ಧ್ವನಿಮುದ್ರಿಕೆಗಳ (ಆಡಿಯೋ ಸಿಡಿ) ಮತ್ತು ಧ್ವನಿಚಿತ್ರ-ಮುದ್ರಿಕೆಗಳ (ವಿಸಿಡಿ) ನಿರ್ಮಿತಿ !

ದೂರಚಿತ್ರವಾಹಿನಿಗಳಿಗಾಗಿ ‘ಧರ್ಮಸತ್ಸಂಗ ಮಾಲಿಕೆ’ಗಳ ಧ್ವನಿಚಿತ್ರಮುದ್ರಿಕೆಗಳು (ವಿಸಿಡಿ)
ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ‘ಈಶ್ವರ ಪ್ರಾಪ್ತಿಗಾಗಿ ಸಾಧನೆ’(ಒಟ್ಟು ೧೬೫ ಭಾಗ) ಮತ್ತು ‘ಧಾರ್ಮಿಕ ಕೃತಿಗಳ ಹಿಂದಿನ ಶಾಸ್ತ್ರ’(ಒಟ್ಟು ೨೦೨ ಭಾಗ) ಎಂಬ ಧರ್ಮಸತ್ಸಂಗ ವಾಹಿನಿಗಳಲ್ಲಿ ಪ್ರಸಾರ ಮಾಡಲು ತಯಾರಿಸಲಾಗಿದೆ. ಈ ಧರ್ಮಸತ್ಸಂಗ ಮಾಲಿಕೆಗಳನ್ನು ೩ ರಾಷ್ಟ್ರೀಯ ದೂರಚಿತ್ರವಾಹಿನಿಗಳಲ್ಲಿ ಹಾಗೂ ೧೦೦ ಕ್ಕಿಂತಲೂ ಹೆಚ್ಚು ಸ್ಥಳೀಯ ದೂರಚಿತ್ರವಾಹಿನಿಗಳಲ್ಲಿ ಬಿತ್ತರಿಸಲಾಗಿದೆ.
ಸದ್ಯ ಅವರ ಮಾರ್ಗದರ್ಶನದಲ್ಲಿ ಹಿಂದೂ ಧರ್ಮ ಮತ್ತು ಸಂಸ್ಕೃತಿಯಲ್ಲಿನ ಆಚಾರ-ವಿಚಾರಗಳ ಮಹತ್ವ, ಭಾರತೀಯ ಭಾಷೆಗಳ ಆಧ್ಯಾತ್ಮಿಕ ಮಹತ್ವ, ಭಾರತದಲ್ಲಿನ ತೀರ್ಥಕ್ಷೇತ್ರಗಳು, ದೇವಸ್ಥಾನಗಳು, ಸಂತರ ಮಠಗಳು, ಸಂತರ ಸಮಾಧಿಸ್ಥಳಗಳು, ಐತಿಹಾಸಿಕ ಸ್ಥಳಗಳು ಇತ್ಯಾದಿಗಳ ಮಹಾತ್ಮೆ ಹಾಗೂ ಆಧ್ಯಾತ್ಮಿಕ ಸಂಶೋಧನೆ, ಕೆಟ್ಟ ಶಕ್ತಿಗಳ ತೊಂದರೆಗಳಿಗೆ ಉಪಾಯ ಇತ್ಯಾದಿಗಳ ವಿಷಯದಲ್ಲಿ ಸಾವಿರಾರು ಧ್ವನಿಚಿತ್ರ-ಮುದ್ರಿಕೆಗಳನ್ನು (ವಿಸಿಡಿ) ತಯಾರಿಸಲಾಗಿದೆ.
ಸಾಧನೆಗಾಗಿ ಉಪಯುಕ್ತವಿರುವ ಧ್ವನಿ-ಮುದ್ರಿಕೆಗಳು (ಆಡಿಯೋ ಸಿಡಿ)
ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ‘ಸಾಧನೆ’, ‘ಅಧ್ಯಾತ್ಮದ ವಿಷಯದಲ್ಲಿ ಸಂದೇಹ ನಿವಾರಣೆ’, ‘ದೇವತೆಗಳ ನಾಮಜಪದ ಯೋಗ್ಯ ಪದ್ಧತಿ’, ‘ಆರತಿ’, ‘ಕ್ಷಾತ್ರಗೀತೆ’ ಮುಂತಾದ ವಿಷಯಗಳಲ್ಲಿನ ಧ್ವನಿ-ಮುದ್ರಿಕೆಗಳನ್ನು (ಆಡಿಯೋ ಸಿಡಿ) ಸಹ ನಿರ್ಮಿಸಲಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಧ್ವನಿಮುದ್ರಿಕೆಗಳ (ಆಡಿಯೋ ಸಿಡಿ) ಮತ್ತು ಧ್ವನಿಚಿತ್ರ-ಮುದ್ರಿಕೆಗಳ (ವಿಸಿಡಿ) ನಿರ್ಮಿತಿ !