ಉಗ್ರವಾದಿಗಳ ಆಕ್ರಮಣದಲ್ಲಿ ೮ ಭಾರತೀಯ ಪೊಲೀಸರು ಹತರಾಗುತ್ತಿರುವಾಗ, ಇಫ್ತಾರ್ ಪಾರ್ಟಿಯ ಆನಂದ ಅನುಭವಿಸಿ, ಎನ್ನುವ ಪಾಕ್ ಉಚ್ಛಾಯುಕ್ತ !

ಪಾಕ್ ಉಚ್ಛಾಯುಕ್ತರು ಪ್ರತ್ಯೇಕತಾವಾದಿಗಳೊಂದಿಗೆ ಇಫ್ತಾರ ಪಾರ್ಟಿಯಲ್ಲಿ !
ಪಾಕಿಸ್ತಾನದೊಂದಿಗೆ ಮೈತ್ರಿ ಮಾಡಲು ಪ್ರಯತ್ನಿಸುವ ಕೇಂದ್ರ ಸರಕಾರಕ್ಕೆ ಕಪಾಳಮೋಕ್ಷ !
ಇನ್ನಾದರೂ ಸರಕಾರ ಜಾಣತನವನ್ನು ತೋರಿಸುವುದೇ ಅಥವಾ ತಾನೇ ಜಾಣನೆಂದುಕೊಳ್ಳುತ್ತಾ ಇರುವುದೇ ?
ನವದೆಹಲಿ : ಭಾರತದಲ್ಲಿನ ಪಾಕಿಸ್ತಾನದ ಉಚ್ಛಾಯುಕ್ತ ಅಬ್ದುಲ್ ಬಸೀತ್ ಇವರು ಆಯೋಜಿಸಿದ ಇಫ್ತಾರ್ ಪಾರ್ಟಿಯಲ್ಲಿ ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡರು ಭಾಗವಹಿಸಿದ್ದರು. (ದೇಶದ್ರೋಹಿ ಪ್ರತ್ಯೇಕತಾವಾದಿಗಳಿಗೆ ಶತ್ರುರಾಷ್ಟ್ರದೊಂದಿಗೆ ಆತ್ಮೀಯತೆ ಬೆಳೆಸಲು ಬಿಡುವ ರಾಜಕಾರಣಿಗಳು ದೇಶದ್ರೋಹಿಗಳನ್ನು ನಿಯಂತ್ರಿಸಲು ಸಾಧ್ಯವೇ ?- ಸಂಪಾದಕರು) ಇದೇ ಸಮಯದಲ್ಲಿ ಕಾಶ್ಮೀರದಲ್ಲಿ ಪಾಕ್‌ಪುರಸ್ಕೃತ ಉಗ್ರವಾದಿಗಳು ಮಾಡಿದ ಆಕ್ರಮಣದಲ್ಲಿ ಕೇಂದ್ರೀಯ ಮೀಸಲು ಪಡೆಯ ೮ ಪೊಲೀಸ್ ಹತರಾಗಿರುವ ಘಟನೆ ಘಟಿಸಿದೆ. ಇದರ ಬಗ್ಗೆ ಪ್ರತಿಕ್ರಿಯೆ ನೀಡುವಾಗ ಬಸೀತ್ ಹೇಳಿದರು, ಇದು ರಂಜಾನ್ ತಿಂಗಳು. ಈಗ ಇಫ್ತಾರ್ ಪಾರ್ಟಿಯಿದೆ. ಇದರ ಬಗ್ಗೆ ಮಾತನಾಡಿ ಹಾಗೂ ಪಾರ್ಟಿಯ ಆನಂದ ಪಡೆಯಿರಿ. ಬಸೀತ್ ಇವರು ಈ ಆಕ್ರಮಣವನ್ನು ನಿಷೇಧಿಸಲೂ ಇಲ್ಲ. ಅಬ್ದುಲ್ ಬಸೀತ್ ಮತ್ತು ಪ್ರತ್ಯೇಕತಾವಾದಿ ಮುಖಂಡರಲ್ಲಿ ಸ್ವತಂತ್ರ ಕಾಶ್ಮೀರದ ವಿಷಯದಲ್ಲಿ ಚರ್ಚೆ ನಡೆದಿರುವ ಬಗ್ಗೆ ಹೇಳಲಾಗುತ್ತಿದೆ. ಆದರೆ ಬಸೀತ್ ಇವರು ಇಂತಹ ಯಾವುದೇ ಚರ್ಚೆ ನಡೆಯಲಿಲ್ಲವೆಂದು ಹೇಳಿದ್ದಾರೆ. ನಾವು ರಾಜಕೀಯ ಚರ್ಚೆಗಾಗಿ ಅಲ್ಲ, ಇಫ್ತಾರ್ ಪಾರ್ಟಿಯ ಆನಂದ ಪಡೆಯಲು ಇಲ್ಲಿ ಸೇರಿದ್ದೇವೆ, ಎಂದು ಹೇಳಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಉಗ್ರವಾದಿಗಳ ಆಕ್ರಮಣದಲ್ಲಿ ೮ ಭಾರತೀಯ ಪೊಲೀಸರು ಹತರಾಗುತ್ತಿರುವಾಗ, ಇಫ್ತಾರ್ ಪಾರ್ಟಿಯ ಆನಂದ ಅನುಭವಿಸಿ, ಎನ್ನುವ ಪಾಕ್ ಉಚ್ಛಾಯುಕ್ತ !