ಕಲಿಯುಗದಲ್ಲಿ ಲಕ್ಷ್ಮೀಯ ಕಥೆ

೧. ಹಿಂದಿನ ಕಾಲದಲ್ಲಿ  ಮದುವೆಯಾದ ನಂತರ, ಮನೆಗೆ ಸೊಸೆಯ ರೂಪದಲ್ಲಿ
ಲಕ್ಷ್ಮೀಯ ಆಗಮನವಾಗುತ್ತಿತ್ತು; ಆದರೆ ಈಗ ಹಾಗಿಲ್ಲ....
ಹಿಂದಿನ ಕಾಲದಲ್ಲಿ ಮದುವೆಯಾದ ನಂತರ, ಎಲ್ಲರೂ ಹೀಗೆ ಹೇಳುತ್ತಿದ್ದರು..... ನಿಮ್ಮ ಸೊಸೆ ಸಾಕ್ಷಾತ್ ಲಕ್ಷ್ಮಯಂತಿದ್ದಾಳೆ ! ನಿಜವಾಗಿಯೂ, ಆ ಸಮಯಕ್ಕೆ ಹೆಣ್ಣುಮಕ್ಕಳು ಸಂಸ್ಕಾರವುಳ್ಳವರು ಮತ್ತು ಸುಶೀಲರಾಗಿದ್ದರು. ಅವರ ಆಗಮನದಿಂದ  ಮನೆಯಲ್ಲಿ ಕಲಹಗಳಿಲ್ಲದೇ ಶಾಂತಿ ಮತ್ತು ಆನಂದ ನೆಲೆಸುತ್ತಿತ್ತು. ಸುಶೀಲ ಮನೆತನದ  ಹೆಣ್ಣುಮಕ್ಕಳು ಸುಶೀಲರು ಮತ್ತು ಶಾಲೀನತೆಯುಳ್ಳವರಿದ್ದರು. ನಿಜವಾಗಿಯೂ ಅವರು ಲಕ್ಷ್ಮೀಯಂತೆ ಇದ್ದರು. ಅವರ ಆಗಮನದಿಂದ ಮನೆಯಲ್ಲಿ ಲಕ್ಷ್ಮೀಯೇ ಹೆಜ್ಜೆಯನ್ನು ಇಡುತ್ತಾಳೆ ಎಂಬ ಶ್ರದ್ಧೆ  ಆ ಕಾಲದ ಜನರಲ್ಲಿತ್ತು.
೨. ಈಗ ಕಲಿಯುಗದಲ್ಲಿ ಹೆಣ್ಣುಮಗಳು ಲಕ್ಷ್ಮೀಯಲ್ಲ, ಅವಳ ಜೊತೆಯಲ್ಲಿ  ವರದಕ್ಷಿಣೆಯ ರೂಪದಲ್ಲಿ ಭೋಗವಾದಿ ಹಣವು ಮಾವನ ಮನೆಯಲ್ಲಿನ ಲಕ್ಷ್ಮೀಯಾಗಿದ್ದಾಳೆ !
ಈಗಿನ ಪರಿಸ್ಥಿತಿಯು ಬೇರೆಯೇ ಆಗಿದೆ. ಹೆಣ್ಣು ಮಗಳು ಲಕ್ಷ್ಮೀಯಂತೆ ಇಲ್ಲದಿರುವುದರಿಂದ ಅವಳ ತಾಯಿ-ತಂದೆಯರು ಸಾಕಷ್ಟು ಹಣ ಕೊಟ್ಟು ಮಗಳ ಮದುವೆ ಮಾಡಿ ಕೊಡುತ್ತಿದ್ದಾರೆ. ಕಲಿಯುಗದಲ್ಲಿ ಮಗಳು ಲಕ್ಷ್ಮೀಯಲ್ಲ, ಅವಳ ಜೊತೆಗೆ ಕೊಡಲಾಗುವ ವರದಕ್ಷಿಣೆಯ ಭೋಗವಾದಿ ಹಣವೇ ಮಾವನ ಮನೆಯಲ್ಲಿನ ಲಕ್ಷ್ಮೀಯಾಗಿದೆ. ಇದರಿಂದಾಗಿ ಮದುವೆಯಲ್ಲಿ  ಐಶ್ವರ್ಯವಂತಿಕೆಯು ಹಬ್ಬಿಕೊಂಡಿದೆ.  ಹೀಗಾಗಿ  ಕಲಿಯುಗದಲ್ಲಿ ಲಕ್ಷ್ಮೀಯೂ ಉಳಿಯಲಿಲ್ಲ ಹಾಗೂ ಮನೆಯಲ್ಲಿ ಅವಳ ಪ್ರವೇಶದ ಹೆಜ್ಜೆಗಳೂ ಇಲ್ಲ, ಎಂದು ಹೇಳುವ ಸಮಯ ಬಂದಿದೆ.

೩. ಹೆಣ್ಣು ಮಕ್ಕಳಿಗೆ ನೈತಿಕತೆಯ, ಶಾಲೀನತೆಯ ಪಾಠವನ್ನು ಕಲಿಸಿ ಅವಳನ್ನು ಸಂಸ್ಕಾರಿತಳನ್ನಾಗಿಸಿದರೆ
ಮಾತ್ರ ಅವಳು ಲಕ್ಷ್ಮಯ ಹೆಜ್ಜೆಗಳನ್ನಿಟ್ಟು ಬೇರೆ ಮನೆಯ ಉದ್ಧಾರ ಮಾಡಬಲ್ಲಳು !
ಇದೆಲ್ಲವನ್ನು ಬದಲಾಯಿಸಬೇಕಾದರೆ, ಹೆಣ್ಣು ಮಕ್ಕಳಿಗೆ ನೈತಿಕತೆಯ, ಶಾಲೀನತೆಯ ಪಾಠವನ್ನು  ಕಲಿಸಿ ಅವಳಿಗೆ ಸಂಸ್ಕಾರಿತಳನ್ನಾಗಿಸಿದರೆ ಮಾತ್ರ ಅವಳು ಲಕ್ಷ್ಮೀಯ ಹೆಜ್ಜೆಗಳನ್ನಿಟ್ಟು ಬೇರೆ ಮನೆಯ ಉದ್ಧಾರ ಮಾಡಲು ಸಾಧ್ಯ. ಇಲ್ಲದಿದ್ದರೆ  ಚಂಚಲ ಲಕ್ಷ್ಮೀಯಿಂದ ಮನೆಯ ಹಾನಿಯಾಗುವುದು, ಖಂಡಿತ.
ಆದುದರಿಂದ ಪಾಲಕರೇ, ಹೆಣ್ಣುಮಕ್ಕಳನ್ನು ಸುಸಂಸ್ಕಾರಿತರನ್ನಾಗಿಸಿ ಅವರಿಗೆ ಮನೆಯಲ್ಲಿನ ಸ್ತ್ರೀಮರ್ಯಾದೆಗಳನ್ನು ಹೇಗೆ ಪಾಲಿಸಬೇಕು, ಮನೆ ಯಲ್ಲಿನ ಸಂಸ್ಕಾರಗಳನ್ನು ಹೇಗೆ ಕಾಪಾಡಬೇಕು, ಎಂಬುದರ ಶಿಕ್ಷಣವನ್ನು ನೀಡಿದರೆ ಮಾತ್ರ ಅವಳು ಬೇರೆ ಮನೆಯನ್ನು ನಂದನವನ ಮಾಡಬಲ್ಲಳು. ಈ ಜವಾಬ್ದಾರಿಯು ನಿಮ್ಮದೇ  ಇದೆ ಎಂಬುದನ್ನು ಮರೆಯಬೇಡಿರಿ !
೪. ಪ್ರಕೃತಿಯು ವಿಕೃತಿಯಾಗಿ ಪರಿವರ್ತನೆಯಾದರೆ, ಎಲ್ಲೆಡೆಯಲ್ಲಿ  ಶಿವನ ಬದಲು ಶವಗಳ ಎಂದರೆ ಹೆಣಗಳ ರಾಜ್ಯ
ಬರುತ್ತದೆ ಮತ್ತು ವಿನಾಶವು ಖಂಡಿತ ಎಂಬುದರಲ್ಲಿ ಸಂದೇಹವಿಲ್ಲ !
ಹೆಣ್ಣುಮಗಳು ಸುಶೀಲಳಿಲ್ಲದಿರುವುದರಿಂದ ಅನೇಕ ಸಂಸಾರಗಳು ಉದ್ವಸ್ತಗೊಳ್ಳುತ್ತಿವೆ. ಅನೇಕ ಮಕ್ಕಳು ವ್ಯಸನಾಧೀನರಾಗುತ್ತಿದ್ದಾರೆ. ಅನೇಕರ ವಿವಾಹಗಳು ಮುರಿಯುತ್ತಿದ್ದು, ಇದರ ಪರಿಣಾಮದಿಂದಾಗಿ ಸಂಪೂರ್ಣ ರಾಷ್ಟ್ರದ ವ್ಯವಸ್ಥೆಯೂ ಹದಗೆಡುತ್ತ ಹೊರಟಿದೆ.
 ರಾಷ್ಟ್ರದಲ್ಲಿನ ಸ್ತ್ರೀಯು ಸಂಸ್ಕಾರಿತಳಾಗಿದ್ದು  ಮರ್ಯಾದೆಯಿಂದ  ನಡೆದುಕೊಳ್ಳುತ್ತಿದ್ದರೆ ಮಾತ್ರ ರಾಷ್ಟ್ರವು  ಯಶಸ್ವಿಯಾಗಲು ಸಾಧ್ಯವಿದೆ; ಏಕೆಂದರೆ ಎಲ್ಲಿ  ನೀತಿ ನಿಯಮಗಳ ಪಾಲನೆ ಮಾಡಲಾಗುತ್ತದೆಯೋ ಅಲ್ಲಿ ಶಿವನು ನೆಲೆಸುತ್ತಾನೆ. ಆದರೆ ಎಲ್ಲಿ  ಅದನ್ನು ವಿಕೃತಗೊಳಿಸಲಗುವುದೋ, ಅಲ್ಲಿ ಶಿವನಿರದೇ, ಅನೇಕ ಶವಗಳು ಭೂಮಿಯ ಮೇಲೆ ತಾಂಡವ ಮಾಡುತ್ತವೆ. ಪ್ರಕೃತಿಯನ್ನು ವಿಕೃತಿಯಾಗಿ ರೂಪಾಂತರಿಸಿದರೆ ವಿನಾಶವಾಗುವುದು ಖಂಡಿತವಾಗಿದ್ದು ಇದರಿಂದ ಶಿವನ ರಾಜ್ಯದ ಬದಲು ಶವಗಳ ರಾಜ್ಯ ಬರುತ್ತದೆ. ಸದ್ಯ ಎಲ್ಲೆಡೆಯಲ್ಲಿ  ಇದೇ ಕಾಣುತ್ತಿದೆ.
- (ಪೂ.) ಸೌ. ಅಂಜಲಿ ಗಾಡಗೀಳ, ಈರೋಡ, ತಮಿಳುನಾಡು. (೧೧.೩.೨೦೧೬, ಸಾಯಂ. ೫.೧೭)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕಲಿಯುಗದಲ್ಲಿ ಲಕ್ಷ್ಮೀಯ ಕಥೆ