ರೋಗ ನಿರ್ಮೂಲನೆ ಮತ್ತು ಸಾಧನೆಯಲ್ಲಿನ ಅಡಚಣೆಗಳಿಗೆ ಉಪಯುಕ್ತ : ಸರ್ವಬಾಧಾನಾಶಕ ಯಂತ್ರ !

೧. ಯಂತ್ರದ ಉಪಯುಕ್ತತೆ
ಸತತವಾಗಿ ಕಾಯಿಲೆ ಬರುವುದು ಅಥವಾ ಗಾಯಗೊಂಡು ಸಾಧನೆ ಯಲ್ಲಿ ಅಡಚಣೆಗಳು ಬರುವುದು, ಆಧ್ಯಾತ್ಮಿಕ ತೊಂದರೆಯಾಗುವುದು ಅಥವಾ ಸೇವೆ ಮಾಡುತ್ತಿರುವಾಗ ಸೇವೆಗೆ ಸಂಬಂಧಿಸಿದ ಉಪಕರಣಗಳು, ವಾಹನ ಇತ್ಯಾದಿ ಕೆಟ್ಟು ಹೋಗುವುದು ಅಥವಾ ಇನ್ನಿತರ ಅಡಚಣೆಗಳು ಬರುವುದು ಮುಂತಾದವುಗಳಿಗೆ ಈ ಯಂತ್ರವು ಉಪಯುಕ್ತವಾದುದಾಗಿದೆ.
೨. ಯಂತ್ರವನ್ನು ಬಿಡಿಸುವುದರ ಬಗ್ಗೆ ಸೂಚನೆಗಳು
ಯಂತ್ರವನ್ನು ಶೇ. ೬೦ ಅಥವಾ ಹೆಚ್ಚಿನ ಆಧ್ಯಾತ್ಮಿಕ ಮಟ್ಟವಿರುವ ಅಥವಾ ಭಾವವಿರುವ ಆದರೆ ಕೆಟ್ಟ ಶಕ್ತಿಯ ತೊಂದರೆಯಿಲ್ಲದಿರುವ ಸಾಧಕನಿಂದ ಬಿಡಿಸಿಕೊಳ್ಳಬೇಕು. ಇದು ಸಾಧ್ಯವಿಲ್ಲದಿದ್ದರೆ ತಾನೇ ಬಿಡಿಸಿಕೊಳ್ಳಬೇಕು.

೩. ಯಂತ್ರವನ್ನು ಬಿಡಿಸುವ ವಿಧಾನ
ಅ. ಯಂತ್ರವನ್ನು ಬಿಡಿಸುವ ಮುನ್ನ ಕೈ-ಕಾಲು ತೊಳೆದುಕೊಳ್ಳಬೇಕು.
ಆ. ಯಂತ್ರದ ಉದ್ದೇಶವು ಸಫಲವಾಗಲಿ ಎಂದು ಉಪಾಸ್ಯದೇವತೆಗೆ ಪ್ರಾರ್ಥನೆ ಮಾಡಬೇಕು.
ಇ. ಎರಡೂ ಬದಿಗಳಿಂದ ಖಾಲಿಯಿರುವ ಚೌಕಾಕಾರದ ಕಾಗದದ ಮಧ್ಯಭಾಗದಲ್ಲಿ ಪೆನ್‌ನಿಂದ ಈ ಯಂತ್ರವನ್ನು ಬಿಡಿಸಬೇಕು.
ಈ. ಯಂತ್ರದಲ್ಲಿನ ಅಂಕಿಗಳನ್ನು ಬರೆಯುವಾಗ ಚಿಕ್ಕ ಸಂಖ್ಯೆಯಿಂದ ಆರಂಭಿಸಿ ದೊಡ್ಡ ಸಂಖ್ಯೆಯ ತನಕ ಬರೆಯುತ್ತ ಹೋಗಬೇಕು, ಉದಾ. ಯಂತ್ರದಲ್ಲಿ ೧ ಈ ಅಂಕೆ ಇದ್ದರೆ ಅದನ್ನು ಅದಕ್ಕಾಗಿರುವ ಜಾಗದಲ್ಲಿ ಮೊದಲು ಬರೆಯಬೇಕು. ಅದರ ನಂತರ ೨ ಈ ಅಂಕೆ ಇದ್ದರೆ ಅದನ್ನು ಅದರ ಜಾಗದಲ್ಲಿ ಬರೆಯಬೇಕು. ಈ ವಿಧವಾಗಿ ಮುಂದುಮುಂದಿನ ಅಂಕಿಗಳನ್ನು ಆಯಾಯ ಚೌಕೋನದಲ್ಲಿ ಬರೆಯುತ್ತಾ ಹೋಗಬೇಕು.
ಉ. ಅಂಕಿಯನ್ನು ಬರೆಯುವಾಗ ‘ಓಂ ಹ್ರೀಂ ನಮಃ’ ಎಂದು ಜಪ ಮಾಡಬೇಕು.
೪. ಯಂತ್ರಕ್ಕೆ ಸಂಬಂಧಪಟ್ಟ ಉಪಚಾರಗಳು
ಯಂತ್ರವನ್ನು ಬಿಡಿಸಿದ ನಂತರ ಊದುಬತ್ತಿಯಿಂದ ಬೆಳಗಬೇಕು ಮತ್ತು ಬರುತ್ತಿರುವ ಅಡಚಣೆಗಳು ದೂರವಾಗಲಿ ಎಂದು ಯಂತ್ರಕ್ಕೆ ಪ್ರಾರ್ಥಿಸಿಕೊಳ್ಳಬೇಕು.
೫. ಯಂತ್ರವನ್ನು ಉಪಯೋಗಿಸುವ ವಿಧಾನ
ಅ. ಯಂತ್ರವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ತನ್ನ ಹತ್ತಿರ (ಉದಾ. ಜೇಬಿನಲ್ಲಿ) ಅಥವಾ ಸಲಕರಣಗಳಿಗೆ ಸಂಬಂಧಪಟ್ಟಂತೆ ಅಡಚಣೆಗಳು ಬರುತ್ತಿದ್ದಲ್ಲಿ ಆ ಸಲಕರಣೆಯ ಬಳಿ ಇಡಬೇಕು.
ಆ. ಯಂತ್ರವನ್ನು ಪ್ರತಿದಿನ ವಸ್ತ್ರದಿಂದ ಒರೆಸಬೇಕು ಮತ್ತು ಊದುಬತ್ತಿಯಿಂದ ಬೆಳಗಬೇಕು ಹಾಗೂ ಅಡಚಣೆಗಳು ದೂರವಾಗುವುದಕ್ಕಾಗಿ ಪ್ರಾರ್ಥನೆ ಮಾಡಿಕೊಳ್ಳಬೇಕು.
ಇ. ಜೇಬಿನಲ್ಲಿ ಇಟ್ಟುಕೊಂಡಿರುವ ಯಂತ್ರವನ್ನು ಶೌಚಕ್ಕೆ ಹೋಗುವಾಗ ತೆಗೆದು ಒಳ್ಳೆಯ ಜಾಗದಲ್ಲಿಡಬೇಕು.
೬. ಅಡಚಣೆಗಳು ದೂರವಾದ ನಂತರ ಯಂತ್ರವನ್ನು ದೇವರ ಕೋಣೆಯಲ್ಲಿ ಇಡಬೇಕು. ಮತ್ತೆ ಅಡಚಣೆಗಳು ಬಂದಾಗ ಅದನ್ನು ಮತ್ತೆ ಉಪಯೋಗಿಸಬೇಕು.
(ಆಧಾರ : ಸನಾತನದ ಮುಂಬರುವ ಗ್ರಂಥ - ‘ರೋಗ ನಿವಾರಣೆಗಾಗಿ ಆಧ್ಯಾತ್ಮಿಕ ಯಂತ್ರಗಳು’)
- (ಪೂ.) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೬.೭.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ರೋಗ ನಿರ್ಮೂಲನೆ ಮತ್ತು ಸಾಧನೆಯಲ್ಲಿನ ಅಡಚಣೆಗಳಿಗೆ ಉಪಯುಕ್ತ : ಸರ್ವಬಾಧಾನಾಶಕ ಯಂತ್ರ !