ಉತ್ತರಪ್ರದೇಶದ ಕೈರಾನಾದಲ್ಲಿ ಬಹುಸಂಖ್ಯಾತ ಮತಾಂಧರ ದೌರ್ಜನ್ಯದಿಂದ ೩೪೬ ಹಿಂದೂ ಕುಟುಂಬಗಳ ವಲಸೆ !

ಇಡೀ ದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾದರೆ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಹೇಗಿದೆಯೋ, ಅದೇ ಸ್ಥಿತಿ ಭಾರತದಲ್ಲಿಯೂ ಆಗುವುದು, ಎಂಬುದನ್ನು ಹಿಂದೂಗಳು ಗಮನದಲ್ಲಿಡಬೇಕು !
ಉತ್ತರಪ್ರದೇಶ ಇನ್ನೊಂದು ಕಾಶ್ಮೀರವಾಗುವ ಮಾರ್ಗದಲ್ಲಿ !ಸ್ವಾತಂತ್ರ್ಯವೀರ ಸಾವರಕರರು ಹೀಗೆಂದಿದ್ದರು, ಹಿಂದೂಗಳು ಅಲ್ಪಸಂಖ್ಯಾತರಿದ್ದಲ್ಲಿ ಮತಾಂಧರಿಂದ ಅವರ ಮೇಲೆ ದಾಳಿಯಾದರೆ, ಮತಾಂಧರು ಅಲ್ಪಸಂಖ್ಯಾತರಿರುವಲ್ಲಿ ಬಹುಸಂಖ್ಯಾತ ಹಿಂದೂಗಳು ಅವರಿಗೆ ಪಾಠ ಕಲಿಸಿದರೆ ಮಾತ್ರ ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆಯಾಗುವುದು !
ಲಕ್ಷ್ಮಣಪುರಿ (ಲಖ್ನೌ) : ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನಾ ವಿಧಾನಸಭಾ ಕ್ಷೇತ್ರದಲ್ಲಿ ಮತಾಂಧರ ದೌರ್ಜನ್ಯದಿಂದ ಕಳೆದ ೨ ವರ್ಷಗಳಲ್ಲಿ ೩೪೬ ಹಿಂದೂ ಕುಟುಂಬಗಳು ವಲಸೆ ಹೋಗಿವೆ. ಹಿಂದೆ ಇಲ್ಲಿ ಶೇ. ೫೪ ರಷ್ಟು ಮುಸಲ್ಮಾನರಿದ್ದರು, ಈಗ ಶೇ. ೯೨ ರಷ್ಟಾಗಿದ್ದಾರೆ, ಎಂದು ಝಿ ನ್ಯೂಸ್ ವಾರ್ತಾವಾಹಿನಿಯಲ್ಲಿ ಪ್ರಸಾರವಾಗಿದೆ. ಈ ವಿಷಯದಲ್ಲಿ ಶಾಮ್ಲಿಯ ಭಾಜಪದ ಸಂಸದ ಹುಕುಂ ಸಿಂಹ ಇವರು ಹೇಳಿಕೆ ನೀಡಿದ್ದಾರೆ. ಶಾಮ್ಲಿ ನಗರಪಾಲಿಕೆಯ ಸಭಾಗೃಹದಲ್ಲಿ ಪತ್ರಕರ್ತರೊಂದಿಗೆ ಮಾತನಾಡುವಾಗ ಸಂಸದ ಹುಕುಂ ಸಿಂಹ ಇವರು ಈ ಮುಂದಿನಂತೆ ಹೇಳಿದ್ದಾರೆ -
೧. ಕೈರಾನಾದಿಂದ ೩೪೬ ಹಿಂದೂ ಕುಟುಂಬ ಗಳು ಪಲಾಯನಗೈದಿದ್ದರೆ, ಉಳಿದ ಹಿಂದೂಗಳು ಜೀವ ಭಯದಿಂದ ಜೀವಿಸುತ್ತಿದ್ದಾರೆ.
೨. ಈ ಹಿಂದೆ ಕೇವಲ ೨೫೦ ಹಿಂದೂ ಕುಟುಂಬ ಗಳು ಪಲಾಯನಗೈದಿರುವ ಮಾಹಿತಿ ಇತ್ತು; ಆದರೆ ಈಗ ಅದು ಹೆಚ್ಚಳವಾಗಿದೆ. ಪಲಾಯನ ಗೈದಿರುವ ಹಿಂದೂ ಕುಟುಂಬಗಳ ಪಟ್ಟಿ ಮಾಡಲಾಗಿದೆ.
೩. ಈ ಹಿಂದೂಗಳಿಂದ ಯಾವಾಗಲೂ ಬೆದರಿಸಿ ಹಣ ಕೀಳುತ್ತಿದ್ದರು. ಹಣ ಕೊಡದಿರುವ ೪ ಹಿಂದೂ ವ್ಯಾಪಾರಿಗಳನ್ನು ಕೊಲೆ ಮಾಡಲಾಗಿದೆ. ಹಿಂದೂ ಮಹಿಳೆಯರ ಮಾನಭಂಗವನ್ನೂ ಮಾಡಲಾಗುತ್ತಿದೆ. ಇದರಿಂದ ಭಯಭೀತರಾದ ಹಿಂದೂಗಳು ಪಲಾಯನ ಮಾಡುತ್ತಿದ್ದಾರೆ. ರಾಜ್ಯ ದಲ್ಲಿ ಸಮಾಜವಾದಿ ಪಕ್ಷದ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಮತಾಂಧರಿಗೆ ಧೈರ್ಯ ಬಂದಿದೆ.
೪. ಹಿಂದೂಗಳು ಪೊಲೀಸರಲ್ಲಿ ದೂರು ದಾಖಲಿಸಿ ದರೂ ಅವರ ರಕ್ಷಣೆಯಾಗಲಿಲ್ಲ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಉತ್ತರಪ್ರದೇಶದ ಕೈರಾನಾದಲ್ಲಿ ಬಹುಸಂಖ್ಯಾತ ಮತಾಂಧರ ದೌರ್ಜನ್ಯದಿಂದ ೩೪೬ ಹಿಂದೂ ಕುಟುಂಬಗಳ ವಲಸೆ !