ಮೃತರ ಸಂಬಂಧಿಕರು ಬೊಟ್ಟು ಮಾಡುವವರ ತನಿಖೆ ಮಾಡುತ್ತೀರಾ ? - ಉಚ್ಚ ನ್ಯಾಯಾಲಯ

ಡಾ. ದಾಭೋಳಕರ್ ಮತ್ತು ಕಾ. ಪಾನ್ಸರೆ ಕೊಲೆ ಪ್ರಕರಣ
ಮುಂಬಯಿ ಉಚ್ಚ ನ್ಯಾಯಾಲಯದಿಂದ ತನಿಖಾ ದಳದ ವಿರುದ್ಧ ಛೀಮಾರಿ
  • ನ್ಯಾಯಾಲಯದ ಈ ನಿಂದನೆಯಿಂದ ತನಿಖಾ ದಳದವರ ತನಿಖೆ ಮತ್ತು ಕಾರ್ಯಪದ್ಧತಿ ಹೇಗಿದೆಯೆಂಬುದು ಅರಿವಾಗುತ್ತದೆ. ಮಾಲೆಗಾವ್ ಬಾಂಬ್ ಸ್ಫೋಟ ಪ್ರಕರಣದಲ್ಲಿಯೂ ಇಂತಹ ಕಾರ್ಯಪದ್ಧತಿ ಉಪಯೋಗಿಸಿ ಅಮಾಯಕ ಹಿಂದೂಗಳಿಗೆ ಉಗ್ರರೆಂಬ ಹಣೆಪಟ್ಟಿ ಕಟ್ಟಲಾಯಿತು !
  • ನ್ಯಾಯಾಲಯ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಬೇಕೆಂಬುದೇ ನ್ಯಾಯಪ್ರೇಮಿ ನಾಗರಿಕರ ಅಪೇಕ್ಷೆಯಾಗಿದೆ !
ಮುಂಬಯಿ : ಡಾ. ದಾಭೋಳಕರ್ ಮತ್ತು ಕಾ. ಪಾನ್ಸರೆ ಕೊಲೆ ಪ್ರಕರಣದ ತನಿಖೆ ಮುಂಬಯಿ ಉಚ್ಚ ನ್ಯಾಯಾಲಯದ ಮುಂದಾಳತ್ವದಲ್ಲಿ ನಡೆಯುತ್ತಿದ್ದು ಅದರ ಆಲಿಕೆ ಜೂನ್ ೨೨ ರಂದು ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಎಸ್. ಸಿ. ಧರ್ಮಾಧಿಕಾರಿ ಮತ್ತು ನ್ಯಾಯಾಧೀಶ ಶಾಲಿನಿ ಫಣಸಳಕರ್-ಜೋಶಿ ಇವರ ವಿಭಾಗೀಯ ಪೀಠದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಉಚ್ಚ ನ್ಯಾಯಾಲಯ ‘ಮೃತರ ಸಂಬಂಧಿಕರು ಯಾರ ಕಡೆಗೆ ಬೊಟ್ಟು ಮಾಡುತ್ತಾರೋ, ಅವರ ತನಿಖೆ ಮಾಡುವಿರಾ’, ಎಂದು ಕಟು ಶಬ್ದಗಳಲ್ಲಿ ತನಿಖಾ ದಳದವರಿಗೆ ಛೀಮಾರಿ ಹಾಕಿ ಖೇದ ವ್ಯಕ್ತಪಡಿಸಿತು. ಅದೇ ರೀತಿ ಪದೇ ಪದೇ ಪ್ರಸಾರಮಾಧ್ಯಮಗಳಿಗೆ ಹೋಗಿ ಮಾಹಿತಿ ನೀಡಬೇಡಿ, ಎಂದು ದಾಭೋಳಕರ್ ಮತ್ತು ಪಾನ್ಸರೆ ಕುಟುಂಬದವರ ಕಿವಿ ಹಿಂಡಿತು. ಅದೇ ರೀತಿ ಸರಕಾರಿ ವಕೀಲರು ಪ್ರಸಾರ ಮಾಧ್ಯಮಗಳೊಂದಿಗೆ ಮಾತನಾಡಬಾರದು, ಎಂದು  ಗದರಿಸಿದೆ. ನ್ಯಾಯಾಲಯದಿಂದ ತೀರ್ಪು ಸಿಗುವವರೆಗೆ ಪಾನ್ಸರೆ ಪ್ರಕರಣದ ತನಿಖೆ ರಾಜ್ಯದ ತನಿಖಾ ದಳವೇ ಮಾಡಬೇಕೆಂದು ಹೇಳಿತು. ತನಿಖೆಯ ವರದಿ ನೀಡಲು ಉಚ್ಚ ನ್ಯಾಯಾಲಯ ತನಿಖಾ ದಳಕ್ಕೆ ೬ ವಾರಗಳ ಗಡವು ನೀಡಿತು.
ನ್ಯಾಯಾಲಯದ ತೀರ್ಪು ಸಿಗುವವರೆಗೆ ಪಾನ್ಸರೆ ಪ್ರಕರಣದ ತನಿಖೆ ರಾಜ್ಯದ
ತನಿಖಾ ದಳವೇ ಮಾಡಬೇಕು ! - ನ್ಯಾಯಾಲಯ
ಈ ಸಂದರ್ಭದಲ್ಲಿ  ಕೊಲ್ಹಾಪುರದ ಪೊಲೀಸರೂ ಆಲಿಕೆಗೆ ಉಪಸ್ಥಿತರಿದ್ದರು. ಕಾ. ಪಾನ್ಸರೆ ಹತ್ಯೆಯ ತನಿಖೆಯನ್ನೂ ಸಿಬಿಐಗೆ ಕೊಡಬೇಕೆಂಬ ವಿಷಯವನ್ನು ಪೊಲೀಸರು ಮಂಡಿಸಿದಾಗ ಉಚ್ಚ ನ್ಯಾಯಾಲಯ ಇದನ್ನು ಟೀಕಿಸಿ, ಆಮೇಲೆ ನಿಮಗೆ ಒಳ್ಳೆಯದೇ ಆಯಿತು, ನಿಮ್ಮ ಹೆಗಲ ಮೇಲಿನ ಭಾರ ಅವರ ಹೆಗಲ ಮೇಲೆ ಹೋಗುತ್ತದೆ, ಎಂದಿತು. ವಿಭಾಗೀಯ ಪೀಠವು ಆದೇಶವನ್ನು ಜಾರಿ ಮಾಡುವಾಗ, ಸರಕಾರದ ನಿರ್ಣಯ ಆಗುವರೆಗೆ  ರಾಜ್ಯದ ವ್ಯವಸ್ಥೆಯೇ ತನಿಖೆ ಮುಂದುವರಿಸಬೇಕು, ಒಂದು ವೇಳೆ ಸರಕಾರ ಈ ತನಿಖೆಯನ್ನು ಸಿಬಿಐಗೆ ಒಪ್ಪಿಸುವ ನಿರ್ಣಯ ಮಾಡಿದರೆ, ಅದರ ಕಾರಣಸಹಿತ ವರದಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು, ಎಂದಿತು. ಅರ್ಜಿದಾರರ ವಕೀಲ ನೆವಗಿ ಇವರು ಸಹ ಪಾನ್ಸರೆ ಕೊಲೆಯ ತನಿಖೆಯನ್ನು ಸಿಬಿಐಗೆ ಒಪ್ಪಿಸ ಬೇಕೆಂದು ವಿನಂತಿಸಿದ್ದಾರೆ, ಎಂದು ಹೇಳಿದಾಗ ನ್ಯಾಯಾಲಯ ತನಿಖೆಯನ್ನು ಹಸ್ತಾಂತರ ಮಾಡುವ ವಿಷಯದಲ್ಲಿ ನೀವೇನೂ ಹೇಳಬೇಡಿ, ಎಂದು ಹೇಳಿತು ಹಾಗೂ ಮೃತರ ಕುಟುಂಬದವರು ಇನ್ನೂ ಪ್ರಸಾರಮಾಧ್ಯಮದ ಮುಂದೆ ಹೋಗುವರೇ ? ಎಂದು ವಿಚಾರಿಸಿದಾಗ ನೆವಗಿಯವರು ನಾನು ಕಾಳಜಿ ವಹಿಸುತ್ತೇನೆ, ಎಂದು ಹೇಳಿದರು.
ನ್ಯಾಯಾಲಯ ತನಿಖಾ ದಳಕ್ಕೆ ಹಾಕಿದ ಛೀಮಾರಿ !
೧.ತನಿಖಾ ದಳವು ಗೌಪ್ಯವೆಂದು ನಮಗೆ ನೀಡಿದ ವರದಿ ಮೊದಲೇ ಮಾಧ್ಯಮಗಳಲ್ಲಿ ಪ್ರಸಿದ್ಧವಾಗಿದೆ. ತನಿಖೆಯ ಹೆಸರಿನಲ್ಲಿ ಇದೇನು ನಡೆದಿದೆ ?
೨. ಮೃತರ ಸಂಬಂಧಿಕರು ಮತ್ತು ತನಿಖೆ ಮಾಡುವ ಅಧಿಕಾರಿ ಚರ್ಚಿಸಿ ತನಿಖೆಯ ದೃಷ್ಟಿಕೋನ ನಿರ್ಧರಿಸುತ್ತಾರಾ ? ಇವೆಲ್ಲಕ್ಕೂ ನಿಮ್ಮ ಮುಖ್ಯ ಅಧಿಕಾರಿಯೇ ಹೊಣೆಯಾಗಿದ್ದಾರೆಯೇ? ಮೃತ ವ್ಯಕ್ತಿಯ ಸಂಬಂಧಿಕರು ಯಾರತ್ತ ಬೆರಳು ತೋರಿಸುವರು ಅವರ ತನಿಖೆ ಮಾಡುವಿರಾ? ನಾಳೆ  ಮೃತರ ಸಂಬಂಧಿಕರು ಕೊಲೆಗಾರ ಸಿಗದಿದ್ದರೂ ಸರಿ, ಎಂದು ಹೇಳಿದರೆ ನೀವು ತನಿಖೆ ನಿಲ್ಲಿಸುವಿರಾ ?
೩. ಈ ಪ್ರಕರಣದಲ್ಲಿ ಸಾಕ್ಷಿದಾರರ ಹೆಸರು ಬಹಿರಂಗ ವಾಯಿತು. ಇದು ಹೇಗಾಯಿತು ? ನಿಮ್ಮ ಗೌಪ್ಯತೆಯ ಸಾಕ್ಷಿದಾರ ವಾರ್ತಾವಾಹಿನಿಗಳಿಗೆ ಸಂದರ್ಶನ ಹೇಗೆ ನೀಡುತ್ತಾನೆ ? ಇದು ಚಲನಚಿತ್ರದ ಸಂಹಿತೆ ಬರೆಯುವಾಗ ಆಗಲು ಸಾಧ್ಯವಿದೆ, ವಿಚಾರಣೆಯಲ್ಲಿ ಸಾಧ್ಯವಿಲ್ಲ. ಎಲ್ಲ ಮಾಹಿತಿ ಹೊರಗೆ ಬಂದಿದೆ. ಆದ್ದರಿಂದ ನಾವು ಹೇಳುವಂತಹ ವಿಷಯವೇನೂ ಬಾಕಿ ಇಲ್ಲ. ಮಾಹಿತಿ ಹೊರಗೆ ಬರುವುದರಿಂದ ಪಲಾಯನ ಗೈದಿರುವ ಆರೋಪಿಗಳಿಗೆ ಎಲ್ಲ ತಿಳಿಯುತ್ತದೆ.
೪. ನಿಮಗೆ ತನಿಖೆ ಮಾಡಲಿಕ್ಕಿದೆಯೇ ಅಥವಾ ಅದನ್ನು ಸರ್ವನಾಶಗೊಳಿಸಲಿಕ್ಕಿದೆ? ಹೀಗೆಯೇ ನಡೆಯುತ್ತಿದ್ದರೆ, ನಾವು ಈ ತನಿಖೆಯ ನಿಯಂತ್ರಣವನ್ನು ನಿಲ್ಲಿಸುವೆವು.

ವಾರ್ತಾವಾಹಿನಿಗಳ ಹಳದಿಪತ್ರಿಕೋದ್ಯಮ !
ಕೆಲವು ವಾಹಿನಿಗಳಲ್ಲಿ ಮುಂಬಯಿ ಉಚ್ಚನ್ಯಾಯಾಲಯ ನಿಂದಿಸಿದ ವಿಷಯದ ವಾರ್ತೆಯನ್ನು ಸಂಕ್ಷಿಪ್ತದಲ್ಲಿ ತೋರಿಸಲಾಗಿದೆ ಹಾಗೂ ಕೆಲವು ಇದರಲ್ಲಿನ ಮಹತ್ವದ ವಿಷಯಗಳನ್ನು ಉದ್ದೇಶಪೂರ್ವಕ ತೋರಿಸಲಿಲ್ಲ. (ಈ ಪ್ರಕರಣದಲ್ಲಿ ನಿರಂತರ ಸನಾತನದ ವಿರುದ್ಧ ದ್ವೇಷಕಾರುವ ಪ್ರಸಾರಮಾಧ್ಯಮಗಳಿಂದ ಈ ರೀತಿ ವಾರ್ತಾಂಕನ ಆಗುವುದರಲ್ಲಿ ಆಶ್ಚರ್ಯವೇನಿಲ್ಲ ! - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮೃತರ ಸಂಬಂಧಿಕರು ಬೊಟ್ಟು ಮಾಡುವವರ ತನಿಖೆ ಮಾಡುತ್ತೀರಾ ? - ಉಚ್ಚ ನ್ಯಾಯಾಲಯ