ಪರಾತ್ಪರ ಗುರು ಡಾ. ಆಠವಲೆಯವರ ತೇಜಸ್ವಿ ವಿಚಾರಗಳು

ದೇಶವನ್ನು ರಸಾತಳಕ್ಕೊಯ್ಯುವ ಹಾಸ್ಯಾಸ್ಪದ ಪ್ರಜಾಪ್ರಭುತ್ವದ ಮರ್ಮ !
೧. ವೈಯಕ್ತಿಕ ಜೀವನ : ‘ಕಾಯಿಲೆ ಬಂದಾಗ ನಾವು ಯಾವ ಔಷಧಗಳನ್ನು ತೆಗೆದುಕೊಳ್ಳಬೇಕು, ಎಂಬುದನ್ನು ಮನೆಯ ವರಿಗೆ ಹಾಗೂ ಮಿತ್ರರಿಗೆ ವಿಚಾರಿಸುವ ಪ್ರಜಾ ಪ್ರಭುತ್ವ ಪದ್ಧತಿಯನ್ನು ಉಪಯೋಗಿಸುವುದಿಲ್ಲ, ಡಾಕ್ಟರರ ಸಲಹೆಯಿಂದ ಉಪಚಾರ ಪಡೆಯುತ್ತೇವೆ.
೨. ಕೌಟುಂಬಿಕ ಜೀವನ : ನಾವು ಮಕ್ಕಳನ್ನು ಕೇಳಿ ನಿರ್ಣಯ ತೆಗೆದುಕೊಳ್ಳುವ ಪ್ರಜಾಪ್ರಭುತ್ವ ಪದ್ಧತಿಯನ್ನು ಉಪಯೋಗಿಸುವುದಿಲ್ಲ, ಮನೆಯ ಹಿರಿಯ ವ್ಯಕ್ತಿಗಳು ನಿರ್ಣಯ ತೆಗೆದುಕೊಳ್ಳುತ್ತಾರೆ.

೩. ಕಾರ್ಯಾಲಯದ ಜೀವನ : ಕಾರ್ಯಾಲಯಗಳಲ್ಲಿ ಅಥವಾ ಕಾರ್ಖಾನೆಗಳಲ್ಲಿ ಪೇದೆ, ಕಾರ್ಮಿಕರು ಮುಂತಾದವರಿಗೆ ವಿಚಾರಿಸಿ ನಿರ್ಣಯ ತೆಗೆದುಕೊಳ್ಳುವ ಪ್ರಜಾಪ್ರಭುತ್ವ ಪದ್ಧತಿಯನ್ನು ನಾವು ಉಪಯೋಗಿಸುವುದಿಲ್ಲ, ಅಲ್ಲಿ ಜವಾಬ್ದಾರ ವ್ಯಕ್ತಿ ನಿರ್ಣಯ ತೆಗೆದುಕೊಳ್ಳುತ್ತಾನೆ.
೪. ರಾಷ್ಟ್ರೀಯ ಜೀವನ : ರಾಷ್ಟ್ರೀಯ ಜೀವನದಲ್ಲಿ ಮಾತ್ರ ಪ್ರಜಾಪ್ರಭುತ್ವದ ಹೆಸರಿನಲ್ಲಿ ಓದಲು-ಬರೆಯಲು ಬರದವರು, ಯೋಗ್ಯ ಶಿಕ್ಷಣವಿಲ್ಲದವರು, ಸ್ವಾರ್ಥಿ, ಗೂಂಡಾ, ರಾಷ್ಟ್ರದ್ರೋಹಿ ಮುಂತಾದವರೆಲ್ಲರ ಮತಗಳನ್ನು ಪಡೆದು ರಾಷ್ಟ್ರವನ್ನು ನಡೆಸ ಲಾಗುತ್ತದೆ. ಜಗತ್ತಿನಲ್ಲಿ ಇದಕ್ಕಿಂತ ಹಾಸ್ಯಾಸ್ಪದ ವಿಷಯ ಏನಾದರೂ ಇರಬಹುದೇ ? ಇದರಿಂದಲೇ ನಮ್ಮ ರಾಷ್ಟ್ರವು ರಸಾತಳಕ್ಕೆ ಹೋಗಿದೆ.
೫. ಉಪಾಯ : ಸಾಮಾಜಿಕ ಮತ್ತು ರಾಷ್ಟ್ರೀಯ ಸಮಸ್ಯೆಗಳ ಜ್ಞಾನವಿರುವ, ನಿಃಸ್ವಾರ್ಥ, ದೂರದೃಷ್ಟಿಯಿರುವ ಮತ್ತು ಅಧ್ಯಾತ್ಮದಲ್ಲಿ ಸ್ವಲ್ಪಮಟ್ಟಿಗೆ ಪ್ರಗತಿ ಮಾಡಿರುವವರು ರಾಷ್ಟ್ರದ ಚುಕ್ಕಾಣಿಯನ್ನು ಹಿಡಿದರೆ ಮಾತ್ರ ರಾಷ್ಟ್ರವು ಪ್ರಗತಿಯನ್ನು ಮಾಡಬಹುದು. - (ಪರಾತ್ಪರ ಗುರು) ಡಾ. ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪರಾತ್ಪರ ಗುರು ಡಾ. ಆಠವಲೆಯವರ ತೇಜಸ್ವಿ ವಿಚಾರಗಳು