ಪರ್ಯಾಯದ ಹುಡುಕಾಟದಲ್ಲಿ

ಪವಿತ್ರ ಅಮರನಾಥಯಾತ್ರೆ ಸದ್ಯ ಸ್ಥಗಿತಗೊಂಡಿದೆ. ಭಯೋತ್ಪಾದಕರ ಹಿಂಸಾಚಾರದಿಂದಾಗಿ ಯಾತ್ರಿಕರು ವಿವಿಧೆಡೆಗಳಲ್ಲಿ ಸಿಲುಕಿಕೊಂಡಿದ್ದಾರೆ. ಶ್ರೀನಗರ ಸೈನ್ಯದ ಒಂದು ಡೇರೆಯಲ್ಲಿ ಸಾಧಾರಣ ಹತ್ತು ಸಾವಿರ ಯಾತ್ರಿಕರು ಕಳೆದ ನಾಲ್ಕು ದಿನಗಳಿಂದ ವಾಸಿಸುತ್ತಿದ್ದಾರೆ. ಭಯೋತ್ಪಾದಕರು ರಸ್ತೆಯಲ್ಲಿ ಸಾಗುತ್ತಿರುವಾಗ ಕಲ್ಲೆಸೆಯುತ್ತಿದ್ದಾರೆ. ಹಾಗಾಗಿ ಹೊರಬೀಳುವುದು ಅಸಾಧ್ಯ ವಾಗಿ ಬಿಟ್ಟಿದೆ. ಜಮ್ಮು-ಕಾಶ್ಮೀರ ರಾಜ್ಯದ ಈ ಸಮಸ್ಯೆಯು ಸಂಪೂರ್ಣ ದೇಶದ ಗಮನವನ್ನು ಸೆಳೆದಿದೆ. ಭಯೋತ್ಪಾದಕ ಬುರ್ಹಾನ ವಾನಿಯನ್ನು ಭಾರತೀಯ ಸೈನಿಕರು ಕೊಂದಿದ್ದಾರೆ ಮತ್ತು ಕಾಶ್ಮೀರಿ ಯುವಕರು ಸೈನ್ಯದ ಮೇಲೆ ಕಲ್ಲೆಸೆಯಲು ಪ್ರಾರಂಭಿಸಿದ್ದಾರೆ. ಭಯೋತ್ಪಾದಕರ ಬೆಂಬಲಿಗರು ಈ ದುಷ್ಕ ೃತ್ಯವನ್ನು ನಡೆಸುತ್ತಿದ್ದಾರೆ.
ಈ ರಾಜ್ಯದಲ್ಲಿ ಈ ಸಮಸ್ಯೆಯು ಹೊಸತೇನಲ್ಲ. ಸೈನ್ಯ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರ ಹತ್ಯೆಯಾದೊಡನೆ ನಾಗಕರಿಕರು ಸೈನಿಕರನ್ನು ದ್ವೇಷಿಸುತ್ತಾರೆ ಮತ್ತು ಕಲ್ಲೆಸೆತದಂತಹ ಕುಕೃತ್ಯಗಳನ್ನು ಮಾಡುತ್ತಾರೆ. ಕಾಶ್ಮೀರ ರಾಜ್ಯವಿಡೀ ಇಂತಹ ಭಯೋತ್ಪಾದಕರಿಂದ ಸುತ್ತುವರಿದಿದೆ. ಪಾಕಿಸ್ತಾನವು ಕಾಶ್ಮೀರದ ಅರಾಜಕತೆಗೆ ನೀರುಗೊಬ್ಬರ ಹಾಕುತ್ತದೆ ಎಂಬುದು ಹೊಸತೇನಲ್ಲ. ಕಾಶ್ಮೀರದಲ್ಲಿ ಕೊಲ್ಲಲ್ಪಡುತ್ತಿರುವ ಹೆಚ್ಚಿನ ಭಯೋತ್ಪಾದಕರು ಪಾಕಿಸ್ತಾನದವರೇ ಆಗಿರುತ್ತಾರೆ ಎಂಬುದು ಸತ್ಯಸಂಗತಿಯಾಗಿದೆ. ಅಂದರೆ ಭಾರತದಲ್ಲಿರುವ ಭಯೋತ್ಪಾದಕರ ಹಿಂಸಾಚಾರದ ಮೂಲವು ಪಾಕಿಸ್ತಾನದಲ್ಲಿದೆ. ನಮ್ಮ ದೇಶದ ರಕ್ಷಣೆಯ ಜವಾಬ್ದಾರಿಯು ನಮ್ಮದಾಗಿದೆ. ಬುರಹಾನ ವಾನಿಯು ಭಯೋತ್ಪಾದನಾ ವಿಚಾರಗಳಿಂದ ತುಂಬಿಹೋಗಿದ್ದನು. ಕಳೆದ ಮೂರು ವರ್ಷಗಳಿಂದ ಭಾರತದ ಸುರಕ್ಷಾ ದಳದ ಹಿಟ್‌ಲಿಸ್ಟ್‌ನಲ್ಲಿದ್ದನು. ಅವನನ್ನು ಬೆಂಬಲಿಸುವ ಕಾಶ್ಮೀರದ ನಾಗರಿಕರು ಅರಾಜಕತೆಗೆ ಬಲಿಯಾಗುತ್ತಿದ್ದಾರೆಂಬುದು ಆಶ್ಚರ್ಯದ ಸಂಗತಿಯೇನಲ್ಲ. ಇಂತಹ ಜನರ ಕೈಯಲ್ಲಿ ಭಾರತದ ಭವಿಷ್ಯವೇನಿರಬಹುದು ಎಂಬುದೇ ಈಗಿರುವ ಪ್ರಶ್ನೆಯಾಗಿದೆ. ತಮ್ಮದೇ ಸೈನಿಕರ ಜೀವದ ಮೇಲೆ ಹಲ್ಲೆ ಮಾಡುವವರಿಗೆ ದೇಶದ ಕುರಿತಾದ ಕರ್ತವ್ಯಗಳೇನೆಂದೇ ಗೊತ್ತಿಲ್ಲ. ಜವಾಬ್ದಾರ ನಾಗರಿಕರೆಂದು ಸ್ವಂತದ ಜವಾಬ್ದಾರಿಗಳೇನೆಂದು ಅವರಿಗೆ ಗೊತ್ತಿಲ್ಲ. ಇದು ಹೀಗೇಕಾಯಿತು ? ಅವರಿಗೆ ಸರಕಾರವು ಕರ್ತವ್ಯಗಳನ್ನು ಕಲಿಸಿಲ್ಲವೇ ? ಕಾಶ್ಮೀರ ರಾಜ್ಯಾಡಳಿತಕ್ಕೆ ಮೊನ್ನೆಯ ತನಕ ಕಾಂಗ್ರೆಸ್‌ನ ಬೆಂಬಲವಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಅಲ್ಲಿನ ಬಹುಸಂಖ್ಯಾತ ಮುಸಲ್ಮಾನ ಜನತೆಗೆ ಕಾಂಗ್ರೆಸ್‌ನ ವಿಷಯದಲ್ಲಿ ಅನುಕಂಪವಿದೆ. ಈ ಪಕ್ಷವು ಮುಸಲ್ಮಾನ ಜನರಿಗಾಗಿ ಸೌಮ್ಯ ನಿಲುವನ್ನು ಅವಲಂಬಿಸಿತ್ತು. ಹೀಗೆ ಮಾಡುವಾಗ ಆ ಸಮಾಜಕ್ಕೆ ಹಾನಿಯಾಗುತ್ತಿದೆ ಮತ್ತು ವಿಕಾಸದ ದೃಷ್ಟಿಯಿಂದ ಮುಂದುವರಿಯಲು ಆಗುವುದಿಲ್ಲ ಎಂಬ ವಿಷಯದತ್ತ ಕಾಂಗ್ರೆಸ್ ಯಾವತ್ತೂ ಗಮನ ಹರಿಸಲಿಲ್ಲ. ಮುಸಲ್ಮಾನ ಸಮಾಜವನ್ನು ಅತಿಯಾಗಿ ಓಲೈಸಲಾಯಿತು. ಅದಕ್ಕೆ ತನ್ನ ಭವಿಷ್ಯದ ಕುರಿತು ಚಿಂತೆಯೆನಿಸುವುದು ದೂರದ ಮಾತಾಯಿತು. ಅದು ಸ್ವೇಚ್ಛಾಚಾರಿಯಾಯಿತು. ಆ ಸ್ವೇಚ್ಛಾಚಾರದ ಭಾಗ ಅಂದರೆ ಶಿಸ್ತುಬದ್ಧವಾಗಿ ಅವರಿಂದ ನಮ್ಮ ಸೈನಿಕರ ಮೇಲಾಗುತ್ತಿರುವ ಕಲ್ಲೆಸೆತಗಳು. ಈ ಕಲ್ಲೆಸೆತವು ಈಗ ಅಮರನಾಥ ಯಾತ್ರೆಗೆ ಹೋಗುವ ಹಿಂದೂ ಭಕ್ತರತ್ತ ಹೊರಳಿದೆ ಮತ್ತು ನಿರಂತರವಾಗಿ ನಡೆಯುತ್ತಿದೆ. ಇಂದು ಅಮರನಾಥ ಯಾತ್ರೆಗಾಗಿ ಜಗತ್ತಿನಾದ್ಯಂತದಿಂದ ಹಿಂದೂಗಳು ಬಂದಿದ್ದಾರೆ ಮತ್ತು ಮತಾಂಧರ ಹಿಂಸಾಚಾರಕ್ಕೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಹಿಂದೂ ರಾಷ್ಟ್ರ ಅರ್ಥಾತ್ ಸನಾತನ ಧರ್ಮರಾಜ್ಯ ಸ್ಥಾಪನೆಯೇ ಪರ್ಯಾಯವಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪರ್ಯಾಯದ ಹುಡುಕಾಟದಲ್ಲಿ