ಅರ್ಜುನನೇ, ಗುರುಪದವಿಯ ಹೊಣೆ ಈಗ ನನ್ನ ಮೇಲಿದೆ ! - ಶ್ರೀಕೃಷ್ಣ

ಮಹಾಭಾರತ ಯುದ್ಧದ ಸಮಯದಲ್ಲಿ ಅರ್ಜುನನ ಅಂತಃಕರಣ ಸಂದೇಹಗಳಿಂದ ಗ್ರಸ್ತವಾಗಿತ್ತು. ಅವನ ಅಂತಃಕರಣವು ಭಗವಂತನಲ್ಲಿ, ‘ಶ್ರೀಕೃಷ್ಣಾ ನಾನು ಸಂಪೂರ್ಣ ಸ್ತಂಭಿತನಾಗಿದ್ದೇನೆ. ಯುದ್ಧವನ್ನು ಮಾಡಲೇಬೇಕು ಎಂದು ನೀನು ಒತ್ತಾಯಿಸುತ್ತಿದ್ದಿಯಲ್ಲವೇ ? ಅದಕ್ಕಾಗಿ ನೀನು ನನಗೆ ನಿಷ್ಕಾಮ ಕರ್ಮಯೋಗವನ್ನು ತಿಳಿಸಿ ಪ್ರಭಾವಿತಗೊಳಿಸಲು ಪ್ರಯತ್ನಿಸುತ್ತಿದ್ದಿಯಲ್ಲವೇ ?’ ಎಂದು ಕೇಳುತ್ತಾನೆ. ಆಗ ಶ್ರೀಕೃಷ್ಣನು, ಇಲ್ಲ ಅರ್ಜುನಾ, ನೀನು ಶರಣಾಗಿದ್ದೀಯಾ. ನನಗೆ ಸಮರ್ಪಿತಗೊಂಡಿದ್ದೀಯಾ. ಈಗ ನೀನು ನನ್ನನ್ನು ಗೆಳೆಯನೆಂದು ಭಾವಿಸದೇ ‘ಸದ್ಗುರುಗಳ’ ಉಚ್ಚ ಆಸನದ ಮೇಲೆ ಅಧಿಷ್ಠಾನ ಮಾಡಿದ್ದೀಯಾ. ನನ್ನ ಮೇಲೆ ಗುರುಪದವಿಯ ಹೊಣೆಯಿದೆ. ಒಂದು ಸಮ್ಯಕ ಜೀವನದರ್ಶನವನ್ನು ಅಂದರೆ ಯಾವುದು ನಿನ್ನ ಜೀವನಕಾರ್ಯವನ್ನು ಸಂಪೂರ್ಣ ಸಫಲವನ್ನಾಗಿಸುವುದೋ, ಅದನ್ನು ನಿನ್ನ ಮುಂದಿಡಲು ನಾನು ಪ್ರಯತ್ನಿಸುತ್ತಿದ್ದೇನೆ. ಗುರುಗಳು ಸಂಪೂರ್ಣ ಸಮರ್ಪಿತಗೊಂಡ ಶಿಷ್ಯನಿಂದ ಏನಾದರೂ ಮುಚ್ಚಿಡಲು ಸಾಧ್ಯವಿದೆಯೇನು ? ನಿನಗೆ ನೀಡದಿರುವ ಯಾವುದೇ ವಿಷಯ ನನ್ನಲ್ಲಿಲ್ಲ. ನಿನಗೆ ಪರಮತೃಪ್ತ, ಸ್ವಸ್ಥ ಮತ್ತು ಶಾಂತ ಜೀವನದ ಅರಿವು ಮಾಡಿಕೊಡಲು ನಾನು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳುತ್ತಾನೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅರ್ಜುನನೇ, ಗುರುಪದವಿಯ ಹೊಣೆ ಈಗ ನನ್ನ ಮೇಲಿದೆ ! - ಶ್ರೀಕೃಷ್ಣ