ಧರ್ಮವೀರರೇ, ಹಿಂದೂ ರಾಷ್ಟ್ರ ಸ್ಥಾಪನೆಯ (ಸನಾತನ ಧರ್ಮ ರಾಜ್ಯದ) ಯಜ್ಞದಲ್ಲಿ ತನು-ಮನ-ಧನ ಮತ್ತು ಪ್ರಸಂಗ ಬಂದರೆ ಪ್ರಾಣದ ಆಹುತಿಯನ್ನೂ ನೀಡಿ !

ಪಂಚಮ ಅಖಿಲ ಭಾರತೀಯ ಹಿಂದೂ ಅಧಿವೇಶನಕ್ಕಾಗಿ
ಪರಾತ್ಪರ ಗುರು ಡಾ. ಆಠವಲೆಯವರ ಸಂದೇಶ
(ಪರಾತ್ಪರ ಗುರು) ಡಾ. ಆಠವಲೆ
ಭಾರತದ ಸ್ವಾತಂತ್ರ್ಯಯಜ್ಞದಲ್ಲಿ ಸ್ವಪ್ರಾಣದ ಆಹುತಿ ನೀಡಿ ಕ್ರಾಂತಿ ಸಮಿಧೆಯಾಗಿರುವ ರಾಷ್ಟ್ರಪುರುಷರೇ ರಾಷ್ಟ್ರಪ್ರೇಮಿ ಹಾಗೂ ಧರ್ಮಪ್ರೇಮಿಗಳ ಮುಂದಿರುವ ನಿಜವಾದ ಆದರ್ಶವಾಗಿದ್ದಾರೆ. ಅವರ ಆದರ್ಶವನ್ನು ಕಣ್ಣೆದುರು ಇಟ್ಟುಕೊಂಡು ನಾನು ಹಿಂದೂ ರಾಷ್ಟ್ರ (ಸನಾತನ ಧರ್ಮರಾಜ್ಯ)ವನ್ನು ನೋಡಲು ಜೀವಂತವಿರುವೆನೋ, ಇಲ್ಲವೋ, ಎಂಬುದು ತಿಳಿದಿಲ್ಲದಿದ್ದರೂ ಅದಕ್ಕಾಗಿ ಕಾರ್ಯನಿರತನಾಗಿದ್ದೇನೆ. ಅದೇ ರೀತಿ ರಾಷ್ಟ್ರಪ್ರೇಮಿಗಳು ಮತ್ತು ಧರ್ಮಪ್ರೇಮಿಗಳು ಹಿಂದೂ ರಾಷ್ಟ್ರಕ್ಕಾಗಿ (ಸನಾತನ ಧರ್ಮ ರಾಜ್ಯಕ್ಕಾಗಿ) ಕಾರ್ಯನಿರತರಾಗಿರುವುದು ಆವಶ್ಯಕವಾಗಿದೆ.
‘ಯೋಗ್ಯ ಸಮಯದಲ್ಲಿ ಮಾಡಿದ ಯೋಗ್ಯ ಕಾರ್ಯವು ಬಹುದೊಡ್ಡ ಫಲ ನೀಡುತ್ತದೆ’, ಎಂದು ಯೋಗವಸಿಷ್ಠದಲ್ಲಿ ಹೇಳಲಾಗಿದೆ. ಸದ್ಯ ಹಿಂದೂ ರಾಷ್ಟ್ರ-ಸ್ಥಾಪನೆಗಾಗಿ (ಸನಾತನ ಧರ್ಮ ರಾಜ್ಯಕ್ಕಾಗಿ) ಆವಶ್ಯಕವಿರುವ ಕಾರ್ಯ ಮಾಡಲು ಕಾಲ ಪೂರಕವಾಗಿದೆ. ಕಾಲ ಮಹಾತ್ಮೆಗನುಸಾರ ೨೦೨೩ ರಲ್ಲಿ ಹಿಂದೂ ರಾಷ್ಟ್ರದ (ಸನಾತನ ಹಿಂದೂ ಧರ್ಮ ರಾಜ್ಯದ) ಸ್ಥಾಪನೆ ಖಂಡಿತ ಆಗಲಿದೆ. ಈ ೮ ವರ್ಷಗಳ ಅವಧಿಯಲ್ಲಿ ಹಿಂದೂ ರಾಷ್ಟ್ರ-ಸ್ಥಾಪನೆಗಾಗಿ ಧರ್ಮಕಾರ್ಯ ಮಾಡಿದರೆ, ಹಿಂದೂ ರಾಷ್ಟ್ರ (ಸನಾತನ ಧರ್ಮ ರಾಜ್ಯ) ವಂತೂ ಸ್ಥಾಪನೆಯಾಗುವುದು; ಅದರ ಜೊತೆಗೆ ಪ್ರತಿಯೊಬ್ಬರಿಗೂ ಸಾಧನೆಯ ಫಲವೂ ಸಿಗುವುದು.
ಧರ್ಮವೀರರೇ, ಹಿಂದೂ ರಾಷ್ಟ್ರ-ಸ್ಥಾಪನೆಯ (ಸನಾತನ ಧರ್ಮ ರಾಜ್ಯದ)ಯಜ್ಞದಲ್ಲಿ ತನು-ಮನ-ಧನ ಮತ್ತು ಪ್ರಸಂಗ ಬಂದರೆ ಪ್ರಾಣವನ್ನೂ ಆಹುತಿ ನೀಡಿರಿ ! ಭಗವಾನ್ ಶ್ರೀಕೃಷ್ಣನು ನಿಮಗೆ ‘ಹಿಂದೂ ರಾಷ್ಟ್ರ’ (ಸನಾತನ ಧರ್ಮ ರಾಜ್ಯ)ವನ್ನು ನಿಶ್ಚಿತವಾಗಿ ಕೊಡುವನು. - (ಪರಾತ್ಪರ ಗುರು) ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಧರ್ಮವೀರರೇ, ಹಿಂದೂ ರಾಷ್ಟ್ರ ಸ್ಥಾಪನೆಯ (ಸನಾತನ ಧರ್ಮ ರಾಜ್ಯದ) ಯಜ್ಞದಲ್ಲಿ ತನು-ಮನ-ಧನ ಮತ್ತು ಪ್ರಸಂಗ ಬಂದರೆ ಪ್ರಾಣದ ಆಹುತಿಯನ್ನೂ ನೀಡಿ !