ಧರ್ಮಶಿಕ್ಷಣ ನೀಡುವ ಮಾಲಿಕೆ !

ನಮ್ಮ ದಿನಚರಿ ಹೇಗಿರಬೇಕು ?
ನಮ್ಮ ದಿನಚರಿಯು ನಿಸರ್ಗದ ಮೇಲೆ ಎಷ್ಟು ಆಧರಿಸಿರುತ್ತದೆಯೋ, ಅಷ್ಟು ಅದು ಆರೋಗ್ಯಕ್ಕೆ ಪೂರಕವಾಗಿರುತ್ತದೆ. ನಿಸರ್ಗದ ಮತ್ತು ಅಧ್ಯಾತ್ಮದ ದೃಷ್ಟಿಯಿಂದ, ದಿನಚರಿಗೆ ಸಂಬಂಧಿಸಿದ ಆಚಾರಗಳನ್ನು ಪಾಲಿಸುವ ಯೋಗ್ಯ ಪದ್ಧತಿ ಮತ್ತು ಅವುಗಳ ಹಿಂದಿನ ಸೂಕ್ಷ್ಮಸ್ತರದ ಶಾಸ್ತ್ರೀಯ ಕಾರಣ ಮೀಮಾಂಸೆಗಳನ್ನು ಈ ಮಾಲಿಕೆಯಲ್ಲಿ ನೀಡಲಾಗುವುದು. ಇದನ್ನು ಓದಿ ಹಿಂದೂಗಳು ನಮ್ಮ ಆಚಾರಧರ್ಮದ ಶ್ರೇಷ್ಠತೆ ತಿಳಿದು, ಅದನ್ನು ಪ್ರತ್ಯಕ್ಷ ಆಚರಣೆಯಲ್ಲಿ ತರಲು ಮತ್ತು ಮಕ್ಕಳಲ್ಲೂ ಸಂಸ್ಕಾರ ಮೂಡಿಸಲು ಪ್ರೇರಣೆ ಸಿಗಲೆಂದು ಶ್ರೀಗುರುಚರಣಗಳಲ್ಲಿ ಪ್ರಾರ್ಥನೆ.
೧. ಮಲಮೂತ್ರ ವಿಸರ್ಜನೆಯನ್ನು ಹೇಗೆ ಮಾಡಬೇಕು ? ಮತ್ತು ಅದರ ಹಿಂದಿನ ಶಾಸ್ತ್ರವೇನು ?
೧. ಶರೀರವನ್ನು ಬಟ್ಟೆಗಳಿಂದ ಮುಚ್ಚಿಕೊಂಡು ಮತ್ತು ಮಸ್ತಕಕ್ಕೆ ಬಟ್ಟೆಯನ್ನು ಸುತ್ತಿಕೊಂಡು ಮಲ ಮೂತ್ರ ವಿಸರ್ಜನೆ ಮಾಡಬೇಕು

ಅ. ಶಾಸ್ತ್ರ - ಮಲಮೂತ್ರ ವಿಸರ್ಜನೆಯಲ್ಲಿನ ರಜ-ತಮಾತ್ಮಕ ಲಹರಿಗಳು ಶರೀರಕ್ಕೆ ನೇರವಾಗಿ ಸ್ಪರ್ಶವಾಗಬಾರದೆಂದು ಮಸ್ತಕವನ್ನು (ತಲೆಯನ್ನು) ಮತ್ತು ಶರೀರವನ್ನು ಬಟ್ಟೆಗಳಿಂದ ಮಚ್ಚುವುದು ಆವಶ್ಯಕವಾಗಿದೆ : ‘ಮಲಮೂತ್ರ ವಿಸರ್ಜನೆಯು ರಜ-ತಮ ಪ್ರಕ್ರಿಯೆಯಾಗಿರುವುದರಿಂದ ಅದರಲ್ಲಿನ ರಜ-ತಮಾತ್ಮಕ ಲಹರಿಗಳು ಶರೀರಕ್ಕೆ ನೇರವಾಗಿ ಸ್ಪರ್ಶವಾಗಬಾರದೆಂದು ತಲೆಯನ್ನು ಮತ್ತು ಶರೀರ ವನ್ನು ಬಟ್ಟೆಗಳಿಂದ ಮುಚ್ಚುವುದು ಆವಶ್ಯಕವಾಗಿದೆ. ತಲೆಯ ಮೇಲೆ ಹಾಕಿಕೊಂಡ ಬಟ್ಟೆಯಿಂದಾಗಿ (ಟೊಪ್ಪಿ, ಟಾವೆಲ್ ಇತ್ಯಾದಿ) ಬ್ರಹ್ಮರಂಧ್ರವು ಸ್ವಲ್ಪ ಪ್ರಮಾಣದಲ್ಲಿ ಸುರಕ್ಷಿತವಾಗಿರುತ್ತದೆ. ಬಟ್ಟೆಗಳನ್ನು ಹಾಕಿಕೊಳ್ಳುವುದರಿಂದ ದಿನವಿಡೀ ಆಗುವ ರಜ-ತಮಾತ್ಮಕ ಹಲ್ಲೆಗಳಿಂದ ಸ್ವಲ್ಪ ಪ್ರಮಾಣದಲ್ಲಿ ಜೀವದ ರಕ್ಷಣೆಯಾಗುತ್ತದೆ.’
೨. ಮೂತ್ರ ಮತ್ತು ಶೌಚವಿಧಿಗೆ ಹೋಗುವುದಕ್ಕಿಂತ ಮೊದಲು ಜನಿವಾರವನ್ನು ಬಲಕಿವಿಯ ಮೇಲೆ ಹಾಕಿಕೊಳ್ಳಬೇಕು
೨ ಅ. ಮಲಮೂತ್ರ ವಿಸರ್ಜನೆಯ ಸಮಯದಲ್ಲಿ ಜನಿವಾರವನ್ನು ಬಲಕಿವಿಯ ಮೇಲಿಡುವುದರ ಶಾಸ್ತ್ರ
೧. ನಮ್ಮ ಅಶುಚಿತ್ವ (ಅಸ್ವಚ್ಛತೆಯ) ಅವಸ್ಥೆಯನ್ನು ಶುಚಿತಗೊಳಿಸಲು (ಸ್ವಚ್ಛವಾಗಿಡಲು) ಈ ಕೃತಿಯು ಉಪಯೋಗಕ್ಕೆ ಬರುತ್ತದೆ. ಕೈ-ಕಾಲುಗಳನ್ನು ತೊಳೆದು ಕೊಂಡು ಬಾಯಿ ಮುಕ್ಕಳಿಸಿದ ಮೇಲೆ ಜನಿವಾರವನ್ನು ಕಿವಿಯ ಮೇಲಿನಿಂದ ತೆಗೆಯಬೇಕು. ಇದರ ಹಿಂದಿನ ಶಾಸ್ತ್ರೀಯ ಕಾರಣವೇನೆಂದರೆ ಶರೀರದ ನಾಭಿಯ ಮೇಲಿನ ಭಾಗವು ಧಾರ್ಮಿಕ ಕಾರ್ಯಗಳಿಗೆ ಪವಿತ್ರ ಮತ್ತು ಅದರ ಕೆಳಗಿನ ಭಾಗವು ಅಪವಿತ್ರ ಎಂದು ತಿಳಿದುಕೊಳ್ಳಲಾಗಿದೆ.
೨. ಆದಿತ್ಯ, ವಸು, ರುದ್ರ, ಅಗ್ನಿ, ಧರ್ಮ, ವೇದ, ಆಪ, ಸೋಮ, ಅನಿಲ ಮುಂತಾದ ಎಲ್ಲ ದೇವತೆಗಳ ವಾಸ್ತವ್ಯವು ಬಲಕಿವಿಯಲ್ಲಿರುವುದರಿಂದ ಬಲಕಿವಿಗೆ ಬಲಗೈಯನ್ನು ಸ್ಪರ್ಶಿಸಿದರೆ ಆಚಮನದ ಫಲ ಸಿಗುತ್ತದೆ. ಇಂತಹ ಪವಿತ್ರವಾದ ಬಲಕಿವಿಯ ಮೇಲೆ ಯಜ್ಞೋಪವೀತವನ್ನು (ಜನಿವಾರವನ್ನು) ಇರಿಸಿದರೆ ಅಶುಚಿತ್ವವು ಬರುವುದಿಲ್ಲ.
೩. ಬಲಕಿವಿಯ ಮೇಲೆ ಜನಿವಾರವನ್ನು ಹಾಕಿಕೊಳ್ಳುವುದರಿಂದ ಜನಿವಾರದಲ್ಲಿರುವ ಬ್ರಾಹ್ಮ ತೇಜವು ಕಿವಿಯ ಟೊಳ್ಳಿಗೆ ಸ್ಪರ್ಶವಾಗುವುದರಿಂದ ಜೀವದ ಬಲನಾಡಿಯು ಕಾರ್ಯನಿರತವಾಗುತ್ತದೆ ಮತ್ತು ಜೀವದ ಸುತ್ತಲೂ ಕಡಿಮೆ ಕಾಲಾವಧಿಯಲ್ಲಿ ತೇಜೋಮಯ ಲಹರಿಗಳ ಸಂರಕ್ಷಣಾತ್ಮಕ ವಾಯುಮಂಡಲವು ತಯಾರಾಗುತ್ತದೆ. ಮೂತ್ರ ಮತ್ತು ಶೌಚದಂತಹ ರಜ- ತಮಾತ್ಮಕ ಕರ್ಮಗಳನ್ನು ಮಾಡುವಾಗ ಕಡಿಮೆ ಕಾಲಾವಧಿಯಲ್ಲಿ ಸಂರಕ್ಷಣಾತ್ಮಕ ಕಾರ್ಯವನ್ನು ಮಾಡುವ ಸೂರ್ಯನಾಡಿಯನ್ನು ಜಾಗೃತಗೊಳಿಸಲು ಜನಿವಾರವನ್ನು ಬಲಕಿವಿಯ ಮೇಲೆ ಹಾಕಿಕೊಳ್ಳುತ್ತಾರೆ.
೪. ಜನಿವಾರವು ಸೊಂಟವನ್ನು ಸ್ಪರ್ಶಿಸುತ್ತಿರುತ್ತದೆ. ಮೂತ್ರ ಮತ್ತು ಶೌಚವಿಧಿಯಂತಹ ಪ್ರಕ್ರಿಯೆಗಳಲ್ಲಿ ದೇಹದಲ್ಲಾಗುವ ರಜ-ತಮಾತ್ಮಕ ಲಹರಿಗಳ ರೂಪಾಂತರಾತ್ಮಕ ಬದಲಾವಣೆಯಿಂದಾಗಿ ಸೊಂಟದ ಸುತ್ತಲಿನ ಭಾಗವು ಅಶುದ್ಧವಾಗುತ್ತದೆ. ಜನಿವಾರವು ಈ ಸೊಂಟದ ಸುತ್ತಲಿನ ಅಶುದ್ಧ ಭಾಗವನ್ನು ಸ್ಪರ್ಶಿಸಿದರೆ ಅದರ ಪಾವಿತ್ರ್ಯವು ಕಡಿಮೆಯಾಗುತ್ತದೆ. ಹೀಗಾಗ ಬಾರದೆಂದು ಮೂತ್ರ ಮತ್ತು ಶೌಚಾದಿ ವಿಧಿಗಳ ಸಮಯದಲ್ಲಿ ಜನಿವಾರವನ್ನು ಬಲಕಿವಿಯ ಮೇಲೆ ಹಾಕುವ ಆಚಾರವಿದೆ.
೩. ಕಾಲ, ದಿಕ್ಕು ಮತ್ತು ಮಲಮೂತ್ರ ವಿಸರ್ಜನೆ
೩ ಅ. ಮೊದಲನೆಯ ವಿಚಾರದಂತೆ : ಮಲಮೂತ್ರ ವಿಸರ್ಜನೆ ಮಾಡುವಾಗ ಹಗಲಿನಲ್ಲಿ ಮತ್ತು ಸಾಯಂಕಾಲದ ಸಮಯದಲ್ಲಿ ಉತ್ತರ ದಿಕ್ಕಿನತ್ತ ಮತ್ತು ರಾತ್ರಿಯ ಸಮಯದಲ್ಲಿ ದಕ್ಷಿಣ ದಿಕ್ಕಿನತ್ತ ಮುಖ ಮಾಡಬೇಕು.
೩ ಅ ೧. ಶಾಸ್ತ್ರ
ಅ. ಉತ್ತರ ದಿಕ್ಕಿನಲ್ಲಿನ ಸರ್ವಸಮಾವೇಶಕವಾಗಿ ರುವ ಘನೀಕೃತ ಶಕ್ತಿಯಲ್ಲಿ ಮಲಮೂತ್ರ ವಿಸರ್ಜನೆಯಲ್ಲಿನ ರಜ-ತಮಾತ್ಮಕ ಲಹರಿಗಳನ್ನು ವಿಲೀನೀಕರಣ ಮಾಡಲು ಸಾಧ್ಯವಾಗುವುದು : ಉತ್ತರ ದಿಕ್ಕಿನಲ್ಲಿ ಗುರುಧಾರಣೆಯ ವಾಸ್ತವ್ಯವಿರುತ್ತದೆ. ಗುರುಧಾರಣೆಯು ಸರ್ವಸಮಾವೇಶಕವಾಗಿರುವುದರಿಂದ ಯಾವುದೇ ಪಾಪಯುಕ್ತ ಘಟಕವನ್ನು ತನ್ನಲ್ಲಿ ಸಮಾವೇಶ ಮಾಡಿಕೊಳ್ಳುತ್ತದೆ. ಈ ಗುರುಧಾರಣೆ ಯನ್ನು ‘ಜನಕಧಾರಣೆ’ ಅಥವಾ ‘ಪಿತೃಧಾರಣೆ’ ಎಂದೂ ಹೇಳುತ್ತಾರೆ. ಬೆಳಗ್ಗಿನಿಂದ ಸಾಯಂಕಾಲದವರೆಗೆ ರಜ-ತಮದ ಪ್ರಾಬಲ್ಯವು ಹೆಚ್ಚಾಗುತ್ತಾ ಹೋಗುತ್ತದೆ. ಈ ಕಾಲಾವಧಿಯಲ್ಲಿ ಉತ್ತರ ದಿಕ್ಕಿನಲ್ಲಿರುವ, ರಜ-ತಮಾತ್ಮಕ ಘಟಕಗಳನ್ನು ವಿಸರ್ಜನೆ ಮಾಡುವ ಲಹರಿಗಳು ಉತ್ತೇಜಕ ಸ್ಥಿತಿಯಲ್ಲಿರುತ್ತವೆ. ಆದುದರಿಂದ ಮಲಮೂತ್ರ ವಿಸರ್ಜನೆಯ ರಜ-ತಮಾತ್ಮಕ ಕರ್ಮ ಗಳನ್ನು ಪಾಪಮುಕ್ತಗೊಳಿಸಲು ಉತ್ತರದಿಕ್ಕಿಗೆ ಮುಖ ಮಾಡಿ ಈ ಕರ್ಮವನ್ನು ಮಾಡಲಾಗುತ್ತದೆ. ಎಲ್ಲ ದಿಕ್ಕುಗಳಿಗಿಂತ ಹೆಚ್ಚು ಘನೀಕೃತ ಶಕ್ತಿಧಾರಣೆಯು ಈ ಸಮಯದಲ್ಲಿ ಉತ್ತರ ದಿಕ್ಕಿನಲ್ಲಿ ಇರುವುದರಿಂದ ಕರ್ಮದಲ್ಲಿನ ಎಲ್ಲ ರಜ-ತಮಾತ್ಮಕ ಲಹರಿಗಳನ್ನು ಇದರಲ್ಲಿ ವಿಲೀನಗೊಳಿಸಲು ಸಾಧ್ಯವಾಗುತ್ತದೆ.
ಆ. ವಾಯುಮಂಡಲದಲ್ಲಿ ಹೆಚ್ಚು ಪ್ರಮಾಣದಲ್ಲಿ ರುವ ಯಮಲಹರಿಗಳು ರಜ-ತಮಾತ್ಮಕ ಲಹರಿಗಳನ್ನು ಘನೀಕೃತಗೊಳಿಸಿ ತನ್ನಲ್ಲಿ ಸಮಾವೇಶ ಮಾಡಿಕೊಳ್ಳುವುದು : ರಾತ್ರಿಯ ಸಮಯದಲ್ಲಿ ವಾಯುಮಂಡಲದಲ್ಲಿ ಯಮಲಹರಿಗಳು ಹೆಚ್ಚಿನ ಪ್ರಮಾಣ ದಲ್ಲಿರುತ್ತವೆ. ಈ ಸಮಯದಲ್ಲಿ ಯಮದಿಕ್ಕು (ದಕ್ಷಿಣ ದಿಕ್ಕು) ದೊಡ್ಡ ಪ್ರಮಾಣದಲ್ಲಿ ರಜ-ತಮಾತ್ಮಕ ಲಹರಿಗಳನ್ನು ಘನೀಕೃತಗೊಳಿಸಿ ತನ್ನಲ್ಲಿ ಸಮಾವೇಶ ಮಾಡಿಕೊಳ್ಳಬಲ್ಲದು. ಈ ತತ್ತ್ವದ ಲಾಭವನ್ನು ಪಡೆದುಕೊಂಡು ‘ರಾತ್ರಿಯ ಸಮಯದಲ್ಲಿ ಕೇವಲ ಮಲಮೂತ್ರ ವಿಸರ್ಜನೆಯ ಕರ್ಮವನ್ನು ದಕ್ಷಿಣ ದಿಕ್ಕನ್ನು ಸಾಕ್ಷಿಯಾಗಿರಿಸಿಕೊಂಡು ಮಾಡಬೇಕು’ ಎಂದು ಹೇಳಲಾಗಿದೆ. ರಾತ್ರಿಯ ಸಮಯದಲ್ಲಿ ಪೂರ್ವ, ಪಶ್ಚಿಮ ಮತ್ತು ಉತ್ತರ ದಿಕ್ಕುಗಳ ಮಾಧ್ಯಮದಿಂದ ಕೆಲವು ದಿವ್ಯಾತ್ಮಗಳು ಆಯಾ ಸತ್ತ್ವರಜಾತ್ಮಕ ಕಾರ್ಯಕಾರಿ ಲಹರಿಗಳ ಮಾಧ್ಯಮದಿಂದ ದಿಶಾಮಂಡಲದ ರಕ್ಷಣೆಯನ್ನು ಮಾಡುತ್ತಿರುವುದರಿಂದ ಮಲಮೂತ್ರ ವಿಸರ್ಜನೆ ಯಂತಹ ಕೃತಿಗಳನ್ನು ಆ ದಿಕ್ಕಿನಲ್ಲಿ ಮಾಡುವುದು ಪಾಪಯುಕ್ತವಾಗಿದೆ.
- ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳ ರವರು ಓರ್ವ ವಿದ್ವಾಂಸ ಈ ಅಂಕಿತನಾಮದಿಂದ ಬರೆಯತ್ತಾರೆ.)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಧರ್ಮಶಿಕ್ಷಣ ನೀಡುವ ಮಾಲಿಕೆ !