‘ಗುರುರ್ಬ್ರಹ್ಮಾ ಗುರುರ್ವಿಷ್ಣುಃ ...’ ಈ ಶ್ಲೋಕದ ಪ್ರತ್ಯಕ್ಷ ಅನುಭವ ಪಡೆಯುತ್ತಿರುವುದು ಸನಾತನದ ಸಾಧಕರ ಮಹಾಭಾಗ್ಯ !

(ಪೂ.) ಶ್ರೀ. ಸಂದೀಪ ಆಳಶಿ
ಗುರುರ್ಬ್ರಹ್ಮಾ ಗುರುರ್ವಿಷ್ಣು ರ್ಗುರುರ್ದೇವೋ ಮಹೇಶ್ವರಃ
ಗುರುಃಸಾಕ್ಷಾತ್ ಪರಬ್ರಹ್ಮ ತಸ್ಮೆ  ಶ್ರೀಗುರವೇ ನಮಃ ॥
ಅರ್ಥ : ಸ್ವತಃ ಗುರುಗಳೇ ಬ್ರಹ್ಮ, ಶ್ರೀವಿಷ್ಣು ಮತ್ತು ಮಹೇಶ ಆಗಿದ್ದಾರೆ. ಅವರೇ ಪರಬ್ರಹ್ಮರಾಗಿದ್ದಾರೆ. ಇಂತಹ ಶ್ರೀ ಗುರುಗಳಿಗೆ ನಾನು ನಮಸ್ಕರಿಸುತ್ತೇನೆ.
ಸಾಧನೆಯನ್ನು ಆರಂಭಿಸಿದಂದಿನಿಂದ ನನಗೆ ಹೀಗನಿಸುತ್ತಿತ್ತು, ಅಂದರೆ ಸಾಧಕರಿಗೆ ಗುರುಗಳ ವಿಷಯದಲ್ಲಿ ಅಪಾರ ಭಾವ ನಿರ್ಮಾಣವಾಗಲು ಗುರುಗಳನ್ನು ಸಾಕ್ಷಾತ್ ಬ್ರಹ್ಮ-ವಿಷ್ಣು-ಮಹೇಶ ಇವರ ಸಮಾನವೆಂದು ನಂಬಲಾಗಿದೆ. ‘ಗುರುಗಳು ತ್ರಿದೇವರಿಗೆ ಸಮಾನವಾಗಿದ್ದಾರೆ’, ಎಂಬ ಭಾವ ಇರುವುದು ಹಾಗೂ ಗುರುಗಳು ಪ್ರತ್ಯಕ್ಷ ಹಾಗೆ ಇರುವುದು, ಇದರಲ್ಲಿ ವ್ಯತ್ಯಾಸವಿದೆ.
‘ಪ.ಪೂ. ಡಾಕ್ಟರರು ಶ್ರೀವಿಷ್ಣುವಿನ ಅವತಾರವೇ ಆಗಿದ್ದಾರೆ’, ಎಂದು ಮಹರ್ಷಿಗಳು ಹೇಳಿದ್ದಾರೆ. ‘ಗುರುರ್ಬ್ರಹ್ಮಾ ಗುರುರ್ವಿಷ್ಣುಃ...’ ಈ ಶ್ಲೋಕದಿಂದ ಸನಾತನದ ಸಾಧಕರಿಗೆ ಬರುತ್ತಿರುವ ಪ್ರತ್ಯಕ್ಷ ಅನುಭವವು ಸಾಧಕರ ಎಷ್ಟು ದೊಡ್ಡ ಭಾಗ್ಯವಾಗಿದೆ ! ಕೇವಲ ಸನಾತನದ ಸಾಧಕರಿಗೆ ಮಾತ್ರವಲ್ಲ, ಅಖಿಲ ಮನುಕುಲಕ್ಕೇ ಇದು ಮಹಾಭಾಗ್ಯವಾಗಿದೆ. ‘ಎಲ್ಲರೂ ಚೆನ್ನಾಗಿ ಸಾಧನೆ ಮಾಡಿ ತಳಮಳದಿಂದ ರಾಷ್ಟ್ರ ಹಾಗೂ ಧರ್ಮ ಕಾರ್ಯ ಮಾಡಿ ಪ.ಪೂ. ಡಾಕ್ಟರರ ಕೃಪೆಯನ್ನು ಸಂಪಾದಿಸಿ ಈ ಅಮೃತಪರ್ವದ ಲಾಭ ಪಡೆಯಲಿ’, ಎಂದು ಈಶ್ವರನ ಚರಣಗಳಲ್ಲಿ ಪ್ರಾರ್ಥನೆ !’ - (ಪೂ.) ಶ್ರೀ. ಸಂದೀಪ ಆಳಶಿ (೩೦.೫.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
‘ಗುರುರ್ಬ್ರಹ್ಮಾ ಗುರುರ್ವಿಷ್ಣುಃ ...’ ಈ ಶ್ಲೋಕದ ಪ್ರತ್ಯಕ್ಷ ಅನುಭವ ಪಡೆಯುತ್ತಿರುವುದು ಸನಾತನದ ಸಾಧಕರ ಮಹಾಭಾಗ್ಯ !