ಸುಸಂಸ್ಕಾರವನ್ನು ನೀಡುವ ಬೋಧಕಥೆಯನ್ನು ಪ್ರತಿವಾರ ಓದಿ !

ಸದ್ಗುಣ, ರಾಷ್ಟ್ರಭಕ್ತಿಯ ಮಹತ್ವವು ಎಲ್ಲರಿಗೂ ತಿಳಿದು ಭಾವೀ ಪೀಳಿಗೆಯು ಸಂಸ್ಕಾರಯುತವಾಗಿರಬೇಕೆಂದು ಈ ಮಾಲಿಕೆಯನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ.
ಅತಿಥಿಯ ಪ್ರಾಣ ಉಳಿಯಲೆಂದು ಪ್ರಯತ್ನಿಸುವ ಯಜಮಾನ ಹಾಗೂ ಯಜಮಾನನ ಮನೆಯಲ್ಲಿರುವ ಒಬ್ಬನ ಪ್ರಾಣ ಉಳಿಯಲೆಂದು ಪ್ರಯತ್ನಿಸುವ ಅತಿಥಿ (ಕುಂತಿ) ‘ಪಾಂಡವರು ಏಕಚಕ್ರ ನಗರದಲ್ಲಿ ಬ್ರಾಹ್ಮಣರ ವೇಶದಲ್ಲಿ ಓರ್ವ ಬ್ರಾಹ್ಮಣನ ಮನೆಯಲ್ಲಿ ವಾಸಿಸು ತ್ತಿದ್ದರು. ಅವರೊಂದಿಗೆ ಕುಂತಿ ಮಾತೆಯೂ ಇದ್ದರು. ಒಮ್ಮೆ ಆ ಬ್ರಾಹ್ಮಣರ ಮನೆಯಲ್ಲಿ ಅಳುತ್ತಿರುವ ಸದ್ದು ಕೇಳಿಬಂತು. ಆಗ ಅವರು ವಿಚಾರಿಸಿದಾಗ ಆ ಬ್ರಾಹ್ಮಣರು, ‘ಪಕ್ಕದಲ್ಲಿರುವ ಬೆಟ್ಟದಲ್ಲಿ ಬಕಾಸುರನೆಂಬ ರಾಕ್ಷಸನಿದ್ದಾನೆ. ಅವನಿಗೆ ಪ್ರತಿದಿನ ೩ ಮಣ ಅನ್ನ, ೨ ಕೋಣ ಹಾಗೂ ೧ ಮನುಷ್ಯ ಇಷ್ಟು ಊಟ ಬೇಕಾಗುತ್ತದೆ. ‘ಒಂದೊಂದು ದಿನ ಒಂದೊಂದು ಮನೆಯಿಂದ ಇಷ್ಟು ಊಟ ನೀಡಬೇಕೆಂದು ನಿರ್ಧರಿಸಲಾಗಿದೆ’. ಇದನ್ನು ಕಳುಹಿಸುವ ಪಾಳಿ ನನಗೆ ಬಂದಿದೆ; ಆದ್ದರಿಂದ ನಾವು ಬಹಳ ದುಃಖಿತರಾಗಿದ್ದೇವೆ’, ಎಂದು ಅವರು ಹೇಳಿದರು. ಅದಕ್ಕೆ ಕುಂತಿ, ‘‘ನೀವು ಚಿಂತಿಸಬೇಡಿ. ನನ್ನ ಮಗ ಭೀಮನು ಬಕಾಸುರನ ಬಳಿ ಅನ್ನ ತೆಗೆದುಕೊಂಡು ಹೋಗುತ್ತಾನೆ’’ ಎಂದು ಹೇಳಿದರು.
ಬ್ರಾಹ್ಮಣನು ಅದಕ್ಕೆ, ‘ಬೇಡ ಬೇಡ ನೀವು ನಮ್ಮ ಅತಿಥಿಗಳಾಗಿ ದ್ದೀರಿ. ನಮಗಾಗಿ ನಿಮ್ಮ ಮಗನ ಕೊಲೆಯಾಗಲು ಬಿಡುವುದಿಲ್ಲ.’ ‘ನನ್ನ ಮಗ ಪರಾಕ್ರಮಿಯಾಗಿದ್ದಾನೆ. ಬಲಶಾಲಿಯಾಗಿದ್ದಾನೆ. ಅನೇಕ ರಾಕ್ಷಸರನ್ನು ನಾಶ ಮಾಡಿದ್ದಾನೆ. ಬಕಾಸುರ ನನ್ನ ಮಗನ ನಾಶ ಮಾಡಲು ಸಾಧ್ಯವಿಲ್ಲ. ಅವನೇ ಬಕಾಸುರನನ್ನು ಕೊಲ್ಲುತ್ತಾನೆ,’ ಎಂದು ಕುಂತಿ ಹೇಳಿದರು. ಆದರೂ ಆ ಬ್ರಾಹ್ಮಣನಿಗೆ ಸಮಾಧಾನವಾಗಲಿಲ್ಲ ಕುಂತಿಯು ಬಹಳ ಆಗ್ರಹ ಪಡಿಸಿದ ಬಳಿಕ ಆ ಬ್ರಾಹ್ಮಣನು ಅದಕ್ಕೆ ಸಮ್ಮತಿಸಿದನು. ಅನ್ನವನ್ನೆಲ್ಲ ಹೊತ್ತುಕೊಂಡು ಭೀಮನು ಬಕಾಸುರನ ಬಳಿ ಹೋದನು. ಅವನು ಬಕಾಸುರನನ್ನು ಕರೆದು ‘ತೆಗೆದುಕೋ ನಿನ್ನ ಅನ್ನ’, ಎಂದು ಹೇಳಿ ಭೀಮನು ಸ್ವತಃ ಆ ಅನ್ನವನ್ನು ತಿನ್ನತೊಡಗಿದ. ಆಗ ಬಕಾಸುರ ನಿಗೆ ರೋಷ ಬಂದಿತು. ಅವನು ಭೀಮನ ಬೆನ್ನಿಗೆ ಜೋರಾಗಿ ಗುದ್ದಿದನು; ಆದರೆ ಭೀಮನು ಆ ಕಡೆ ಗಮನ ಕೊಡಲಿಲ್ಲ. ಬಕಾಸುರನು ಒಂದು ದೊಡ್ಡ ಮರವನ್ನು ಕಿತ್ತು ಭೀಮನ ಮೈ ಮೇಲೆ ಎಸೆದನು. ಭೀಮನು ಆ ಮರವನ್ನು ಹಿಡಿದು ಬಕಾಸುರನ ಮೇಲೆ ಎಸೆದನು. ಆ ರಾಕ್ಷಸನು ಭೀಮನನ್ನು ಗಟ್ಟಿಯಾಗಿ ಹಿಡಿದುಕೊಂಡು ಹೊಸುಕಿ ಹಾಕಲು ಪ್ರಯತ್ನಿಸಿದನು; ಆದರೆ ಭೀಮನು ಅವನನ್ನು ಎಸೆದು ಬಿಟ್ಟನು. ಕೆಳಗೆ ಬಿದ್ದ ಬಕಾಸುರನ ಮೇಲೆ ಭೀಮನು ತನ್ನ ಮಂಡಿಯಿಂದ ಒತ್ತಿದನು. ನಂತರ ಆ ರಾಕ್ಷಸನ ಶರೀರವನ್ನು ಬೆನ್ನಿನಿಂದ ಮಡಚಿದನು. ಆಗ ಕಡ ಕಡ ಎಂಬ ಶಬ್ದವಾಯಿತು. ರಾಕ್ಷಸನ ಶರೀರವು ಮುರಿದು ಬಿತ್ತು.
ಭೀಮನು ಏಕಚಕ್ರ ನಗರಕ್ಕೆ ಮರಳಿ ಬಂದನು. ಬಕಾಸುರನ ಮೃತ್ಯುವಿನ ವಾರ್ತೆ ಎಲ್ಲ ಕಡೆ ಹರಡಿತು. ಜನರಿಗೆಲ್ಲ ಆನಂದವಾಯಿತು. ಅವರು ಭೀಮನ ಜಯಜಯಕಾರ ಮಾಡಿದರು. ಹಿರಿಯ ಸಹೋದರ ಯುಧಿಷ್ಠಿರನು ‘‘ಭೀಮ, ನೀನು ಮರಳಿ ಬಂದೆ. ನಮಗೆ ಆನಂದವಾಯಿತು; ಆದರೆ ನಾವು ಅಜ್ಞಾತವಾಸದಲ್ಲಿರುವುದರಿಂದ ನಡೆದ ಕತೆಯನ್ನು ಯಾರಿಗೂ ಹೇಳಬೇಡ’ ಎಂದು ಹೇಳಿದನು. ಇನ್ನು ಮುಂದೆ ಇನ್ನೂ ಜಾಗೃತವಾಗಿ ನಡೆದುಕೋ’’, ಎಂದನು. - (ಪೂ.) ಡಾ. ವಸಂತ ಬಾಳಾಜಿ ಆಠವಲೆ (ವರ್ಷ ೧೯೯೧)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸುಸಂಸ್ಕಾರವನ್ನು ನೀಡುವ ಬೋಧಕಥೆಯನ್ನು ಪ್ರತಿವಾರ ಓದಿ !