ಗೋವಾದ ರಾಮನಾಥಿಯಲ್ಲಿ ಪಂಚಮ ಅಖಿಲ ಭಾರತೀಯ ಹಿಂದೂ ಅಧಿವೇಶನ

ಚಿತ್ರದಲ್ಲಿ ಎಡದಿಂದ ಪೂ. (ಕು.) ಅನುರಾಧಾ ವಾಡೇಕರ್, ಪೂ. ತನುಜಾ ಠಾಕೂರ್,
ಪೂ. ಚಾರುದತ್ತ ಪಿಂಗಳೆ, ದೀಪಪ್ರಜ್ವಲನೆ ಮಾಡುತ್ತಿರುವ ಮಹಂತ ಇಚ್ಛಾಗಿರಿ ಮಹಾರಾಜ,
ಪೂ. ಸ್ವಾಮಿ ದಿವ್ಯ ಜೀವನದಾಸ ಮಹಾರಾಜ
ರಾಮನಾಥಿ (ಗೋವಾ) : ಹಿಂದೂ ರಾಷ್ಟ್ರದ (ಸನಾತನ ಧರ್ಮ ರಾಜ್ಯದ) ಸ್ಥಾಪನೆಗಾಗಿ ಜೂನ್ ೧೯ ರಂದು ಮುಂಜಾನೆ ಸಂತರ ಉಪಸ್ಥಿತಿ ಮತ್ತು ವೇದಮಂತ್ರಗಳ ಘೋಷಣೆಯಲ್ಲಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿರುವ ಪಂಚಮ ಅಖಿಲ ಭಾರತೀಯ ಹಿಂದೂ ಅಧಿವೇಶನ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಸನಾತನದ ಸಂತರಾದ ಪೂ.(ಕು.) ಅನುರಾಧಾ ವಾಡೇಕರ, ವೈದಿಕ ಉಪಾಸನಾ ಪೀಠದ ಪೂ. ತನುಜಾ ಠಾಕೂರ, ಗುಜರಾತಿನ ಪೂ. ಸ್ವಾಮಿ ದಿವ್ಯಜೀವನದಾಸ ಮಹಾರಾಜರು ಮತ್ತು ತುಳಜಾಪೂರ, ಮಹಾರಾಷ್ಟ್ರದ ಪಂಚದಶನಾಮ ಜುನಾ ಆಖಾಡಾದು ಮಹಂತರಾದ ಇಚ್ಛಾಗಿರಿ ಮಹಾರಾಜರು ಹಾಗೂ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಪೂ. ಡಾ. ಚಾರುದತ್ತ ಪಿಂಗಳೆ ಇವರ ಹಸ್ತದಿಂದ ದೀಪಪ್ರಜ್ವಲನಗೊಳಿಸಲಾಯಿತು. ಈ ಅಧಿವೇಶನದಲ್ಲಿ ಭಾರತಾದ್ಯಂತ ೨೨ ರಾಜ್ಯಗಳ ಸಹಿತ ನೇಪಾಳ, ಶ್ರೀಲಂಕಾದ ೧೬೧ ಕ್ಕಿಂತ ಅಧಿಕ ಹಿಂದುತ್ವನಿಷ್ಠ ಸಂಘಟನೆಗಳ ೪೦೦ ಕ್ಕಿಂತ ಅಧಿಕ ಪ್ರತಿನಿಧಿಗಳು ಉಪಸ್ಥಿತರಿದ್ದಾರೆ. ಈ ಸಂದರ್ಭದಲ್ಲಿ ಸಂತರು ಮತ್ತು ಮಹನೀಯರು ಹಿಂದೂಗಳಿಗೆ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕಟಿಬದ್ಧರಾಗುವಂತೆ ಕರೆ ನೀಡಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗೋವಾದ ರಾಮನಾಥಿಯಲ್ಲಿ ಪಂಚಮ ಅಖಿಲ ಭಾರತೀಯ ಹಿಂದೂ ಅಧಿವೇಶನ