ಆಚಾರಗಳನ್ನು ಹೇಗೆ ಪಾಲಿಸಬೇಕು ?


. ‘ಮೃತ್ಯುವು ನನ್ನ ಕೂದಲುಗಳನ್ನು ಹಿಡಿದುಕೊಂಡಿದೆ’ ಎಂದು ತಿಳಿದು ಕೊಂಡು ಧರ್ಮಾಚರಣೆ ಮಾಡಬೇಕು
ಅಜರಾಮರವತ್ಪ್ರಾಜ್ಞೋ ವಿದ್ಯಾಮರ್ಥಂ ಚ ಚಿಂತಯೇತ್
ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮ ಮಾಚರೇತ್ ॥
- ಹಿತೋಪದೇಶ, ಕಥಾಮುಖ, ಶ್ಲೋಕ ೩
ಅರ್ಥ : ಬುದ್ಧಿವಂತ ಮನುಷ್ಯನು ತನ್ನನ್ನು ಅಜರಾಮರನೆಂದು ತಿಳಿದುಕೊಂಡು ವಿದ್ಯೆ ಮತ್ತು ಧನವನ್ನು ಗಳಿಸಬೇಕು ಮತ್ತು ‘ಮೃತ್ಯುವು ನನ್ನ ಕೂದಲುಗಳನ್ನು ಹಿಡಿದುಕೊಂಡಿದೆ’ (ಮೃತ್ಯುವಿನ ದವಡೆಯಲ್ಲಿ ದ್ದೇನೆ) ಎಂದು ತಿಳಿದುಕೊಂಡು ಧರ್ಮಾಚರಣೆಯನ್ನು ಮಾಡಬೇಕು.

. ನಿತ್ಯನೈಮಿತ್ತಿಕ ಕರ್ಮಗಳನ್ನು ಕರ್ತವ್ಯಬುದ್ಧಿಯಿಂದ ಮತ್ತು ಅನಾಸಕ್ತಿಯಿಂದ ಆಮರಣ ಆಚರಿಸುವುದು ಅವಶ್ಯಕವಾಗಿದೆ : ನಮ್ಮ ಸಹಜ ಕರ್ಮಗಳನ್ನು (ನಿತ್ಯನೈಮಿತ್ತಿಕ ಕರ್ಮಗಳು) ಕರ್ತವ್ಯ ಬುದ್ಧಿಯಿಂದ ಮತ್ತು ಅನಾಸಕ್ತಿಯಿಂದ ಜೀವನವಿಡೀ ಆಚರಿಸಬೇಕು. ಚಿತ್ತಶುದ್ಧಿಯು ಈ ಜನ್ಮದಲ್ಲಿ ಆಗದಿದ್ದರೂ, ಮುಂದಿನ ಅನೇಕ ಜನ್ಮಗಳ ಅಂತ್ಯದಲ್ಲಿ ಪ್ರಾಪ್ತವಾದರೂ, ಕೈವಲ್ಯದ ಕಡೆಗೆ ಮಾರ್ಗಕ್ರಮಣ ಮಾಡಲು ಸಾಧ್ಯವಾಗುತ್ತದೆ.’
- ಗುರುದೇವ ಡಾ. ಕಾಟೇಸ್ವಾಮೀಜಿ
. ಎಲ್ಲ ಕರ್ಮಗಳನ್ನು ಭಗವಂತನಿಗೆ ಅರ್ಪಿಸುವುದರಿಂದಾಗುವ ಆಚರಣ ಶುದ್ಧಿಯ ಲಾಭವು ಸರ್ವಶ್ರೇಷ್ಠವಾಗಿದೆ :ಶ್ರೀಕೃಷ್ಣನು ಶ್ರೀಮದ್ಭಗವದ್ಗೀತೆಯಲ್ಲಿ (.೨೭) ಹೀಗೆ ಹೇಳಿದ್ದಾನೆ - ‘ಯಾವುದನ್ನು ಸೇವಿಸುತ್ತೀ, ಹವನ-ಯಜ್ಞ ಮಾಡುತ್ತೀ, ತಪಾದಿ ಕರ್ಮಗಳನ್ನು ಮಾಡುತ್ತೀ ಅವೆಲ್ಲವುಗಳನ್ನು ಭಗವಂತನಿಗೆ ಅರ್ಪಿಸು’. ಹೀಗೆ ಮಾಡುವುದರಿಂದ ಯಾವುದೂ ಧರ್ಮದ ವಿರುದ್ಧ ಅಥವಾ ಇತರ ಯಾವುದೇ ತಪ್ಪುಗಳು ಆಗುವುದಿಲ್ಲ. ಆಭಕ್ಷ್ಯ-ಭಕ್ಷಣ ಮತ್ತು ಅಪೇಯಪಾನ ಸಂಭವಿಸುವುದಿಲ್ಲ. ಮಾಂಸವು ನಿಷಿದ್ಧವಾಗಿರುವುದರಿಂದ ಪ್ರಾಣಿಗಳ ಜೀವಹತ್ಯೆಯಾಗುವುದಿಲ್ಲ. ನಿರರ್ಥಕ ಮತ್ತು ನಿರುಪಯೋಗಿ ವಸ್ತುಗಳ ದಾನವಾಗುವುದಿಲ್ಲ. ಆಮೇಲೆ ಏನು ನೋಡಬೇಕಾಗಿದೆಯೋ ಕಣ್ಣುಗಳು ಅವುಗಳನ್ನೇ ನೋಡುವವು; ಏನು ಕೇಳಬೇಕಾಗಿದೆಯೋ ಕಿವಿಗಳು ಅವುಗಳನ್ನೇ ಕೇಳುವವು ಮತ್ತು ಏನು ಮಾತನಾಡಬೇಕಾಗಿದೆಯೋ ವಾಣಿಯು ಅದನ್ನೇ ಮಾತನಾಡುವುದು. ಈ ರೀತಿ ಎಲ್ಲ ಇಂದ್ರಿಯ ಗಳು ಏನು ಮಾಡಬೇಕು ಅವುಗಳನ್ನೇ ಮಾಡುವವು. ಇದು ಸಮರ್ಪಣೆ ಯಿಂದಾಗುವ ಆಚಾರಶುದ್ಧಿಯ ಸರ್ವಶ್ರೇಷ್ಠ ಲಾಭವಾಗಿದೆ.’
- ಗುರುದೇವ ಡಾ. ಕಾಟೇಸ್ವಾಮೀಜಿ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಆಚಾರಗಳನ್ನು ಹೇಗೆ ಪಾಲಿಸಬೇಕು ?