ಸನಾತನ ಪ್ರಭಾತ ನಿಯತಕಾಲಿಕೆ ಸಮೂಹದ ಸಂಸ್ಥಾಪಕ ಸಂಪಾದಕರಾದ ಪರಾತ್ಪರ ಗುರು ಡಾ. ಆಠವಲೆ

‘ಸನಾತನ ಪ್ರಭಾತ’ದ ಮೂಲಕ ಪತ್ರಿಕಾರಂಗದ ಕಾರ್ಯ
 ಹಿಂದೂ ರಾಷ್ಟ್ರ ಸ್ಥಾಪನೆಯ ಸಂದೇಶವನ್ನು ಪ್ರಸಾರಗೊಳಿಸುವ ಸಲುವಾಗಿ ಅವರು ‘ಸನಾತನ ಪ್ರಭಾತ’ ನಿಯತಕಾಲಿಕೆಯನ್ನು ಆರಂಭಿಸಿದರು. ಅವರು ಸನಾತನ ಪ್ರಭಾತ ಸಮೂಹದ ಸಂಸ್ಥಾಪಕ ಸಂಪಾದಕರಾಗಿದ್ದಾರೆ. ಅವರು ೨೮ ಎಪ್ರಿಲ್ ೧೯೯೮ ರಿಂದ ೧೯ ಎಪ್ರಿಲ್ ೨೦೦೦ ಈ ಅವಧಿಯಲ್ಲಿ ಸಂಪಾದಕರಾಗಿದ್ದರು. ಅನಂತರ ಇತರ ಸೇವೆಗಳಿಂದಾಗಿ ಅವರು ಸಂಪಾದಕ ಪದವಿಯನ್ನು ಇತರ ಸಾಧಕರಿಗೆ ಒಪ್ಪಿಸಿದರು. ಸಮಾಜ, ರಾಷ್ಟ್ರ ಮತ್ತು ಧರ್ಮಹಿತದ ದೃಷ್ಟಿಕೋನ ನೀಡುವ ಈ ನಿಯತಕಾಲಿಕೆಗಳಿಂದ ಪ್ರೇರಣೆ ಪಡೆದು ಅನೇಕ ಜನರು ರಾಷ್ಟ್ರ ಹಾಗೂ ಧರ್ಮ ರಕ್ಷಣೆಯ ಕಾರ್ಯ ಹಾಗೂ ಸಾಧನೆಯನ್ನೂ ಆರಂಭಿಸಿದ್ದಾರೆ. ಪರಾತ್ಪರ ಗುರು ಡಾ. ಆಠವಲೆಯವರು ಸಂಸ್ಥಾಪಕ ಸಂಪಾದಕರಾಗಿದ್ದ ‘ಸನಾತನ ಪ್ರಭಾತ’ ನಿಯತಕಾಲಿಕೆಗಳ ಸಮೂಹದ ವತಿಯಿಂದ ಸದ್ಯ ಆರ್ಥಿಕ ಹಾನಿಯನ್ನು ಸಹಿಸಿಕೊಂಡು ಮರಾಠಿ ದೈನಿಕ (ಮುಂಬಯಿ, ಗೋವಾ, ರತ್ನಾಗಿರಿ ಮತ್ತು ಪಶ್ಚಿಮ ಮಹಾರಾಷ್ಟ್ರ ಈ ೪ ಆವೃತ್ತಿಗಳು), ಮರಾಠಿ ಮತ್ತು ಕನ್ನಡ ಸಾಪ್ತಾಹಿಕ, ಹಿಂದಿ ಮತ್ತು ಆಂಗ್ಲ ಪಾಕ್ಷಿಕ ಮತ್ತು ಗುಜರಾತಿ ಮಾಸಿಕ ಪ್ರಕಾಶನಗೊಳಿಸಲಾಗುತ್ತದೆ.
ದೈನಿಕ ಸನಾತನ ಪ್ರಭಾತದ ೪.೪.೧೯೯೯ ರಂದು ಪ್ರಸಿದ್ಧವಾದ ಮೊದಲ ಸಂಚಿಕೆಯನ್ನು ವೀಕ್ಷಿಸುತ್ತಿರುವ
ಸನಾತನ ಪ್ರಭಾತ ಸಮೂಹದ ಸಂಸ್ಥಾಪಕ ಸಂಪಾದಕರಾದ ಪರಾತ್ಪರ ಗುರು ಡಾ. ಆಠವಲೆ
ಹಾಗೂ ಪಕ್ಕದಲ್ಲಿ ಸಹಸಂಪಾದಕರಾದ ಶ್ರೀ. ಭೂಷಣ ಕೇರಕರ (೨೦೧೫)

ದೈನಿಕ ಸನಾತನ ಪ್ರಭಾತ ಆರಂಭಿಸುವಾಗ ವಿತರಕರಿಂದ ಹಿಡಿದು ಸಂಪಾದಕೀಯ ವಿಭಾಗದಲ್ಲಿ ಸೇವೆ ಮಾಡುವ ಸಾಧಕರ ವರೆಗೆ ಯಾರಿಗೂ ಅನುಭವವಿರಲಿಲ್ಲ ! ಆದರೆ ನಮ್ಮೊಂದಿಗೆ ಪರಾತ್ಪರ ಗುರು ಡಾ. ಆಠವಲೆಯವರ ಸಂಕಲ್ಪ ಮತ್ತು ಆಶೀರ್ವಾದವಿತ್ತು ! ಹಾಗಾಗಿ ಯಾವುದೇ ರಾಜಕೀಯ ಅಥವಾ ಆರ್ಥಿಕ ಬೆಂಬಲವಿಲ್ಲದೇ ಎಲ್ಲ ಸಂಕಷ್ಟಗಳನ್ನು ಎದುರಿಸುತ್ತಾ ತತ್ತ್ವನಿಷ್ಠೆಯಿಂದ ಪತ್ರಿಕೆ ಮೂಲಕ ರಾಷ್ಟ್ರ, ಧರ್ಮ ಕಾರ್ಯ ಮಾಡಲು ಸಾಧ್ಯವಾಯಿತು. ನಮ್ಮಲ್ಲಿ ಅರ್ಹತೆ ಇಲ್ಲದಿದ್ದರೂ ಸನಾತನ ಪ್ರಭಾತ ಮೂಲಕ ಸೇವೆಯ ಅವಕಾಶ ನೀಡಿದ ಬಗ್ಗೆ ನಾವು ಕೃತಜ್ಞರಾಗಿದ್ದೇವೆ. ಸನಾತನ ಪ್ರಭಾತದ ವಿಚಾರದಿಂದ ಪ್ರೇರಣೆ ಪಡೆದು ಹಿಂದೂ ರಾಷ್ಟ್ರದ ಸ್ವಾತಂತ್ರ್ಯಯುದ್ಧದ ಕ್ರಾಂತಿಕಾರರು ನಿರ್ಮಾಣವಾಗಲೆಂದು ಸನಾತನ ಪ್ರಭಾತದ ಸಂಸ್ಥಾಪಕ ಸಂಪಾದಕರಾದ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಪ್ರಾರ್ಥನೆ - ಸನಾತನ ಪ್ರಭಾತ ನಿಯತಕಾಲಿಕೆ ಸಮೂಹದಲ್ಲಿ ಸೇವೆ ಮಾಡುವ ಎಲ್ಲ ಸಾಧಕರು
‘ಎನ್‌ಬಿಸಿ’ ನ್ಯೂಸ್‌ಮೇಕರ್ಸ್ ನೀಡಿದ ‘ಉತ್ಕೃಷ್ಟ ಮರಾಠಿ ದೈನಿಕ ೨೦೧೨’
ಪ್ರಶಸ್ತಿಯೊಂದಿಗೆ ಮಾಜಿ ಸಂಪಾದಕ ಪೂ. ಪೃಥ್ವಿರಾಜ ಹಜಾರೆ
೨೦೧೬ ರ ವರ್ಧಂತ್ಯೋತ್ಸವ ಸಮಾರಂಭದಲ್ಲಿ ಮಾರ್ಗದರ್ಶನ ಮಾಡುತ್ತಿರುವ ಸಮೂಹ ಸಂಪಾದಕ ಶ್ರೀ. ಶಶಿಕಾಂತ ರಾಣೆ
ವಾರ್ತೆಗೆ ಸಂಪಾದಕೀಯ ದೃಷ್ಟಿಕೋನ ನೀಡುವ ಅಭಿನವ ಪದ್ಧತಿ ಜನಕ
‘ಸನಾತನ ಪ್ರಭಾತ’ದ ಸಂಪಾದಕರಾಗಿದ್ದಾಗ ಅವರು ಪ್ರತಿಯೊಂದು ವಾರ್ತೆ ಜೊತೆಗೆ ಅದಕ್ಕೆ ಸಂಬಂಧಿತ ಸಮಾಜ, ರಾಷ್ಟ್ರ ಮತ್ತು ಧರ್ಮ ಹಿತದ ಸಂಪಾದಕೀಯ ದೃಷ್ಟಿಕೋನ ನೀಡುವ ಅಭಿನವ ಪದ್ಧತಿಯನ್ನು ಆರಂಭಿಸಿದರು. ಆದ್ದರಿಂದ ಪ್ರತಿಯೊಂದು ವಾರ್ತೆಗೆ ಸಂಪಾದಕೀಯ ದೃಷ್ಟಿಕೋನ ನೀಡುವ ‘ಸನಾತನ ಪ್ರಭಾತ’ವು ಜಗತ್ತಿನ ಏಕೈಕ ನಿಯತಕಾಲಿಕೆಯಾಗಿದೆ.
ಸನಾತನ ಪ್ರಭಾತ ನಿಯತಕಾಲಿಕೆ ಸಮೂಹದ ಕಾರ್ಯಪದ್ಧತಿ...
೧. ಮರಾಠಿ ಸಾಪ್ತಾಹಿಕ ಸನಾತನ ಪ್ರಭಾತ
೨೮.೪.೧೯೯೮ ರಲ್ಲಿ ೮ ಪುಟಗಳ ಮರಾಠಿ ಸಾಪ್ತಾಹಿಕ ‘ಸನಾತನ ಪ್ರಭಾತ’ವು ಮೊದಲ ಬಾರಿ ಮುದ್ರಣಗೊಂಡಿತು. ಅದು ಈಗ ೨೦೧೫ ರ ನವೆಂಬರ್‌ನಿಂದ ೧೬ ಪುಟಗಳಲ್ಲಿ ಪ್ರಕಾಶನಗೊಳ್ಳುತ್ತಿದೆ.
೨. ಕನ್ನಡ ಪಾಕ್ಷಿಕ ಸನಾತನ ಪ್ರಭಾತ (ಈಗಿನ ಸಾಪ್ತಾಹಿಕ)
೧೯೯೮ ರ ಜುಲೈಯಲ್ಲಿ ೮ ಪುಟಗಳಾಗಿ ಹೊರಬಂದ ಕನ್ನಡ ಪಾಕ್ಷಿಕ ಸನಾತನ ಪ್ರಭಾತವು ೧೯೯೯ ರಲ್ಲಿ ೮ ಪುಟಗಳ ಸಾಪ್ತಾಹಿಕ ಸನಾತನ ಪ್ರಭಾತವಾಗಿ ಪ್ರಕಾಶನಗೊಳ್ಳಲು ಆರಂಭವಾಯಿತು. ೨೦೧೬ ರ ಎಪ್ರಿಲ್ ೭ ರಿಂದ ೧೬ ಪುಟಗಳಲ್ಲಿ ಪ್ರಕಾಶನಗೊಳ್ಳುತ್ತಿದೆ.
೩. ಒಂದು ವರ್ಷದಲ್ಲಿ ದೈನಿಕ ಸನಾತನ ಪ್ರಭಾತದ ೪ ಆವೃತ್ತಿಗಳು
ದೈನಿಕದ ಗೋವಾ ಮತ್ತು ಸಿಂಧುದುರ್ಗ ಆವೃತ್ತಿಯು ೪.೪.೧೯೯೯ ರಂದು, ರತ್ನಾಗಿರಿ ಆವೃತ್ತಿಯು ೨೮.೧೧.೧೯೯೯ ರಂದು, ಪಶ್ಚಿಮ ಮಹಾರಾಷ್ಟ್ರ ಮತ್ತು ಮರಾಠಾವಾಡ ಆವೃತ್ತಿಯು ೫.೧೨.೧೯೯೯ ರಂದು ಹಾಗೂ ಮುಂಬಯಿ, ಠಾಣೆ, ರಾಯಗಡ ಮತ್ತು ಉತ್ತರ ಮಹಾರಾಷ್ಟ್ರ ಆವೃತ್ತಿಯು ೫.೩.೨೦೦೦ ದಂದು, ಈ ರೀತಿ ಒಂದು ವರ್ಷದ ಕಾಲಾವಧಿಯಲ್ಲಿ ದೈನಿಕದ ೪ ಆವೃತ್ತಿಗಳನ್ನು ಆರಂಭಿಸಲಾಯಿತು. ಪ್ರಾರಂಭದಲ್ಲಿ ನಿಯಮಿತ ೪ ಮತ್ತು ರವಿವಾರ ೬ ಪುಟಗಳಿದ್ದ ದೈನಿಕವು ಈಗ ನಿಯಮಿತ ೮ ಪುಟ ಮತ್ತು ರವಿವಾರ ೧೦ ಪುಟಗಳಲ್ಲಿ ಪ್ರಕಾಶನಗೊಳ್ಳುತ್ತಿದೆ.
೪. ಹಿಂದಿ ಮಾಸಿಕ ಸನಾತನ ಪ್ರಭಾತ (ಈಗ ಪಾಕ್ಷಿಕ)
ಜನವರಿ ೨೦೦೦ ದಲ್ಲಿ ೧೬ ಪುಟಗಳ ಹಿಂದಿ ಮಾಸಿಕ ಸನಾತನ ಪ್ರಭಾತವಾಗಿ ಹೊರ ಬಂದು ೨೦೧೬ ರ ಜನವರಿಯಿಂದ ಪಾಕ್ಷಿಕದ ಸ್ವರೂಪದಲ್ಲಿ ಪ್ರಕಾಶನಗೊಳ್ಳುತ್ತಿದೆ.
೫. ಗುಜರಾತಿ ಮಾಸಿಕ ಸನಾತನ ಪ್ರಭಾತ
ಮಾರ್ಚ್ ೨೦೦೦ ದಲ್ಲಿ ಗುಜರಾತಿ ಮಾಸಿಕ ಸನಾತನ ಪ್ರಭಾತವನ್ನು ಆರಂಭಿಸಲಾಯಿತು.
೬. ಆಂಗ್ಲ ಮಾಸಿಕ ಸನಾತನ ಪ್ರಭಾತ (ಈಗ ಪಾಕ್ಷಿಕ)
೨೦೦೬ ರಲ್ಲಿ ೧೨ ಪುಟಗಳಲ್ಲಿ ಆಂಗ್ಲ ಮಾಸಿಕ ಸನಾತನ ಪ್ರಭಾತವನ್ನು ಆರಂಭಿಸಲಾಯಿತು. ೨೦೧೬ ರ ಜನವರಿಯಿಂದ ಅದು ಪಾಕ್ಷಿಕದ ಸ್ವರೂಪದಲ್ಲಿ ಪ್ರಕಾಶನಗೊಳ್ಳುತ್ತಿದೆ.
ಇಂಟರ್‌ನೆಟ್‌ನಲ್ಲಿನ ‘ಹಿಂದೂ ವಾರ್ತೆ’ ಈ ವೃತ್ತವಾಹಿನಿಯ ಸಂಕಲ್ಪಕ
ಮುಂಚೂಣಿಯಲ್ಲಿರುವ ವಾರ್ತಾವಾಹಿನಿಗಳು ಹಿಂದೂಗಳ ಮೇಲಾಗುವ ಅನ್ಯಾಯ ಮತ್ತು ಅತ್ಯಾಚಾರಗಳ ವಾರ್ತೆಗಳನ್ನು ಪ್ರಸಾರಗೊಳಿಸದ ಕಾರಣ ಸಾಮಾನ್ಯ ಹಿಂದೂಗಳು ಧರ್ಮಸಂಕಟದ ವಿಷಯದಲ್ಲಿ ಅಜ್ಞಾನಿಗಳಾಗಿರುತ್ತಾರೆ. ಇದು ಗಮನಕ್ಕೆ ಬಂದಾಗ ಇಂಟರ್‌ನೆಟ್ ಮೂಲಕ ‘ಸನಾತನ ಪ್ರಭಾತ’ದಲ್ಲಿನ ವಾರ್ತೆಗಳನ್ನು ದೃಶ್ಯಶ್ರಾವ್ಯ ಸ್ವರೂಪದಲ್ಲಿ ಪ್ರಸಾರ ಮಾಡುವ ಸಂಕಲ್ಪನೆಯನ್ನು ಮಂಡಿಸಿದರು. ೨೯ ಡಿಸೆಂಬರ್ ೨೦೧೪ ರಿಂದ ೨೯ ಜನವರಿ ೨೦೧೬ ಈ ಅವಧಿಯಲ್ಲಿ ಅಂದರೆ ೧೩ ತಿಂಗಳು ನಡೆದಿರುವ ಈ ಉಪಕ್ರಮದ ಮೂಲಕ ಹಿಂದೂಗಳ ವಾರ್ತಾವಾಹಿನಿಯ ಅಡಿಪಾಯವನ್ನು ರಚಿಸಲಾಯಿತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನ ಪ್ರಭಾತ ನಿಯತಕಾಲಿಕೆ ಸಮೂಹದ ಸಂಸ್ಥಾಪಕ ಸಂಪಾದಕರಾದ ಪರಾತ್ಪರ ಗುರು ಡಾ. ಆಠವಲೆ