾಷ್ಟ್ರದ ಮೇಲಿನ ಆಘಾತಗಳ ವಿರುದ್ಧ ವಿವಿಧ ರಾಜ್ಯಗಳಲ್ಲಿ ಪ್ರತಿ ತಿಂಗಳು ೮೭ ಕಡೆಗಳಲ್ಲಿ ರಾಷ್ಟ್ರೀಯ ಹಿಂದೂ ಆಂದೋಲನಗಳನ್ನು ನಡೆಸಲು ಮತ್ತು ೫೩ ಕಡೆ ಸರಕಾರಕ್ಕೆ ನಿವೇದನೆಯನ್ನು ನೀಡಲು ನಿರ್ಧರಿಸಲಾಗಿದೆ. ಅದೇ ರೀತಿ ಮುಂಬರುವ ವರ್ಷದಲ್ಲಿ ೧೫೮ ಹಿಂದೂ ಧರ್ಮಜಾಗೃತಿ ಸಭೆಗಳನ್ನು, ಹಿಂದೂಗಳನ್ನು ಧರ್ಮಶಿಕ್ಷಿತಗೊಳಿಸಲು ೧೩೬ ಕಡೆಗಳಲ್ಲಿ ಪ್ರತಿ ವಾರ ಧರ್ಮಶಿಕ್ಷಣವರ್ಗಗಳನ್ನು ಹಾಗೂ  ೯೩ ಕಡೆಗಳಲ್ಲಿ ಸ್ವರಕ್ಷಣಾ ತರಬೇತಿವರ್ಗಗಳನ್ನು ನಡೆಸುವುದಾಗಿ ನಿಶ್ಚಯಿಸಲಾಗಿದೆ.
ಸ್ವದೇಶಿ ಪ್ರಸಾರ, ‘ಸೋಶಿಯಲ್ ಮೀಡಿಯಾ’ದ ಉಪಯೋಗ, ಪಾಶ್ಚಾತ್ಯ ರೂಢಿಗಳಿಗೆ ವಿರೋಧ, ಲವ್ ಜಿಹಾದ್‌ಗೆ ಪ್ರತ್ಯುತ್ತರ, ಮತಾಂತರಕ್ಕೆ ವಿರೋಧ, ಗೋರಕ್ಷಣೆ ಮತ್ತು ಗೋಸಂವರ್ಧನೆ, ಬಾಂಗ್ಲಾದೇಶಿ ನುಸುಳುಕೋರರ ಸಮಸ್ಯೆಗಳಿಗೆ ಉಪಾಯ, ಕಾಶ್ಮೀರದಲ್ಲಿ ಹಿಂದೂಗಳ ಪುನರ್ವಸತಿ ಮತ್ತು ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಮುಂತಾದ ದೇಶಗಳಲ್ಲಿ ಪೀಡಿತ ಹಿಂದೂಗಳ ಸುರಕ್ಷತೆಗೆ ಉಪಾಯ ಮುಂತಾದ ವಿಷಯಗಳ ಬಗ್ಗೆ ಈ ಪಂಚಮ ಅಖಿಲ ಭಾರತೀಯ ಹಿಂದೂ ಅಧಿವೇಶನದಲ್ಲಿ ವಿಚಾರಮಂಥನವನ್ನು ಮಾಡಲಾಯಿತು. ಎಲ್ಲ ಹಿಂದುತ್ವನಿಷ್ಠರು ಇದರಲ್ಲಿ ಪಾಲ್ಗೊಂಡಿದ್ದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಮಾನ ಕೃತಿ ಕಾರ್ಯಕ್ರಮದ ಅಂತರ್ಗತ ದೇಶಾದ್ಯಂತ ಆಂದೋಲನ, ಹಿಂದೂ ಧರ್ಮಜಾಗೃತಿ ಸಭೆ, ಪ್ರದರ್ಶನಗಳ ಆಯೋಜನೆ ಮಾಡುವೆವು !