ಸಾಧಕರನ್ನು ಮಾಯೆಯಲ್ಲಿಡದೇ ಈಶ್ವರನೊಂದಿಗೆ ಹೇಗೆ ಏಕರೂಪವಾಗುವುದು ಎಂಬುದನ್ನು ಕಲಿಸುವ ಪ.ಪೂ. ಡಾಕ್ಟರರು !

ಭಾವ ನಿರ್ಮಿತಿಯ ಮತ್ತು  ಭಾವಜಾಗೃತಿಯ ಸಂದರ್ಭದಲ್ಲಿ ಹೇಳಿರುವ ಅಂಶಗಳು
ಶ್ರೀ. ರೂಪೇಶ ಗೋಕರ್ಣ
೧. ಪ.ಪೂ. ಡಾಕ್ಟರರಿಗೆ ಮರ್ದನ ಮಾಡುವಾಗ ‘ವೈಕುಂಠದಲ್ಲಿ ಶ್ರೀವಿಷ್ಣುವಿನ ಚರಣಗಳಿಗೆ ಮರ್ದನ ಮಾಡುತ್ತಿದ್ದೇನೆ’, ಎಂದೆನಿಸುವುದು : ನಾನು ಕಳೆದ ೧ ತಿಂಗಳಿನಿಂದ ಪ.ಪೂ. ಡಾಕ್ಟರರ ಕಾಲುಗಳಿಗೆ ಮರ್ದನ ಮಾಡುತ್ತಿದ್ದೇನೆ. ಈ ಸೇವೆಯನ್ನು ಮಾಡುವಾಗ ‘ನಾನು ವೈಕುಂಠದಲ್ಲಿ ಸಾಕ್ಷಾತ್ ಶ್ರೀವಿಷ್ಣುವಿನ ಚರಣಗಳ ಬಳಿ ಇದ್ದು ಅವನಿಗೆ ಮರ್ದನ ಮಾಡುತ್ತಿದ್ದೇನೆ’, ಎಂಬ ಅನುಭವವಾಗುತ್ತಿತ್ತು. ಆರಂಭದಲ್ಲಿ ಸೇವೆ ಮಾಡುವಾಗ ನನಗೆ  ತುಂಬಾ ಆನಂದವಾಯಿತು. ಆಗ ನನ್ನಿಂದ ಪ್ರಾರ್ಥನೆಯೂ ಆಗುತ್ತಿತ್ತು. ಅದರ ಬಗ್ಗೆ ನಾನು ಪ.ಪೂ. ಡಾಕ್ಟರರಿಗೆ ಹೇಳಿದಾಗ, ಅವರು, ‘ಭಾವಕ್ಕನುಸಾರ ದೇವರು ಕಾಣಿಸುತ್ತಾನೆ !’ ಎಂದರು.
೨. ‘ಭಾವವು ಕಡಿಮೆಯಾಗುತ್ತಿದೆ’, ಎಂದೆನಿಸಿದಾಗ ಪ.ಪೂ. ಡಾಕ್ಟರರು ಹೇಳಿದ ಕಾರಣಗಳು : ಕೆಲವು ಸಮಯದ ನಂತರ  ನನ್ನಲ್ಲಿ ಭಾವ ಕಡಿಮೆಯಾಗುತ್ತಿದೆ’, ಎಂದೆನಿಸಿತು. ಅದಕ್ಕೆ ಪ.ಪೂ. ಡಾಕ್ಟರರು, ‘ಈ ಸ್ಥಿತಿಯಲ್ಲಿ ಭಾವದ ಏರಿಳಿತ ಆಗುತ್ತಿರುತ್ತದೆ; ಆದುದರಿಂದ ಹೀಗೆ ಅನಿಸುತ್ತದೆ. ಮನಸ್ಸು ನಿರ್ವಿಚಾರ ಸ್ಥಿತಿಯಲ್ಲಿದ್ದಾಗ ಆನಂದ ಅನಿಸುತ್ತದೆ. ನಮ್ಮಲ್ಲಿ ಬದಲಾವಣೆಗಳಾಗುತ್ತಿರುತ್ತವೆ’ ಎಂದರು.

೩. ‘ಪ್ರಕೃತಿಗನುಸಾರ ಪ್ರತಿಯೊಬ್ಬರ ಭಾವ ಬೇರೆ ಬೇರೆ ಇದ್ದು ಭಾವ ವೃದ್ಧಿಯಾಗಲು ಅಖಂಡವಾಗಿ ನಾಮಜಪ ಮಾಡುವುದು ಮಹತ್ವದ್ದಾಗಿದೆ, ಎಂದು ಪ.ಪೂ. ಡಾಕ್ಟರರು ಹೇಳುವುದು : ನಾನು ಅವರಿಗೆ, ‘ಗೋಪಿಯರಂತೆ, ಭಕ್ತ ಪ್ರಹ್ಲಾದನಂತೆ ಭಕ್ತಿ ಮಾಡಲು ಯಾವ ರೀತಿ ಪ್ರಯತ್ನಗಳನ್ನು ಮಾಡಬೇಕು ?’  ಎಂದು ಕೇಳಿದಾಗ ಅವರು, ‘ಬೇರೆಯವರಂತೆ ನಮ್ಮಲ್ಲಿ ಎಲ್ಲವೂ ಬರಬೇಕೆಂದೇನೂ ಇಲ್ಲ; ಏಕೆಂದರೆ ಪ್ರತಿಯೊಬ್ಬರ ಪ್ರಕೃತಿಯು ಬೇರೆಬೇರೆ ಇರುತ್ತದೆ. ನಿನ್ನ ಪ್ರಕೃತಿಗೆ ಹೀಗೆ ಭಾವ ಇರುವುದಾದರೆ, ಗೋಪಿ ದೀಪಾಲಿ ಮತ್ತು ತೃಪ್ತಿಯವರಲ್ಲಿನ ಭಾವವು ಉಚ್ಚ ಮಟ್ಟದ್ದಾಗಿದೆ. ಆದ್ದರಿಂದ  ಅವರು ಸಮಷ್ಟಿಗೆ ಹೋಗಿದ್ದಾರೆ. ಭಾವವು ತಾನಾಗಿ ವೃದ್ಧಿಯಾಗಲು ಅಖಂಡ ನಾಮಜಪವನ್ನು ಮಾಡುವುದು ಮಹತ್ವದ್ದಾಗಿದೆ’ ಎಂದರು. ಯಾವ ರೀತಿ ಶ್ರೀಕೃಷ್ಣನು ರಾಧೆಯನ್ನು ಮಾಯೆಯಲ್ಲಿ ಸಿಲುಕಿಸದೇ ಅಧ್ಯಾತ್ಮದಲ್ಲಿ ಮುಂದೆ ಕೊಂಡೊಯ್ದನೋ ಮತ್ತು ಈಶ್ವರನೊಂದಿಗೆ ಏಕರೂಪ ಮಾಡಿಕೊಂಡನೋ, ಅದೇರೀತಿ ಪ.ಪೂ. ಡಾಕ್ಟರರು ಸಾಧಕರನ್ನು ಮಾಯೆಯಲ್ಲಿ ಸಿಲುಕಿಸದೇ ಈಶ್ವರನೊಂದಿಗೆ ಏಕರೂಪವಾಗುವುದು ಹೇಗೆ ಎನ್ನುವುದನ್ನು ಅವರಿಗೆ ಕಲಿಸುತ್ತಾರೆ ಮತ್ತು ಈಶ್ವರನಲ್ಲಿಗೆ ಕರೆದುಕೊಂಡು ಹೋಗುತ್ತಾರೆ.
ಹೇ ಗುರುದೇವಾ, ನಿಮ್ಮ ಕೃಪೆಯಿಂದ ನನಗೆ ತುಂಬಾ ಕಲಿಯಲು ಸಿಕ್ಕಿತು. ಇದಕ್ಕಾಗಿ ನಾನು ನಿಮ್ಮ ಚರಣಗಳಲ್ಲಿ ಕೃತಜ್ಞನಾಗಿದ್ದೇನೆ. ನೀವು ನನ್ನ ಕೈಹಿಡಿದು ಇದೇ ರೀತಿ ನನ್ನನ್ನು ಅಧ್ಯಾತ್ಮದಲ್ಲಿ ಮುಂದೆ ಕರೆದುಕೊಂಡು ಹೋಗಿರಿ, ಎಂದು ನಿಮ್ಮ ಚರಣಗಳಲ್ಲಿ ಸಂಪೂರ್ಣ ಶರಣಾಗಿ ಪ್ರಾರ್ಥಿಸುತ್ತೇನೆ.
- ಶ್ರೀ. ರೂಪೇಶ ಗೋಕರ್ಣ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೧.೨.೨೦೧೬)
(ಸಾಧಕನಲ್ಲಿರುವ ಭಾವದಿಂದಾಗಿ ಇದು ಅವನಿಗೆ ಬಂದಿರುವ  ವೈಯಕ್ತಿಕ ಅನುಭೂತಿಯಾಗಿದೆ. ಎಲ್ಲರಿಗೂ ಇದೇರೀತಿ ಬರುತ್ತದೆ ಎಂದೇನೂ ಇಲ್ಲ. - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಾಧಕರನ್ನು ಮಾಯೆಯಲ್ಲಿಡದೇ ಈಶ್ವರನೊಂದಿಗೆ ಹೇಗೆ ಏಕರೂಪವಾಗುವುದು ಎಂಬುದನ್ನು ಕಲಿಸುವ ಪ.ಪೂ. ಡಾಕ್ಟರರು !