ಪಂಚಮ ಅಖಿಲ ಭಾರತೀಯ ಹಿಂದೂ ಅಧಿವೇಶನದಲ್ಲಿ ಸಮಾನಕೃತಿ ಕಾರ್ಯಕ್ರಮಗಳ ನಿರ್ಧಾರ !

ಜನರ ಸಮಸ್ಯೆಗಳನ್ನು ಬಗೆಹರಿಸಲು ಸಾಮಾಜಿಕ ಉಪಕ್ರಮಗಳ ಮೂಲಕ ಆಂದೋಲನ ಮಾಡುವೆವು, ಹಿಂದುತ್ವನಿಷ್ಠರಿಗೆ ಉಚಿತವಾಗಿ ಕಾನೂನು ಮಾರ್ಗದರ್ಶನ ಮಾಡುವೆವು !
ಪಣಜಿ, ೨೨ ಜೂನ್ : ಪಂಚಮ ಅಖಿಲ ಭಾರತೀಯ ಹಿಂದೂ ಅಧಿವೇಶನದಲ್ಲಿ ಹಿಂದೂ ಸಂಘಟನೆಗಳ ಪ್ರತಿನಿಧಿಗಳ ಅಧಿವೇಶನವು ಇಂದು ಸಮಾರೋಪವಾಗಿದ್ದು ಎರಡನೇ ಹಂತದಲ್ಲಿ ನಾಳೆಯಿಂದ (ಜೂನ್ ೨೩ ರಿಂದ) ಹಿಂದೂ ರಾಷ್ಟ್ರ ಸಂಘಟಕರ ಅಧಿವೇಶನವು ಆರಂಭವಾಗಲಿದೆ. ಈ ನಿಮಿತ್ತ ಒಟ್ಟಾದ ೧೬೧ ಕ್ಕಿಂತ ಹೆಚ್ಚು ಸಂಘಟನೆಗಳ ಪ್ರತಿನಿಧಿಗಳು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ವ್ಯಾಪಕ ಜನಜಾಗೃತಿ ಮಾಡಲು ನಿರ್ಧರಿಸಿದರು. ವಿಶೇಷವೆಂದರೆ ರಾಷ್ಟ್ರ ಹಾಗೂ ಧರ್ಮ ಜಾಗೃತಿಯ ಉಪಕ್ರಮಗಳೊಂದಿಗೆ ಇನ್ನು ಮುಂದೆ ಸಾಮಾಜಿಕ ಉಪಕ್ರಮಗಳನ್ನು ನಡೆಸಲೂ ಈ ಅಧಿವೇಶನದಲ್ಲಿದ್ದ ಹಿಂದುತ್ವನಿಷ್ಠರು ನಿರ್ಧರಿಸಿದರು. ಸಮಾನ ಕೃತಿ ಕಾರ್ಯಕ್ರಮದ ಮೂಲಕ ನಿಶ್ಚಯಿಸಿದ ಸಾಮಾಜಿಕ ಉಪಕ್ರಮಗಳ ಮಾಧ್ಯಮದಿಂದ ಅಶ್ಲೀಲತೆ, ಶಾಲೆಗಳಲ್ಲಿ ಡೊನೇಶನ್, ಆಸ್ಪತ್ರೆಯಲ್ಲಿ ಲೂಟಿ, ಭ್ರಷ್ಟಾಚಾರ ಇಂತಹ ಸರ್ವಸಾಮಾನ್ಯರನ್ನು ಕಾಡುವ ಸಮಸ್ಯೆಗಳ ವಿರುದ್ಧವೂ ಕೃತಿ ಮಾಡಲಾಗುವುದು. ಅಲ್ಲದೇ ಕಾಶ್ಮೀರಿ ಹಿಂದೂಗಳ ಪುನರ್‌ವಸತಿಗಾಗಿ ರಾಷ್ಟ್ರವ್ಯಾಪಿ ಆಂದೋಲನ ನಡೆಸಲು ನಿರ್ಧರಿಸಲಾಯಿತು, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ  ಪ್ರವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಮಾಹಿತಿ ನೀಡಿದರು.

ಜೂನ್ ೧೯ ರಿಂದ ಶ್ರೀ ರಾಮನಾಥ ದೇವಸ್ಥಾನದ (ಫೋಂಡಾ, ಗೋವಾ) ಪ್ರಾಂಗಣದಲ್ಲಿ ಈ  ಅಧಿವೇಶನ ನಡೆಯಿತು. ಈ ಅಧಿವೇಶನಕ್ಕೆ ಭಾರತದ ೨೨ ರಾಜ್ಯಗಳಿಂದ ಹಾಗೂ ನೇಪಾಳ ಮತ್ತು ಶ್ರೀಲಂಕಾ ದೇಶಗಳಿಂದ ಒಟ್ಟು ೪೦೦ ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಈ ಸುದ್ದಿಗೋಷ್ಠಿಯಲ್ಲಿ ಕೋಲಕಾತಾ (ಪ.ಬಂಗಾಲ)ದ ಶಾಸ್ತ್ರ ಧರ್ಮಪ್ರಚಾರ ಸಭೆಯ ಕಾರ್ಯದರ್ಶಿ ಡಾ. ಶಿವ ನಾರಾಯಣ ಸೇನ್, ಅರುಣಾಚಲ ಪ್ರದೇಶದ ಶ್ರೀ. ಕುರು ತಾಯಿ, ಭಾರತ ರಕ್ಷಾ ಮಂಚ್‌ನ ರಾಷ್ಟ್ರೀಯ ಕಾರ್ಯದರ್ಶಿ ಶ್ರೀ. ಅನೀಲ್ ಧೀರ್, ಬೆಳಗಾವಿಯ ಹಿಂದೂ ವಿಧಿಜ್ಞ ಪರಿಷತ್ತಿನ ಸಮನ್ವಯಕರಾದ ನ್ಯಾಯವಾದಿ ಚೇತನ ಮಣೇರಿಕರ್ ಮತ್ತು ಸನಾತನ ಸಂಸ್ಥೆಯ ಪ್ರವಕ್ತಾ ಶ್ರೀ. ಚೇತನ ರಾಜಹಂಸ ಇವರು ಉಪಸ್ಥಿತರಿದ್ದರು.
ಸಮಾನ ಕಾರ್ಯಕ್ರಮದ ಅಂತರ್ಗತ ಸಾಮಾಜಿಕ ದೃಷ್ಟಿಯಿಂದ ಸಮಾಜಹಿತ ಉಪಕ್ರಮಗಳನ್ನು ನಡೆಸುವಾಗ ಸ್ಥಳೀಯ ಸಮಸ್ಯೆಗಳಿಗೆ ಆದ್ಯತೆ ನೀಡಲಾಗುವುದು. ಈ ಸಮಸ್ಯೆಗಳನ್ನು ಬಗೆಹರಿಸಲು ಸ್ಥಳೀಯ ಮಟ್ಟದಲ್ಲಿ ಆಂದೋಲನ ನಡೆಸಲು ಹಾಗೂ ಅದರಲ್ಲಿ ಸಮಾಜದ ಹೆಚ್ಚೆಚ್ಚು ಧರ್ಮ ಹಾಗೂ ರಾಷ್ಟ್ರ ಪ್ರೇಮಿ ಹಿಂದೂಗಳನ್ನು ಸೇರಿಸಿಕೊಳ್ಳಲು ಈ ಅಧಿವೇಶನದಲ್ಲಿ ನಿರ್ಧರಿಸಲಾಯಿತು.
ಕಾಶ್ಮೀರ ಹಾಗೂ ಬಾಂಗ್ಲಾದೇಶದ ಹಿಂದೂಗಳ ಮೇಲಿನ ದೌರ್ಜನ್ಯದ
ವಿರುದ್ಧ ಕೃತಿ ಮಾಡುವೆವು !
ಜಿಹಾದಿ ಉಗ್ರವಾದದಿಂದಾಗಿ ನಿರಾಶ್ರಿತರಾದ ಕಾಶ್ಮೀರಿ ಹಿಂದೂಗಳು ಗೌರವದಿಂದ ಕಾಶ್ಮೀರದಲ್ಲಿ ವಾಸಿಸಬೇಕೆಂದು ರಾಷ್ಟ್ರಾದ್ಯಂತದ ಹಿಂದೂಗಳು ಸಂಘಟಿತರಾಗಿ ಕೇಂದ್ರಸರಕಾರದ ಮೇಲೆ ಒತ್ತಡ ತರುವುದು ಅಪೇಕ್ಷಿತವಿದೆ. ಈ ದೃಷ್ಟಿಯಿಂದ ಕಾಶ್ಮೀರಿ ಹಿಂದೂಗಳ ಪುನರ್ವಸತಿಗಾಗಿ ವಿವಿಧ ಹಿಂದುತ್ವವಾದಿ ಸಂಘಟನೆಗಳ ಸಹಭಾಗಿತ್ವದಲ್ಲಿ ಭಾರತಾದ್ಯಂತ ೧೯ ಸ್ಥಳಗಳಲ್ಲಿ ಅಧಿವೇಶನಗಳನ್ನು ನಡೆಸಲಿದೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ನೋಡಿದಾಗ ಅಲ್ಲಿನ ಹಿಂದೂಗಳ ಭದ್ರತೆ ಬಗ್ಗೆ ಈ ಅಧಿವೇಶನದಲ್ಲಿ ಚಿಂತೆ ವ್ಯಕ್ತಪಡಿಸಲಾಯಿತು. ಬಾಂಗ್ಲಾದೇಶದಲ್ಲಿ ಹಿಂದೂಗಳಿಗಾಗಿ ಸ್ವತಂತ್ರಭೂಮಿ (homeland) ನಿರ್ಮಿಸುವ ಬಗ್ಗೆ ಇಲ್ಲಿನ ಹಿಂದೂಗಳ ಬೇಡಿಕೆಯನ್ನು ಎಲ್ಲ ಸಂಘಟನೆಗಳು ಒಮ್ಮತದಿಂದ ಬೆಂಬಲ ಸೂಚಿಸಿದವು.
ಹಿಂದುತ್ವನಿಷ್ಠರಿಗೆ ಕಾನೂನಿನ ಬಗ್ಗೆ
ಉಚಿತ ಮಾರ್ಗದರ್ಶನ ಮಾಡುವೆವು !
ರಾಷ್ಟ್ರ ಮತ್ತು ಧರ್ಮ ಜಾಗೃತಿಯ ಕಾರ್ಯ ಮಾಡುವ ಹಿಂದುತ್ವನಿಷ್ಠರಿಗೆ ಸತತ ಕಾನೂನಿನ ತೊಡಕುಗಳನ್ನು ಎದುರಿಸಬೇಕಾಗುತ್ತದೆ. ಅದೇ ರೀತಿ ಪೊಲೀಸರು ಮತ್ತು ಆಡಳಿತದಿಂದಲೂ ಅವರ ಕಾರ್ಯದಲ್ಲಿ ಪದೇ ಪದೇ ಅಡಚಣೆ ನಿರ್ಮಾಣ ಮಾಡಲಾಗುತ್ತದೆ. ಅದನ್ನು ಎದುರಿಸಲು ಹಿಂದೂ ವಿಧಿಜ್ಞ ಪರಿಷತ್ತಿನ ನ್ಯಾಯವಾದಿ ಸದಸ್ಯರು ತಿಂಗಳಲ್ಲಿ ೨ ಬಾರಿ ಹಿಂದುತ್ವನಿಷ್ಠರಿಗೆ ಕಾನೂನಿನ ಬಗ್ಗೆ ಉಚಿತ ಮಾರ್ಗದರ್ಶನ ಮಾಡಲಿದ್ದಾರೆ. ಅದೇ ರೀತಿ ರಾಷ್ಟ್ರ ಮತ್ತು ಧರ್ಮ ಕಾರ್ಯಕ್ಕಾಗಿ ವಿವಿಧ ಹಿಂದುತ್ವನಿಷ್ಠರು ಮಾಹಿತಿ ಹಕ್ಕು ಅಧಿಕಾರದಿಂದ ಪಡೆದ ಮಾಹಿತಿ ಮತ್ತು ನ್ಯಾಯಾಲಯದ ಆದೇಶ ಒಟ್ಟು ಮಾಡಿ ಲೀಗಲ್ ಡಾಟಾ ಬ್ಯಾಂಕ್ ತಯಾರಿಸಲಾಗುವುದು. ಮುಂದೆ ಈ ಮಾಹಿತಿ ರಾಷ್ಟ್ರ ಮತ್ತು ಧರ್ಮ ಕಾರ್ಯಕ್ಕಾಗಿ ಹಿಂದುತ್ವನಿಷ್ಠರಿಗೆ ಒದಗಿಸಲಾಗುವುದು.
ಹಿಂದೂಗಳನ್ನು ಸಂಘಟಿಸಲು ೪೧ ಪ್ರಾಂತೀಯ ಅಧಿವೇಶನಗಳ ಆಯೋಜನೆ ಮಾಡುವೆವು !
ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಹೆಚ್ಚೆಚ್ಚು ಹಿಂದೂಗಳನ್ನು ಸೇರಿಸಲು ಮುಂಬರುವ ವರ್ಷದಲ್ಲಿ ದೇಶದಾದ್ಯಂತ ೪೧ ಪ್ರಾಂತೀಯ ಹಿಂದೂ ಅಧಿವೇಶನಗಳ ಆಯೋಜನೆ ಮಾಡುವ ನಿರ್ಧಾರವನ್ನು ಹಿಂದುತ್ವನಿಷ್ಠರು ಮಾಡಿದ್ದಾರೆ. ಇದರಲ್ಲಿ ೩೨ ಅಧಿವೇಶನಗಳನ್ನು ಪ್ರಾಂತೀಯ ಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ೯ ಅಧಿವೇಶನಗಳನ್ನು ಆಯೋಜಿಸಲಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪಂಚಮ ಅಖಿಲ ಭಾರತೀಯ ಹಿಂದೂ ಅಧಿವೇಶನದಲ್ಲಿ ಸಮಾನಕೃತಿ ಕಾರ್ಯಕ್ರಮಗಳ ನಿರ್ಧಾರ !