ಪರಾತ್ಪರ ಗುರು ಡಾ. ಆಠವಲೆಯವರಿಗಾದ ಗುರುಪ್ರಾಪ್ತಿ ಮತ್ತು ಅವರು ಮಾಡಿದ ಅಧ್ಯಾತ್ಮ ಪ್ರಸಾರ !

ಬಹಿರಂಗ ಸಭೆಯಲ್ಲಿ 'ಸಾಧನೆ ಮತ್ತು ಕ್ಷಾತ್ರಧರ್ಮ' ಈ ವಿಷಯದ ಬಗ್ಗೆ ಮಾರ್ಗದರ್ಶನ
ಮಾಡುತ್ತಿರುವ ಪರಾತ್ಪರ ಗುರು. ಡಾ ಆಠವಲೆ (೧೯೯೭-೧೯೯೮)
ಅಧ್ಯಾತ್ಮಶಾಸ್ತ್ರವನ್ನು ಕಲಿಯಲು ಮಾಡಿದ ಪ್ರಯತ್ನ ಹಾಗೂ ಗುರುಪ್ರಾಪ್ತಿ
ಸಮ್ಮೋಹನ ಉಪಚಾರಗಳಿಂದ ಗುಣಮುಖರಾಗದ ಮನೋರೋಗಿಗಳು ಸಂತರು ಹೇಳಿದ ಸಾಧನೆಯನ್ನು ಮಾಡಿದ ನಂತರ ಗುಣ ಮುಖರಾಗುತ್ತಾರೆ, ಎಂಬುದು ಅರಿವಾದ ನಂತರ ಪರಾತ್ಪರ ಗುರು ಡಾ. ಆಠವಲೆಯವರು ೧೯೮೩ ರಿಂದ ೧೯೮೭ ಈ ಅವಧಿಯಲ್ಲಿ ಅಧ್ಯಾತ್ಮದಲ್ಲಿನ ಅಧಿಕಾರಿಗಳಾಗಿರುವ ಸುಮಾರು ೩೦ ಸಂತರಲ್ಲಿಗೆ ಹೋಗಿ ಅಧ್ಯಾತ್ಮವನ್ನು ಅಧ್ಯಯನ ಮಾಡಿದರು ಹಾಗೂ ಅಧ್ಯಾತ್ಮಶಾಸ್ತ್ರದ ಶ್ರೇಷ್ಠತೆಯ ಅರಿವಾದ ನಂತರ ಸ್ವತಃ ಸಾಧನೆಯನ್ನು ಆರಂಭಿಸಿದರು. ೧೯೮೭ ರಲ್ಲಿ ಅವರಿಗೆ ಇಂದೂರು ನಿವಾಸಿ ಶ್ರೇಷ್ಠ ಸಂತರಾದ ಪ.ಪೂ. ಭಕ್ತರಾಜ ಮಹಾರಾಜರ ರೂಪದಲ್ಲಿ ಗುರುಪ್ರಾಪ್ತಿಯಾಯಿತು.
ಅಧ್ಯಾತ್ಮಪ್ರಸಾರಕ್ಕಾಗಿ ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯ ಸ್ಥಾಪನೆ
ಮತ್ತು ಸ್ವತಃ ಮಾಡಿದ ಅಧ್ಯಾತ್ಮಪ್ರಸಾರದ ಕಾರ್ಯ
‘ಜೀವನದಲ್ಲಿ ಅತ್ಯುಚ್ಚ ಆನಂದ ನೀಡುವ ‘ಅಧ್ಯಾತ್ಮ ಶಾಸ್ತ್ರ’ವು ವೈದ್ಯಕೀಯ ಶಾಸ್ತ್ರಕ್ಕಿಂತ ಶ್ರೇಷ್ಠ ಮಟ್ಟದ ಶಾಸ್ತ್ರ ವಾಗಿದೆ’, ಎಂಬುದರ ಅನುಭವವಾದ ನಂತರ ಪರಾತ್ಪರ ಗುರು ಡಾ. ಆಠವಲೆಯವರು ಅಧ್ಯಾತ್ಮಶಾಸ್ತ್ರವನ್ನು ಪ್ರಸಾರ ಮಾಡಲು ೧.೮.೧೯೯೧ ರಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಕೃಪಾಶೀರ್ವಾದದಿಂದ ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯನ್ನು ಸ್ಥಾಪಿಸಿದರು. ೧೯೯೪ ರಲ್ಲಿ ಅವರು ಪೂರ್ಣವೇಳೆ ಅಧ್ಯಾತ್ಮಪ್ರಸಾರದ ಕಾರ್ಯ ಮಾಡಲು ತಮ್ಮ ವೈದ್ಯಕೀಯ ವೃತ್ತಿಯನ್ನು ತ್ಯಜಿಸಿದರು.
೧೯೮೭ ರಿಂದ ೧೯೯೫ ಈ ಅವಧಿಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಅಧ್ಯಾತ್ಮದ ಅಭ್ಯಾಸವರ್ಗಗಳನ್ನು ಆಯೋಜಿಸುವುದು, ಅಧ್ಯಾತ್ಮದ ಶಿಕ್ಷಣ ನೀಡುವ ಗ್ರಂಥಗಳ ಸಂಕಲನ ಮಾಡುವುದು, ಜಿಜ್ಞಾಸುಗಳು ಮತ್ತು ಸಾಧಕರ ಸಂದೇಹಗಳನ್ನು ನಿವಾರಿಸಿ ಅವರಿಗೆ  ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಗಾಗಿ ಸಹಾಯ ಮಾಡುವುದು ಇತ್ಯಾದಿ ಕಾರ್ಯ ಮಾಡಿದರು.
‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯ ಮಾರ್ಗದರ್ಶನದಲ್ಲಿ ಸಾಧನೆ ಮಾಡುವ ಸಾಧಕರಿಗೆ ಗುರುಸೇವೆಯ ಅವಕಾಶ ಸಿಗಬೇಕೆಂದು ಪರಾತ್ಪರ ಗುರು ಡಾ. ಆಠವಲೆಯವರು ಮುಂಬಯಿ (೧೯೯೨), ಗೋವಾ (೧೯೯೩) ಮತ್ತು ಸಿಂಧುದುರ್ಗ ಜಿಲ್ಲೆಯ ಕುಡಾಳ (೧೯೯೫) ಈ ಸ್ಥಳಗಳಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಗುರುಪೂರ್ಣಿಮಾ ಮಹೋತ್ಸವವನ್ನು ಆಯೋಜಿಸಿದರು. ೧೯೯೫ ರಲ್ಲಿ ಇಂದೂರಿನ  ಪ.ಪೂ. ಭಕ್ತರಾಜ ಮಹಾರಾಜರ ಅಮೃತಮಹೋತ್ಸವ ಸಮಾರಂಭವನ್ನು ಆಯೋಜಿಸಿದರು.
೧೯೯೬ ರಿಂದ ೧೯೯೮ ಈ ಅವಧಿಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ಈ ರಾಜ್ಯಗಳಲ್ಲಿ ‘ಸಾಧನೆ ಮತ್ತು ಕ್ಷಾತ್ರಧರ್ಮ ಸಾಧನೆ’ ಈ ವಿಷಯದಲ್ಲಿ ನೂರಾರು ಬಹಿರಂಗ ಸಭೆಗಳನ್ನು ಆಯೋಜಿಸಿದರು.
‘ಸನಾತನ ಸಂಸ್ಥೆ’ಯ ಮೂಲಕ ನಡೆಯುತ್ತಿರುವ ಅಧ್ಯಾತ್ಮಪ್ರಸಾರ
ಅಧ್ಯಾತ್ಮಪ್ರಸಾರ ಕಾರ್ಯದ ವ್ಯಾಪ್ತಿಯು ಹೆಚ್ಚಾದಾಗ ಪರಾತ್ಪರ ಗುರು ಡಾ. ಆಠವಲೆಯವರು ೨೩ ಮಾರ್ಚ್ ೧೯೯೯ ರಂದು ಸನಾತನ ಸಂಸ್ಥೆಯನ್ನು ಸ್ಥಾಪಿಸಿದರು. ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಅಧ್ಯಾತ್ಮಪ್ರಸಾರದ ಕಾರ್ಯ ಮಾಡಲು ಸಾಧ್ಯ ವಿರುವ ಸಾವಿರಾರು ಸಾಧಕರು ಸಿದ್ಧರಾಗಿರುವುದರಿಂದ ಈಗ ಸಾಪ್ತಾಹಿಕ ಸತ್ಸಂಗ, ಪ್ರವಚನಗಳು, ದೂರಚಿತ್ರವಾಹಿನಿಗಳಲ್ಲಿನ ಧರ್ಮಸತ್ಸಂಗ, ಬಾಲಸಂಸ್ಕಾರವರ್ಗ, ಗುರುಪೂರ್ಣಿಮಾ ಮಹೋತ್ಸವ ಇತ್ಯಾದಿಗಳ ಮೂಲಕ ಅಧ್ಯಾತ್ಮಪ್ರಸಾರದ ಕಾರ್ಯವು ನಿರಂತರವಾಗಿ ನಡೆಯುತ್ತಿದೆ. ಪ್ರಯಾಗ (೨೦೦೧ ಮತ್ತು ೨೦೧೩), ನಾಸಿಕ್ (೨೦೦೩ ಮತ್ತು  ೨೦೧೫), ಉಜ್ಜೈನ್ (೨೦೦೪ ಮತ್ತು ೨೦೧೬) ಮತ್ತು ಹರಿದ್ವಾರ (೨೦೧೦) ನಲ್ಲಿ ನಡೆದ ಸಿಂಹಸ್ಥಪರ್ವ (ಕುಂಭಮೇಳ) ದಲ್ಲಿ ಸನಾತನ ಸಂಸ್ಥೆಯು ಬೃಹತ್ಪ್ರಮಾಣದಲ್ಲಿ ಅಧ್ಯಾತ್ಮಪ್ರಸಾರ ಮಾಡಿದೆ. ಸನಾತನ ಸಂಸ್ಥೆಯ ‘Sanatan.org’ ಈ ಜಾಲತಾಣದ ಮೂಲಕ ಸಾಧನೆಯ ವಿಷಯದಲ್ಲಿ ಮಾರ್ಗದರ್ಶನ ಮತ್ತು ಸಂದೇಹಗಳ ನಿವಾರಣೆ ಮಾಡಲಾಗುತ್ತದೆ ಹಾಗೂ ಸನಾತನದ ಗ್ರಂಥಗಳ ಜ್ಞಾನದ ಆಧಾರದಲ್ಲಿ ಧರ್ಮಶಿಕ್ಷಣದ ಪ್ರಸಾರವನ್ನೂ ಮಾಡಲಾಗುತ್ತದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪರಾತ್ಪರ ಗುರು ಡಾ. ಆಠವಲೆಯವರಿಗಾದ ಗುರುಪ್ರಾಪ್ತಿ ಮತ್ತು ಅವರು ಮಾಡಿದ ಅಧ್ಯಾತ್ಮ ಪ್ರಸಾರ !