ಪಾರಮಾರ್ಥಿಕದ ಜೊತೆ ಲೌಕಿಕ ದೃಷ್ಟಿಯಲ್ಲಿಯೂ ಶಿಷ್ಯನ ಕಾಳಜಿ ವಹಿಸುವ ಗುರುಗಳು

೧. ಒಬ್ಬ ಶಿಷ್ಯನು (ಡಾ. ಜಯಂತ ಆಠವಲೆಯವರು) ಅವನ ಅಣ್ಣನಿಗೆ, ‘ತಾಯಿ ಅಥವಾ ತಂದೆ ಅಂತ್ಯಾವಸ್ಥೆಯಲ್ಲಿದ್ದ ಸಮಯದಲ್ಲಿ ಗುರುಗಳು ನನ್ನನ್ನು ಕರೆದರೆ, ನಾನು ಗುರುಗಳ ಬಳಿ ಹೋಗುವೆನು’ ಎಂದು ಹೇಳಿದ್ದನು. ಒಮ್ಮೆ ಅವನ ತಾಯಿಯ ಆರೋಗ್ಯವು ಬಹಳ ಕೆಟ್ಟಿತು. ಔಷಧಿಗಳಿಗೆ ಸ್ಪಂದಿಸದ, ಹೃದಯದಲ್ಲಿನ ತೀವ್ರ ವೇದನೆಗಳ ಆಘಾತಗಳು ಪ್ರತಿದಿನ ಎರಡು-ಮೂರು ಬಾರಿ ಬರತೊಡಗಿದವು. ಒಂದೊಂದು ಆಘಾತವು ಅರ್ಧದಿಂದ ಒಂದು ಗಂಟೆಯವರೆಗೆ ಉಳಿಯುತ್ತಿತ್ತು. ನೋಡುವುದನ್ನು ಬಿಟ್ಟು ಅವನಿಗೆ ಏನೂ ಮಾಡಲು ಆಗುತ್ತಿರಲಿಲ್ಲ. ಆ ಸಮಯದಲ್ಲಿಯೇ ಒಂದು ಸೋಮವಾರ ಬಾಬಾ ರವರು ನಾಸಿಕ್‌ಗೆ ಬಂದರು ಮತ್ತು ದೂರವಾಣಿಯಿಂದ, ‘ನಾಸಿಕ್‌ಗೆ ಯಾವಾಗ ಬರುತ್ತೀರಿ ?’ ಎಂದು ಕೇಳಿದರು. ಆಗ ಅವನು ‘ತಾಯಿಯ ಆರೋಗ್ಯ ಸರಿಯಿಲ್ಲ’ ಎಂದು ಉತ್ತರಿಸಿದನು. ಆದರೂ ಮಂಗಳವಾರ ಹಾಗೂ ಬುಧವಾರ ಬಾಬಾರವರು ದೂರವಾಣಿಯಲ್ಲಿ ಪುನಃ ‘ನಾಸಿಕ್‌ಗೆ ಯಾವಾಗ ಬರುತ್ತೀರಿ ?’ ಎಂದು ವಿಚಾರಿಸಿದರು. ಆಗ ಅವನ ಮನಸ್ಸಿನಲ್ಲಿ ‘ಗುರುಗಳು ಕರೆದಿದ್ದಾರೆಂದರೆ ಹೋಗಲೇಬೇಕು; ಆದರೆ ತಾಯಿ ಅಸ್ವಸ್ಥಳಾಗಿರುವಾಗ ಹೇಗೆ ಹೋಗುವುದು ?’ ಎಂಬ ವಿಚಾರವೂ ಬಂದಿತು. ತಾಯಿಯ ಅನಾರೋಗ್ಯದಿಂದ ಅವನಿಗೂ ದಣಿವಾಗಿತ್ತು. ಅವನು ಸ್ಪಷ್ಟ ಹೇಳದೇ, ‘ಶನಿವಾರ ಅಥವಾ ಭಾನುವಾರ ಬರುತ್ತೇನೆ’ ಎಂದು ಹೇಳಿದನು.
ಆಗ ಬಾಬಾರವರು ‘ನಿತ್ಯದಂತೆಯೇ ಶನಿವಾರದಿಂದ ಸೋಮವಾರದ ವರೆಗೆ ಬನ್ನಿ ಮತ್ತು ಮಂಗಳವಾರದಿಂದ ನಿಮ್ಮ ಕೆಲಸ ವನ್ನು ಪ್ರಾರಂಭಿಸಿರಿ’ ಎಂದರು. ಅವನು ಅದನ್ನು ಕೇಳಿ, ‘ಆಯಿತು’ ಎಂದನು. ಗುರುವಾರ ಬೆಳಗ್ಗೆ ಅವನು ಬಾಬಾರವರ ಬಳಿ ಹೋಗಲೇಬೇಕು, ತಾಯಿಗೆ ಏನಾಗುತ್ತದೆಯೋ ಆಗಲಿ ಎಂದು ಮನಸ್ಸಿನಲ್ಲಿ ನಿರ್ಧರಿಸಿದನು. ಅದೇ ಸಮಯದಲ್ಲಿ ಅವನ ತಂದೆ-ತಾಯಿಯರು, ‘ಗುರುಗಳು ಕರೆದಿದ್ದಾರೆ, ಆದುದ ರಿಂದ ಹೋಗಬೇಕು; ನಮಗೆ ಏನಾಗಲಿದೆಯೋ ಆಗಲಿ’ ಎಂದು ಹೇಳಿದರು.
ಗುರುವಾರ ರಾತ್ರಿ ಅವನಿಗೆ ಬಾಬಾರವರು ಇಂದೂರಿಗೆ ಹೋಗಲು ನಾಸಿಕ್ ಬಿಟ್ಟಿದ್ದಾರೆ ಎಂಬ ಸಂದೇಶ ಬಂದಿತು. ಶನಿವಾರ-ಭಾನುವಾರ ಅವ ನೊಂದಿಗೆ ಇತರ ಕೆಲವು ಶಿಷ್ಯರನ್ನೂ ನಾಸಿಕ್‌ಗೆ ಕರೆ ದಿರುವಾಗ ಬಾಬಾರವರು ಮಧ್ಯದಲ್ಲಿಯೇ ಹೀಗೇಕೆ ಇಂದೂರಿಗೆ ಹೋದರು ಎಂದು ಕೆಲವರಿಗೆ ಅನಿಸಿತು. ಇಂದೂರಿಗೆ ಹೋಗಿರುವುದು ತಿಳಿದನಂತರ, ತಾಯಿಗೆ ಹುಷಾರಿಲ್ಲದಿರುವಾಗ ನಾಸಿಕ್‌ಗೆ ಹೋಗುವಾಗ ತನ್ನ ಮನಸ್ಸಿನಲ್ಲಿ ದ್ವಂದ್ವವುಂಟಾಗಬಾರದು ಹಾಗೂ ಇತರರು ತನ್ನನ್ನು ದೂಷಿಸಬಾರದೆಂದು ಬಾಬಾರವರು ನಾಸಿಕ್‌ನಿಂದ ಹೋಗಿರಬೇಕು ಎಂಬ ವಿಚಾರವು ಅವನ ಮನಸ್ಸಿಗೆ ಬಂದಿತು.
ಶುಕ್ರವಾರ ರಾತ್ರಿ ಇಂದೂರಿಗೆ ತಲುಪಿದ ನಂತರ ಬಾಬಾರವರು ಅವನಿಗೆ ದೂರವಾಣಿ ಕರೆ ಮಾಡಿದರು. ಆಗ ಅವನು ‘ತಾವು ಹೇಳಿದಂತೆ ನಾವು ಬರುವವರಿದ್ದರೂ ಮೊದಲೇ ಏಕೆ ನಾಸಿಕ್‌ನಿಂದ ಹೋದಿರಿ ?’ ಎಂದು ಕೇಳಿದನು. ಆಗ ಬಾಬಾರವರು, ‘ನಿಮ್ಮ ತಾಯಿ ಅಸ್ವಸ್ಥರಾಗಿದ್ದರು. ನೀವು ಅವರ ಬಳಿ ಇರಬೇಕು. ನಾನು ನಾಸಿಕ್‌ನಲ್ಲಿಯೇ ಇದ್ದಿದ್ದರೆ ಮತ್ತು ನೀವು ನಾಸಿಕ್‌ಗೆ ಬಂದಿದ್ದರೆ, ಜನರು ತಾಯಿಗೆ ಇಷ್ಟೊಂದು ಹುಷಾರಿಲ್ಲದಾಗಲೂ ಇವನು ಹೋದನು ಎಂದು ನಿಮ್ಮನ್ನು ದೂಷಿಸುತ್ತಿದ್ದರು. ಆದುದರಿಂದ ನಾನು ಹೊರಟು ಬಂದೆ’ ಎಂದು ಉತ್ತರಿಸಿದರು.
ಬಾಬಾರವರು ಅಕಸ್ಮಾತ್ತಾಗಿ ನಾಸಿಕ್‌ನಿಂದ ಹೋಗಿದ್ದರಿಂದ ಕೆಲವು ಶಿಷ್ಯರಿಗೆ ‘ಇವರು ಹೀಗೇಕೆ ಮಾಡುತ್ತಾರೋ ತಿಳಿಯುವುದಿಲ್ಲ ? ಯಾವಾಗಲೂ ಹೀಗೆಯೇ ಮಾಡುತ್ತಾರೆ’ ಎಂಬ ಪ್ರತಿಕ್ರಿಯೆ ಬಂದಿತು. ಅವರ ವರ್ತನೆಯ ಹಿಂದೆ ಇಷ್ಟು ದೊಡ್ಡ ಉದ್ದೇಶವಿರುತ್ತದೆ ಎಂಬುದು ಬಹುಶಃ ಯಾರಿಗೂ ತಿಳಿಯುವುದಿಲ್ಲ.
೨. ೯.೨.೧೯೯೩ ರಂದು ಮಹಾಶಿವರಾತ್ರಿಯ ದಿನ ಬಾಬಾರವರು ನನಗೆ (ಡಾ. ಜಯಂತ ಆಠವಲೆ ಇವರಿಗೆ), ‘ಎಲ್ಲವನ್ನು ಬಿಟ್ಟು ಅಧ್ಯಾತ್ಮಕ್ಕಾಗಿ ನಿಮ್ಮ ಜೀವನವನ್ನು ಅರ್ಪಿಸುವ ಸಿದ್ಧತೆಯು ನಿಮ್ಮಲ್ಲಿ ಆಗಿದ್ದರೂ, ಮನೆಯವರ ಸಿದ್ಧತೆ ಇಲ್ಲದಿರುವುದರಿಂದ ಹಾಗೂ ‘ತಂದೆ-ತಾಯಿ ಇರುವಾಗ ಅವರನ್ನು ನಿರ್ಲಕ್ಷಿಸಿ ಹೋದನು’ ಎಂದು ಯಾರೂ ನಿಮಗೆ ಹೇಳ ಬಾರದು, ಆದುದರಿಂದ ನೀವು ನಿಧಾನವಾಗಿ ಪೂರ್ಣ ಸಮಯವನ್ನು ಅಧ್ಯಾತ್ಮಕ್ಕೆ ಕೊಡಿ !’ ಎಂದು ಹೇಳಿದರು.
೩. ಒಮ್ಮೆ ಒಬ್ಬ ಶಿಷ್ಯನು (ಡಾ. ಜಯಂತ ಆಠವಲೆ ಯವರು) ‘ನನ್ನ ಸರ್ವಸ್ವವನ್ನು ನಿಮಗೆ ಕೊಟ್ಟಿದ್ದೇನೆ, ಅಂದರೆ ನನ್ನ ಎಂಟು ಲಕ್ಷ ಸಾಲವನ್ನೂ ನಿಮಗೇ ಕೊಟ್ಟಿದ್ದೇನೆ’ ಎಂದು ಬಾಬಾರವರಿಗೆ ಹೇಳಿದನು. ಅದಕ್ಕೆ ಬಾಬಾರವರು, ‘ನನಗೂ ಎಂಟು ಸಾವಿರ ರೂಪಾಯಿ ಸಾಲವಿತ್ತು, ನನ್ನ ಗುರುಗಳು ಅದನ್ನು ತೀರಿಸಿದರು’ ಎಂದು ಉತ್ತರಿಸಿದರು !’ ಹೀಗೆ ಗುರುಗಳು ಎಲ್ಲ ವಿಧಗಳಲ್ಲಿಯೂ ಶಿಷ್ಯನನ್ನು ಸಂಭಾಳಿಸಿಕೊಳ್ಳುತ್ತಾರೆ.
೪. ೧೯೯೨ ರ ಡಿಸೆಂಬರ್‌ನಲ್ಲಿ ಅನ್ನಸಂತರ್ಪಣೆ ಗಾಗಿ ಇಂದೂರಿಗೆ ಹೋಗಲು ಎಲ್ಲ ಶಿಷ್ಯರೂ ಆತುರರಾಗಿದ್ದರು; ಆದರೆ ಆ ಸಮಯದಲ್ಲಿ ಇಡೀ ಭಾರತದಲ್ಲಿ ಪ್ರಚಂಡ ಪ್ರಮಾಣದಲ್ಲಿ ಕೋಮುಗಲಭೆ ಪ್ರಾರಂಭವಾಯಿತು. ‘ಬಾಬಾರವರಿಂದಾಗಿ ನಮ್ಮ ಎಲ್ಲ ಪ್ರಯಾಣವು ಸುರಕ್ಷಿತವಾಗಿ ಆಗುವುದು’ ಎಂದು ಎಲ್ಲ ಭಕ್ತರಿಗೂ ಭರವಸೆಯಿತ್ತು; ಆದರೂ ಬಾಬಾರವರು ಎಲ್ಲರಿಗೂ, ‘ಬರಬೇಡಿ’ ಎಂದು ತಿಳಿಸಿದರು ಮತ್ತು ಅದರ ಕಾರಣವನ್ನು ಮುಂದಿನಂತೆ ಹೇಳಿದರು, ‘ನೀವು ಹಿಂತಿರುಗುವವರೆಗೆ ಮನೆಯವರು ನಿಮ್ಮ ಬಗ್ಗೆ ಚಿಂತೆ ಮಾಡುತ್ತಾ ಕೂರುವರು. ಇಷ್ಟು ಜನರಿಗೆ ಚಿಂತೆಯನ್ನುಂಟು ಮಾಡುವುದು ಮತ್ತು ಅದರ ಬಗ್ಗೆ ಚರ್ಚೆಯಾಗುವುದು ಯೋಗ್ಯವಲ್ಲ. ಆದ್ದರಿಂದ ನೀವು ಬರಬೇಡಿ’ ಎಂದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪಾರಮಾರ್ಥಿಕದ ಜೊತೆ ಲೌಕಿಕ ದೃಷ್ಟಿಯಲ್ಲಿಯೂ ಶಿಷ್ಯನ ಕಾಳಜಿ ವಹಿಸುವ ಗುರುಗಳು