ಸನಾತನ ಸಂಸ್ಥೆಯನ್ನು ನಿಷೇಧಿಸುವ ಹುನ್ನಾರ ಖಂಡನೀಯ !

ಮಂಗಳೂರು, ಉಡುಪಿ, ಭಟ್ಕಳದಲ್ಲಿ
ವಿವಿಧ ಹಿಂದುತ್ವವಾದಿ ಸಂಘಟನೆಗಳಿಂದ ಪತ್ರಿಕಾಪರಿಷತ್ತು !
ಸನಾತನ ಸಂಸ್ಥೆಯಂತಹ ಆಧ್ಯಾತ್ಮಿಕ ಸಂಸ್ಥೆಯು ವ್ಯಕ್ತಿಯ ಆಧ್ಯಾತ್ಮಿಕ ಉನ್ನತಿಯ ಜೊತೆಗೆ ಸಮಾಜ, ರಾಷ್ಟ್ರ ಹಾಗೂ ಧರ್ಮದ ವಿಷಯದಲ್ಲಿ ಸಮಾಜದಲ್ಲಿ ಪರಿವರ್ತನೆಯನ್ನು ಮಾಡುತ್ತದೆ. ಅಲ್ಲದೆ ಸಂಸ್ಥೆಯ ಮಾರ್ಗದರ್ಶನದಿಂದ ಲಕ್ಷಾಂತರ ಜನರು ಅಧ್ಯಾತ್ಮಿಕ ಸಾಧನೆಯನ್ನು ಪ್ರಾರಂಭಿಸಿ ತಮ್ಮ ಜೀವನವನ್ನು ಆನಂದಮಯಗೊಳಿಸಿದ್ದಾರೆ. ಆದರೆ ಈಗ ಇಂತಹ ಸನಾತನ ಸಂಸ್ಥೆಯನ್ನು ವಿಚಾರವಾದಿಗಳ ಹತ್ಯೆಯ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿರುವುದು ಸನಾತನಕ್ಕೆ ಮಾಡುತ್ತಿರುವ ಅವಮಾನ ವಾಗಿದೆ. ಕೆಲವು ಪ್ರಗತಿಪರ ಸಂಘಟನೆಗಳ ಮೇಲಿನ ಹಣಕಾಸಿನ ಅವ್ಯವಹಾರದ ಆರೋಪವನ್ನು ಸನಾತನವು ಪ್ರಶ್ನಿಸಿದ ಕಾರಣದಿಂದ, ಸದರಿ ಸಂಸ್ಥೆಗಳು ಆರೋಪಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸನಾತನ ವನ್ನು ಗುರಿ ಮಾಡುತ್ತಿವೆ. ಆದ ಕಾರಣ, ಸನಾತನವನ್ನು ದೂಷಣೆ ಮಾಡುವ ಪ್ರಗತಿಪರ ಸಂಘಟನೆಗಳ ಆರ್ಥಿಕ ಅವ್ಯವಹಾರಗಳ ಆರೋಪಗಳ ತನಿಖೆಯನ್ನು ವಿವರವಾಗಿ ಮತ್ತು ನಿಗದಿತ ಸಮಯದಲ್ಲಿ ನಡೆಸಬೇಕು ಹಾಗೂ ಪ್ರಗತಿಪರರು, ನಾಸ್ತಿಕವಾದಿ ಹಿಂದೂ ವಿರೋಧಿ ಸಂಘಟನೆಗಳ ಮತ್ತು ನಿಧರ್ಮಿ ರಾಜಕೀಯ ಪಕ್ಷಗಳ ಆಗ್ರಹಕ್ಕೆ ಮಣಿದು ಸನಾತನ ಸಂಸ್ಥೆಯಂತಹ ಆಧ್ಯಾತ್ಮಿಕ ಸಂಸ್ಥೆಯನ್ನು ನಿರ್ಬಂಧಿಸಬಾರದೆಂದು ಹಿಂದೂ ಸಂಘಟನೆಗಳು ಪತ್ರಿಕಾಪರಿಷತ್ತಿನ ಮೂಲಕ ಕೇಂದ್ರ ಸರಕಾರಕ್ಕೆ ವಿನಂತಿಸಿದವು.

ಮಂಗಳೂರು : ಶ್ರೀರಾಮ ಸೇನೆಯಿಂದ ಮಂಗಳೂರಿನ ಪತ್ರಿಕಾಭವನದಲ್ಲಿ ಪತ್ರಿಕಾ ಪರಿಷತ್ತನ್ನು ತೆಗೆದುಕೊಳ್ಳಲಾಯಿತು. ಈ ವೇಳೆ ಶ್ರೀರಾಮ ಸೇನೆಯ ಮಂಗಳೂರಿನ ವಿಭಾಗ ಅಧ್ಯಕ್ಷರಾದ ಶ್ರೀ. ಆನಂದ ಶೆಟ್ಟಿ ಅಡ್ಯಾರ್, ಜಿಲ್ಲಾಧ್ಯಕ್ಷ ಜೀವನ್ ನೀರ್‌ಮಾರ್ಗ, ಉಪಾಧ್ಯಕ್ಷ ಪ್ರದೀಪ್ ಮೂಡುಶೆಡೆ, ಜಿಲ್ಲಾ ಕಾರ್ಯದರ್ಶಿ ಗುರು ಪಾಂಡೇಶ್ವರ, ನಗರ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಪಡಿಯಾರ್, ನಗರ ಉಪಾಧ್ಯಕ್ಷ ಹರೀಶ್ ಶೆಟ್ಟಿ, ಬೊಕ್ಕಪಟ್ನ ಇವರು ಉಪಸ್ಥಿತರಿದ್ದರು.

ಉಡುಪಿ : ಜುಲೈ ೧೮ ಉಡುಪಿಯ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಕ್ಷತ್ರಿಯ ಮಹಾಸಭಾ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ನ್ಯಾಯವಾದಿ ಶ್ರೀ. ದಿನೇಶ್ ಸಿ. ನಾಯಕ್, ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ಸೌ. ಅಂಬಿಕಾ ನಾಯಕ್, ವಿಶ್ವ ಹಿಂದೂ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ  ಶ್ರೀ. ಚಿತ್ತರಂಜನ್ ಹೆಗ್ಡೆ, ಧರ್ಮಾಭಿಮಾನಿ ಪಳ್ಳಿಯ ಶ್ರೀ. ಲಕ್ಷ್ಮೀನಾರಾಯಣ ಹೆಗ್ಡೆ ಮತ್ತು ಶ್ರೀ. ಗುರುರಾಜ ಇವರು ಭಾಗವಹಿಸಿದರು.   

ಭಟ್ಕಳ : ಇಲ್ಲಿನ ನಾಗಮಾಸ್ತಿ ದೇವಸ್ಥಾನದಲ್ಲಿ ಪತ್ರಿಕಾ ಪರಿಷತನ್ನು ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷರಾದ ಶ್ರೀ. ಜಯಂತ, ಶ್ರೀ ನಾಗಮಾಸ್ತಿ ದೇವಸ್ಥಾದ ಧರ್ಮದರ್ಶಿಗಳಾದ ಶ್ರೀ. ಪುಂಡಲೀಕ ಪೈ, ವಿಶ್ವ ಹಿಂದೂ ಪರಿಷತ್ತಿನ ಶ್ರೀ. ಸುಧಾಕರ ಮಹಾಲೆ, ಜೈ ಕರ್ನಾಟಕ ಸಂಘಟನೆಯ ಶ್ರೀ.  ಪಾಂಡುರಂಗ ನಾಯಕ್ ಉಪಸ್ಥಿತರಿದ್ದರು.  ಈ ವೇಳೆ ಶ್ರೀ.  ಪಾಂಡುರಂಗ ನಾಯಕ್ ಇವರು ಸನಾತನ ಸಂಸ್ಥೆಯನ್ನು ನಿಷೇಧಿಸಲು ಯತ್ನಿಸಿದರೆ ತೀವ್ರ ಆಂದೋಲನ ಮಾಡುವುದಾಗಿ ಹೇಳಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನ ಸಂಸ್ಥೆಯನ್ನು ನಿಷೇಧಿಸುವ ಹುನ್ನಾರ ಖಂಡನೀಯ !