ಗುರುವರ್ಣನೆಗೆ ವಾಣಿ ಅಸಮರ್ಥವಾಗಿದೆ : ಈ ಜಗತ್ತಿನಲ್ಲಿ ‘ಗುರುಗಳಿಗೆ ಉಪಮೆಯನ್ನು ಕೊಡಲು ಯೋಗ್ಯವಾಗಿರುವ ಬೇರೆ ಯಾವ ವಸ್ತುವೂ ಇಲ್ಲ. ಗುರುಗಳು ಸಾಗರದಂತಿದ್ದಾರೆ ಎಂದೆನಿಸಿದರೆ ಸಾಗರವು ಉಪ್ಪುಳ್ಳದ್ದಾಗಿದೆ; ಆದರೆ ಗುರುಗಳು ಎಲ್ಲ ರೀತಿಯಲ್ಲಿಯೂ ಸಿಹಿಯಾಗಿರುತ್ತಾರೆ. ಸಾಗರದಲ್ಲಿ ಉಬ್ಬರ-ಇಳಿತವಿರುತ್ತದೆ; ಆದರೆ ಸದ್ಗುರುಗಳ ಆನಂದವು ಅಖಂಡವಾಗಿರುತ್ತದೆ. ಸದ್ಗುರುಗಳು ಕಲ್ಪವೃಕ್ಷದಂತೆ ಇದ್ದಾರೆ ಎಂದೆನಿಸಿದರೆ ಕಲ್ಪವೃಕ್ಷವು ನಾವು ಕಲ್ಪನೆ ಮಾಡಿದ್ದನ್ನು ಮಾತ್ರ ಕೊಡುತ್ತದೆ; ಆದರೆ ಸದ್ಗುರುಗಳು ಶಿಷ್ಯನ ಕಲ್ಪನೆಗಳನ್ನೇ ಬುಡಸಮೇತ ನಾಶ ಮಾಡಿ ಅವನಿಗೆ ಕಲ್ಪನಾತೀತವಾಗಿರುವಂತಹ ವಸ್ತುವಿನ ಪ್ರಾಪ್ತಿಯನ್ನು ಮಾಡಿ ಕೊಡುತ್ತಾರೆ. ಆದ್ದರಿಂದ ಗುರುಗಳ ಗುಣವರ್ಣನೆ ಮಾಡಲು ಈ ವಾಣಿಯು ಅಸಮರ್ಥವಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !