ಕಾ. ಪಾನಸಾರೆ ಹತ್ಯೆ ಪ್ರಕರಣದಲ್ಲಿಯೂ ಡಾ. ವೀರೇಂದ್ರಸಿಂಗ್ ತಾವಡೆಯವರ ವಿಚಾರಣೆ ! - ಅಪರ ಪೊಲೀಸ್ ಮಹಾಅಧೀಕ್ಷಕ ಸಂಜಯಕುಮಾರ

ಕಳ್ಳನನ್ನು ಬಿಟ್ಟು ಸನ್ಯಾಸಿಗೆ ಗಲ್ಲು ವಿಧಿಸುವ ಪೊಲೀಸರ ನಡೆ !
ಕಾಂಚಿ ಪೀಠಾಧೀಶ್ವರ ಸ್ವಾಮಿ ಜಯೇಂದ್ರ ಸರಸ್ವತಿಯವರು ಧರ್ಮದ್ರೋಹಿಗಳ ಆರೋಪಗಳಿಂದ ನಿರಪರಾಧಿಗಳೆಂದು ಮುಕ್ತರಾದಂತೆ ಸಾಧ್ವಿ ಪ್ರಜ್ಞಾ ಸಿಂಗ್ ಮೇಲಿನ ಆರೋಪಗಳು ಸುಳ್ಳಾದವು. ಅದರಂತೆಯೇ ಮುಂಬರುವ ಕಾಲದಲ್ಲಿ ಸನಾತನ ನಿರ್ದೋಷತ್ವವೂ ಸಿದ್ಧವಾಗುವುದು.
ಕೊಲ್ಹಾಪುರ ಜೂನ್ ೧೨ : ಅಂಧಶ್ರದ್ಧೆ ನಿರ್ಮೂಲನ ಸಮಿತಿಯ ಸಂಸ್ಥಾಪಕರಾದ ಡಾ.ನರೇಂದ್ರ ದಾಭೋಲಕರ್ ಇವರ ಹತ್ಯೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳವು ಬಂಧಿಸಿರುವ ಆಧುನಿಕ ವೈದ್ಯರಾದ ವೀರೇಂದ್ರ ಸಿಂಗ್ ತಾವಡೆ ಇವರನ್ನು ಕಾ. ಗೋವಿಂದ ಪಾನಸಾರೆ ಇವರ ಹತ್ಯೆ ಸಂಬಂಧವಿರುವ ವಿಷಯದಲ್ಲಿ ಕೆಲವು ಮಹತ್ವದ ಪುರಾವೆ ದೊರಕಿದೆ. ಕೇಂದ್ರೀಯ ತನಿಖಾ ದಳವು ತಪಾಸಣೆ ಪೂರ್ಣಗೊಂಡ ಬಳಿಕ ಕಾ.ಪಾನಸಾರೆ ಹತ್ಯೆಯ ಸಂಬಂಧದಲ್ಲಿ ವೈದ್ಯ ತಾವಡೆ ಇವರನ್ನು ವಶಕ್ಕೆ ಪಡೆದು ಅವರ ವಿಚಾರಣೆಯನ್ನು ಮಾಡುವವರಿದ್ದಾರೆ ಎಂಬ ಮಾಹಿತಿಯನ್ನು ರಾಜ್ಯ ಅಪರಾಧ ತನಿಖಾ ವಿಭಾಗದ ಅಪರ ಪೊಲೀಸ್ ಮಹಾಅಧೀಕ್ಷಕರಾದ ಸಂಜಯಕುಮಾರ ಇವರು ಜೂನ್ ೧೧ ರಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಡಾ. ದಾಬೋಲಕರ್, ಕಾ. ಪಾನಸಾರೆ ಮತ್ತು ಡಾ. ಕಲಬುರ್ಗಿ ಈ ಮೂವರ ಹತ್ಯೆ ತನಿಖೆಯಲ್ಲಿ ನಾವು ಮೂವರೂ ತನಿಖಾ ವಿಭಾಗವು ಒಟ್ಟಾಗಿ ಕೆಲಸ ಮಾಡುತ್ತಿವೆ. ಕಾ. ಪಾನಸಾರೆ ಹತ್ಯೆ ಸಂಬಂಧದಲ್ಲಿ ವೈದ್ಯ ತಾವಡೆ ಇವರನ್ನು ಸ್ವತಂತ್ರವಾಗಿ ವಿಚಾರಣೆ ನಡೆಸುವವರಿದ್ದೇವೆ ಎಂದು ಹೇಳಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕಾ. ಪಾನಸಾರೆ ಹತ್ಯೆ ಪ್ರಕರಣದಲ್ಲಿಯೂ ಡಾ. ವೀರೇಂದ್ರಸಿಂಗ್ ತಾವಡೆಯವರ ವಿಚಾರಣೆ ! - ಅಪರ ಪೊಲೀಸ್ ಮಹಾಅಧೀಕ್ಷಕ ಸಂಜಯಕುಮಾರ