ವಿವಿಧ ಮಾಧ್ಯಮಗಳ ಮೂಲಕ ರಾಷ್ಟ್ರ ಮತ್ತು ಧರ್ಮದ ಕುರಿತು ಕಾರ್ಯವನ್ನು ಮಾಡುವ ಪರಾತ್ಪರ ಗುರು ಡಾ.ಆಠವಲೆ

ಪರಾತ್ಪರ ಗುರು ಡಾ. ಆಠವಲೆಯವರು ‘ಹಿಂದೂ ರಾಷ್ಟ್ರ’ದ ಪ್ರಖರ ಪ್ರತಿಪಾದಕರಾಗಿದ್ದಾರೆ. ಅವರು ಸಂಕಲನ ಮಾಡಿದ ‘ಈಶ್ವರೀ ರಾಜ್ಯದ ಸ್ಥಾಪನೆ’ ಎಂಬ ಗ್ರಂಥವು ೧೮ ಮಾರ್ಚ್ ೧೯೯೯ ರಂದು ಪ್ರಕಾಶಿತವಾಯಿತು. ಅದರಲ್ಲಿ ಅವರು ‘ಭಾರತದಲ್ಲಿ ಈಶ್ವರೀ ರಾಜ್ಯದ (ಹಿಂದೂ ರಾಷ್ಟ್ರ) ಸ್ಥಾಪನೆ ಮಾಡುವುದೇ ಹಿಂದೂಗಳ ಸಾಮಾಜಿಕ, ರಾಷ್ಟ್ರೀಯ ಮತ್ತು ಧಾರ್ಮಿಕ ಸಮಸ್ಯೆಗಳಿಗೆ ಏಕೈಕ ಪರಿಹಾರವಾಗಿದೆ’, ಎಂಬ ವಿಚಾರವನ್ನು ಮಂಡಿಸಿದ್ದಾರೆ. ಅವರು ‘ಭವಿಷ್ಯದಲ್ಲಿ ಹಿಂದೂ ರಾಷ್ಟ್ರದ ಕಾರ್ಯವು ಹೇಗೆ ಆಗುವುದು’, ಎಂಬುದರ ವೇಳಾಪಟ್ಟಿಯನ್ನು ಮಂಡಿಸುವಾಗ ‘೨೦೨೩ ರಲ್ಲಿ ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗುವುದು’, ಎಂದು ದಾರ್ಶನಿಕವಾಗಿ ವಿಚಾರವನ್ನು ಮಂಡಿಸಿದ್ದಾರೆ. ಅನೇಕ ಸಂತರು ಮತ್ತು ನಾಡಿಭವಿಷ್ಯದ ಮೂಲಕ ಮಹರ್ಷಿಗಳೂ ಈಗ ಅದನ್ನೇ ಹೇಳುತ್ತಿದ್ದಾರೆ.
೧೯೯೮ ರಿಂದ ಪರಾತ್ಪರ ಗುರು ಡಾ. ಆಠವಲೆಯವರು ಗ್ರಂಥಸಂಕಲನ; ‘ಸನಾತನ ಪ್ರಭಾತ’ಕ್ಕಾಗಿ ರಾಷ್ಟ್ರ ಹಾಗೂ ಧರ್ಮದ ವಿಷಯದಲ್ಲಿ ಲೇಖನ ಬರೆಯುವುದು; ಹಿಂದುತ್ವವಾದಿಗಳಿಗೆ ದಿಶೆ ತೋರಿಸುವುದು; ಬ್ರಾಹ್ಮತೇಜವಿರುವ ಸಂತರನ್ನು ನಿರ್ಮಿಸುವುದು ಇತ್ಯಾದಿ ಮಾಧ್ಯಮಗಳಿಂದ ನಿರಂತರವಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯ ಮಾಡುತ್ತಿದ್ದಾರೆ.

ಅಖಿಲ ಮನುಕುಲಕ್ಕಾಗಿ ಕಾರ್ಯ
‘ಕೇವಲ ಭಾರತದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ ಧರ್ಮಸಂಸ್ಥಾಪನೆಯಾಗುವುದಿಲ್ಲ, ಅಖಿಲ ಮನುಕುಲದ ಹಿತಕ್ಕಾಗಿ ಜಗತ್ತಿನಾದ್ಯಂತ ಹಿಂದೂ ಧರ್ಮವನ್ನು ಸ್ಥಾಪಿಸುವುದು ಆವಶ್ಯಕವಾಗಿದೆ’, ಎಂಬ ವಿಚಾರವನ್ನು ಪರಾತ್ಪರ ಗುರು ಡಾ. ಆಠವಲೆಯವರು ಮಂಡಿಸಿದರು. ೧೯೯೫ ರಲ್ಲಿ ಅವರಿಗೆ ಪ.ಪೂ.ಭಕ್ತರಾಜ ಮಹಾರಾಜರು ‘ಜಗತ್ತಿನಾದ್ಯಂತ ಅಧ್ಯಾತ್ಮ ಪ್ರಸಾರ ಮಾಡಿರಿ’, ಎಂದು ಆಶೀರ್ವಾದ ನೀಡಿದ್ದರು. ಅದಕ್ಕನುಸಾರ ಅವರು ಜಗತ್ತಿನಾದ್ಯಂತ ಮನುಕುಲದ ಹಿತಕ್ಕಾಗಿ ವಿವಿಧ ಮಾಧ್ಯಮಗಳಿಂದ ಹಿಂದೂ ಧರ್ಮ, ಅಧ್ಯಾತ್ಮಶಾಸ್ತ್ರ, ಸಾಧನೆ ಇತ್ಯಾದಿಗಳ ಪ್ರಸಾರ ಮಾಡುತ್ತಿದ್ದಾರೆ.

ಕೊಲ್ಹಾಪುರದಲ್ಲಾದ ಸರ್ವಸಂಪ್ರದಾಯ ಸತ್ಸಂಗದಲ್ಲಿ ಮಾರ್ಗದರ್ಶನ ಮಾಡುತ್ತಿರುವ
ಪರಾತ್ಪರ ಗುರು ಡಾ. ಆಠವಲೆ ಮತ್ತು ಇತರ ಸಂತರು (೨.೧೨.೨೦೦೧ )
ಹಿಂದುತ್ವನಿಷ್ಠರೊಂದಿಗೆ ಸಂವಾದ ಮಾಡುತ್ತಿರುವ ಪರಾತ್ಪರ ಗುರು ಡಾ. ಆಠವಲೆ (೨೦೧೩)
ತುಳಸೀದಾಸರು, ಮೀರಾಬಾಯಿ, ಜ್ಞಾನೇಶ್ವರ, ತುಕಾರಾಮ ಇವರಂತಹ ಸಂತ ಶ್ರೇಷ್ಠರು ದೇಶದಲ್ಲಿರುವಾಗ ಮತ್ತು ಅವರ ಕಣ್ಣೆದುರೇ ಮತಾಂಧ ಮುಸಲ್ಮಾನರು ಮತ್ತು ಕ್ರೈಸ್ತರಿಂದ ಹಿಂದೂಗಳ ಮೇಲೆ ದೌರ್ಜನ್ಯಗಳಾಗುತ್ತಿರುವಾಗ ಅವರು ‘ಹಿಂದೂ ರಾಷ್ಟ್ರ- ಸ್ಥಾಪನೆ’ಗಾಗಿ ಏಕೆ ಪ್ರಯತ್ನಿಸಲಿಲ್ಲ ? ಎಂದು ಪ.ಪೂ. ಡಾಕ್ಟರರು ಅವರ ಗುರು ಪ.ಪೂ. ಭಕ್ತರಾಜ ಮಹಾರಾಜರಿಗೆ ಪ್ರಶ್ನೆ ಕೇಳಿದ್ದರು. ಅದಕ್ಕೆ ಅವರು ಮುಂದಿನಂತೆ ಉತ್ತರಿಸಿದ್ದರು, ‘ಭಕ್ತರು ಮತ್ತು ಶಿಷ್ಯಂದಿರಿಗೆ ಧರ್ಮಶಿಕ್ಷಣವನ್ನು ನೀಡಿ ಮತ್ತು ಅದರಂತೆ ಸಾಧನೆ ಮಾಡಲು ಹೇಳಿ ಅವರಿಗೆ ಮೋಕ್ಷದ ದಾರಿ ತೋರಿಸುವುದು ಸಂತರ ಕಾರ್ಯವಾಗಿದೆ. ದುರ್ಜನರನ್ನು ಸಂಹರಿಸುವುದು ಅವತಾರಿಗಳ ಕಾರ್ಯವಾಗಿದೆ.’ - (ಪೂ.) ಡಾ. ವಸಂತ ಬಾಳಾಜಿ ಆಠವಲೆ (ಅಪ್ಪಾಕಾಕಾ). ಚೆಂಬೂರ್, ಮುಂಬೈ

ಪರಾತ್ಪರ ಗುರು ಡಾ. ಆಠವಲೆಯವರ ರಾಷ್ಟ್ರ-ಧರ್ಮ ಕಾರ್ಯದ ಪ್ರೇರಣೆ ಪಡೆದು ಆರಂಭವಾದ ಕಾರ್ಯ
ಅ. ಹಿಂದೂ ರಾಷ್ಟ್ರ-ಸ್ಥಾಪನೆಗಾಗಿ ‘ಹಿಂದೂ ಜನಜಾಗೃತಿ ಸಮಿತಿ’ :  ಪರಾತ್ಪರ ಗುರು ಡಾ. ಆಠವಲೆಯವರ ಹಿಂದೂ ರಾಷ್ಟ್ರ ಸ್ಥಾಪನೆಯ ವಿಚಾರದಿಂದ ಪ್ರೇರಣೆ ಪಡೆದು ೭ ಅಕ್ಟೋಬರ್ ೨೦೦೨ ರಂದು ‘ಹಿಂದೂ ಜನಜಾಗೃತಿ ಸಮಿತಿ’ಯ ಸ್ಥಾಪನೆಯಾಯಿತು. ಧರ್ಮಶಿಕ್ಷಣ, ಧರ್ಮಜಾಗೃತಿ, ಧರ್ಮರಕ್ಷಣೆ, ರಾಷ್ಟ್ರರಕ್ಷಣೆ, ಹಿಂದೂಸಂಘಟನೆ ಇತ್ಯಾದಿಗಳ ಮೂಲಕ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯ ಮಾಡುವುದೇ ಸಮಿತಿಯ ಧ್ಯೇಯವಾಗಿದೆ. ಸಮಿತಿ ಮಾಡುತ್ತಿರುವ ಕಾರ್ಯದಿಂದ ಮುಂದಿನ ಪರಿಣಾಮವು ಸಾಧ್ಯವಾಗಿದೆ.
೧. ಸರ್ವಧರ್ಮ ಸಭೆ, ಸರ್ವಸಂಪ್ರದಾಯ ಸಭೆ ಮತ್ತು ನಾಮಮೆರವಣಿಗೆ ಇತ್ಯಾದಿಗಳ ಮೂಲಕ ಸಾಂಪ್ರದಾಯಿಕ  ಐಕ್ಯ ಸಾಧ್ಯ !
೨. ಹಿಂದೂ ಧರ್ಮಜಾಗೃತಿ ಸಭೆ ಮತ್ತು ಹಿಂದೂಸಂಘಟನಾ ಮೇಳಗಳ ಮೂಲಕ ಲಕ್ಷಗಟ್ಟಲೆ ಹಿಂದೂಗಳಲ್ಲಿ ಧರ್ಮಜಾಗರಣೆ !
೩. ಸ್ವರಕ್ಷಣೆ ಮತ್ತು ಪ್ರಥಮೋಪಚಾರ ತರಬೇತಿ ವರ್ಗ ಹಾಗೂ ಆಪತ್ಕಾಲೀನ ಸಹಾಯ ಅಭಿಯಾನ ಇವುಗಳ ಮೂಲಕ ಸಮಾಜಸೇವೆ !
೪. HinduJagruti.org ಈ ಜಾಲತಾಣದ ಮೂಲಕ ಪ್ರತಿ ತಿಂಗಳು ೮ ಲಕ್ಷಕ್ಕಿಂತಲೂ ಹೆಚ್ಚು ವಾಚಕರಲ್ಲಿ  ರಾಷ್ಟ್ರ-ಧರ್ಮ ಜಾಗೃತಿ !
೫. ಪ್ರಾಂತೀಯ, ರಾಜ್ಯಮಟ್ಟದಲ್ಲಿ ಹಾಗೂ ಅಖಿಲ ಭಾರತೀಯ ಹಿಂದೂ ಅಧಿವೇಶನಗಳ ಮೂಲಕ ೨೫೦ ಕ್ಕಿಂತಲೂ ಹೆಚ್ಚು ರಾಷ್ಟ್ರಪ್ರೇಮಿ ಮತ್ತು ಧರ್ಮ ಪ್ರೇಮಿ ಸಂಘಟನೆಗಳ ಸಂಘಟನೆ !
೬. ಧರ್ಮಪ್ರೇಮಿ ಮಹಿಳೆಯರ ಸಂಘಟನೆಗಾಗಿ ‘ಹಿಂದೂ ಜನಜಾಗೃತಿ ಸಮಿತಿ’ಯ ‘ರಣರಾಗಿಣಿ’ ಶಾಖೆ ಕಾರ್ಯನಿರತ ! (ಸ್ಥಾಪನೆ : ಸೆಪ್ಟೆಂಬರ್ ೨೦೦೯)
ಆ. ಸಾತ್ತ್ವಿಕ ಹಾಗೂ ಧರ್ಮಶಿಕ್ಷಣ ನೀಡುವ ಸಾಧಕ-ಪುರೋಹಿತರನ್ನು ನಿರ್ಮಿಸುವ ‘ಸನಾತನ ಸಾಧಕ-ಪುರೋಹಿತ ಪಾಠಶಾಲೆ’ (ಸ್ಥಾಪನೆ : ೩೦ ಎಪ್ರಿಲ್ ೨೦೦೮)
ಇ. Balsanskar.com (ಸ್ಥಾಪನೆ : ೧೬.೩.೨೦೧೦) : ಈ ಜಾಲತಾಣವು ಪರಾತ್ಪರ ಗುರು ಡಾ. ಆಠವಲೆಯವರು ಸಂಕಲನ ಮಾಡಿದ ಬಾಲಸಂಸ್ಕಾರ ಗ್ರಂಥಮಾಲಿಕೆಯಲ್ಲಿನ ಜ್ಞಾನವನ್ನು ಆಧರಿಸಿದೆ.
ಈ. ರಾಷ್ಟ್ರ ಮತ್ತು ಧರ್ಮದ ಹಿತಕ್ಕಾಗಿ ಹೋರಾಡುವ ಧರ್ಮಪ್ರೇಮಿ ನ್ಯಾಯವಾದಿಗಳ ಸಂಘಟನೆ ‘ಹಿಂದೂ ವಿಧಿಜ್ಞ ಪರಿಷತ್ತು’ (ಸ್ಥಾಪನೆ : ೧೪ ಜೂನ್ ೨೦೧೨)
ಉ. ಹಿಂದೂಗಳೇತರರ ಸ್ಚೇಚ್ಛೆಯಿಂದ ಹಿಂದೂಕರಣ ಮತ್ತು ಮತಾಂತರಿತರನ್ನು ಸ್ವೇಚ್ಛೆಯಿಂದ ಶುದ್ಧೀಕರಣಕ್ಕಾಗಿ ಕಾರ್ಯನಿರತ ‘ಸನಾತನ ಹಿಂದೂ ಧರ್ಮದೀಕ್ಷಾ ಕೇಂದ್ರ’ (ಸ್ಥಾಪನೆ; ೫ ಮಾರ್ಚ್ ೨೦೧೪) 
ಊ. ‘ಸನಾತನ ಅಧ್ಯಯನ ಕೇಂದ್ರ’ (ಸ್ಥಾಪನೆ :೧ ಡಿಸೆಂಬರ್ ೨೦೧೫) : ವಿವಿಧ ವಿಚಾರಗೋಷಿ, ಕಾರ್ಯಕ್ರಮಗಳು ಮತ್ತು ದೂರಚಿತ್ರವಾಹಿನಿಗಳಲ್ಲಿನ ಚರ್ಚಾಕೂಟ ಇತ್ಯಾದಿಗಳಲ್ಲಿ ಹಿಂದೂ ಧರ್ಮದ ಪರವಾಗಿ ಮಾತನಾಡಲು ಹಿಂದುತ್ವನಿಷ್ಠ ಸಂಘಟನೆಗಳ ವಕ್ತಾರರಿಗೆ ಮತ್ತು ಪ್ರವಕ್ತಾರರಿಗೆ ವೈಚಾರಿಕ ಸಹಾಯ ನೀಡುವ ಕಾರ್ಯವನ್ನು ‘ಸನಾತನ ಅಧ್ಯಯನ ಕೇಂದ್ರ’ದ ಮೂಲಕ ಮಾಡಲಾಗುತ್ತದೆ.
ಸ್ಪಿರಿಚ್ಯುವಲ್ ಸೈನ್ಸ್ ರಿಸರ್ಚ್ ಫೌಂಡೇಶನ್ : ಪರಾತ್ಪರ ಗುರು ಡಾ. ಆಠವಲೆಯವರ ಆಧ್ಯಾತ್ಮಿಕ ಸಂಶೋಧನೆಯ ಕಾರ್ಯದಿಂದ ಪ್ರೇರಣೆ ಪಡೆದು ಆಸ್ಟ್ರೇಲಿಯಾ, ಯುರೋಪ್ ಮತ್ತು ಅಮೇರಿಕಾ ಖಂಡಗಳಲ್ಲಿ ‘ಸ್ಪಿರಿಚ್ಯುವಲ್ ಸೈನ್ಸ್ ರಿಸರ್ಚ್ ಫೌಂಡೇಶನ್’ ಎಂಬ ಸಂಸ್ಥೆ ಸ್ಥಾಪನೆಯಾಗಿದೆ.
ಫೋರಮ್ ಫಾರ್ ಹಿಂದೂ ಅವೇಕನಿಂಗ್ : ಅಮೇರಿಕಾದಲ್ಲಿ ಹಿಂದೂಗಳಲ್ಲಿ ಧರ್ಮಜಾಗೃತಿ ಮಾಡಲು ‘ಫೋರಮ್ ಫಾರ್ ಹಿಂದೂ ಅವೇಕನಿಂಗ್’ ಎಂಬ ಸಂಸ್ಥೆಯನ್ನು  ಸ್ಥಾಪಿಸಲಾಗಿದೆ.

ಸಂತರು, ಸಂಪ್ರದಾಯ, ಹಿಂದುತ್ವವಾದಿಗಳು, ದೇಶಭಕ್ತರು ಮತ್ತು ಸಾಮಾಜಿಕ ಕಾರ್ಯಕರ್ತರ
ಸಂಘಟನೆ ಹಾಗೂ ಅವರಿಗೆ ದಿಶೆ ನೀಡುವ ಕಾರ್ಯ
ಸಂಘಟನಾಕಾರ್ಯ
ಸಂತರು : ಪರಾತ್ಪರ ಗುರು ಡಾ. ಆಠವಲೆ ಯವರು ೨೦೦೧ ರಿಂದ ೨೦೦೪ ಈ ಅವಧಿಯಲ್ಲಿ ಅನೇಕ ಸಂತರನ್ನು ಭೇಟಿಯಾಗಿ ಅವರನ್ನು ರಾಷ್ಟ್ರ-ಧರ್ಮ ರಕ್ಷಣೆಗಾಗಿ ಉದ್ಯುಕ್ತಗೊಳಿಸಿ  ದರು. ೨೦೦೫ ರ ನಂತರ ಅನಾರೋಗ್ಯದ ಕಾರಣದಿಂದ ಅವರು ಈ ಕಾರ್ಯಕ್ಕಾಗಿ ಪ್ರಯಾಣ ಮಾಡಲಿಲ್ಲ. ಆದರೂ ಸದ್ಯ ರಾಷ್ಟ್ರ-ಧರ್ಮ ರಕ್ಷಣೆಗಾಗಿ ಪ್ರತ್ಯಕ್ಷ ಕಾರ್ಯ ಮಾಡುವ ಸಂತರ ಸಂಘಟನೆಯನ್ನು ಸನಾತನದ ಸಂತರಾದ ಪೂ. ಡಾ. ಚಾರುದತ್ತ ಪಿಂಗಳೆ ಹಾಗೂ ರಾಷ್ಟ್ರ-ಧರ್ಮ ರಕ್ಷಣೆಗಾಗಿ ಆಧ್ಯಾತ್ಮಿಕ ಸ್ತರದಲ್ಲಿ ಕಾರ್ಯ ಮಾಡುವ ಸಂತರ ಸಂಘಟನೆಯನ್ನು ಪೂ. ಸೌ. ಅಂಜಲಿ ಗಾಡಗೀಳ ಇವರಿಬ್ಬರೂ ನಿರಂತರವಾಗಿ ಮಾಡುತ್ತಿದ್ದಾರೆ.
ಸಂಪ್ರದಾಯ : ರಾಷ್ಟ್ರ ಮತ್ತು ಧರ್ಮ ರಕ್ಷಣೆಗಾಗಿ ವಿವಿಧ ಸಂಪ್ರದಾಯಗಳು ಸಂಘಟಿತರಾಗಬೇಕೆಂದು ಪರಾತ್ಪರ ಗುರು ಡಾ. ಆಠವಲೆಯವರು ಮುಂದಾಳತ್ವ ವಹಿಸಿ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದಲ್ಲಿ ‘ಬಹಿರಂಗ ಸರ್ವಸಂಪ್ರದಾಯ ಸತ್ಸಂಗ’ವನ್ನು ಆಯೋಜಿಸಿದರು. ವಿವಿಧ ಸಂಪ್ರದಾಯ ಗಳ ಪ್ರಮುಖರಾಗಿರುವ ಸಂತರನ್ನು ಪ್ರಸಾರ ಮಾಧ್ಯಮಗಳು ಅವಮಾನಿಸುವಾಗ ಅವರ ಭಕ್ತರಿಗೆ ಆಧಾರ ನೀಡಿದರು.
ದೇಶಭಕ್ತ ಹಾಗೂ ಹಿಂದುತ್ವವಾದಿಗಳು : ೨೦೧೧ ರಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ‘ದೇಶಭಕ್ತರ ಮತ್ತು ಹಿಂದುತ್ವವಾದಿಗಳ ಸಂಘಟನೆಯಿಂದ ಹಿಂದೂ ರಾಷ್ಟ್ರ-ಸ್ಥಾಪನೆಯ ಕಾರ್ಯ ಸಾಧ್ಯವಿದೆ. ಅದಕ್ಕಾಗಿ ಭಾರತದಾದ್ಯಂತ ಇರುವ ರಾಷ್ಟ್ರಪ್ರೇಮಿ ಹಾಗೂ ಹಿಂದುತ್ವವಾದಿ ಸಂಘಟನೆಗಳನ್ನು ಒಟ್ಟು ಸೇರಿಸುವ ವ್ಯಾಸಪೀಠವಿರಬೇಕು’, ಎಂಬ ವಿಚಾರವನ್ನು ಪ್ರಥಮಬಾರಿ ಮಂಡಿಸಿದರು. ಈ ವಿಚಾರದಿಂದ ಪ್ರೇರಣೆ ಪಡೆದು ‘ಸನಾತನ ಸಂಸ್ಥೆ’ ಮತ್ತು ‘ಹಿಂದೂ ಜನಜಾಗೃತಿ ಸಮಿತಿ’ ಸಂಯುಕ್ತವಾಗಿ ೨೦೧೨ ರಿಂದ ಪ್ರತಿವರ್ಷ ಗೋವಾದಲ್ಲಿ ‘ಅಖಿಲ ಭಾರತೀಯ ಹಿಂದೂ ಅಧಿವೇಶನ’ ಹಾಗೂ ಇನ್ನಿತರ ಸ್ಥಳಗಳಲ್ಲಿ ರಾಜ್ಯಮಟ್ಟದ ಮತ್ತು ಜಿಲ್ಲಾಮಟ್ಟದ ಹಿಂದೂ ಅಧಿವೇಶನಗಳನ್ನು ಆಯೋಜಿಸುತ್ತಿದೆ.
ಸಾಮಾಜಿಕ ಕಾರ್ಯಕರ್ತರು : ಹಿಂದೂ ರಾಷ್ಟ್ರ-ಸ್ಥಾಪನೆಯ ಕಾರ್ಯದಲ್ಲಿ ಸಮಾಜವು ಹೆಚ್ಚೆಚ್ಚು ಪ್ರಮಾಣದಲ್ಲಿ ಪಾಲ್ಗೊಳ್ಳಬೇಕೆಂದು ಪರಾತ್ಪರ ಗುರು ಡಾ. ಆಠವಲೆಯವರ ವಿಚಾರದಿಂದ ಪ್ರೇರಣೆ ಪಡೆದು ‘ಸನಾತನ ಸಂಸ್ಥೆ’ ಮತ್ತು ‘ಹಿಂದೂ ಜನಜಾಗೃತಿ ಸಮಿತಿ’ಯು ಮಾಹಿತಿ ಹಕ್ಕು ಅಧಿಕಾರಕ್ಕಾಗಿ ಕಾರ್ಯ ಮಾಡುವ ಸಂಘಟನೆಗಳು, ಭ್ರಷ್ಟಾಚಾರ ವಿರೋಧಿ ಸಂಸ್ಥೆಗಳು, ಅಶ್ಲೀಲತಾವಿರೋಧಿ ಸಂಘಟನೆಗಳು, ನಿವೃತ್ತ ಪೊಲೀಸ್ ಮತ್ತು ಸೈನ್ಯಾಧಿಕಾರಿಗಳ ಸಂಘಟನೆಗಳು, ಹಿರಿಯ ನಾಗರಿಕರ ಸಂಘ, ಮಹಿಳಾ ಮಂಡಳಿಗಳು ಮುಂತಾದವುಗಳನ್ನು ಸಂಘಟಿಸುವ ಕಾರ್ಯವನ್ನು ಆರಂಭಿಸಿವೆ.
ದಿಶೆ ನೀಡುವುದು : ಪರಾತ್ಪರ ಗುರು ಡಾ. ಆಠವಲೆಯವರು ‘ಜಿಜ್ಞಾಸುವೇ ಜ್ಞಾನದ ಅಧಿಕಾರಿ’ ಎಂಬ ನ್ಯಾಯದಿಂದ ಸಂತರು, ಸಂಪ್ರದಾಯ, ಹಿಂದುತ್ವವಾದಿ, ದೇಶಭಕ್ತರು ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ಸಾಧನೆ, ಹಿಂದೂ ರಾಷ್ಟ್ರ-ಸ್ಥಾಪನೆ, ಹಿಂದುತ್ವದ ಕಾರ್ಯ ಮಾಡುವುದರಲ್ಲಿನ ಯೋಗ್ಯ ದೃಷ್ಟಿಕೋನ, ಕಾಲದ ದೃಷ್ಟಿಯಿಂದ ಕಾರ್ಯದ ಯಶಸ್ಸು ಇತ್ಯಾದಿ ವಿಷಯದಲ್ಲಿ ದಿಶೆ ನೀಡುತ್ತಾರೆ.
(ಹಿಂದೂ ರಾಷ್ಟ್ರಸ್ಥಾಪನೆಯ ಕುರಿತು ಸವಿಸ್ತಾರ ಮಾಹಿತಿಯನ್ನು ಸನಾತನದ ‘ಈಶ್ವರೀ ರಾಜ್ಯದ ಸ್ಥಾಪನೆ’, ‘ಹಿಂದೂ ರಾಷ್ಟ್ರ ಏಕೆ ಬೇಕು ?’ ಮತ್ತು ‘ಹಿಂದೂ ರಾಷ್ಟ್ರ -ಸ್ಥಾಪನೆಯ ದಿಶೆ !’ ಈ ಗ್ರಂಥದಲ್ಲಿ ನೀಡಲಾಗಿದೆ.)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ವಿವಿಧ ಮಾಧ್ಯಮಗಳ ಮೂಲಕ ರಾಷ್ಟ್ರ ಮತ್ತು ಧರ್ಮದ ಕುರಿತು ಕಾರ್ಯವನ್ನು ಮಾಡುವ ಪರಾತ್ಪರ ಗುರು ಡಾ.ಆಠವಲೆ