ಕಾಂಗ್ರೆಸ್ಸನ್ನೇ ನಿಷೇಧಿಸಬೇಕು !

ಭಾರತಕ್ಕೆ ೧೯೪೭ ರಲ್ಲಿ ಸ್ವಾತಂತ್ರ್ಯ ದೊರೆತ ನಂತರ ಕಾಂಗ್ರೆಸ್ಸನ್ನು ವಿಸರ್ಜಿಸಬೇಕು, ಎಂಬ ವಿಚಾರವನ್ನು ಮೋಹನದಾಸ ಗಾಂಧಿಯವರು ಮಂಡಿಸಿದ್ದರು. ಕಾಂಗ್ರೆಸ್ ಪಕ್ಷವನ್ನು ಸ್ವಾತಂತ್ರ್ಯಪ್ರಾಪ್ತಿಗಾಗಿ ಸ್ಥಾಪಿಸಲಾಗಿತ್ತು ಮತ್ತು ಆ ಕಾರ್ಯ ಪೂರ್ಣವಾಗಿರುವುದರಿಂದ ಈಗ ಅದನ್ನು ವಿಸರ್ಜಿಸ ಬೇಕು, ಎಂಬುದು ಅದರ ಹಿಂದಿನ ಭಾವನೆಯಾಗಿತ್ತು; ಆದರೆ ಅಧಿಕಾರದ ರುಚಿ ಅನುಭವಿಸಬೇಕೆಂಬ ಸ್ವಾರ್ಥಕ್ಕಾಗಿ ನೆಹರೂ ಮತ್ತು ಅವರ ಬೆಂಬಲಿಗರು ಈ ಬೇಡಿಕೆಯನ್ನು ಸ್ವೀಕರಿಸಲಿಲ್ಲ. ಯಾವಾಗಲೂ ಗಾಂಧಿ ಹಾಗೂ ಗಾಂಧಿ ಹತ್ಯೆಯನ್ನು ಜಪಿಸುವ ಕಾಂಗ್ರೆಸ್‌ನ ನಿಜಸ್ವರೂಪ ಇದಾಗಿತ್ತು ಮತ್ತು ಈಗಲೂ ಅದೇ ರೀತಿಯಿದೆ. ೨೦೧೪ ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಯವರು ಸಹ ಗಾಂಧಿಯವರ ಈ ಇಚ್ಛೆಯನ್ನು ಪೂರ್ಣಗೊಳಿಸುವಂತೆ ಜನತೆಗೆ ಕರೆ ನೀಡಿದ್ದರು ಮತ್ತು ಜನತೆಯು ಗಾಂಧಿಯವರ ಈ ಇಚ್ಛೆಯ ಮೊದಲ ಹೆಜ್ಜೆ ಎಂದು ಕಾಂಗ್ರೆಸ್ಸನ್ನು ಅಧಿಕಾರದಿಂದ ಕೆಳಗಿಳಿಸಿ ಭಾಜಪವನ್ನು ಕೇಂದ್ರದಲ್ಲಿ ಅಧಿಕಾರಕ್ಕೇರಿಸಿತು. ಈಗ ಎರಡನೇ ಹಂತದ ಹೆಜ್ಜೆಯನ್ನಿಡುವ ಭಾಗವು ಕೇಂದ್ರದ ಭಾಜಪದ್ದಾಗಿದೆ.
ಕೇಂದ್ರ ಸರಕಾರವು ಈ ದೃಷ್ಟಿಯಿಂದ ಪ್ರಯತ್ನಿಸುವುದು ಆವಶ್ಯಕವಾಗಿದೆ ಮತ್ತು ಅದು ಜನತೆಗೆ ಕಾಣಿಸಬೇಕು. ಇಲ್ಲದಿದ್ದರೆ ಜನರ ಅಪೇಕ್ಷಾಭಂಗ ಮಾಡಿದಂತಾಗುವುದು. ಮೂಲದಲ್ಲಿ ಕಾಂಗ್ರೆಸ್‌ನ ಪಾಪಗಳನ್ನು ನೋಡಿದಾಗ ಅದರ ಮೇಲೆ ನಿಷೇಧ ಹಾಕುವುದು ಆವಶ್ಯಕವಾಗಿದೆ ಮತ್ತು ಈ ಕಾರ್ಯವನ್ನು ಕೇಂದ್ರಸರಕಾರವು ಕಳೆದ ೨ ವರ್ಷಗಳೊಳಗೆ ಮಾಡುವುದು ಅವಶ್ಯವಾಗಿತ್ತು. ಆದರೆ ಹಾಗಾಗುತ್ತಿರುವುದು ಮಾತ್ರ ಕಾಣಿಸುತ್ತಿಲ್ಲ. ಆದರೂ ಈಗ ಕಾಲ ಮಿಂಚಿ ಹೋಗಿಲ್ಲ. ಭಾಜಪವು ಕಾಂಗ್ರೆಸ್‌ನ ಪಾಪಗಳ ಪಟ್ಟಿಯನ್ನು ಮಾಡಿ ಅದನ್ನು ಜನರೆದುರು ಮಂಡಿಸಬೇಕು ಮತ್ತು ಅದರ ಆಧಾರದಲ್ಲಿ ಜನತೆಗೆ ಕರೆ ನೀಡಿ ನಿಷೇಧದ ಬೇಡಿಕೆಯನ್ನು ಮಾಡಬೇಕು. ಭಾರತದ ವಿಭಜನೆಯಿಂದ ಹಿಡಿದು ಕಲ್ಲಿದ್ದಲು ಹಗರಣದ ತನಕ ಎಲ್ಲ ಪಾಪಗಳಿಗಾಗಿ ಈ ಶಿಕ್ಷೆಯು ಕಡಿಮೆಯಾಗಿದೆ. ಆದರೆ ಹಾಗೆ ಮಾಡುವುದು ಅತ್ಯಗತ್ಯವಾಗಿದೆ. ಇದರಿಂದ ಈಗ ಒಂದು ಹೊಸ ಪಾಪವು ಹೊರಬಂದಿದೆ. ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಡೆದ ಭಯೋತ್ಪಾದನಾ ಆಕ್ರಮಣದಲ್ಲಿ ಇಬ್ಬರು ಭಯೋತ್ಪಾದಕರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಈ ಜಿಹಾದ್‌ಗಾಗಿ ಡಾ.ಝಾಕೀರ್ ನಾಯಿಕ್ ಇವರೇ ತಮಗೆ ಪ್ರೇರಣೆ ಎಂದು ಬರೆದಿದ್ದರು. ಇದೇ ಝಾಕೀರ್ ನಾಯಿಕ್ ವಿರುದ್ಧ ಕಾರ್ಯಾಚರಣೆ ಮಾಡಲು ೨೦೧೨ ರಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಪ್ರಯತ್ನಿಸಿತ್ತು ಮತ್ತು ದೂರನ್ನು ಸಹ ದಾಖಲಿಸಲಾಗಿತ್ತು. ಅನಂತರ ಎಫ್.ಐ.ಆರ್.ಅನ್ನು ದಾಖಲಿಸಲಾಗಿತ್ತು. ಆದರೆ ಇದೇ ಕಾಂಗ್ರೆಸ್‌ನ ಅಂದಿನ ಸರಕಾರವು ಮುಸಲ್ಮಾನರ ಓಲೈಕೆಗಾಗಿ ಜಿಹಾದ್‌ಅನ್ನೇ ಬೆಂಬಲಿಸಿತು. ಇಂದು ಅದರ ಪರಿಣಾಮ ಕಾಣಿಸಲಾರಂಭವಾಗಿದೆ. ವಾಸ್ತವದಲ್ಲಿ ಕಾಂಗ್ರೆಸ್‌ನಿಂದಾಗಿಯೇ ಪಾಕಿಸ್ತಾನದ ನಿರ್ಮಿತಿ ಮತ್ತು ಬಾಂಗ್ಲಾದೇಶದ ನಿರ್ಮಿತಿಯಾಯಿತು. ಇದೇ ಒಂದು ದೊಡ್ಡ ಪಾಪವಾಗಿದೆ. ಅನಂತರ ಖಲಿಸ್ತಾನವಾದ, ಕಾಶ್ಮೀರ ದಲ್ಲಿನ ಭಯೋತ್ಪಾದನೆ, ಅಸ್ಸಾಂನಲ್ಲಿನ ಬಾಂಗ್ಲಾದೇಶೀಯರ ನುಸುಳುವಿಕೆ, ಕೇರಳದಲ್ಲಿ ಜಿಹಾದಿಗಳಿಂದಾಗು ತ್ತಿರುವ ಭಯೋತ್ಪಾದನೆ ಇವೆಲ್ಲವೂ ಕಾಂಗ್ರೆಸ್‌ನ ಕೊಡುಗೆಗಳಾಗಿವೆ. ಹಾಗಾಗಿ ಕಾಂಗ್ರೆಸ್ ಮುಕ್ತವಲ್ಲ, ಕಾಂಗ್ರೆಸ್ಸನ್ನು ನಿಷೇಧಿಸುವುದೇ ಆವಶ್ಯಕವಾಗಿದೆ !

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕಾಂಗ್ರೆಸ್ಸನ್ನೇ ನಿಷೇಧಿಸಬೇಕು !