ಗೋಮಾತೆ ಸಂಪೂರ್ಣ ವಿಶ್ವದ ತಾಯಿಯಾಗಿದ್ದಾಳೆ

ಗೋಮಾತೆಯ ಬೆನ್ನುಹುರಿಯಲ್ಲಿ, ಕೋಡುಗಳಿಂದ ಬಾಲದ ವರೆಗೆ ‘ಸೂರ್ಯಕೇತು’ ಎಂಬ ಹೆಸರಿನ ಒಂದು ವೈಶಿಷ್ಟ್ಯಪೂರ್ಣ ನಾಡಿಯಿರುತ್ತದೆ. ಗೋಮಾತೆ ತನ್ನ ಕೋಡುಗಳ ಮೂಲಕ ಸೂರ್ಯನ ಇಂಧನ ಹೀರುತ್ತಾಳೆ ಮತ್ತು ಅದನ್ನು ಸೂರ್ಯಕೇತು ನಾಡಿಯ ಮೂಲಕ ಪ್ರವಹಿಸುತ್ತಾಳೆ. ಸೂರ್ಯನಿಂದ ಸಿಗುವ ಇಂಧನದಲ್ಲಿ ಎರಡು ವಿಧಗಳಿವೆ - ಕ್ರಿಯಾ ಇಂಧನ ಮತ್ತು ಪ್ರಜ್ಞಾ ಇಂಧನ. ಕ್ರಿಯಾ ಇಂಧನವು ಗತಿ ನೀಡುವುದಾಗಿದ್ದರೆ, ಪ್ರಜ್ಞಾ ಇಂಧನವು ವಿಚಾರಶಕ್ತಿ ನೀಡುವುದಾಗಿದೆ. ಮೆಲುಕು ಹಾಕುವಾಗ ಗೋಮಾತೆಯು ಸೂರ್ಯನಿಂದ ದೊರೆಯುವ ಈ ಎರಡೂ ವಿಧದ ಇಂಧನಗಳನ್ನು ಜಗಿಯುತ್ತಿರುವ ಆಹಾರದಲ್ಲಿ ಸೇರಿಸುತ್ತಾಳೆ. ಔಷಧಿ ವನಸ್ಪತಿಗಳ ರಸ, ಕ್ರಿಯಾ ಇಂಧನ ಮತ್ತು ಪ್ರಜ್ಞಾ ಇಂಧನ ಈ ಮೂರೂ ಸಂಯೋಗವಾಗಿ ಒಂದು ಅಮೃತ ಗೋಮಾತೆಯ ಉದರವನ್ನು ಪ್ರವೇಶಿಸುತ್ತದೆ. ಅಲ್ಲಿ ಎಲ್ಲ ಜೀರ್ಣಕ್ರಿಯೆ ಪೂರ್ಣಗೊಂಡ ನಂತರ ಈ ಅಮೃತವು ಮೂರು ಭಾಗಗಳಲ್ಲಿ ವಿಭಜನೆಯಾಗುತ್ತದೆ - ಪೃಥ್ವಿಯ ಪೋಷಣೆಗಾಗಿ ಗೋಮಯ (ಸೆಗಣಿ), ವಾಯುಮಂಡಲದ ಪೋಷಣೆಗಾಗಿ ಗೋಮೂತ್ರ ಹಾಗೂ ಜೀವಗಳ, ಮುಖ್ಯತಃ ಮಾನವನ ಪೋಷಣೆಗಾಗಿ ಹಾಲು. ಈ ರೀತಿಯಲ್ಲಿ ಗೋಮಾತೆಯಿಂದ ಸಂಪೂರ್ಣ ಸೃಷ್ಟಿಯ ಪೋಷಣೆಯಾಗುತ್ತಿರುವುದರಿಂದ ‘ಗಾವೋ ವಿಶ್ವಸ್ಯ ಮಾತರಃ ’ ಅಂದರೆ ‘ಹಸು ಸಂಪೂರ್ಣ ವಿಶ್ವದ ತಾಯಿಯಾಗಿದ್ದಾಳೆ’ ಎಂದು ವಿಷ್ಣುಧರ್ಮೋತ್ತರ ಪುರಾಣದಲ್ಲಿ ಹೇಳಲಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗೋಮಾತೆ ಸಂಪೂರ್ಣ ವಿಶ್ವದ ತಾಯಿಯಾಗಿದ್ದಾಳೆ