ಸಂತರ ಮಾರ್ಗದರ್ಶನದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವನ್ನು ಮಾಡಿ !

ಗುರುಪೂರ್ಣಿಮೆಯ ನಿಮಿತ್ತ ಪರಾತ್ಪರ ಗುರು ಡಾ. ಆಠವಲೆಯವರ ಸಂದೇಶ
‘ಹಿಂದೂ ಧರ್ಮದಲ್ಲಿರುವ ಗುರು ಪರಂಪರೆಯು, ದೇಶದಲ್ಲಿರುವ ಸಂತ ಪರಂಪರೆಯು ನೀಡಿರುವ ಅಮೂಲ್ಯ ಕೊಡುಗೆಯಾಗಿದೆ.  ಸಂತರು ಸಾಕ್ಷಾತ್ ಈಶ್ವರನ ಸಗುಣ ರೂಪವಾಗಿರುತ್ತಾರೆ. ಸಮಾಜವು ಸಂತರಿಂದಾಗಿ ಸಾಧನೆಯತ್ತ ಹೊರಳುತ್ತದೆ, ಅದೇ ರೀತಿ ಸಮಾಜದಲ್ಲಿ ಸತ್ತ್ವಗುಣವೂ ಹೆಚ್ಚಾಗುತ್ತದೆ. ಆದ್ದರಿಂದ ಗುರುಪೂರ್ಣಿಮೆಯ ದಿನದಂದು ಸದ್ಗುರುವಿನೊಂದಿಗೆ ಆಧ್ಯಾತ್ಮಿಕ ಮಾರ್ಗದರ್ಶನ ಮಾಡುವ ಸಂತರಿಗೂ ಕೃತಜ್ಞತೆ ವ್ಯಕ್ತಪಡಿಸಲಾಗುತ್ತದೆ.
ಪ್ರತಿಯೊಂದು ಯುಗದಲ್ಲೂ ಧರ್ಮದ ವಿರುದ್ಧ ಅಧರ್ಮದ ಹೋರಾಟವು ನಡೆಯುತ್ತದೆ. ಇಂದಿಗೂ ಅದರ ದೃಶ್ಯಸ್ವರೂಪ ದೇಶದೆಲ್ಲೆಡೆ ಕಾಣಿಸುತ್ತಿದೆ. ‘ಎಲ್ಲಿ ಧರ್ಮವಿರುತ್ತದೆಯೋ, ಅಲ್ಲಿ ಜಯವಿರುತ್ತದೆ’, ಎಂದು ಗೀತೆಯಲ್ಲಿರುವ ವಚನದಂತೆ ಮುಂಬರುವ ಕಾಲದಲ್ಲಿ ಪ್ರತಿಯೊಬ್ಬರೂ ಧರ್ಮದ ಪರವಾಗಿ ನಿಲ್ಲುವುದು ಹಾಗೂ ಅದಕ್ಕಾಗಿ ಕಾರ್ಯ ಮಾಡುವುದು ಅಗತ್ಯವಾಗಿರುತ್ತದೆ. ಸಾಮಾನ್ಯ ಹಿಂದೂಗಳಿಗೆ ‘ಧರ್ಮದ ಪರ ಯಾವುದು’, ಎಂದು ತಿಳಿಯುವುದಿಲ್ಲ. ಅಂತಹವರು ನಿಜವಾದ ಸಂತರ ಮಾರ್ಗದರ್ಶನ ಪಡೆದುಕೊಂಡು ಅದರಂತೆ ಕೃತಿ ಮಾಡುವುದು ಅಪೇಕ್ಷಿತವಾಗಿದೆ.  ಈಗಿನ ಕಾಲದಲ್ಲಿ ಭಾರತದ ಹಾಗೂ ಹಿಂದೂಗಳ ಎಲ್ಲ ಸಂಕಟಗಳ ಮೇಲೆ ಉಪಾಯವೆಂದು ಪ್ರತಿಯೊಬ್ಬರೂ ಹಿಂದೂರಾಷ್ಟ್ರ ಸ್ಥಾಪನೆಯ ಕಾರ್ಯ ಮಾಡುವುದು, ಇದು ಗುರುತತ್ತ್ವಕ್ಕೆ ಪ್ರಸ್ತುತ ಅಪೇಕ್ಷಿತವಾಗಿರುವ ಸಾಧನೆಯಾಗಿದೆ.
ಮುಂಬರುವ ಕಾಲದ ದೃಷ್ಟಿಯಿಂದಲೂ ಹಿಂದೂರಾಷ್ಟ್ರ ಸ್ಥಾಪನೆಯ ಕಾರ್ಯ ಮಾಡುವುದು ಅಂದರೆ ಧರ್ಮದ ವಿರುದ್ಧ ಅಧರ್ಮದ ಹೋರಾಟದಲ್ಲಿ ಧರ್ಮದ ಪರವಾಗಿ ಕಾರ್ಯ ಮಾಡಿದಂತೆ ಆಗಿದೆ.  ಈ ಕಾರ್ಯವನ್ನು ಸಂತರ ಮಾರ್ಗದರ್ಶನದಲ್ಲಿ  ಮಾಡಿದರೆ ಕಾರ್ಯಕ್ಕೆ ಆಧ್ಯಾತ್ಮಿಕ ಅಧಿಷ್ಠಾನ ಹಾಗೂ ದಿಕ್ಕು ಸಿಗುತ್ತದೆ. ಸಮಗ್ರ ಭಾರತದ ಮೊದಲನೇ ಸಾಮ್ರಾಟನಾದ ಚಂದ್ರಗುಪ್ತ ಮೌರ್ಯನು ಆಚಾರ್ಯ ಚಾಣಕ್ಯರ ಮಾರ್ಗದರ್ಶನದಲ್ಲಿ ಮತ್ತು ವಿಜಯನಗರದ ಹಿಂದೂ ಸಾಮ್ರಾಜ್ಯವನ್ನು ನಿರ್ಮಿಸಿದ ಹರಿಹರ ಹಾಗೂ ಬುಕ್ಕರಾಯರು ಶೃಂಗೇರಿ ಪೀಠದ ಶಂಕರಾಚಾರ್ಯ ವಿದ್ಯಾರಣ್ಯಸ್ವಾಮಿಗಳ ಮಾರ್ಗದರ್ಶನದಲ್ಲಿ ಹಾಗೂ ಹಿಂದವಿ ಸ್ವರಾಜ್ಯದ ಸಂಸ್ಥಾಪಕರಾದ ಛತ್ರಪತಿ ಶಿವಾಜಿ ಮಹಾರಾಜರು ಸಮರ್ಥ ರಾಮದಾಸಸ್ವಾಮಿಗಳ ಮಾರ್ಗದರ್ಶನದಲ್ಲಿ ರಾಷ್ಟ್ರ ನಿರ್ಮಿಸುವ ಕಾರ್ಯ ಮಾಡಿದರು. ಇದು ಇತಿಹಾಸವಾಗಿದೆ;  ಆದ್ದರಿಂದ ಈಗ ಮುಂಬರುವಂತಹ ಗುರುಪೂರ್ಣಿಮೆಯಿಂದ ಸಂತರ ಮಾರ್ಗದರ್ಶನದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವನ್ನು ಮಾಡಲು ಪ್ರಾರಂಭಿಸಿರಿ ಹಾಗೂ ‘ಧರ್ಮದ ವಿರುದ್ಧ ಅಧರ್ಮ’ ಈ ಹೋರಾಟದಲ್ಲಿ ಧರ್ಮದ ಪಕ್ಷದಲ್ಲಿ ನಿಲ್ಲಿರಿ !’ - (ಪರಾತ್ಪರ ಗುರು) ಡಾ. ಜಯಂತ ಬಾಳಾಜಿ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಂತರ ಮಾರ್ಗದರ್ಶನದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವನ್ನು ಮಾಡಿ !