ಕಾಶ್ಮೀರದಲ್ಲಿ ಜಿಹಾದಿ ಉಗ್ರರ ಬೆಂಬಲಿಗರಿಂದ ಮಸೀದಿಯ ಬೋಂಗಾಗಳಿಂದ ಜಿಹಾದ್‌ಗೆ ಕರೆ !

  • ಭಾರತವಿರೋಧಿ ಮತ್ತು ಪಾಕಿಸ್ಥಾನವನ್ನು ಬೆಂಬಲಿಸುವ ಘೋಷಣೆ !
  • ಕಾಶ್ಮೀರದ ಮಸೀದಿಗಳಿಂದ ನೀಡಲಾಗುತ್ತಿರುವ ಈ ಕರೆ ದೇಶದ ಪ್ರತಿಯೊಂದು ಮಸೀದಿಯಿಂದ ಆಗತೊಡಗಿದಾಗ ಏನಾಗಬಹುದು ಎಂಬ ಅರಿವು ಜಾತ್ಯತೀತರಿಗಿದೆಯೇ ?
  • ಪಿಡಿಪಿ-ಭಾಜಪ ಸರಕಾರ ಈ ದೇಶದ್ರೋಹಿಗಳ ಮೇಲೆ ಕ್ರಮಕೈಗೊಳ್ಳುವರೋ ಅಥವಾ ಅವರಿಗೆ ಬಿರ್ಯಾನಿ ತಿನ್ನಿಸುವರೋ ?
ಶ್ರೀನಗರ : ಜಿಹಾದಿ ಉಗ್ರ ಬುರ್ಹಾನ್ ವಾನಿಯನ್ನು ಸೈನಿಕರು ಗುಂಡಿಟ್ಟು ಕೊಂದ ನಂತರ ಕಾಶ್ಮೀರದಲ್ಲಿ ದೇಶದ್ರೋಹಿಗಳು ಹಿಂಸಾಚಾರ ನಡೆಸಿದರು. ಘಟನೆಯಾಗಿ ಮೂರನೇ ದಿನ ಬಿಗಿ ಭದ್ರತೆ ಇದ್ದರೂ ಅಲ್ಲಿನ ಮಸೀದಿಯ ಬೋಂಗಾಗಳಿಂದ ಪಾಕ್‌ಪರ ಮತ್ತು ಭಾರತದ ವಿರುದ್ಧ ಘೋಷಣೆ ಕೂಗಲಾಗುತ್ತಿದೆ. ಅಲ್ಲದೇ ಭದ್ರತಾ ಪಡೆವಿರುದ್ಧ ಕೈ ಎತ್ತಲು ಮತ್ತು ಭಾರತ ವಿರೋಧಿಜಿಹಾದ್‌ನಲ್ಲಿ ಪಾಲ್ಗೊಳ್ಳಲು ಕರೆ ನೀಡಲಾಗಿದೆ. ಈ ಮೂಲಕ ಮಸೀದಿಯಿಂದ ಹಿಂಸಾಚಾರಕ್ಕಾಗಿ ಉದ್ರೇಕಕಾರಿ ಹೇಳಿಕೆ ನೀಡಲಾಗುತ್ತದೆ. ಜಿಹಾದ್ ಮೂಲಕ ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ದೊರೆಯುವುದೆಂಬ ಪ್ರಚೋದನಾಕಾರಿ ಹೇಳಿಕೆ ನೀಡುವ ಧ್ವನಿಮುದ್ರಿಕೆ ಕೇಳಿಸಲಾಗುತ್ತಿದೆ.
(ಕಾಶ್ಮೀರ ಕಣಿವೆಯ ಮಸೀದಿಗಳಲ್ಲಿ ಭಾರತ ವಿರೋಧಿ ಘೋಷಣೆ ಕೂಗುವುದು ಇದೇ ಮೊದಲೇನಲ್ಲ. ಈ ಮೊದಲೂ ಇಂತಹ ಘಟನೆಗಳಾಗಿವೆ ಮತ್ತು ಇಂದಿಗೂ ಘಟಿಸುತ್ತಿದೆ; ಏಕೆಂದರೆ ರಾಜಕಾರಣಿಗಳು ಢೋಂಗಿ ಜಾತ್ಯತೀತವಾದದ ಹೆಸರಿನಲ್ಲಿ ಅದರತ್ತ ದುರ್ಲಕ್ಷಿಸುತ್ತಿದ್ದಾರೆ. ೧೯೮೯ ರಲ್ಲಿ ಇದೇ ರೀತಿ ಮಸೀದಿಯ ಧ್ವನಿವರ್ಧಕಗಳಿಂದ ಹಿಂದೂಗಳನ್ನು ಉದ್ದೇಶಿಸಿ ‘ಮನೆಮಠ, ಹಣ ಮತ್ತು ಅವರ (ಹಿಂದೂಗಳ) ಮಡದಿಯರನ್ನು ಬಿಟ್ಟು ಹೋಗುವ ಬಗ್ಗೆ ಹೇಳಲಾಗಿತ್ತು. ಅಂದಿನ ಕಾಂಗ್ರೆಸ್ ಸರಕಾರವು ಏನನ್ನೂ ಮಾಡಲಿಲ್ಲ ಮತ್ತು ಇಂದಿನ ಸರಕಾರವೂ ಹಾಗೆಯೇ ವರ್ತಿಸುತ್ತಿದೆ, ಎಂಬ ಚಿತ್ರಣ ಕಾಣಿಸುತ್ತಿದೆ ! - ಸಂಪಾದಕರು)
ಗಲಭೆಕೋರ ಮತಾಂಧರಿಂದ ಅನಂತನಾಗ್‌ನಲ್ಲಿ ನ್ಯಾಯಾಲಯಕ್ಕೆ ಬೆಂಕಿ,
ಪುಲ್ವಾಮಾದಲ್ಲಿ ಇಬ್ಬರು ಕಾಶ್ಮೀರಿ ಹಿಂದೂಗಳ ಮನೆಗೆ ಬೆಂಕಿ !
ಜುಲೈ ೧೧ ರಂದು ಗಲಭೆಕೋರ ಮತಾಂಧರು ಅನಂತನಾಗ್ ನ್ಯಾಯಾಲಯಕ್ಕೆ ಬೆಂಕಿ ಹಚ್ಚಿದರು. ಅದನ್ನು ಆರಿಸಲು ಭದ್ರತಾ ಪಡೆಯವರು ಪ್ರಯತ್ನಿಸಿದರು. ಇನ್ನೊಂದು ಘಟನೆಯಲ್ಲಿ ಪುಲ್ವಾಮಾದಲ್ಲಿ ಮತಾಂಧ ಗಲಭೆಕೋರರು ಜುಲೈ ೧೧ ರ ರಾತ್ರಿ ಹಿಂದೂಗಳ ಎರಡು ಮನೆಗಳಿಗೆ ಬೆಂಕಿ ಹಚ್ಚಿದರು. ಇವೆರಡು ಮನೆಗಳು ಮುಚ್ಚಿ ದ್ದವು. ೨೦೦೮ ರ ನಂತರ ಹಿಂದೂಗಳ ಮನೆ ಸುಡುವ ಇದು ಮೊದಲ ಘಟನೆಯಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕಾಶ್ಮೀರದಲ್ಲಿ ಜಿಹಾದಿ ಉಗ್ರರ ಬೆಂಬಲಿಗರಿಂದ ಮಸೀದಿಯ ಬೋಂಗಾಗಳಿಂದ ಜಿಹಾದ್‌ಗೆ ಕರೆ !