ಹಿಂದೂಗಳೇ, ಧರ್ಮಶಿಕ್ಷಣ ಪಡೆಯಿರಿ !

ಹಿಂದೂ ಸಮಾಜದ ಸದ್ಯ ಸ್ಥಿತಿ
ಆಂಗ್ಲರು ಭಾರತವನ್ನು ವಶಪಡಿಸಿಕೊಂಡ ನಂತರ ಮೆಕಾಲೆಯು ಗುರುಕುಲ ಶಿಕ್ಷಣಪದ್ಧತಿಯನ್ನು ನಿಲ್ಲಿಸಿಹಿಂದೂಗಳ ಸಂಸ್ಕೃತಿಯನ್ನು ಮುಗಿಸುವುದು ಅಥವಾ ಅದನ್ನು ವಿಕೃತಗೊಳಿಸುವುದು ಎಂಬ ಉದ್ದೇಶ ವನ್ನಿಟ್ಟುಕೊಂಡನು. ಇದರಿಂದಾಗಿ ಪಾಶ್ಚಾತ್ಯ ಸಂಸ್ಕೃತಿಯ ಆಕ್ರಮಣ ಮತ್ತು ಭೋಗವಾದ ಇವುಗಳ ವಿಷಬಳ್ಳಿಯು ಮನೆಮನೆಗೂ ಹರಡಿತು.
ಇದರ ಪರಿಣಾಮದಿಂದಲೇ ಇಂದು ಹಿಂದೂಗಳು ಆಹಾರ, ವಿಹಾರ, ಪೋಷಾಕು, ಭೋಜನ ಮುಂತಾದ ದೈನಂದಿನ ಜೀವನದ ಎಲ್ಲವನ್ನು ಕೃತಿಯ ಸ್ತರದಲ್ಲಿ ಹಾಗೂ ಸಾಮ್ಯವಾದ, ಪುರೋಗಾಮಿಗಳು, ಸ್ತ್ರೀವಾದಿಗಳು, ವಿಜ್ಞಾನವಾದಿಗಳು ಮುಂತಾದವರ ವಿಚಾರಧಾರೆಗಳ ಮಾಧ್ಯಮದಿಂದ ವೈಚಾರಿಕ ಮಟ್ಟದಲ್ಲಿಯೂ ಬಹುದೊಡ್ಡ ಪ್ರಮಾಣದಲ್ಲಿ ಪಾಶ್ಚಾತ್ಯರ ಅಂಧಾನುಕರಣೆ ಯನ್ನು ಮಾಡುತ್ತಿದ್ದಾರೆ. ಕಳ್ಳತನ, ಬಲಾತ್ಕಾರ, ಕೊಲೆ, ಗೂಂಡಾಗಿರಿ, ಆತ್ಮಹತ್ಯೆ, ಬರ, ಭ್ರಷ್ಟಾಚಾರ ಇವೇ ಮುಂತಾದ ಸಮಸ್ಯೆಗಳಿಂದಾಗಿ ಮನುಷ್ಯನು ಹತಾಶ ನಾಗಿದ್ದಾನೆ. ವೈಯಕ್ತಿಕ ಹಾಗೂ ಸಾಮಾಜಿಕ ಇವೆರಡೂ ಸ್ತರಗಳಲ್ಲಿ ಆತನ ಜೀವನವು ಸೀಮಿತವಾಗಿದೆ.
ಹಿಂದೂಗಳ ಧಾರ್ಮಿಕ ಸ್ಥಿತಿ
ಮೊಗಲ ವಿಶ್ವವಿದ್ಯಾಲಯಗಳನ್ನೂ, ಧರ್ಮಗ್ರಂಥ ಗಳನ್ನೂ ಸುಟ್ಟು ಹಾಕಿದ್ದಾರೆ. ಆಂಗ್ಲರು ಇತಿಹಾಸಲೇಖನದ ಹೆಸರಿನಲ್ಲಿ ಇತಿಹಾಸ ವನ್ನು ವಿಕೃತಗೊಳಿಸಿ ತಮ್ಮ ಧರ್ಮವನ್ನು ಕೊಂಡಾಡಿದರು. ಇದರಿಂದ ಹಿಂದೂಗಳ ಮನಸ್ಸಿನಲ್ಲಿ ತಮ್ಮ ಧರ್ಮದ ಬಗ್ಗೆಯೇ ಹಲವಾರು ಅಪನಂಬಿಕೆಗಳು ಹಾಗೂ ಅಜ್ಞಾನ ಇವೆ. ಇಂದು ಜನಸಾಮಾನ್ಯರಿಗೆ ಹಿಂದೂ ಧರ್ಮದ ಶಿಕ್ಷಣ ಪಡೆಯುವ ವ್ಯವಸ್ಥೆ ಎಲ್ಲಿಯೂ ಇಲ್ಲ. ಹಿಂದೂಗಳಿಗೆ ಅವರ ಧರ್ಮ ಹಾಗೂ ಸಂಸ್ಕೃತಿಯ ಕುರಿತು ನಿರೀಕ್ಷಿಸಿದಷ್ಟು ಮಹತ್ವವು ತಿಳಿದಿಲ್ಲದಿರುವುದರಿಂದ ಅವರಲ್ಲಿ ಧರ್ಮಾಭಿಮಾನವು ಮೂಡುವುದಿಲ್ಲ ಹಾಗೂ ಧರ್ಮದ ಮಹತ್ವವು ತಿಳಿದಿಲ್ಲದ ಕಾರಣ ಧರ್ಮಾಚರಣೆಯಾಗುವುದಿಲ್ಲ. ಧರ್ಮಶಿಕ್ಷಣದ ಅಭಾವದಿಂದಾಗಿ ಹಿಂದೂಗಳಿಗೆ ಧರ್ಮದ ನೈಜ್ಯ ಜ್ಞಾನವಿಲ್ಲ. ಇದರಿಂದಲೇ ಮತಾಂತರ, ದೇವರು-ಧರ್ಮ ಇವುಗಳ ವಿರುದ್ಧ ಆಗುವ ಟೀಕೆ, ಶ್ರದ್ಧಾಸ್ಥಾನಗಳ ವಿಡಂಬನೆ ಇವುಗಳ ಬಗ್ಗೆ ಅವರಿಗೆ ಏನೂ ಅನ್ನಿಸುವುದಿಲ್ಲ. ತಥಾಕಥಿತ ಪುರೋಗಾಮಿಗಳು, ಜಾತ್ಯತೀತವಾದಿಗಳು, ಬುದ್ಧಿವಾದಿಗಳು, ಸಮಾಜ ಸುಧಾರಕರು ಹಾಗೂ ಧರ್ಮದ್ರೋಹಿಗಳು ಇದರ ಲಾಭ ಪಡೆದು ಹಿಂದೂ ಧರ್ಮದ ಬಗ್ಗೆ ಇನ್ನೂ ಹೆಚ್ಚು ತಾತ್ಸಾರ ಮೂಡುವಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಹಾಗೂ ಹಿಂದೂಗಳ ಮನಸ್ಸು ಕಲುಷಿತ ಗೊಳಿಸುತ್ತಿದ್ದಾರೆ. ಅದರಿಂದ ದಿನೇದಿನೇ ಹಿಂದೂ ಧರ್ಮದಿಂದ ದೂರ ಹೋಗುತ್ತಿದ್ದಾರೆ.
ಧರ್ಮಶಿಕ್ಷಣದ ಆವಶ್ಯಕತೆ
. ಇಂದು ಇತರ ಧರ್ಮದವರ ಧರ್ಮಶಿಕ್ಷಣ ಕೇಂದ್ರಗಳಿವೆ; ಆದರೆ ಹಿಂದೂಗಳಿಗೆ ಮಾತ್ರ ಧರ್ಮಶಿಕ್ಷಣದ ವ್ಯವಸ್ಥೆಯು ಉಪಲಬ್ಧವಿಲ್ಲ.
. ಹಿಂದುತ್ವವಾದಿಗಳು ಧರ್ಮದ ಅಭ್ಯಾಸಅಥವಾ ಧರ್ಮಾಚರಣೆ ಮಾಡದಿದ್ದುದರಿಂದಧರ್ಮಹಾನಿಯನ್ನು ತಡೆಯುವುದು ಅವರಿಂದಸಾಧ್ಯವಾಗಲಿಲ್ಲ; ಅಥವಾ ಹಿಂದೂ ಧರ್ಮದಮೇಲಾದ ಕ್ರೈಸ್ತ ಹಾಗೂ ಇಸ್ಲಾಂ ಆಕ್ರಮಣಗಳಿಗೆ ಪ್ರತಿಕಾರ ಮಾಡಲೂ ಸಾಧ್ಯವಾಗಲಿಲ್ಲ.
. ಹಿಂದೂಗಳಿಗೆ ಅವರ ಧರ್ಮದ ಬಗ್ಗೆತಿಳಿಯಬೇಕು. ಅವರಿಗೆ ಅದರ ಬಗ್ಗೆ ಅಭಿಮಾನವೆನಿಸ ಬೇಕು, ತಮ್ಮ ಮೇಲೆ ಹಾಗೂ ತಮ್ಮ ಧಾರ್ಮಿಕಶ್ರದ್ಧೆಗಳ ಮೇಲಾಗುತ್ತಿರುವ ಆಕ್ರಮಣಗಳನ್ನು ಗುರುತಿಸಿ ಅವುಗಳನ್ನು ವಿರೋಧಿಸಬೇಕು; ಇದಕ್ಕಾಗಿ ಅವರು ಸಂಘಟಿತ ರಾಗಬೇಕು ಮತ್ತು ತಮ್ಮ ವಂಶವನ್ನು ರಕ್ಷಿಸಬೇಕು; ಇದು ಇಂದು ಕಾಲದ ಆವಶ್ಯಕತೆಯಾಗಿದೆ. ಹಿಂದೂಗಳಿಂದ ಈ ಕೃತಿಗಳಾಗಬೇಕಾದರೆ ಅವರಲ್ಲಿ ಧರ್ಮಾಭಿಮಾನವಿರಬೇಕು. ಆ ಧರ್ಮಾಭಿಮಾನವು ಧರ್ಮಾಚರಣೆಯಿಂದ ಬರುವ ಸ್ವಾನುಭೂತಿಗಳಿಂದಲೇ ಬರಲು ಸಾಧ್ಯ. ಧರ್ಮಾಚರಣೆ ಮಾಡುವುದು ಹೇಗೆಎಂಬುದನ್ನು ಧರ್ಮಶಿಕ್ಷಣವರ್ಗದಲ್ಲಿ ಕಲಿಸಲಾಗುತ್ತದೆ.
. ಧರ್ಮಶಿಕ್ಷಣದಿಂದ ನಿರ್ಧಿಷ್ಠವಾಗಿ ಏನಾಗು ತ್ತದೆ ? ದೇವತೆಗಳ ಮಹತ್ವ ಹಾಗೂ ಧಾರ್ಮಿಕ ಕೃತಿಗಳ ಹಿಂದಿನ ಶಾಸ್ತ್ರ ನಮಗೆ ತಿಳಿದರೆ ಅದರ ಮಹತ್ವವು ಮನವರಿಕೆಯಾಗಿ ಅದರ ಬಗ್ಗೆ ಭಾವವು ನಿರ್ಮಾಣವಾಗುತ್ತದೆ. ಶ್ರೀಗಣೇಶನ ನಿಜರೂಪ ಹಾಗೂ ಆತನು ಮಾನವನಿಗೆ ಮಾಡಿರುವ ಮಹಾನ್ ಕಾರ್ಯವು ತಿಳಿದರೆ ನಾವು ಅವನ ಚರಣಗಳಲ್ಲಿ ಶಾಶ್ವತವಾಗಿ ನತಮಸ್ತಕರಾಗುವೆವು. ಆತನ ವಿಡಂಬನೆಯನ್ನು ನಾವು ಎಂದೂ ಸಹಿಸಲಾರೆವು ಹಾಗೂ ಆತನ ಉತ್ಸವದಲ್ಲಿ ನಡೆಯುವ ತಪ್ಪು ಆಚರಣೆಗಳನ್ನು ಸಹಿಸಲಾರೆವು.
. ಧರ್ಮಾಚರಣೆಯ ಉದಾಹರಣೆಯೊಂದನ್ನು ಕೊಡುವುದಾದರೆ, ಇಂದು ಎಲ್ಲಿಯಾದರೂ ಹಲವಾರುಹಿಂದೂಗಳು ಹಣೆಗೆ ತಿಲಕವನ್ನಿಟ್ಟರೆ, ಅನ್ಯ ಪಂಥ ದವರು ಹಿಂದೂಗಳಿಗೆ ಕಿರುಕುಳ ಕೊಡುವ ಧೈರ್ಯ ಮಾಡುವುದಿಲ್ಲ ಎಂದು ಗಮನಕ್ಕೆ ಬಂದಿದೆ. ಅಲ್ಲದೇ ಇಂತಹ ಚಿಕ್ಕ ಕೃತಿಗಳಿಂದ ಸಂಘಟಿತತನವು ಹೆಚ್ಚಾಗಲು ಸಹಾಯವಾಗುತ್ತದೆ. ಇದು ಧರ್ಮಶಿಕ್ಷಣ ವರ್ಗದಲ್ಲಿ ಕಲಿಯಲು ಸಿಗುತ್ತದೆ.
. ಧರ್ಮವು ಉಳಿದರೆ ನಾವು ಉಳಿಯುವೆವು. ಆದ್ದರಿಂದ ನಾವು ಧರ್ಮವನ್ನು ತಿಳಿದುಕೊಳ್ಳಬೇಕು ಮತ್ತು ಅದರಂತೆ ಬದುಕಬೇಕು. ಇದಕ್ಕೆ ಧರ್ಮಶಿಕ್ಷಣ ವರ್ಗಗಳು ಉಪಯುಕ್ತವಾಗಿವೆ.

ಮೇಲಿನ ಹಲವು ಉದಾಹರಣೆಗಳಿಂದ ಧರ್ಮ ಶಿಕ್ಷಣದ ಆವಶ್ಯಕತೆಯು ಗಮನಕ್ಕೆ ಬರುವುದು. ಧರ್ಮಾನುಸಾರ ಆಚರಣೆಯನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಸುವುದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಅಲ್ಲಲ್ಲಿ ಧರ್ಮಶಿಕ್ಷಣ ವರ್ಗಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅದರ ಲಾಭ ಪಡೆದುಕೊಳ್ಳಿರಿ ! ಸ್ವತಃ ಧರ್ಮಾಚರಣೆ ಮಾಡಿರಿ ಮತ್ತು ಇತರರನ್ನು ಧರ್ಮಾಚರಣೆ ಮಾಡಲು ಪ್ರವೃತ್ತರನ್ನಾಗಿಸಿ ! - ಶ್ರೀ ಸುನೀಲ ಘನವಟ್, ಹಿಂದೂ ಜನಜಾಗೃತಿ ಸಮಿತಿ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಿಂದೂಗಳೇ, ಧರ್ಮಶಿಕ್ಷಣ ಪಡೆಯಿರಿ !