ಪಂಚಮ ಅಖಿಲ ಭಾರತೀಯ ಹಿಂದೂ ಅಧಿವೇಶನದಲ್ಲಿ ಹಿಂದುತ್ವವಾದಿ ಧರ್ಮಾಭಿಮಾನಿಗಳು ಮಂಡಿಸಿದ ಪ್ರಖರ ವಿಚಾರಗಳು

ಹಿಂದೂಗಳೇ, ಹಿಂದೂ ರಾಷ್ಟ್ರಕ್ಕಾಗಿ ಸಾಮಾಜಿಕ ಕ್ರಾಂತಿ ಆವಶ್ಯಕ !
- ನ್ಯಾಯವಾದಿ ಸಂಜೀವ ಪುನಾಳೇಕರ್
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿನ ಜಾಗೃತಿಗಾಗಿ ಅತ್ಯಲ್ಪ ಕಾಲಾವಧಿ ಉಳಿದಿದೆ. ಇಂತಹ ಸಮಯದಲ್ಲಿ ಕೇವಲ ಗೋರಕ್ಷಣೆ, ಲವ್ ಜಿಹಾದ್, ಇವುಗಳಿಗಾಗಿಯೇ ಹೋರಾಡದೇ ಸಾಮಾನ್ಯ ಹಿಂದೂಗಳನ್ನು ಕಾಡುವ ಸಾಮಾಜಿಕ ಸಮಸ್ಯೆಗಳ ವಿರುದ್ಧವೂ ಹೋರಾಡುವ ಆವಶ್ಯಕತೆ ಇದೆ. ಇಂದು ಪ್ರತಿಯೊಬ್ಬ ನಾಗರಿಕ ಭ್ರಷ್ಟಾಚಾರ ಮತ್ತು ಸರಕಾರಿ ಸ್ತರದಲ್ಲಾಗುವ ಶೋಷಣೆಯಿಂದ ಪೀಡಿತನಾಗಿದ್ದಾನೆ. ಇಂತಹವರನ್ನು ಸಂಘಟಿಸಿ ನ್ಯಾಯಮಾರ್ಗದಿಂದ ಹೋರಾಡುವ ಆವಶ್ಯಕತೆ ಇದೆ. ಇದೇ ಜನರು ಮುಂದೆ ಸಂಘಟಿತರಾಗಿ ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವರು. ಈ ಸಾಮಾಜಿಕ ಕ್ರಾಂತಿಯಲ್ಲಿ ಪ್ರಸ್ತುತ ಎಲ್ಲ ಭ್ರಷ್ಟ ವ್ಯವಸ್ಥೆಯನ್ನು ಸರಿ ಮಾಡಲು ಉತ್ತಮ ರೀತಿಯಲ್ಲಿ ಹೆಚ್ಚೆಚ್ಚು ಪ್ರಯತ್ನಿಸಲಾಗುವುದು.  ಆರೋಗ್ಯ, ಶಿಕ್ಷಣ, ಸರಕಾರಿ ಕಾರ್ಯಾಲಯ, ಮುಂತಾದ ಕ್ಷೇತ್ರಗಳಲ್ಲಿರುವ ದುಷ್ಟಪ್ರವೃತ್ತಿಯ ವಿರುದ್ಧ ಸಂಘಟಿತರಾಗಿ ಕೃತಿಶೀಲರಾಗಿರಿ, ಎಂದು ಕರೆ ನೀಡಿದ್ದಾರೆ.

ಕಾಶ್ಮೀರದಲ್ಲಿ ಹಿಂದೂಗಳ ಪುನರ್‌ವಸತಿಯಾಗುವುದು ಹಿಂದೂ ರಾಷ್ಟ್ರದ ಸ್ಥಾಪನೆಗೆ ಆರಂಭ ! - ಶ್ರೀ. ರಾಹುಲ ಕೌಲ್
೧೯೯೦ ರಲ್ಲಿ ನಾವು ಕಾಶ್ಮೀರದಿಂದ ಸ್ವೇಚ್ಛೆಯಿಂದ ಹೊರ ಬಂದಿರದೇ, ನಾವು ಉಗ್ರರ ಬಲದಿಂದ ನಿರಾಶ್ರಿತರಾಗಬೇಕಾಯಿತು. ಕಾಶ್ಮೀರಿ ಹಿಂದೂಗಳ ಈ ವಂಶವಿಚ್ಛೇದನೆಯನ್ನು ಅಲ್ಲಗಳೆಯಲಾಗುತ್ತಿದೆ. ಕಾಶ್ಮೀರದಲ್ಲಾದ ಹಿಂದೂಗಳ ಸ್ಥಳಾಂತರವು ಇಂದು ಉತ್ತರ ಪ್ರದೇಶದ ಕೌರಾನಾ ತನಕ ತಲುಪಿದೆ. ಪ್ರತ್ಯೇಕತಾವಾದಿಗಳ ಒತ್ತಡದಿಂದ ಜಮ್ಮೂ-ಕಾಶ್ಮೀರ ಸರಕಾರವು ‘ಅಜೆಂಡಾ ಆಫ್ ಅಲೈನ್ಸ್’ ಅಂತರ್ಗತ ಕಾಶ್ಮೀರಿ ಹಿಂದೂಗಳ ಪುನರ್ವಸತಿಯ ವಿರುದ್ಧ ಸಂಚನ್ನು ರೂಪಿಸುತ್ತಿದೆ. ಕಾಶ್ಮೀರಿ ಹಿಂದೂಗಳ ಪುನರ್ವಸತಿಯು ತಕ್ಷಣ ಆಗದಿದ್ದರೆ ಮುಂದಿನ ವರ್ಷ ಜನವರಿ ೧೯ ಕ್ಕೆ ಅಂದರೆ ಕಾಶ್ಮೀರಿ ಹಿಂದೂಗಳ ನಿರಾಶ್ರಿತ ದಿನದಂದು ಭಾರತದಾದ್ಯಂತದ ಹಿಂದೂಗಳು ಕಾಶ್ಮೀರದತ್ತ ದಂಡೆತ್ತಿ ಹೋಗುವರು. ಕಾಶ್ಮೀರದಲ್ಲಿ ಹಿಂದೂಗಳ ಪುನರ್ವಸತಿಯಾಗುವುದು ಹಿಂದೂ ರಾಷ್ಟ್ರದ ಸ್ಥಾಪನೆಯ ಆರಂಭವಾಗಿದೆ, ಎಂದು ‘ಯುಥ್ ಫಾರ್ ಪನೂನ್ ಕಾಶ್ಮೀರ’ದ ರಾಷ್ಟ್ರೀಯ ಸಮನ್ವಯಕರಾದ ಶ್ರೀ. ರಾಹುಲ ಕೌಲ್ ಅಭಿಪ್ರಾಯಪಟ್ಟರು. ರಾಮನಾಥ ದೇವಸ್ಥಾನದಲ್ಲಿ ನಡೆಯು ತ್ತಿರುವ ಐದನೇ ಅಖಿಲ ಭಾರತೀಯ ಹಿಂದೂ ಅಧಿವೇಶನದ ಮೂರನೇ ದಿನದಂದು ‘ವಿವಿಧ ರಾಜ್ಯಗಳಲ್ಲಿನ ಅಸುರಕ್ಷಿತ ಹಿಂದೂಗಳು’ ಈ ವಿಷಯದ ಪ್ರಬೋಧನಾ ಸತ್ರದಲ್ಲಿ ಅವರು ಮಾತನಾಡುತ್ತಿದ್ದರು. ಶ್ರೀ. ರಾಹುಲ್ ಕೌಲ್  ಮುಂದೆ ಮಾತನಾಡುತ್ತಾ, ‘ನಿರಾಶ್ರಿತರಾದ ಕಾಶ್ಮೀರಿ ಹಿಂದೂಗಳು ಕಾಶ್ಮೀರದಲ್ಲಿ ಗೌರವದಿಂದ ಬಾಳಬೇಕೆಂದು ಕೇಂದ್ರಸರಕಾರಕ್ಕೆ ರಾಷ್ಟ್ರದೆಲ್ಲೆಡೆಯ ಹಿಂದೂಗಳು ಸಂಘಟಿತರಾಗಿ ಒತ್ತಡ ಹಾಕುವುದು ಅಪೇಕ್ಷಿತವಾಗಿದೆ. ಈ ದೃಷ್ಟಿಯಿಂದ ಕಾಶ್ಮೀರಿ ಹಿಂದೂಗಳಿಗಾಗಿ ಭಾರತದಾದ್ಯಂತ ೧೯ ಕಡೆಗಳಲ್ಲಿ ಅಧಿವೇಶನಗಳನ್ನು ಮಾಡಲು ತೀರ್ಮಾನಿಸಲಾಗಿದೆ’ ಎಂದರು.

ಅರುಣಾಚಲ ಪ್ರದೇಶದ ಹಿಂದೂಗಳು ಸನಾತನ ಹಿಂದೂ ಧರ್ಮದ ಅವಿಭಾಜ್ಯ ಅಂಗ ! 
- ಶ್ರೀ. ಕುರು ತಾಯಿ, ಅರುಣಾಚಲ ಪ್ರದೇಶ
ಅರುಣಾಚಲ ಪ್ರದೇಶದಲ್ಲಿ ಸೂರ್ಯ ಮತ್ತು ಚಂದ್ರನ ಉಪಾಸನೆ ಮಾಡುವ ೨೬ ಜಾತಿಪಂಗಡಗಳಿವೆ. ಕ್ರೈಸ್ತ ಮಿಶನರಿಗಳು ಸಂಚು ರೂಪಿಸಿ ಅವರಿಗೆ ನೀವು ಸನಾತನ ಹಿಂದೂ ಧರ್ಮದವರಲ್ಲ ಎಂದು ಹೇಳುತ್ತಾ ಅವರನ್ನು ಮತಾಂತರಿಸುತ್ತಿದ್ದಾರೆ; ಆದರೆ ಅರುಣಾಚಲ ಪ್ರದೇಶದ ಹಿಂದೂಗಳು ಸನಾತನ ಹಿಂದೂ ಧರ್ಮದ್ದೇ ಅವಿಭಾಜ್ಯ ಅಂಗವಾಗಿದ್ದಾರೆ, ಎಂದು ಅರುಣಾಚಲ ಪ್ರದೇಶದ ಶ್ರೀ. ಕುರು ತಾಯಿಯವರು ಪ್ರತಿಪಾದಿಸಿದರು. ೩ ಸಾವಿರದ ೪೨೮ ಗ್ರಾಮಗಳಿರುವ ಅರುಣಾಚಲ ಪ್ರದೇಶದಲ್ಲಿ ೨೭೦೦ ಚರ್ಚ್‌ಗಳಿವೆ. ಸರಕಾರಿ ಮತ್ತು ಆಡಳಿತದ ಮಟ್ಟದಲ್ಲಿಯೂ ಪ್ರೋತ್ಸಾಹ ನೀಡಲಾಗುತ್ತಿರುವುದಾಗಿ ಹೇಳಿ ಶ್ರೀ. ಕುರು ತಾಯಿಯವರು ಅಲ್ಲಿನ ಹಿಂದೂಗಳ ಮತಾಂತರದ ಸಮಸ್ಯೆಯ ಭಯಾನಕ ಸ್ಥಿತಿಯನ್ನು ಸ್ಪಷ್ಟಪಡಿಸಿದರು.

ಮುಂದಿನ ೨ ವರ್ಷಗಳಲ್ಲಿ ನೇಪಾಳವನ್ನು ಪುನಃ ಹಿಂದೂ ರಾಷ್ಟ್ರವನ್ನಾಗಿಸೋಣ 
- ಡಾ. ಮಾಧವ ಭಟ್ಟರಾಯಿ, ರಾಷ್ಟ್ರೀಯ ಧರ್ಮಸಭಾ ನೇಪಾಳದ ಅಧ್ಯಕ್ಷರು
ಜಗತ್ತಿನಲ್ಲಿ ಏಕೈಕ ಹಿಂದೂ ರಾಷ್ಟ್ರವೆನಿಸಿಕೊಂಡಿದ್ದ ನೇಪಾಳದ ಜನತೆಯ ವಿರೋಧವನ್ನು ತಿರಸ್ಕರಿಸಿ ನೇಪಾಳವನ್ನು ಜಾತ್ಯತೀತ ರಾಷ್ಟ್ರವೆಂದು ಘೋಷಿಸಲಾಯಿತು. ಅದಕ್ಕಾಗಿ ಅಲ್ಲಿಯ ಹಿಂದೂಗಳು ಇನ್ನೂ ತಮ್ಮ ಹೋರಾಟವನ್ನು ಮುಂದುವರಿಸಿದ್ದು, ಮುಂಬರುವ ೨ ವರ್ಷಗಳಲ್ಲಿ ನೇಪಾಳದಲ್ಲಿ ಪುನಃ ಹಿಂದೂ ರಾಷ್ಟ್ರವನ್ನು ಸ್ಥಾಪಿಸೋಣ.

ಹಿಂದೂ ರಾಷ್ಟ್ರದಲ್ಲಿ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಎಲ್ಲರಿಗೂ ಸಮಾನ ನ್ಯಾಯವಿರುವುದು ! - ನ್ಯಾಯವಾದಿ ವಿಷ್ಣುಶಂಕರ ಜೈನ್, ‘ಹಿಂದೂ ಫ್ರಂಟ್ ಫಾರ್ ಜಸ್ಟಿಸ್’, ಲಖ್ನೌ (ಉತ್ತರಪ್ರದೇಶ)
ಧರ್ಮರಕ್ಷಣೆಗಾಗಿ ನ್ಯಾಯಾಲಯದ ಸ್ತರದಲ್ಲಿ ಮಾಡಬೇಕಾದ ಪ್ರಭಾವಿ ಕಾರ್ಯ’ದ ಬಗ್ಗೆ ಮಾತನಾಡುತ್ತಾ, ‘ಇಂದು ಭಾರತೀಯ ದಂಡಸಂಹಿತೆಯ ೧೯ ನೇ ಕಲಂಅನ್ನು ವ್ಯಕ್ತಿಗನುಸಾರ ಬದಲಾಯಿಸಲಾಗುತ್ತದೆ. ಶ್ರೀ. ಕಮಲೇಶ ತಿವಾರಿಯವರು ಇಸ್ಲಾಂ ಬಗ್ಗೆ ತಥಾಕಥಿತ ನೋಯಿಸುವ ಹೇಳಿಕೆ ನೀಡಿದ್ದಕ್ಕಾಗಿ ರಾಷ್ಟ್ರೀಯ ಭದ್ರತಾ ಕಾನೂನಿನನ್ವಯ ಬಂಧಿಸಿ ಕಳೆದ ೭ ತಿಂಗಳ ಕಾಲ ಕಾನೂನುಬಾಹಿರವಾಗಿ ಜೈಲಿಗೆ ಹಾಕಿದ್ದರು. ಆದರೆ ಅದೇ ಸಮಯದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುವ ಹೇಳಿಕೆ ನೀಡಿಯೂ ಆಝಮ್ ಖಾನ್ ಮತ್ತು ಅಕ್ಬರುದ್ದೀನ್ ಓವೈಸಿ ಮೇಲೆ ಮಾತ್ರ ಯಾವುದೇ ಕ್ರಮಕೈಗೊಂಡಿಲ್ಲ ಮತ್ತು ಅವರಿಗೆ ಜಾಮೀನನ್ನೂ ನೀಡಲಾಯಿತು. ಇಂದು ಕೆಲವು ಕಾನೂನು ತಜ್ಞರು ‘ಕೇಶವಾನಂದ ಭಾರತಿ ಖಟ್ಲೆ’ಯ ಆಧಾರದಲ್ಲಿ ‘ಸಂವಿಧಾನದ ಮೂಲ ಬುನಾದಿಯನ್ನೇ ಬದಲಾಯಿಸಲು ಸಾಧ್ಯವಿಲ್ಲ’, ಎಂದು ಹೇಳುತ್ತಾರೆ. ಪ್ರತ್ಯಕ್ಷದಲ್ಲಿ ಈ ಖಟ್ಲೆಯಲ್ಲಿ ೧೩ ನ್ಯಾಯಧೀಶರ ಪೈಕಿ ಕೇವಲ ಒಬ್ಬ ನ್ಯಾಯಾಧೀಶರು ಆ ನಿಷ್ಕರ್ಷವನ್ನು ಮಂಡಿಸಿದ್ದರು. ಇಂತಹ ಅಂಶವನ್ನು ಹಿಂದೂಗಳನ್ನು ಕತ್ತಲೆಯಲ್ಲಿಡಲು ಬಳಸಲಾಗುತ್ತದೆ. ಹಿಂದೂ ರಾಷ್ಟ್ರದಲ್ಲಿ ನ್ಯಾಯಾಂಗ ಪ್ರಕ್ರಿಯೆಯಲ್ಲಿನ ಈ ಸುಳ್ಳುತನವನ್ನು ತಡೆಯಲಾಗುವುದು ಮತ್ತು ಎಲ್ಲರಿಗೂ ಸಮಾನ ನ್ಯಾಯ ದೊರೆಯುವುದು, ಎಂದರು.

ಬಾಂಗ್ಲಾದೇಶಿ ಹಿಂದೂಗಳಿಗಾಗಿ ಬಾಂಗ್ಲಾದೇಶದಲ್ಲಿ ಸ್ವತಂತ್ರ ಭೂಮಿ ಬೇಕಿದೆ !
- ಶ್ರೀ. ಸುಭಾಷ್ ಚಕ್ರವರ್ತಿ, ನಿಖಿಲ ಬಂಗ ನಾಗರಿಕ ಸಂಘ
ಪೂರ್ವ ಪಾಕಿಸ್ತಾನದ ನಿರ್ಮಿತಿಯಿಂದ ಇಲ್ಲಿನ ಹಿಂದೂಗಳ ಮೇಲೆ ಅಪಾರ ದೌರ್ಜನ್ಯವಾಗುತ್ತಿದೆ.  ೧೯೭೧ ರಲ್ಲಿ ಭಾರತ ಸರಕಾರವು ಸ್ವತಂತ್ರ ಬಾಂಗ್ಲಾದೇಶ ನಿರ್ಮಿಸಿದ ನಂತರವೂ ಅಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯದಲ್ಲಿ ಹೆಚ್ಚಳವೇ ಆಗಿದೆ. ಹಾಗಾಗಿ ಕೋಟಿಗಟ್ಟಲೆ ಬಾಂಗ್ಲಾ ದೇಶಿ ಹಿಂದೂಗಳು ಭಾರತಕ್ಕೆ ಪಲಾಯನ ಮಾಡುತ್ತಿದ್ದಾರೆ. ಅಖಂಡ ಭಾರತದ ಅವಿಭಾಜ್ಯ ಘಟಕವಾಗಿರುವ ಈ ಹಿಂದೂಗಳಿಗಾಗಿ ಭಾರತ ಸರಕಾರವು ಬಾಂಗ್ಲಾದೇಶದಲ್ಲಿ ಸ್ವತಂತ್ರ ಭೂಮಿ (ಹೋಮ್‌ಲ್ಯಾಂಡ್) ನಿರ್ಮಿಸಬೇಕು. ‘‘ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯರ ಮಾನಭಂಗ ಮಾಡುವುದು, ಭೂಮಿ ಕಬಳಿಸುವುದು, ದೇವಸ್ಥಾನ ನಾಶ ಮಾಡುವುದು, ಪೂಜಾರಿಗಳನ್ನು ಕೊಲ್ಲುವುದು ಮುಂತಾದ ದೌರ್ಜನ್ಯಗಳನ್ನು ನಿಲ್ಲಿಸಲು ಭಾರತ ಸರಕಾರವು ಪ್ರಯತ್ನಿಸಿ ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಗೌರವದ ಮತ್ತು ಸುರಕ್ಷಿತ ಸ್ಥಾನವನ್ನು ನೀಡಬೇಕು’’ ಎಂದು ಹೇಳಿದರು.

ಪ್ರೊ. ನಿರಂಜನ್ ಓಝಾ ಇವರು ‘‘ನೇಪಾಳದ ಸಂವಿಧಾನವನ್ನು ಜಾತ್ಯತೀತವಾಗಿಸಿ ಅಲ್ಲಿರುವ ಹಿಂದೂಗಳನ್ನು ಮತಾಂತರಿಸುವ ಕುತಂತ್ರ ನಡೆಯುತ್ತಿದೆ. ೨೦೩೦ ರೊಳಗೆ ನೇಪಾಳವನ್ನು ಕ್ರೈಸ್ತ ರಾಷ್ಟ್ರವಾಗಿಸುವ ಷಡ್ಯಂತ್ರವಿದೆ. ನೇಪಾಳವು ಹಿಂದೂ ರಾಷ್ಟ್ರವಾಗಿರುವುದು ಭಾರತಕ್ಕೂ ಹಿತಕಾರಿಯಾಗಿದ್ದರಿಂದ ನೇಪಾಳವನ್ನು ಹಿಂದೂ ರಾಷ್ಟ್ರವಾಗಿಸಲು ಭಾರತ ಸರಕಾರ ಸಹಾಯ ಮಾಡಬೇಕು’’ ಎಂದರು.


ಶ್ರೀ. ಮರವನಪುಲಾವು ಸಚ್ಚಿದಾನಂದ ಇವರು ಮಾತನಾಡುತ್ತಾ, ‘‘ಶ್ರೀಲಂಕಾದ ಬೌದ್ಧ ಸರಕಾರ ಅಲ್ಲಿನ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಹಿಂದೂಗಳಿಗೆ ಹೊಡೆಯುವ ಮತ್ತು ಅವರನ್ನು ಬಂಧಿಸುವ ಅಧಿಕಾರವಿರುವ ಅಲ್ಲಿನ ಜುಲಾಮಿ ಕಾನೂನು ಬದಲಾಗಬೇಕು. ಇದಕ್ಕಾಗಿ ಭಾರತದಿಂದ ನಮಗೆ ಸಹಾಯದ ಅಪೇಕ್ಷೆಯಿದೆ’’ ಎಂದು ಹೇಳಿದರು.

ಈಗಾಗುತ್ತಿರುವ ಬದಲಾವಣೆ ರಾಷ್ಟ್ರೀಯ ಹಿಂದೂ ಅಧಿವೇಶನದ ಫಲ !
- ಶ್ರೀ. ಚೇತನ ರಾಜಹಂಸ, ಪ್ರವಕ್ತಾ, ಸನಾತನ ಸಂಸ್ಥೆ
‘ಪಾಕಿಸ್ತಾನದಿಂದ ಭಾರತಕ್ಕೆ ಬಂದ ಹಿಂದೂಗಳಿಗೆ ಭಾರತೀಯ ಪೌರತ್ವ ಸಿಕ್ಕಿರುವುದು ಮತ್ತು ನುಸುಳುವಿಕೆಯನ್ನು ತಡೆಯಲು ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಭಾರತದ ಗಡಿಯನ್ನು ಸೀಲ್‌ಬಂದ್ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿರುವುದು, ಇವು ಹಿಂದೆ ನಡೆದ ರಾಷ್ಟ್ರೀಯ ಹಿಂದೂ ಅಧಿವೇಶನದಿಂದ ಪ್ರೇರಣೆ ಪಡೆದ ಹಿಂದೂಗಳು ಪ್ರಯತ್ನಿಸಿದಕ್ಕೆ ಸಿಕ್ಕಿದ ಫಲವಾಗಿದೆ, ಎಂದು ಶ್ರೀ. ಚೇತನ್ ರಾಜಹಂಸ ಇವರು ಹೇಳಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪಂಚಮ ಅಖಿಲ ಭಾರತೀಯ ಹಿಂದೂ ಅಧಿವೇಶನದಲ್ಲಿ ಹಿಂದುತ್ವವಾದಿ ಧರ್ಮಾಭಿಮಾನಿಗಳು ಮಂಡಿಸಿದ ಪ್ರಖರ ವಿಚಾರಗಳು