ಪ.ಪೂ. ಡಾ. ಆಠವಲೆಯವರ ಬುದ್ಧಿಅಗಮ್ಯ ಶ್ರೇಷ್ಠತ್ವ !

ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಅಮೃತ ಮಹೋತ್ಸವ ವರ್ಷದ ನಿಮಿತ್ತ...
(ಪರಾತ್ಪರ ಗುರು) ಡಾ. ಆಠವಲೆ
ನ್ಯಾಯವಾದಿ ಯೋಗೇಶ ಜಲತಾರೆ
‘ಪ.ಪೂ. ಡಾ. ಆಠವಲೆಯವರು ಪ್ರಸಿದ್ಧಿ ಪರಾಮುಖರಾಗಿರುವುದರಿಂದ ಕಳೆದ ವರ್ಷದವರೆಗೆ ಅವರು ಯಾವುದೇ ರೀತಿಯಲ್ಲಿಯೂ ತಮ್ಮ ಶ್ರೇಷ್ಠತ್ವವನ್ನು ಜಗಜ್ಜಾಹೀರುಗೊಳಿಸಲು ಸಾಧಕರಿಗೆ ಅನುಮತಿ ನೀಡಲಿಲ್ಲ. ಸಾಧಕರಿಗೆ ಪ.ಪೂ. ಡಾಕ್ಟರರ ವಿಷಯದಲ್ಲಿ ನೂರಾರು ಅನುಭೂತಿಗಳು ಬಂದಿದ್ದರೂ ಪ.ಪೂ. ಡಾಕ್ಟರರು ಅದರ ಎಲ್ಲ ಕರ್ತೃತ್ವವನ್ನು ಶ್ರೀಕೃಷ್ಣನಿಗೆ ನೀಡಿ ಅದರಿಂದ ಅಲಿಪ್ತರಾಗಿರುತ್ತಿದ್ದರು; ‘ಸಾಧಕರಿಗೆ ದೇವರೇ ಅನುಭೂತಿ ನೀಡುತ್ತಾರೆ’, ಎಂದು ಮಾತು ಬದಲಾಯಿಸುತ್ತಿದ್ದರು. ಕಳೆದ ವರ್ಷ ಮಾತ್ರ ಮಹರ್ಷಿಗಳ ಆಜ್ಞೆಯೆಂದು ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಲು ಸಾಧಕರಿಗೆ ಅನುಮತಿ ನೀಡಿದರು ಮತ್ತು ಸಾಧಕರು ಮಹರ್ಷಿಗಳು ಹೇಳಿದ ಪ.ಪೂ. ಡಾಕ್ಟರರ ಶ್ರೇಷ್ಠತ್ವವನ್ನು ಜಗತ್ತಿಗೆ ‘ಸನಾತನ ಪ್ರಭಾತ’ದ ಮಾಧ್ಯಮದಿಂದ ತಿಳಿಸಿದರು. ಇದರಲ್ಲಿ ಎಲ್ಲಿಯೂ ಪ.ಪೂ. ಡಾಕ್ಟರರ ಪ್ರತ್ಯಕ್ಷ ಸಹಭಾಗ ಇರಲಿಲ್ಲ. ಮಹರ್ಷಿಗಳು ಹೇಳಿದಂತೆ ಅವರ ಆಜ್ಞಾಪಾಲನೆ ಮಾಡಬೇಕು, ಎಂದಷ್ಟೇ ಇತ್ತು. ಆದರೂ ಕೆಲವು ತಥಾಕಥಿತ ಹಿಂದುತ್ವವಾದಿಗಳಿಗೆ ಮತ್ತು ಅಪೇಕ್ಷೆಯಂತೆ ಪುರೋ(ಅಧೋ)ಗಾಮಿಗಳಿಗೆ ಹೊಟ್ಟೆಶೂಲೆ ಆರಂಭವಾಯಿತು ! ಕೆಲವರಂತೂ ದೂರಚಿತ್ರವಾಹಿನಿಯ ಮೂಲಕ ಅವರನ್ನು ಭೇಟಿಯಾಗುವ ಮತ್ತು ಅವರ ಚಮತ್ಕಾರವನ್ನು ನೋಡುವ (ಪ.ಪೂ. ಡಾಕ್ಟರರು ಯಾವತ್ತೂ ಮಾಡದ್ದನ್ನು) ಬಗ್ಗೆ ಆಗ್ರಹದಿಂದ ಇಚ್ಛೆ ವ್ಯಕ್ತಪಡಿಸಿದರು.
ಅದಿರಲಿ. ಈ  ಹಿನ್ನೆಲೆಯನ್ನು ಹೇಳುವ ಕಾರಣವೇನೆಂದರೆ ‘ಪ.ಪೂ. ಡಾಕ್ಟರರ ಅಲೌಕಿಕತ್ವವು ಶಬ್ದಗಳಲ್ಲಿ ವರ್ಣಿಸಲು ಅಸಾಧ್ಯವಾಗಿರುವ ವಿಷಯವಾಗಿದೆ’, ಎಂದು ಮಹರ್ಷಿಗಳು ಹೇಳುತ್ತಾರೆ ಮತ್ತು ಇದನ್ನು ಸಾಧಕರು ಪ್ರತ್ಯಕ್ಷ ಅನುಭವಿಸಿದ್ದಾರೆ. ಆದ್ದರಿಂದ ತಥಾಕಥಿತ ಬುದ್ಧಿಪ್ರಾಮಾಣ್ಯವಾದಿ, ಹಿಂದುತ್ವವಾದಿ ಅಥವಾ ಪುರೋಗಾಮಿಗಳಿಗೆ ಏನನಿಸುತ್ತದೆ, ಎಂಬುದಕ್ಕೆ ಮಹತ್ವವಿಲ್ಲ. ಯಾರು ನಿಜವಾದ ಹಿಂದುತ್ವವಾದಿಗಳಾಗಿದ್ದಾರೆಯೋ ಅವರು ಪ.ಪೂ. ಡಾಕ್ಟರರ ಮಾರ್ಗದರ್ಶನದ ಲಾಭ ಪಡೆದು ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ನಾನು ಸ್ವತಃ ಕಳೆದ ೧೬ ವರ್ಷಗಳಿಂದ ಪ.ಪೂ. ಡಾಕ್ಟರರ ಸಾನ್ನಿಧ್ಯದಲ್ಲಿ ಸಾಧನೆ ಮಾಡುತ್ತಿದ್ಧೇನೆ. ಈ ಅವಧಿಯಲ್ಲಿ ಅವರ ವಿಷಯದಲ್ಲಿ ಅನೇಕ ಅನುಭೂತಿಗಳನ್ನು ಸಹ ನಾನು ಪಡೆದಿದ್ದೇನೆ. ಅದರಲ್ಲಿಯೂ ಕೆಲವು ಅನುಭವಗಳೆಂದರೆ, ಬುದ್ಧಿಪ್ರಾಮಾಣ್ಯವಾದಿಗಳು ಈ ವಿಷಯದಲ್ಲಿ ಪ.ಪೂ. ಡಾಕ್ಟರರೊಂದಿಗೆ ತಮ್ಮನ್ನು ತುಲನೆ ಮಾಡಿಕೊಂಡರೂ ಅದು ಆಕಾಶ ಮತ್ತು ಸೂರ್ಯನೊಂದಿಗೆ ತುಲನೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂಬುದು ಅವರ ಗಮನಕ್ಕೆ ಬರುವುದು ಮತ್ತು ಕೆಲವರಿಗೆ ಪಶ್ಚಾತ್ತಾಪ ಆದರೆ, ಅವರು  ಪ.ಪೂ. ಡಾಕ್ಟರರ ಶ್ರೇಷ್ಠತ್ವವನ್ನು ವಿಕಲ್ಪರಹಿತ ಸ್ವೀಕರಿಸುವರು, ಎಂಬುದರಲ್ಲಿ ಸಂಶಯವಿಲ್ಲ. ಯಾರಿಗೆ ಇದು ಸಾಧ್ಯವಿಲ್ಲವೋ, ಅವರು ತಮ್ಮ ವಿಷಯದಲ್ಲಿ ಇತರರಿಗೆ ಅಂತಹ ಅನುಭವ ಬಂದಿದೆಯೇ, ಎಂಬುದನ್ನು ಅಂತರ್ಮುಖರಾಗಿ ವಿಚಾರ ಮಾಡಬೇಕು. ಅಂದರೆ ಈ ಲೇಖನಮಾಲೆ ಅವರಿಗಾಗಿ ಅಲ್ಲ, ಇದು ಯಾವ ಸಾಧಕರು ಇದುವರೆಗೆ ಪ.ಪೂ. ಡಾಕ್ಟರರನ್ನು ಭೇಟಿಯಾಗಿಲ್ಲವೋ, ಆದರೆ ಅವರ ಅಲೌಕಿಕತ್ವವನ್ನು ಅನುಭವಿಸುತ್ತಿದ್ದಾರೆಯೋ, ಅವರಿಗಾಗಿ ಇದೆ, ಅವರಿಗಾಗಿ ಕೃತಜ್ಞತೆ ಎಂದು ಇದೆ.  
.  .  .  .  .  .  .  .  .  .  .  .  .  .  .  .  .  .  .  .  .  .  .  .  .  .  .  .  .  .  .  .  .  .  . 
೧. ಪ.ಪೂ. ಡಾಕ್ಟರರ ಬುದ್ಧಿಅಗಮ್ಯ ವೈಯಕ್ತಿಕ ಜೀವನ
ಅ. ಆಶ್ರಮದಲ್ಲಿ ನೂರಾರು ಸಾಧಕರಿರುವಾಗ ಹಾಗೂ ಪ.ಪೂ. ಡಾಕ್ಟರರ ಪ್ರತಿಯೊಂದು ಶಬ್ದವನ್ನು ಪಾಲನೆ ಮಾಡಲು ಸಿದ್ಧರಿರುವಾಗ ಪ.ಪೂ. ಡಾಕ್ಟರರು ಯಾವತ್ತೂ ಯಾವ ಸಾಧಕರಿಗೂ ತಮ್ಮ ವೈಯಕ್ತಿಕ ಕೆಲಸವನ್ನು ಹೇಳುವುದಿಲ್ಲ. ಅವರು ತಮ್ಮ ಎಲ್ಲ ಕೆಲಸಗಳನ್ನು ಸ್ವತಃ ಮಾಡುತ್ತಾರೆ. ಅವರು ಅನಾರೋಗ್ಯದಲ್ಲಿರುವಾಗಲೂ, ನಡೆಯುವಾಗ ಸಮತೋಲನ ತಪ್ಪುತ್ತಿದ್ದರೂ, ಅವರು ಎಲ್ಲ ಕೆಲಸಗಳನ್ನು ಸ್ವತಃ ಮಾಡಿಕೊಳ್ಳುತ್ತಾರೆ.
ಆ. ಸಾಧಕರಿಗೆ ರಾಜಯೋಗಿಗಳಂತೆ ಸುಖ ಸೌಲಭ್ಯಗಳನ್ನು ಒದಗಿಸುವ ಪ.ಪೂ. ಡಾಕ್ಟರರು ಸ್ವತಃ ಮಾತ್ರ ಸಂನ್ಯಾಸಿ ಜೀವನ ನಡೆಸುತ್ತಿದ್ದಾರೆ. ಅವರ ಕೋಣೆಯಲ್ಲಿ ಒಂದು ಸರಳ ಕುರ್ಚಿ, ಒಂದು ಸಣ್ಣ ಮೇಜು (ಅದನ್ನು ಅವರು ಊಟಕ್ಕೂ ಉಪಯೋಗಿಸುತ್ತಾರೆ) ಮತ್ತು ಮಲಗಲು ಒಂದು ಸಣ್ಣ ಮಂಚವಿದೆ. ಅದರಲ್ಲಿರುವ ಹಾಸಿಗೆಯೂ ಸರಳವಿದೆ.
ಇ. ಪ.ಪೂ. ಡಾಕ್ಟರರ ಊಟ ಅತ್ಯಲ್ಪ ಇರುತ್ತದೆ. ಅವರಿಗೆ ಯಾವುದೇ ವಿಶೇಷ ಪದಾರ್ಥ ಬೇಕೆನಿಸುವುದಿಲ್ಲ. ಎಲ್ಲ ಪಥ್ಯದ ಪದಾರ್ಥಗಳು ಮತ್ತು ಸಪ್ಪೆ ಆಗಿರುತ್ತದೆ.
ಈ. ಪ.ಪೂ. ಡಾಕ್ಟರರಲ್ಲಿ ಬೆರಳೆಣಿಕೆಯಷ್ಟೇ ಬಟ್ಟೆಗಳಿವೆ. ಬಟ್ಟೆ ಹರಿದುಹೋದರೆ ಅದನ್ನು ಹೊಲಿದು ಕೊಂಡು ಪುನಃ ಉಪಯೋಗಿಸುತ್ತಾರೆ. ಇದೇ ರೀತಿ ಅವರು ಮಂಚದ ಬಟ್ಟೆ ಮತ್ತು ದಿಂಬುಗಳ ಹೊದಿಕೆಯ ಬಗ್ಗೆಯೂ ಮಾಡುತ್ತಾರೆ.
ಉ. ಅವರು ಗಡ್ಡ ತೆಗೆಯಲು ಸ್ನಾನದ ಸಾಬೂನಿನ ಉಳಿದ ತುಂಡುಗಳನ್ನು ಉಪಯೋಗಿಸುತ್ತಾರೆ.
ಊ. ಅವರ ಕೋಣೆಯ ಟೈಲ್ಸ್ ಒರೆಸುವ ಬಟ್ಟೆ ಹರಿದುಹೋದರೆ ಅದನ್ನೂ ಹೊಲಿದು ಉಪಯೋಗಿಸುತ್ತಾರೆ. ಹಳೆಯದು ಹರಿಯಿತೆಂದು ತಕ್ಷಣ ಬೇರೆ ಬಟ್ಟೆ ತೆಗೆದುಕೊಳ್ಳುವುದಿಲ್ಲ. ಅವರು ಎಲ್ಲ ವಿಷಯದಲ್ಲಿಯೂ ಇದೇ ರೀತಿ ಮಿತವ್ಯಯ ಮಾಡುತ್ತಾರೆ. ಇದರ ಅನೇಕ ಉದಾಹರಣೆಗಳಿವೆ.
ಋ. ಸೂಕ್ಷ್ಮದ ತೊಂದರೆಯಿಂದಾಗಿ ಅವರಿಗೆ ಉಷ್ಣತೆಯಿಂದ ಬಹಳ ತೊಂದರೆಯಾಗುತ್ತದೆ, ಆದರೂ ಅವರು ಸ್ವತಃ ಏರ್‌ಕಂಡೀಶನ್ ಉಪಯೋಗಿಸುವುದಿಲ್ಲ.
ಎ. ಅವರು ಕೇವಲ ಸಾಧಕರಿಗೆ ಮಾತ್ರ ಸತತ ಸತ್ಸೇವೆಯಲ್ಲಿರಲು ಹೇಳುವುದಲ್ಲ, ಅವರು ಸ್ವತಃ ನಿರಂತರ ಗ್ರಂಥಲೇಖನದ ಸೇವೆ ಮಾಡುತ್ತಾರೆ. ಅವರು ಅನಾರೋಗ್ಯದಲ್ಲಿದ್ದರೂ ಅಥವಾ ಅವರಿಗೆ ಆಯಾಸವಿದ್ದರೂ ಸೇವೆಯನ್ನು ಕಡಿಮೆಗೊಳಿಸುವುದಿಲ್ಲ.
ಏ. ಇಷ್ಟು ದೊಡ್ಡ ಸಂಸ್ಥೆಯನ್ನು ಸ್ಥಾಪಿಸಿ ಅದರ ಕಾರ್ಯ ಇಷ್ಟು ವಿಸ್ತಾರವಾಗಿರುವಾಗಲೂ ಅವರು ಮಾತ್ರ ಆಶ್ರಮದಲ್ಲಿ ಒಂದು ಸಾಮಾನ್ಯ ಶಿಷ್ಯನಂತೆ ಜೀವನ ನಡೆಸುತ್ತಿರುವುದು ಮಾತ್ರವಲ್ಲ, ಅವರು, ‘ನಾನು ಗುರುಗಳ ಆಶ್ರಮದಲ್ಲಿ ಶಿಷ್ಯನೆಂದು ವಾಸಿಸುತ್ತಿದ್ದೇನೆ’ ಎಂದು ಸಹ ಹೇಳುತ್ತಾರೆ.
ಐ. ಸಂಸ್ಥೆ ಮತ್ತು ಸಾಧಕರ ಮೇಲೆ ಅನೇಕ ಸಂಕಟಗಳು ಬಂದಿವೆ. ಸೆರೆಮನೆಗೆ ಹೋಗುವ ಪ್ರಸಂಗ ಸಹ ಬಂದಿದೆ. ಆದರೂ ಪ.ಪೂ. ಡಾಕ್ಟರರು ಸ್ವಲ್ಪವೂ ಅಸ್ಥಿರವಾಗುವುದಿಲ್ಲ. ಅವರ ಆನಂದಾವಸ್ಥೆಯಲ್ಲಿ ಸ್ವಲ್ಪವೂ ವ್ಯತ್ಯಾಸವಾಗುವುದಿಲ್ಲ. ಅವರು ಸ್ವತಃ ಸ್ಥಿರವಾಗಿದ್ದು ಆನಂದದಲ್ಲಿರುತ್ತಾರೆ ಹಾಗೂ ಸಾಧಕರನ್ನು ಸಹ ಹಾಗೆಯೇ ಇರಿಸುತ್ತಾರೆ.
೨. ಪ.ಪೂ. ಡಾಕ್ಟರರ ಬುದ್ಧಿಅಗಮ್ಯ ಸಮಷ್ಟಿ ಜೀವನ 
(ಇತರರೊಂದಿಗೆ ವರ್ತಿಸುವುದು-ಮಾತನಾಡುವುದು)
ಅ. ಒಮ್ಮೆ ಪ.ಪೂ. ಡಾಕ್ಟರರನ್ನು ಭೇಟಿಯಾದವನು, ಶಾಶ್ವತವಾಗಿ ಅವರವನಾಗುತ್ತಾನೆ.
ಆ. ಅಹಂಕಾರ ಸಾಧನೆಗೆ ಘಾತಕವಾಗಿದೆ, ಎಂಬುದು ಅವರಿಗೆ ತಿಳಿದಿದ್ದರೂ, ತೀವ್ರ ಅಹಂಕಾರವಿರುವ ಸಾಧಕರೊಂದಿಗೂ ಅವರು ಅಷ್ಟೇ ಪ್ರೇಮದಿಂದ ಮಾತನಾಡುತ್ತಾರೆ. ಅವರ ವರ್ತನೆ-ಮಾತಿನಲ್ಲಿ ಯಾವತ್ತೂ ಭೇದಭಾವ ಇರುವುದಿಲ್ಲ ಅಥವಾ ಅವರು ಯಾರನ್ನೂ ಕಡಿಮೆಯೆಂದು ಪರಿಗಣಿಸುವುದಿಲ್ಲ.
ಇ. ಪ.ಪೂ. ಡಾಕ್ಟರರು ಮಕ್ಕಳೊಂದಿಗೆ ಮಕ್ಕಳಂತೆ ಹಾಗೂ ವೃದ್ಧರೊಂದಿಗೆ ಅಷ್ಟೇ ಸಮರಸದಿಂದ ಸಂಭಾಷಣೆ  ಮಾಡುತ್ತಾರೆ.
ಈ. ಯಾರೇ ಎಷ್ಟೇ ಬಡವರಿರಲಿ, ಶ್ರೀಮಂತರಿರಲಿ, ಸದೃಢರಾಗಿರಲಿ, ರೋಗಪೀಡಿತರಾಗಿರಲಿ ಅಥವಾ ಯಾವುದೇ ಜಾತಿಯವನಾಗಿರಲಿ, ಅವರು ಸಾಧಕರೊಂದಿಗೆ ಮುಕ್ತವಾಗಿ ಹಾಗೂ ಅತ್ಯಂತ ಪ್ರೇಮದಿಂದ ಸಂಭಾಷಣೆ ಮಾಡುತ್ತಾರೆ. ಚರ್ಮ ರೋಗದಿಂದ ಜರ್ಝರಿತನಾದ ವಿದೇಶದ ಸಾಧಕನೊಬ್ಬನು ತನ್ನ ಕಾಯಿಲೆಯಿಂದಾಗಿ ಇತರರಿಗೆ ಅಸಹ್ಯವೆನಿಸಬಾರದೆಂದು ಸಂಪೂರ್ಣ ಶರೀರವನ್ನು ಮುಚ್ಚಿಕೊಂಡಿರುತ್ತಿದ್ದನು. ಅವನಿಗೆ ಪ.ಪೂ. ಡಾಕ್ಟರರ ಮುಂದೆ ಹೋಗಲು ಸಂಕೋಚವೆನಿಸುತ್ತಿರುವಾಗ ಪ.ಪೂ. ಡಾಕ್ಟರರು ಅವನ ಬೆನ್ನಿನ ಮೇಲೆ ಕೈಯಾಡಿಸಿದರು. ಅವನು ಹಾಕಿರುವ ಕಾಲುಚೀಲವನ್ನು ತೆಗೆಯಲು ಹೇಳಿ ಅವನ ವ್ಯಾಧಿಯ ಸ್ವರೂಪವನ್ನು ನೋಡಿದರು. ಅವರ ಇಂತಹ ಪ್ರೇಮದಿಂದ ಆ ಸಾಧಕನಲ್ಲಿ ಜೀವಿಸುವ ಉತ್ಸಾಹ ನಿರ್ಮಾಣವಾಯಿತು.
ಉ. ದೊಡ್ಡ ಸಮ್ಮೋಹನ ಉಪಚಾರತಜ್ಞರಾಗಿದ್ದರೂ ಯಾರಾದರೂ ಮನಸ್ಸಿಗೆ ಸಂಬಂಧಿಸಿದ ಪ್ರಾಥಮಿಕ ವಿಷಯವನ್ನು ಹೇಳಿದರೂ ‘ನನಗೆ ಕಲಿಯಲು ಸಿಕ್ಕಿತು’, ಎಂದು ಅವರು ಹೇಳುತ್ತಾರೆ. ಉಚ್ಚ ಮಟ್ಟದ ಸಂತರಾಗಿದ್ದರೂ, ಯಾರಾದರೂ ಅಧ್ಯಾತ್ಮದ ಪ್ರಾಥಮಿಕ ಭಾಗವನ್ನು ಹೇಳಿದರೂ, ಅವರು ಮನಃಪೂರ್ವಕವಾಗಿ ಕೇಳಿಸಿಕೊಳ್ಳುತ್ತಾರೆ. ಅವರ ವರ್ತನೆ-ಮಾತಿನಲ್ಲಿ ಎಲ್ಲಿಯೂ ‘ನನಗೆ ಇದು ತಿಳಿದಿತ್ತು’, ಎಂದಿರುವುದಿಲ್ಲ.
ಊ. ಶ್ರೀರಾಮನು ಲಕ್ಷ್ಮಣನಿಗೆ ರಾವಣನ ಮೃತ್ಯುವಿನ ಮೊದಲು ಅವನಿಂದಲೂ ರಾಜಧರ್ಮವನ್ನು ಕಲಿಯಲು ಹೇಳಿದನು, ಹಾಗೆಯೇ ಪ.ಪೂ. ಡಾಕ್ಟರರು ಸಾಧಕರಿಗೆ ಎಲ್ಲರಿಂದಲೂ ಕಲಿಯಲು ಹೇಳುತ್ತಾರೆ.
ಋ. ಅನಾರೋಗ್ಯದಿಂದ ಬಾಗಲು ಕಷ್ಟವಾಗುತ್ತಿದ್ದರೂ ಅವರು ಎಲ್ಲ ಸಂತರಿಗೂ ಸಾಧ್ಯವಿದ್ದಷ್ಟು ಬಾಗಿಯೇ ನಮಸ್ಕಾರ ಮಾಡುತ್ತಾರೆ.
ಎ. ಪ.ಪೂ. ಡಾಕ್ಟರರನ್ನು ಹಿಂದೆ ಯಾವತ್ತೂ ನೋಡಿರದಿದ್ದರೂ ನೂರಾರು ಹಿಂದುತ್ವವಾದಿಗಳು, ಅವರ ಮುಖಂಡರು ವಿವಿಧ ಸಂಪ್ರದಾಯಗಳ ಪ್ರಮುಖರು ಎಲ್ಲರೂ ಅವರ ಶ್ರೇಷ್ಠತ್ವವನ್ನು ಒಂದು ಭೇಟಿಯಲ್ಲಿಯೇ ಅನುಭವಿಸುತ್ತಾರೆ ಹಾಗೂ ಅವರ ಮಾಗದರ್ಶನಕ್ಕನುಸಾರ ಮಾರ್ಗಕ್ರಮಣ ಮಾಡುತ್ತಾರೆ.
ಏ. ಪ.ಪೂ. ಡಾಕ್ಟರರು ತಮ್ಮಲ್ಲಿರುವ ಪ್ರೇಮದಿಂದ ಹಾಗೂ ಲೀನತೆಯಿಂದ ಭಾರತದಾದ್ಯಂತ ಇರುವ ಅನೇಕ ಸಂತರನ್ನು ಸನಾತನದೊಂದಿಗೆ ಜೋಡಿಸಿದರು. ಅವರ ಆಶೀರ್ವಾದದಿಂದ ಇಂದು ಸನಾತನದ ಕಾರ್ಯವು ರಭಸದಿಂದ ಬೆಳೆಯುತ್ತಿದೆ.
೩. ಪ.ಪೂ. ಡಾಕ್ಟರರ ಬುದ್ಧಿಅಗಮ್ಯ ಕಾರ್ಯ
ಅ. ಪ.ಪೂ. ಡಾಕ್ಟರರು ಸನಾತನ ಸಂಸ್ಥೆಯ ಸ್ಥಾಪನೆ ಮಾಡಿದ ನಂತರ ಸ್ವಲ್ಪ ಸಮಯದಲ್ಲಿಯೇ ಸಾವಿರಾರು ಸಾಧಕರು ಸಂಸ್ಥೆಯೊಂದಿಗೆ ಜೋಡಿಸಲ್ಪಟ್ಟರು. ಈ ಸಾಧಕರು ಈಗ ಪ.ಪೂ. ಡಾಕ್ಟರರ ಮಾರ್ಗದರ್ಶನಕ್ಕನುಸಾರ ಸಾಧನೆ ಮಾಡಿ ಆಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳುತ್ತಿದ್ದಾರೆ. ಈ ಸಾಧಕರಲ್ಲಿ ೬೫ ಸಾಧಕರು ಸಂತಪದವಿಯನ್ನು ತಲುಪಿದ್ದು ೮೮೦ ಕ್ಕಿಂತಲೂ ಹೆಚ್ಚು ಸಾಧಕರು ಶೇ. ೬೧ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ್ದಾರೆ. 
ಆ. ಹಿಂದೂ ಜನಜಾಗೃತಿ ಸಮಿತಿಯ ಸ್ಥಾಪನೆಯಾದ ನಂತರ ಭಾರತದಾದ್ಯಂತದ ಹಿಂದುತ್ವವಾದಿಗಳು ಸಮಿತಿಯೊಂದಿಗೆ ಜೋಡಿಸಲ್ಪಟ್ಟರು. ಅದರಿಂದ ಸಂಪೂರ್ಣ ದೇಶದಲ್ಲಿ ಹಿಂದೂ ಸಂಘಟನೆಯ ವ್ಯಾಪಕ ಕಾರ್ಯ ಆರಂಭವಾಗಿದೆ. ಸಮಿತಿ ಹಮ್ಮಿಕೊಂಡಿರುವ ಅಧಿವೇಶನಗಳು, ರಾಷ್ಟ್ರೀಯ ಹಿಂದೂ ಆಂದೋಲನ ಇತ್ಯಾದಿ ಉಪಕ್ರಮಗಳಿಂದಾಗಿ ಸಮಿತಿಯು ಅಲ್ಪಾವಧಿಯಲ್ಲಿಯೇ ಹಿಂದೂಗಳ ಮನಸ್ಸಿನಲ್ಲಿ ಸ್ಥಾನ ನಿರ್ಮಾಣ ಮಾಡಿದೆ. ಇಂದು ಅನೇಕ ಹಿಂದುತ್ವವಾದಿಗಳಿಗೆ ಸಮಿತಿಯೆಂದರೆ ಆಧಾರವೆನಿಸುತ್ತದೆ. ಇವರಲ್ಲಿ ಅನೇಕ ಹಿಂದುತ್ವವಾದಿಗಳು ಸಹ ಪ.ಪೂ. ಡಾಕ್ಟರರ ಮಾರ್ಗದರ್ಶನಕ್ಕನುಸಾರ ಸಾಧನೆ ಆರಂಭಿಸಿದ್ದಾರೆ.
ಇ. ಪ.ಪೂ. ಡಾಕ್ಟರರು ಸಂಕಲನ ಮಾಡಿದ ಗ್ರಂಥಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಿಂದ ಜಗತ್ತಿನಾದ್ಯಂತ ಅಧ್ಯಾತ್ಮ ಪ್ರಸಾರವಾಗುತ್ತಿದೆ.
ಈ. ವಿದೇಶದಲ್ಲಿ ‘ಸ್ಪಿರಿಚುವಲ್ ಸೈನ್ಸ್ ರಿಸರ್ಚ್ ಫೌಂಡೇಶನ್’ ಈ ಸಂಸ್ಥೆ ಅಧ್ಯಾತ್ಮದ ಬಗ್ಗೆ ಸಂದೇಹ ಮತ್ತು ಮಾರ್ಗದರ್ಶನಕ್ಕಾಗಿ ಸನಾತನದ ಗ್ರಂಥಗಳ ಸಂದರ್ಭವನ್ನು ನೀಡುತ್ತದೆ. ಈ ಸಂಸ್ಥೆಯ ಸಾಧಕರು ಸಹ ಅಧ್ಯಾತ್ಮದಲ್ಲಿ ವಿಹಂಗಮ ಪ್ರಗತಿ ಮಾಡಿಕೊಳ್ಳು ತ್ತಿದ್ದಾರೆ.
ಉ. ಪ.ಪೂ. ಡಾಕ್ಟರರಿಗೆ ಅಧ್ಯಾತ್ಮಶಾಸ್ತ್ರದ ಮೇಲೆ ಶೇ. ೧೦೦ ರಷ್ಟು ಶ್ರದ್ಧೆ ಇರುವುದರಿಂದ ಅವರು ಅದರಲ್ಲಿನ ಪ್ರತಿಯೊಂದು ವಿಷಯವನ್ನೂ ಸೂಕ್ಷ್ಮ ಸ್ತರದಲ್ಲಿ ಸಂಶೋಧನೆ ಮಾಡುತ್ತಾರೆ. ಸಂಶೋಧನೆಯ ಕೊನೆಗೆ ಬುದ್ಧಿಯಿಂದ ನಿಷ್ಕರ್ಷ ಮಾಡಿ ಅವರು ತಮ್ಮ ಬೌದ್ಧಿಕ ಸ್ತರಕ್ಕೆ ಬಂದು ಸಮಷ್ಟಿಗೆ ವಿವರಿಸುತ್ತಾರೆ. ಅಧ್ಯಾತ್ಮಶಾಸ್ತ್ರವನ್ನು ಬುದ್ಧಿಯಿಂದ ವಿವರಿಸುವ ಪ.ಪೂ. ಡಾಕ್ಟರರಂತಹ ಸಂತರು ಬಹಳ ವಿರಳವಾಗಿದ್ದಾರೆ.
ಊ. ಬುದ್ಧಿವಾದಿ, ಪುರೋಗಾಮಿ, ತಥಾಕಥಿತ ಸಮಾಜ ಸೇವಕರು ಮುಂತಾದವರೆಲ್ಲರೂ ಸ್ತ್ರೀ-ಮುಕ್ತಿ, ಜಾತಿ ನಿರ್ಮೂಲನೆ ಇತ್ಯಾದಿಗಳ ಬಗ್ಗೆ ಕೇವಲ ಹರಟೆ ಹೊಡೆಯುತ್ತಾರೆ; ಆದರೆ ವೈಯಕ್ತಿಕ ಜೀವನದಲ್ಲಿ ಅವರು ಪ್ರತ್ಯಕ್ಷವಾಗಿ ಎಷ್ಟು ಆಚರಣೆ ಮಾಡುತ್ತಾರೆ, ಎಂಬುದೇ ಪ್ರಶ್ನೆಯಾಗಿದೆ. ಪ.ಪೂ. ಡಾಕ್ಟರರು ಮಾತ್ರ ಈ ವಿಷಯಗಳನ್ನು ತಮ್ಮ ವೈಯಕ್ತಿಕ ಜೀವನದಲ್ಲಿ ಮಾತ್ರವಲ್ಲ, ಸಮಷ್ಟಿ ಜೀವನದಲ್ಲಿಯೂ ಸ್ವತಃ ಆಚರಣೆ ಮಾಡಿ ತೋರಿಸಿದ್ದಾರೆ. ಇಂದು ಸನಾತನದ ಕಾರ್ಯವಿರುವ ಹೆಚ್ಚು ಕಡಿಮೆ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚಿನಂಶ ಸಾಧಕಿಯರೇ ಸಾಧಕರಿಗೆ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ. ಬ್ರಾಹ್ಮಣರು ಅಥವಾ ಇತರ ಉಚ್ಚ ಜಾತಿಯವರಲ್ಲದ ಸಾಧಕ-ಸಾಧಕಿಯರೇ ಜವಾಬ್ದಾರಿಯ ಸೇವೆಗಳನ್ನು ನಿರ್ವಹಿಸುತ್ತಾರೆ. ಇದರ ಪಟ್ಟಿಯನ್ನೂ ಸನಾತನವು ಪದೇ ಪದೇ ಪ್ರಸಿದ್ಧಪಡಿಸಿದೆ. ಇವೆಲ್ಲ ಪ.ಪೂ. ಡಾಕ್ಟರ್ ಮತ್ತು ಅವರ ಕಾರ್ಯಕ್ಕೆ ಸಂಬಂಧಿಸಿದ ಕೆಲವು ಉದಾಹರಣೆಗಳಾಗಿವೆ. ಇದರಿಂದ ಅವರ ಶ್ರೇಷ್ಠತ್ವವನ್ನು ಬುದ್ಧಿಯಿಂದಲೂ ಅಧ್ಯಯನ ಮಾಡಬಹುದು; ಆದ್ದರಿಂದ ಲೇಖನದ ಶೀರ್ಷಿಕೆಯಲ್ಲಿ ‘ಬುದ್ಧಿಅಗಮ್ಯ ಶ್ರೇಷ್ಠತ್ವ’ ಎಂದು ಉಲ್ಲೇಖಿಸಲಾಗಿದೆ.
ಪ.ಪೂ. ಡಾಕ್ಟರರ ಬುದ್ಧಿಅಗಮ್ಯ ವೈಶಿಷ್ಟ್ಯಗಳನ್ನು ಬರೆಯುವುದಾದರೆ ಕಾಗದ ಮತ್ತು ಪೆನ್ನುಸಾಕಾಗಲಿಕ್ಕಿಲ್ಲ ! ಪ.ಪೂ. ಡಾಕ್ಟರರ ಬಗ್ಗೆ ಮಾಡಿದ ಈ ಗುಣಸಂಕೀರ್ತನೆಯಿಂದ ನಮ್ಮೆಲ್ಲ ಸಾಧಕರ ಭಕ್ತಿಭಾವ ಹೆಚ್ಚಾಗಲಿ ಹಾಗೂ ಅವರಂತೆಯೇ ಮಾರ್ಗಕ್ರಮಣ ಮಾಡುವ ಬುದ್ಧಿ ಮತ್ತು ಶಕ್ತಿಯನ್ನು ಅವರು ನಮಗೆ ಅನುಗ್ರಹಿಸಲೆಂದು ಗುರುಚರಣಗಳಲ್ಲಿ ಪ್ರಾರ್ಥನೆ !’ - ನ್ಯಾಯವಾದಿ ಯೋಗೇಶ ಜಲತಾರೆ, ಸನಾತನ ಆಶ್ರಮ, ರಾಮನಾಥಿ, (೨೪.೩.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪ.ಪೂ. ಡಾ. ಆಠವಲೆಯವರ ಬುದ್ಧಿಅಗಮ್ಯ ಶ್ರೇಷ್ಠತ್ವ !