ದೇವಸ್ಥಾನದ ಭೂಮಿಯಲ್ಲಿ ಕೃಷಿ ಮಾಡಲು ಇತರ ಪಂಥೀಯರಿಗೆ ನಿರ್ಬಂಧ !

ಆಂಧ್ರಪ್ರದೇಶ ಸರಕಾರದ ಸ್ತುತ್ಯ ನಿರ್ಣಯ !
ಭಾಗ್ಯನಗರ : ಆಂಧ್ರಪ್ರದೇಶ ಸರಕಾರವು ಸರಕಾರೀಕರಣ ಮಾಡಿದ ದೇವಸ್ಥಾನಗಳ ಹಾಗೂ ಇತರ ಪಂಥೀಯರ ಶ್ರದ್ಧಾಸ್ಥಾನಗಳ ಕೃಷಿಭೂಮಿಯಲ್ಲಿ ಆಯಾ ಪಂಥದವರಿಗೆ ಸೇರದ ಕೂಲಿಯಾಳುಗಳು ಕೃಷಿ ಮಾಡದಂತೆ ನಿರ್ಬಂಧ ಹೇರುವ ಆದೇಶ ನೀಡಿದೆ. ಅದಲ್ಲದೆ ಈಗ ಕೃಷಿ ಮಾಡುತ್ತಿರುವ ಇಂತಹ ಕೂಲಿಯಾಳುಗಳನ್ನು ಕೃಷಿ ಮಾಡದಂತೆ ತಡೆಯಲು ಸಹ ಆದೇಶ ನೀಡಿದೆ. ಈ ಆದೇಶವನ್ನು ನವಂಬರ್ ೨೦೧೫ ರಲ್ಲಿ ನೀಡಲಾಗಿತ್ತು; ಆದರೆ ಈಗ ಪ್ರತ್ಯಕ್ಷ ಕೃಷಿಯ ಕೆಲಸ ಆರಂಭವಾಗಿರುವುದರಿಂದ ಈ ಆದೇಶವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಆದ್ದರಿಂದ ಈಗ ದೇವಸ್ಥಾನಗಳ ಭೂಮಿಯಲ್ಲಿ ಮುಸಲ್ಮಾನ ಅಥವಾ ಕ್ರೈಸ್ತ ಕೂಲಿಯಾಳುಗಳು ಕೆಲಸ ಮಾಡಲು ಸಾಧ್ಯವಿಲ್ಲ.
೧. ಸರಕಾರವು ದೇವಸ್ಥಾನಗಳ ಭೂಮಿಯನ್ನು ಬಾಡಿಗೆಗೆ ಪಡೆದಿರುವವರಿಗೆ ನೋಟೀಸು ಜ್ಯಾರಿ ಮಾಡಿ ಭೂಮಿಯನ್ನು ತಕ್ಷಣ ಬಿಡಬೇಕೆಂದು ಹೇಳಿದೆ. ಹಾಗೆಯೇ ದಲಿತರಾಗಿದ್ದರೆ, ಅವರು ಕ್ರೈಸ್ತ ಧರ್ಮವನ್ನು ಒಪ್ಪುವುದಿಲ್ಲವೆಂದು ಚರ್ಚ್‌ಗಳಿಂದ ಪ್ರಮಾಣಪತ್ರವನ್ನು ತರಬೇಕೆಂದು ಸಹ ಹೇಳಿದೆ.
೨. ಅನೇಕ ದಲಿತರು ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದಾರೆ; ಆದರೆ ಅವರು ಹೆಸರು ಬದಲಾಯಿಸಲಿಲ್ಲ. ಆದ್ದರಿಂದ ನೋಟೀಸುಗಳಲ್ಲಿ ಹೀಗೆ ಬರೆಯಲಾಗಿದೆ.
೩. ಮುಸ್ಲಿಮ್ ಯುನೈಟೆಡ್ ಫ್ರಂಟ್‌ನ ಸದಸ್ಯ ಹಬೀಬ್-ಉರ್-ರೆಹಮಾನ್‌ರವರು, ‘ಇದು ವಿಚಿತ್ರ ನಿರ್ಣಯವಾಗಿದೆ. ಗುಂಟೂರಿನ ಜುಮ್ಮಾ ಮಸೀದಿಯ ಭೂಮಿಯಲ್ಲಿ ಕೃಷಿ ಮಾಡುವವರು ಶೇ. ೮೦ ರಷ್ಟು ಹಿಂದೂಗಳಾಗಿದ್ದಾರೆ’, ಎಂದು ಹೇಳಿದ್ದಾರೆ.
೪. ಆಂಧ್ರಪ್ರದೇಶದ ದೇವಸ್ಥಾನಗಳ ವಶದಲ್ಲಿ ಪರಂಪರಾಗತ ಸುಮಾರು ೩ ಲಕ್ಷ ಎಕರೆ ಜಮೀನಿದೆ. ಇವುಗಳಲ್ಲಿ ಹೆಚ್ಚಿನ ದೇವಸ್ಥಾನಗಳು ಸರಕಾರೀಕರಣಗೊಂಡಿವೆ. ಇದರಲ್ಲಿ ಬಾಡಿಗೆಯ ಮೇಲೆ ಕೃಷಿ ಮಾಡಲಾಗುತ್ತದೆ. ಇದರಲ್ಲಿ ಶೇ. ೩೦ ರಷ್ಟು ದಲಿತರಾಗಿದ್ದಾರೆ.
೫. ಗೋಲಾಪಲ್ಲಿಯಲ್ಲಿನ ಶ್ರೀ ರಘುರಾಮ ಮಂದಿರದ ಬಳಿ ಕೋಠಾಪಲ್ಲಿ ಎಂಬ ಊರಿನಲ್ಲಿ ಸುಮಾರು ೧,೨೦೦ ಎಕರೆ ಭೂಮಿಯಿದೆ. ಅದರಲ್ಲಿ ಸುಮಾರು ೧,೫೬೮ ರೈತರು ಬಾಡಿಗೆಗೆ ಕೃಷಿ ಮಾಡುತ್ತಿದ್ದಾರೆ. ಅದರಲ್ಲಿ ೧೯೯ ಮುಸಲ್ಮಾನರು, ೨೦೪ ಅನುಸೂಚಿತ ಜಾತಿ ಮತ್ತು ಮತ್ತು ೫ ಅನುಸೂಚಿತ ಪಂಗಡದವರಾಗಿದ್ದಾರೆ. ಇವರೆಲ್ಲರಿಗೂ ಭೂಮಿಯನ್ನು ಬಿಟ್ಟುಕೊಡಲು ನೋಟೀಸು ಜಾರಿಗೊಳಿಸಲಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೇವಸ್ಥಾನದ ಭೂಮಿಯಲ್ಲಿ ಕೃಷಿ ಮಾಡಲು ಇತರ ಪಂಥೀಯರಿಗೆ ನಿರ್ಬಂಧ !