ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !

ಸೂಚನೆ : ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು.

ಫಲಕ ಪ್ರಸಿದ್ಧಿಗಾಗಿ

೧. ದೆಹಲಿಯಲ್ಲಿ ವಿಶ್ವ ಹಿಂದೂ ಸೇನೆ
ಮಾಡಿದ ಧರ್ಮರಕ್ಷಣೆಯನ್ನು ತಿಳಿದುಕೊಳ್ಳಿ !
ದೆಹಲಿಯ ಸುಂದರನಗರಿಯ ಮಹಾಶಿವಶಕ್ತಿ ಮಂದಿರದ ಹನುಮಾನ ಚಾಲೀಸಾದ ಪಠಣವನ್ನು ರಂಜಾನ ಕಾರಣ ಹೇಳಿ ಮತಾಂಧರು ನಿಲ್ಲಿಸಿದ ನಂತರ ವಿಶ್ವ ಹಿಂದೂ ಸೇನೆಯು ೧೦ ಸಾವಿರ ಹಿಂದೂಗಳನ್ನು ಸಂಘಟಿಸಿ ಅಲ್ಲಿ ಹನುಮಾನ ಚಾಲೀಸಾದ ಪಠಣ ಮಾಡಿತು. ಪುನಃ ಪಠಣವನ್ನು ನಿಲ್ಲಿಸಿದರೆ ತೀವ್ರವಾಗಿ ವಿರೋಧಿಸುವುದಾಗಿ ಎಚ್ಚರಿಕೆಯನ್ನೂ ನೀಡಿದೆ.

೨. ಬಾಂಧವರೇ, ಅಮೇರಿಕಾದ
ಕೆಥೊಲಿಕ್ ಚರ್ಚ್‌ಗಳ ನಿಜಸ್ವರೂಪವನ್ನು ತಿಳಿದುಕೊಳ್ಳಿ !
ಅಪ್ರಾಪ್ತ ಮಕ್ಕಳ ಮೇಲಾಗುವ ಲೈಂಗಿಕ ಕಿರುಕುಳದ ವಿರುದ್ಧ ಆರೋಪಿಗಳ ಮೇಲೆ ಖಟ್ಲೆ ನಡೆಸಿ ಪರಿಹಾರವನ್ನು ಕೇಳಲು ನ್ಯೂಯಾರ್ಕ್ ರಾಜ್ಯವು ಹೊಸ ಕಾನೂನು ರೂಪಿಸುವ ಪ್ರಸ್ತಾಪವನ್ನು ಮಾಡಿತ್ತು. ಅದನ್ನು ವಿರೋಧಿಸಲು ಕೆಥೊಲಿಕ್ ಚರ್ಚ್‌ಗಳು ಒತ್ತಡಗುಂಪುಗಳಿಗೆ ೧ ಸಾವಿರದ ೩೦೦ ಕೋಟಿ ರೂಪಾಯಿಗಳಷ್ಟು ಖರ್ಚು ಮಾಡಿವೆ.

೩. ಹಿಂದೂಗಳೇ, ಮತಾಂಧರ ಹಲ್ಲೆಗಳಿಂದ
ರಕ್ಷಿಸಿಕೊಳ್ಳಲು ಸ್ವರಕ್ಷಣಾ ತರಬೇತಿ ಪಡೆಯಿರಿ !
ವಾಟ್ಸ್ ಅಪ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದಾರೆಂದು ನೆಪ ಹೇಳಿ ಜೂನ್ ೨೪ ರಂದು ಮತಾಂಧರು ಮಹಾರಾಷ್ಟ್ರದ ಜಳಗಾವ್‌ನಲ್ಲಿ ಗೋಲಾಣಿ ಮಾರ್ಕೇಟ್‌ನ ಮೇಲೆ ಹಲ್ಲೆ ಮಾಡಿದರು. ಇದರಲ್ಲಿ ಕೆಲವು ಹಿಂದೂಗಳು ಗಾಯಗೊಂಡರು. ಮತಾಂಧರು ದೇವತೆಗಳ ಚಿತ್ರಗಳನ್ನು ಕಿತ್ತೆಸೆದು ಅವುಗಳನ್ನು ತುಳಿದರು.

೪. ಹಿಂದೂಗಳೇ, ಉತ್ತರಪ್ರದೇಶದ ಸಮಾಜವಾದಿ
ಪಕ್ಷದ ಸರಕಾರದ ಮೊಗಲಾಡಳಿತವನ್ನು ತಿಳಿದುಕೊಳ್ಳಿ !
ಉತ್ತರಪ್ರದೇಶದ ವ್ಯಾಪಾರಿ ತೆರಿಗೆ ವಿಭಾಗವು ವಿಶ್ವ ಹಿಂದೂ ಪರಿಷತ್ತಿಗೆ ಪ್ರಸ್ತಾಪಿತ ರಾಮಮಂದಿರದ ನಿರ್ಮಾಣ ಕಾರ್ಯಕ್ಕಾಗಿ ರಾಜಸ್ಥಾನ ಮತ್ತು ಗುಜರಾತದಿಂದ ಶಿಲೆಗಳನ್ನು ಆಮದು ಮಾಡಲು ಅನುಮತಿಯನ್ನು ತಿರಸ್ಕರಿಸಿತು. ‘ಮೇಲಿನಿಂದ’ ಬಂದ ಆದೇಶವೆನ್ನುತ್ತಾ ಈ ಅನುಮತಿ ನಿರಾಕರಿಸಿತು.

೫. ದಾಭೋಳಕರ್-ಪಾನ್ಸರೆ ಹತ್ಯೆ ಪ್ರಕರಣದಲ್ಲಿ ಮುಂಬಯಿ
ಉಚ್ಚ ನ್ಯಾಯಾಲಯದಿಂದ ತನಿಖಾ ದಳಕ್ಕೆ ಕಟುವಾಗಿ ಟೀಕೆ !
ನ್ಯಾಯಾಲಯ ಆಲಿಕೆಯ ಸಮಯದಲ್ಲಿ ತನಿಖಾ ದಳಗಳಿಗೆ ತರಾಟೆಗೆ ತೆಗೆದುಕೊಳ್ಳುತ್ತಾ, ಮೃತರ ಸಂಬಂಧಿಕರು ಯಾರತ್ತ ಬೆರಳು ತೋರಿಸುವರೋ, ನೀವು ಅವರ ತನಿಖೆ ಮಾಡುತ್ತೀರಾ ? ಎಂದಿತು. ಅಷ್ಟು ಮಾತ್ರವಲ್ಲ, ಪ್ರಸಾರಮಾಧ್ಯಮಗಳಿಗೆ ಹೋಗಿ ಮಾಹಿತಿ ನೀಡಬೇಡಿ,  ಎಂದು ದಾಭೋಳಕರ್-ಪಾನ್ಸರೆ ಕುಟುಂಬದವರಿಗೂ ಹೇಳಿತು.

೬. ಆಮ್ ಆದ್ಮಿ ಪಕ್ಷದ ಗೌರವವಾಗಿರುವ ಭ್ರಷ್ಟ ಶಾಸಕ !
ಸರಫರಾಜ ಎಂಬ ಒಬ್ಬ ಕಟ್ಟಡ ನಿರ್ಮಾಣ ಕಾರ್ಯದ ಉದ್ಯೋಗಿಯು ಆಮ್ ಆದ್ಮಿ ಪಕ್ಷದ ದೆಹಲಿಯ ಶಾಸಕ ಆಸಿಮ್ ಅಹಮ್ಮದ ಖಾನ್ ೧೫ ಲಕ್ಷ ರೂಪಾಯಿಗಳ ಲಂಚ ಕೇಳಿರುವ ಬಗ್ಗೆ ಆರೋಪಿಸಿದ್ದಾರೆ.

೭. ಯವತಮಾಳದಲ್ಲಿ ಮತಾಂಧರಿಂದ
ವಾರಕರಿಗಳ ದಿಂಡಿಗೆ ಕಲ್ಲು ತೂರಾಟ !
ಯವತಮಾಳ (ಮಹಾರಾಷ್ಟ್ರ) ದಲ್ಲಿನ ಪ್ರಾದೇಶಿಕ ಸಾರಿಗೆ ಕಾರ್ಯಾಲಯದ (ಆರ್‌ಟಿಓ) ಪರಿಸರದಲ್ಲಿ ಮತಾಂಧರು ವರ್ಧಾದಿಂದ ಪಂಢರಪುರಕ್ಕೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದ ವಾರಕರಿಗಳ ೨ ದಿಂಡಿಗಳ ಮೇಲೆ ಜೂನ್ ೨೦ ರಂದು ಸಾಯಂಕಾಲ ಕಲ್ಲುತೂರಾಟ ಮಾಡಿದರು. ಇದರಲ್ಲಿ ಅನೇಕ ವಾರಕರಿಗಳು ಗಾಯಗೊಂಡಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !