ಗುರು-ಶಿಷ್ಯ ಸಂಬಂಧದ ಬಗೆಗಿನ ದೃಷ್ಟಿಕೋನ

೧. ‘ಒಮ್ಮೆ ಶ್ರೀ ರಾಮಕೃಷ್ಣರು ಓರ್ವ ಮಹಾತ್ಮರ ಕೀರ್ತಿಯನ್ನು ಕೇಳಿ ಅವರನ್ನು ಭೇಟಿಯಾಗಲು ಹೋದರು. ಅವರನ್ನು ಭೇಟಿಯಾಗಿ ಅವರಿಗೆ ಬಹಳ ಸಂತೋಷವಾಯಿತು; ಆದರೆ ಕೊನೆಗೆ ಆ ಮಹಾತ್ಮರು ‘ಇಂದಿನವರೆಗೆ ನನಗೆ ಎಂಟು ಸಾವಿರ ಶಿಷ್ಯರಾಗಿದ್ದಾರೆ’ ಎಂದರು. ಅದನ್ನು ಕೇಳಿದ ನಂತರ ಶ್ರೀ ರಾಮಕೃಷ್ಣರು ತಲೆತಗ್ಗಿಸಿ ಅಲ್ಲಿಂದ ಹೊರಟು ಬಂದರು. ನಂತರ ಅವರು ಹೀಗೆ ಹೇಳಿದರು, ‘ಅವರು ಶ್ರೇಷ್ಠರಾಗಿದ್ದಾರೆ. ಆ ಕೊನೆಯ ಒಂದು ವಾಕ್ಯವನ್ನು ನುಡಿಯದಿದ್ದರೆ ಚೆನ್ನಾಗಿರುತ್ತಿತ್ತು; ಏಕೆಂದರೆ ಯಾರು ಯಾರಿಗೆ ಶಿಷ್ಯತ್ವವನ್ನು ಕೊಡುವರು ? ಎಲ್ಲವೂ ಒಂದೇ ಆಗಿರುವಾಗ ಎರಡನೇಯದರ ಪ್ರಶ್ನೆ ಎಲ್ಲಿ  ಬರುತ್ತದೆ ? ಇದೇ ತಿಳಿಯ ದಿದ್ದರೆ, ಆ ಜ್ಞಾನದಿಂದ ಲಾಭವೇನು ?’
೨. ‘ನನ್ನ ಪದವಿಯ ಮೇಲೆ ಇತರರು ಬರಬೇಕು’ ಎಂದು ಯಾರಿಗೆ ಅನಿಸುತ್ತದೆ ? ಆದರೆ ‘ಶಿಷ್ಯಾತ್ ಇಚ್ಛೇತ್ ಪರಾಜಯಮ್ ’ ಅಂದರೆ ಗುರುಗಳು ಶಿಷ್ಯನಿಂದ ಪರಾಜಯವಾಗುವ ಇಚ್ಛೆಯನ್ನು ಇಟ್ಟುಕೊಳ್ಳುತ್ತಾರೆ ಎಂಬ ವ್ಯಾಸವಚನವಿದೆ; ಆದುದರಿಂದ ಗುರುಪದವಿಯು ಬಹಳ ಶ್ರೇಷ್ಠವಾಗಿದೆ. ಅದಕ್ಕಿಂತ ದೊಡ್ಡದು ಬೇರೆ ಏನೂ ಇಲ್ಲ.’ - ಪ.ಪೂ. ಕಾಣೇ ಮಹಾರಾಜರು, ನಾರಾಯಣಗಾಂವ, ಪುಣೆ ಜಿಲ್ಲೆ, ಮಹಾರಾಷ್ಟ್ರ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗುರು-ಶಿಷ್ಯ ಸಂಬಂಧದ ಬಗೆಗಿನ ದೃಷ್ಟಿಕೋನ