ಸನಾತನ ಸಂಸ್ಥೆಯ ಮೇಲೆ ನಿರ್ಬಂಧ ಹೇರಲು ರಾಷ್ಟ್ರೀಯ ಸ್ವ. ಸಂಘದಿಂದ ಮಹಾರಾಷ್ಟ್ರ ಸರಕಾರದ ಮೇಲೆ ಒತ್ತಡ !

ಸಂಘದ ಮೂಲಗಳಿಂದ ಸಿಕ್ಕಿದ ವಾರ್ತೆಯನ್ನು ಪ್ರಕಟಿಸಿದ ಡಿಎನ್‌ಎ ದಿನಪತ್ರಿಕೆ  !
ರಾ.ಸ್ವ. ಸಂಘದ ಆಧಾರ ನೀಡಿ ‘ಡಿಎನ್‌ಎ’ಯಂತಹ ಆಂಗ್ಲ ದೈನಿಕ ಇಂತಹ ವಾರ್ತೆಗಳನ್ನು ಪ್ರಕಾಶನಗೊಳಿಸುತ್ತದೆ ಎಂದಾದರೆ, ಸಂಘ ಮತ್ತು ಭಾಜಪ ಸರಕಾರ ಇದರ ಬಗ್ಗೆ ಸ್ಪಷ್ಟೀಕರಣ ನೀಡುವುದು ಅಪೇಕ್ಷಿತವಿದೆ !
ಮುಂಬಯಿ : ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸನಾತನ ಸಂಸ್ಥೆಯ ಅಸ್ತಿತ್ವ ಬೇಡವಾಗಿರುವುದರಿಂದ ಸಂಘವು ಮಹಾರಾಷ್ಟ್ರ ಸರಕಾರಕ್ಕೆ ಸಾಕಷ್ಟು ಕಾರಣಗಳನ್ನು ನೀಡಿ ಸನಾತನ ಸಂಸ್ಥೆಗೆ ನಿರ್ಬಂಧ ಹೇರುವ ಪ್ರಕ್ರಿಯೆಯನ್ನು ಆರಂಭಿಸಲು ಹೇಳಿದೆ. ಆದ್ದರಿಂದಲೇ ಮುಖ್ಯಮಂತ್ರಿಗಳು ಗೋವಿಂದ ಪಾನ್ಸರೆ ಹತ್ಯೆಯ ತನಿಖೆಯನ್ನು ಸಿಬಿಐಗೆ ಒಪ್ಪಿಸುವ ನಿರ್ಣಯವನ್ನು ತೆಗೆದುಕೊಂಡಿದ್ದಾರೆ, ಎಂದು ಡಿಎನ್‌ಎ ಈ ಆಂಗ್ಲ ದಿನಪತ್ರಿಕೆ  ವಾರ್ತೆಯನ್ನು ನೀಡಿದೆ.
ಈ ವಾರ್ತೆಯಲ್ಲಿ ಹೀಗೆ ಹೇಳಿದೆ -
೧. ಉಚ್ಚ ನ್ಯಾಯಾಲಯವು ಗೋವಿಂದ ಪಾನ್ಸರೆ ಕೊಲೆ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ವಿರೋಧಿಸಿದೆ ಹಾಗೂ ಪೊಲೀಸರೇ ತನಿಖೆಯನ್ನು ಮುಂದುವರಿಸಬೇಕೆಂದು ಹೇಳಿದೆ, ಆದರೂ ರಾಜ್ಯ ಸರಕಾರ ಸನಾತನ ಸಂಸ್ಥೆಯ ಮೇಲೆ ನಿರ್ಬಂಧ ಹೇರುವ ಸಲುವಾಗಿ ಹೆಜ್ಜೆ ಇಡುತ್ತಿದೆ.
೨. ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಇವರು ಗೋವಿಂದ ಪಾನ್ಸರೆಯವರ ಹತ್ಯೆಯ ತನಿಖೆಯನ್ನು ಸಿಬಿಐಗೆ ಒಪ್ಪಿಸುವ ನಿರ್ಣಯ ತೆಗೆದುಕೊಳ್ಳುವುದರ ಹಿಂದೆ ಈ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯನ್ನು ಸಿಲುಕಿಸಿದರೆ ಸಂಸ್ಥೆಯ ಮೇಲೆ ನಿರ್ಬಂಧ ಹೇರಲು ಸುಲಭವಾಗುತ್ತದೆ, ಎಂಬುದು ಕಾರಣವಾಗಿದೆ.
೩. ಡಾ. ದಾಭೋಳಕರ್ ಹತ್ಯೆ ಪ್ರಕರಣದಲ್ಲಿ ಡಾ. ವೀರೇಂದ್ರ ಸಿಂಹ ತಾವಡೆ ಇವರನ್ನು ಬಂಧಿಸಿದಾಗ ಸಂಘವು ಸರಕಾರಕ್ಕೆ ಸನಾತನ ಸಂಸ್ಥೆಯ ಮೇಲೆ ನಿರ್ಬಂಧ ಹೇರುವ ಒತ್ತಡವನ್ನು ಹೆಚ್ಚಿಸಿದೆ, ಎಂದು ಸಂಘದ ಮೂಲದಿಂದ ಮಾಹಿತಿ ಸಿಕ್ಕಿದೆ.
೪. ಈ ಮೊದಲು ಸನಾತನ ಸಂಸ್ಥೆಯ ಮೇಲೆ ನಿರ್ಬಂಧ ಹೇರಲು ಸರಕಾರದಲ್ಲಿ ಸಾಕಷ್ಟು ಕಾರಣಗಳಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಸಿಬಿಐ ಮಾಡಿದ ತನಿಖೆಯ ನಂತರ ಸರಕಾರಕ್ಕೆ ಸಂಸ್ಥೆಯ ಮೇಲೆ ನಿರ್ಬಂಧ ಹೇರಲು ಸುಲಭವಾಗಿದೆ. ಆದ್ದರಿಂದ ಗೋವಿಂದ ಪಾನ್ಸರೆಯವರ ಹತ್ಯೆಯ ತನಿಖೆಯನ್ನೂ ಸಿಬಿಐಗೆ ಒಪ್ಪಿಸಲು ಸರಕಾರ ನಿರ್ಣಯಿಸಿದೆ.
೫. ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಭಾಜಪದ ಅಂತರ್ಗತ ಮೂಲಗಳಿಂದ ಸಿಕ್ಕಿದ ಮಾಹಿತಿಯಿಂದ ಡಾ. ದಾಭೋಳಕರ್ ಮತ್ತು ಗೋವಿಂದ ಪಾನ್ಸರೆ ಇವರ ಹತ್ಯೆಯ ಪರಿಣಾಮವು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೇಲಾಗಲಿಕ್ಕಿದೆ. ಆದ್ದರಿಂದ ಸನಾತನ ಸಂಸ್ಥೆಯ ಮೇಲೆ ನಿರ್ಬಂಧ ಹೇರುವ ನಿರ್ಣಯವು ಸಂಪೂರ್ಣ ರಾಜಕೀಯವಾಗಿದೆ.
೬. ಸಂಸ್ಥೆಯ ಮೇಲೆ ನಿರ್ಬಂಧ ಹೇರುವ ಬಗ್ಗೆ ಸ್ವತಃ ಸಂಘದ ಕಾರಣಗಳು ಬೇರೆಯೇ ಇವೆ. ಸನಾತನ ಸಂಸ್ಥೆಯ ಎಲ್ಲ ಕೃತಿಗಳನ್ನು ನಿಲ್ಲಿಸುವುದಕ್ಕಿಂತ ಮೊದಲು ಸಂಸ್ಥೆಯ ಮೇಲೆ ನಿರ್ಬಂಧ ಹೇರುವ ಮೊದಲ ಹೆಜ್ಜೆ ಇಡಲಾಗುವುದು, ಎಂದು ಮೂಲಗಳು ಹೇಳಿವೆ.
ಇದು ಹಿಂದುತ್ವವಾದಿ ಸರಕಾರದ ಆಡಳಿತಾವಧಿಯಲ್ಲಿ ನಡೆಯುತ್ತಿರುವುದರಿಂದ ಹಿಂದೂ ಸಂಘಟನೆಗಳಿಗೆ ಬೇಸರ ತಂದಿದೆ ! - ಶ್ರೀ. ಅಭಯ ವರ್ತಕ್, ಪ್ರವಕ್ತಾ, ಸನಾತನ ಸಂಸ್ಥೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸನಾತನ ಸಂಸ್ಥೆಯ ಪ್ರವಕ್ತಾ ಶ್ರೀ. ಅಭಯ ವರ್ತಕ್, ‘‘ಈ ವಾರ್ತೆಯಿಂದ ‘ರಾಷ್ಟ್ರೀಯ ಸ್ವಯಂಸೇವಕ ಸಂಘದಂತಹ ದೊಡ್ಡ ಹಿಂದುತ್ವವಾದಿ ಸಂಘಟನೆಯು ಸನಾತನವನ್ನು ಮುಗಿಸುತ್ತಿದೆ’, ಎಂಬ ಸಂದೇಶ ನೀಡಿದಂತಾಗುತ್ತದೆ. ಇದು ವರೆಗೆ ವಿವಿಧ ದಿನಪತ್ರಿಕೆಗಳು ಸಿಬಿಐ ಅಧಿಕಾರಿಗಳ ಹೇಳಿಕೆಯ ಆಧಾರದಲ್ಲಿ ಅಪಾರವಾಗಿ ಸನಾತನ ಸಂಸ್ಥೆಯ ತೇಜೋವಧೆ ಮಾಡಿದವು. ಸನಾತನ ಸಂಸ್ಥೆಯು ನುಚ್ಚು ನೂರಾಗುತ್ತಿದ್ದು ಇದು ಹಿಂದುತ್ವವಾದಿ ಸರಕಾರದ ಆಡಳಿತಾವಧಿಯಲ್ಲಿ ಆಗುತ್ತಿರುವುದರಿಂದ ಹಿಂದುತ್ವವಾದಿ ಸಂಘಟನೆಗಳು ಬೇಸರಗೊಂಡಿವೆ. ಸಾಧ್ವಿ ಮತ್ತು ಇತರ ಧರ್ಮಾಭಿಮಾನಿ ಯುವಕರು ಜೈಲಿನಲ್ಲಿ ಜೀವನ ಕಳೆಯುತ್ತಿರುವಾಗ ಅಧಿಕಾರ ಹೇಗೆ ಸುಖಮಯವೆನಿಸಬಹುದು, ಎಂದು ಹಿಂದುತ್ವವಾದಿಗಳು ಪ್ರಶ್ನಿಸುತ್ತಿದ್ದಾರೆ. ಒಟ್ಟಾರೆ ದೊಡ್ಡ ಹಿಂದುತ್ವವಾದಿ ಸಂಘಟನೆಯ ಪದಾಧಿಕಾರಿಗಳು ಮೌನ ಮುರಿದು ಈ ವಾರ್ತೆಗೆ ತಮ್ಮ ಅಭಿಪ್ರಾಯವನ್ನು ನೀಡುವುದು ಆವಶ್ಯಕವಾಗಿದೆ. ಈ ಮೂಲಕವಾದರೂ ನಿಜವಾದ ಹಿಂದುತ್ವವಾದ ಎದುರು ಬರುವುದು’’ ಎಂದಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನ ಸಂಸ್ಥೆಯ ಮೇಲೆ ನಿರ್ಬಂಧ ಹೇರಲು ರಾಷ್ಟ್ರೀಯ ಸ್ವ. ಸಂಘದಿಂದ ಮಹಾರಾಷ್ಟ್ರ ಸರಕಾರದ ಮೇಲೆ ಒತ್ತಡ !