ಪ.ಪೂ. ಕಾಣೆ ಮಹಾರಾಜರು ಹೇಳಿದ ಗೋಮಾತೆ ಮತ್ತು ಪಂಚಗವ್ಯದ ಮಹತ್ವ

ಬ್ರಾಹ್ಮಣರ ಜವಾಬ್ದಾರಿ
ತ್ರೇತಾಯುಗದಲ್ಲಿ ವೇದಗಳ, ಅಂದರೆ ಚತುರ್ವೇದಗಳ ಉತ್ಪತ್ತಿಯಾಯಿತು. ಸಮಾಜದಲ್ಲಿ ಜ್ಞಾನ ಧಾರಣೆ ಸ್ಥಾಪನೆಯ ಪ್ರವಾಹವು ನಿರಂತರವಾಗಿ ನಡೆಯಬೇಕೆಂದು ಅದರ ಜವಾಬ್ದಾರಿಯನ್ನು ಬ್ರಾಹ್ಮಣರಿಗೆ ನೀಡಿದರು. ಆ ಜವಾಬ್ದಾರಿಯನ್ನು ನಿರ್ವಹಿಸುವ ಕ್ಷಮತೆ ಅವರಲ್ಲಿ ಬರಬೇಕೆಂದು ಅವರು ಗೋಸಂಗವನ್ನು ಮಾಡಿದರು.
ಅಮೃತ ಸಮಾನ ಪಂಚಗವ್ಯ
ಗೋವು ಸ್ವರ್ಗೀಯ ವಸ್ತುವಾಗಿದೆ. ನಾವು ಪುರುವಿನ ಕಥೆಯನ್ನು ಓದಿದ್ದೇವೆ. ಅವನೊಂದಿಗೆ ಊರ್ವಶಿ ಅಪ್ಸರೆಯು ೧೦೦೦ ವರ್ಷ ಇದ್ದಳು. ಅವಳು ಸ್ವರ್ಗೀಯ ಅಪ್ಸರೆಯಾಗಿದ್ದರಿಂದ ಹಾಗೂ ಅವಳ ಆಹಾರವಾದ ಅಮೃತ ಇಲ್ಲದ ಕಾರಣ ಅವಳು ಹಸುವಿನ ಹಾಲು, ತುಪ್ಪ ಇತ್ಯಾದಿಗಳನ್ನು ಸೇವಿಸುತ್ತಿದ್ದಳು. ಇದರರ್ಥ ಹಸುವಿನ ಪಂಚಗವ್ಯದ (ಹಾಲು, ತುಪ್ಪ, ಮೊಸರು, ಗೋಮೂತ್ರ ಮತ್ತು ಸೆಗಣಿ) ಸೇವನೆಯಿಂದ ಬ್ರಾಹ್ಮಣರ ಬುದ್ಧಿ ಶುದ್ಧ ಹಾಗೂ ಚುರುಕಾಗಿರುತ್ತಿತ್ತು. ಪಂಚಗವ್ಯದ ಸೇವನೆಯಿಂದ ಅಸ್ಥಿಚರ್ಮಗತ ಪಾಪಗಳು ನಾಶವಾಗುತ್ತವೆ, ಎಂದು ಶ್ರೀಗುರುಚರಿತ್ರೆಯಲ್ಲಿ (. ೩೬) ಹೇಳಲಾಗಿದೆ.)
ಗೋಸೇವೆ ಮತ್ತು ಹಾಲಿನ ಮಹತ್ವ
ಮುಂದೆ ಕಲಿಯುಗದಲ್ಲಿ ಬ್ರಾಹ್ಮಣರಿಂದ ಗೋ ಸೇವೆಯು ತಿರಸ್ಕರಿಸಲ್ಪಟ್ಟು ಸಮಾಜದಲ್ಲಿ ಅದರ ಶ್ರೇಷ್ಠತೆಯು ನಾಶವಾಗುವುದು ಹಾಗೂ ಅದು ದ್ವಿಜ ಬಂಧುತ್ವ ಪದವಿಯನ್ನು ಪಡೆದು ಸಮಾಜದಲ್ಲಿ ಅವರ ಗುರುಸ್ಥಾನವು ನಾಶವಾಗುವುದರಿಂದ ಅವರಿಗೆ ಸ್ವಲ್ಪವೂ ಬೆಲೆ ಇರುವುದಿಲ್ಲ, ಎಂದು ಅವರಿಗೆ ಪೂರ್ವಸೂಚನೆ ನೀಡಿ ಜಾಗೃತಗೊಳಿಸಲು ಶ್ರೀಕೃಷ್ಣನು ಗೋಪಾಲನೆ ಮಾಡಿ ತೋರಿಸಿದನು. ಅದರ ಮೂಲಕ ಹಸುವಿನ ಮಹತ್ವವನ್ನು ತೋರಿಸಿದನು ಮತ್ತು ಹಸುವಿನ ಹಾಲು, ತುಪ್ಪ ಮತ್ತು ಮೊಸರು ಇತ್ಯಾದಿಗಳನ್ನು ಸೇವಿಸುವುದರಿಂದ ನಮ್ಮ ಶರೀರದಲ್ಲಿ ಎಷ್ಟು ಶಕ್ತಿ ಬರುತ್ತದೆಯೆಂದರೆ, ಮಾಂಸಾಹಾರಿಗಳಾದ ಬಲಿಷ್ಠ ರಾಕ್ಷಸರನ್ನು ಸಹ ನಾವು ನಾಶ ಮಾಡಬಹುದು, ಎಂಬುದನ್ನು ಕೃತಿಯಿಂದ ಸಿದ್ಧಪಡಿಸಿ ತೋರಿಸಿದನು.
ಹಸುವಿನ ತುಪ್ಪದ ಶಕ್ತಿ
ಅನ್ನಾತ್ ದಶಗುಣಂ ಪಿಷ್ಟಂ ಪಿಷ್ಟಾತ್ ದಶಗುಣಂ ಪಯಃ
ಪಯಸಃ ದಶಗುಣಂ ಮಾಂಸಮ್ ಮಾಂಸಾತ್ ದಶಗುಣಂ ಘೃತಃ - ಚಾಣಕ್ಯನೀತಿದರ್ಪಣ
ಅರ್ಥ : ಅನ್ನಕ್ಕಿಂತ ಗೋಧಿಯಲ್ಲಿ ಹತ್ತುಪಟ್ಟು, ಗೋಧಿಗಿಂತ ಹಾಲಿನಲ್ಲಿ ಹತ್ತುಪಟ್ಟು, ಹಾಲಿಗಿಂತ ಮಾಂಸದಲ್ಲಿ ಹತ್ತುಪಟ್ಟು ಹಾಗೂ ಮಾಂಸಕ್ಕಿಂತ (ಹಸುವಿನ) ತುಪ್ಪದಲ್ಲಿ ಹತ್ತುಪಟ್ಟು ಶಕ್ತಿ ಇದೆ.
- .ಪೂ. ಕಾಣೆ ಮಹಾರಾಜರು, ನಾರಾಯಣಗಾವ್, ಪುಣೆ ಜಿಲ್ಲೆ, ಮಹಾರಾಷ್ಟ್ರ. (೧೯೯೧)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪ.ಪೂ. ಕಾಣೆ ಮಹಾರಾಜರು ಹೇಳಿದ ಗೋಮಾತೆ ಮತ್ತು ಪಂಚಗವ್ಯದ ಮಹತ್ವ