ಕೈರಾನಾ, ಕಾಂಧಲಾ, ಆಗ್ರಾದ ನಂತರ ಗಾಝಿಯಾಬಾದ್‌ನ ಕೈಲಾ ಭಟ್ಟಾ ಪರಿಸರದಲ್ಲಿ ೩೦೦ ಹಿಂದೂ ಕುಟುಂಬಗಳ ಪಲಾಯನ !

 ಇನ್ನೊಂದು ಕಾಶ್ಮೀರವಾಗುತ್ತಿರುವ ಉತ್ತರಪ್ರದೇಶ !
ಗಾಝಿಯಾಬಾದ್ (ಉತ್ತರಪ್ರದೇಶ) : ಉತ್ತರ ಪ್ರದೇಶದ ಕೈರಾನಾ, ಕಾಂಧಲಾ ಮತ್ತು ಆಗ್ರಾದಿಂದ ಹಿಂದೂಗಳು ಪಲಾಯನಗೈಯ್ಯುತ್ತಿರುವುದು ಬೆಳಕಿಗೆ ಬರುತ್ತಿರುವಾಗ ಈಗ ಗಾಝಿಯಾಬಾದ್‌ನಿಂದ ೩೦೦ ಹಿಂದೂ ಕುಟುಂಬಗಳು ಪಲಾಯನಗೈದಿರುವ ವಾರ್ತೆ ಬಂದಿದೆ. ಈ ಕುಟುಂಬಗಳು ಇಲ್ಲಿನ ಕೈಲಾ ಭಟ್ಟಾ ಕ್ಷೇತ್ರದ ವಾಲ್ಮೀಕಿ ಸಮಾಜದ್ದಾಗಿವೆಯೆಂದು ಹೇಳಲಾಗುತ್ತಿದೆ. ಈ ಹಿಂದೂಗಳ ಆರೋಪವೇನೆಂದರೆ, ಮುಸಲ್ಮಾನರು ಬಹುಸಂಖ್ಯಾತ ಕ್ಷೇತ್ರವಾಗಿರುವರಿಂದ ಅವರಿಗೆ  ಆಮಿಷ ತೋರಿಸಿ ಹಾಗೂ ಬೆದರಿಸಿ ಪಲಾಯನ ಮಾಡುವಂತೆ ಮಾಡಲಾಗಿದೆ. ‘ಮುಸಲ್ಮಾನರ ಹೆಚ್ಚು ಸಂಖ್ಯೆಯಲ್ಲಿರುವ ಕ್ಷೇತ್ರವಾಗಿರುವರಿಂದ ಇಲ್ಲಿ ಪ್ರತಿದಿನ ಹಿಂದೂ ಹುಡುಗಿಯರಿಗೆ ಚುಡಾಯಿಸಲಾಗುತ್ತಿತ್ತು. ಅವರನ್ನು ಬೆದರಿಸಲಾಗುತ್ತಿತ್ತು. ಆದ್ದರಿಂದ ಇಲ್ಲಿ ವಾಸಿಸುವುದು ಅಸಾಧ್ಯವಾಗಿತ್ತು. ಇಲ್ಲಿನ ಗುಜರಿ ವ್ಯಾಪಾರಿ ಆಗಿರುವ ಮುಸಲ್ಮಾನನು ಹಿಂದೂಗಳಿಗೆ ಬೆದರಿಸಿ ಪಲಾಯನ ಗೈಯ್ಯುವಂತೆ ಮಾಡಿದ್ದಾನೆ, ಎಂದು ಆರೋಪವಿದೆ. ಈ ವ್ಯಾಪಾರಿ ಇಲ್ಲಿನ ೫೦ ಹಿಂದೂಗಳ ಮನೆಗಳನ್ನು ಖರೀದಿಸಿದ್ದಾನೆ. ಅವನು ಬೆದರಿಸುವಾಗ ‘ನಮ್ಮ ಸಂಖ್ಯೆ ಹೆಚ್ಚುತ್ತಿದೆ, ಅದರ ಮೊದಲೇ ನೀವು ಇಲ್ಲಿಂದ ಹೊರಟುಹೋಗಬೇಕು, ಇಲ್ಲದಿದ್ದರೆ, ನೀವು ಅನುಭವಿಸಬೇಕಾಗುವುದು, ನಿಮಗೆ ಬೇಕಾದಷ್ಟು ಹಣ ತೆಗೆದುಕೊಂಡು ಮನೆಗಳನ್ನು ಬಿಟ್ಟು ಹೋಗಿ’ ಎನ್ನುತ್ತಾನೆ, ಎಂದು  ವಾಲ್ಮೀಕಿ ಸಮಾಜದ ಮುಖಂಡ ಪ್ರದೀಪ ಚೌಹಾನ್ ಇವರು ಹೇಳಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕೈರಾನಾ, ಕಾಂಧಲಾ, ಆಗ್ರಾದ ನಂತರ ಗಾಝಿಯಾಬಾದ್‌ನ ಕೈಲಾ ಭಟ್ಟಾ ಪರಿಸರದಲ್ಲಿ ೩೦೦ ಹಿಂದೂ ಕುಟುಂಬಗಳ ಪಲಾಯನ !