ಬಂಗಾಳದಲ್ಲಿ ಪಕ್ಷನಿಷ್ಠರಾಗಿರಲು ಕಾಂಗ್ರೆಸ್ ಪಕ್ಷವು ಶಾಸಕರಿಂದ ಪ್ರತಿಜ್ಞಾಪತ್ರವನ್ನು ಬರೆಸಿಕೊಂಡಿದೆ !

ಬಂಗಾಳದಲ್ಲಿ ಪಕ್ಷದಲ್ಲಿ ಆಂತರಿಕ ಬಂಡಾಯವನ್ನು ತಡೆಗಟ್ಟುವ ಸಲುವಾಗಿ 
ಕಾಂಗ್ರೆಸ್ ಪಕ್ಷದ ದಯನೀಯ ಚಡಪಡಿಕೆ !
ಕೋಲಕಾತಾ : ಬಂಗಾಳದಲ್ಲಿ ಕಾಂಗ್ರೆಸ್ ಪಕ್ಷ ಆಂತರಿಕ ಬಂಡಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಇದನ್ನು ತಡೆಗಟ್ಟಲು ಪ್ರದೇಶಾಧ್ಯಕ್ಷರಾದ ಅಧೀರರಂಜನ ಚೌಧರಿಯವರು ಚುನಾವಣೆಯಲ್ಲಿ ವಿಜಯಿಗಳಾದ ೪೪ ಶಾಸಕರಿಂದ ಪ್ರತಿಜ್ಞಾಪತ್ರವನ್ನು ಬರೆಸಿಕೊಂಡಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷರಾದ ರಾಹುಲ ಗಾಂಧಿಗೆ ನಿಷ್ಠರಾಗಿರುವ ಬಗ್ಗೆ ಶಪಥವನ್ನು ಈ ಪ್ರತಿಜ್ಞಾಪತ್ರದಲ್ಲಿ ಬರೆಸಿಕೊಳ್ಳಲಾಗಿದೆ. (ಜನತಾದ್ರೋಹಿ, ಹಿಂದೂ ದ್ರೋಹಿ ಮತ್ತು ರಾಷ್ಟ್ರವಿಘಾತಕ ಕಾರ್ಯ ಮಾಡುವ ಕಾಂಗ್ರೆಸ್ಸಿಗೆ ಈಗ ಜನರು ಬೆನ್ನು ತೋರಿಸಿದ್ದಾರೆ. ಭವಿಷ್ಯದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೂ ಪಕ್ಷವನ್ನು ಬಿಡಬಹುದೆಂದು ಕಾಂಗ್ರೆಸ್ ಚಿಂತಿಸುತ್ತಿರುವುದರ ದ್ಯೋತಕವಾಗಿದೆ. ಈ ರೀತಿ ಪ್ರತಿಜ್ಞಾಪತ್ರವನ್ನು ಬರೆಸಿಕೊಂಡು ಪಕ್ಷದಲ್ಲಿರುವ ಮುಖಂಡರಲ್ಲಿ ಪಕ್ಷನಿಷ್ಠೆ ಬರುವುದಿಲ್ಲವೆನ್ನುವುದನ್ನು ಕಾಂಗ್ರೆಸ್ಸಿಗರು ತಿಳಿದುಕೊಳ್ಳುವರೇ ? - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಬಂಗಾಳದಲ್ಲಿ ಪಕ್ಷನಿಷ್ಠರಾಗಿರಲು ಕಾಂಗ್ರೆಸ್ ಪಕ್ಷವು ಶಾಸಕರಿಂದ ಪ್ರತಿಜ್ಞಾಪತ್ರವನ್ನು ಬರೆಸಿಕೊಂಡಿದೆ !