ಸನಾತನ ಸಂಸ್ಥೆ ವಿನಾಕಾರಣ ಬಲಿಪಶು ! - ಅಭಯ ವರ್ತಕ್‌

ಸನಾತನ ಸಂಸ್ಥೆಯಿಂದ ಮುಂಬೈಯಲ್ಲಿ ಪತ್ರಿಕಾಗೋಷ್ಠಿ
ದೇಶದಲ್ಲಿ ಅಧಿಕಾರ ಬದಲಾಯಿತು; ಆದರೆ ಪುರೋಗಾಮಿಗಳ ಒತ್ತಡದಲ್ಲಿ ಹಿಂದುತ್ವನಿಷ್ಠರ ಶೋಷಣೆ ಎಂದು ನಿಲ್ಲುವುದು ?
ಶ್ರೀ. ಅರವಿಂದ ಪಾನಸಾರೆ ,ಅಭಯ ವರ್ತಕ್‌, ಶ್ರೀ. ಸುನೀಲ ಘನವಟ್.
ಮುಂಬೈ : ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್‌ರನ್ನು ಬಂಧಿಸಿ ೮ ವರ್ಷಗಳಾದ ನಂತರ ‘ಅವರ ವಿರುದ್ಧ ಸಾಕ್ಷಿಗಳಿಲ್ಲ’ ಎಂದು ತನಿಖಾ ದಳವು ಹೇಳಿತು, ಮಡಗಾಂವ್ ಬಾಂಬ್‌ಸ್ಫೋಟ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಸಾಧಕರನ್ನು ೪ ವರ್ಷಗಳ ನಂತರ ನಿರಪರಾಧಿಗಳೆಂದು ಮುಕ್ತಗೊಳಿಸ ಲಾಯಿತು. ಪಾನ್ಸಾರೆ ಹತ್ಯೆ ಪ್ರಕರಣದಲ್ಲಿ ಸಮೀರ ಗಾಯಕ್ವಾಡರನ್ನು ಬಂಧಿಸಿ ೮ ತಿಂಗಳಾದರೂ ಇಲ್ಲಿಯ ವರೆಗೆ ಒಂದೂ ಸಾಕ್ಷಿ ಈ ತನಿಖಾ ದಳದವರಿಗೆ ಸಿಗಲಿಲ್ಲ, ಆದ್ದರಿಂದ ಆರೋಪಪತ್ರ ಸಲ್ಲಿಸಲು ಉದ್ದೇಶಪೂರ್ವಕವಾಗಿ ಮುಂದೂಡಲಾಗುತ್ತಿದೆ. ಇದೇ ರೀತಿ ಡಾ. ವೀರೇಂದ್ರಸಿಂಗ್ ತಾವಡೆಯವರನ್ನು ಬಂಧಿಸಲಾಗಿದೆ. ಈ ಮಾಧ್ಯಮದಿಂದ ಪುನಃ ಹಿಂದುತ್ವದ ಕಾರ್ಯ ಮಾಡುವ ಸನಾತನ ಸಂಸ್ಥೆಯನ್ನು ‘ಸಾಫ್ಟ್ ಟಾರ್ಗೆಟ್’ ಎನಿಸಿ ಬಲಿಪಶು ಮಾಡುವ ಕೃತಿ ಭಾಜಪ ಸರಕಾರದ ಕಾಲದಲ್ಲಿಯೂ ನಡೆಯುತ್ತಿದೆ. ಒಟ್ಟಾರೆ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಂತೂ ಬದಲಾವಣೆಯಾಯಿತು, ಆದರೆ ಹಿಂದುತ್ವನಿಷ್ಠರ ಶೋಷಣೆಯು ನಿಲ್ಲಲಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈ ಕಾರಣದಿಂದ ದೇಶದ ಅನೇಕ ಹಿಂದುತ್ವನಿಷ್ಠ ಸಂಘಟನೆಗಳು ನಮ್ಮಲ್ಲಿ ಸರಕಾರದ ಈ ನೀತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಎಂದು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಅಭಯ ವರ್ತಕ್ ಇವರು ಮುಂಬೈಯಲ್ಲಿ ನಡೆದ ಪತ್ರಿಕಾ ಪರಿಷತ್ತಿನಲ್ಲಿ ಹೇಳಿದರು.
ಶ್ರೀ. ವರ್ತಕ್‌ರವರು ಮುಂದೆ ಮಾತನಾಡುತ್ತಾ, ಕೆಲವು ದಿನಗಳ ಹಿಂದೆ ಸನಾತನದ ಪುಣೆಯ ೧೫ ಸಾಧಕರ ವಿಚಾರಣೆ ನಡೆಯಿತು. ಅವರಲ್ಲಿ ಇಬ್ಬರ ‘ಪಾಲಿಗ್ರಾಫಿಕ್ ಟೆಸ್ಟ್’ ನ ಬೇಡಿಕೆಯನ್ನೂ ಸಿಬಿಐ ಮಾಡಿದೆ. ಅದಕ್ಕೆ ಒಪ್ಪಿ ಸನಾತನವು ಈ ಪ್ರಕರಣದಲ್ಲಿ ಎಲ್ಲ ರೀತಿಯ ಸಹಕಾರವನ್ನೂ ಮಾಡಿತು. ಈ ಟೆಸ್ಟ್ ಮುಂದೆ ಏನಾಯಿತು ಎಂಬುದರ ಬಗ್ಗೆ ಯಾವುದೇ ರೀತಿಯ ಮಾಹಿತಿ ಇಲ್ಲ. ೨೦೧೫ರ ಸೆಪ್ಟೆಂಬರ್‌ದಲ್ಲಿ ದಾಭೋಲಕರ್ ಹತ್ಯೆ ಪ್ರಕರಣದ ತನಿಖೆ ನಡೆಸುವ ‘ಸಿಬಿಐ’ಯ ಅಧಿಕಾರಿ ನಂದಕುಮಾರ್ ನಾಯರ್ ವಿರುದ್ಧ ನಾವು ಪತ್ರಿಕಾ ಪರಿಷತ್ತು ಕರೆಸಿ, ಉಚ್ಚ ನ್ಯಾಯಾಲಯವು ಗಂಭೀರವಾಗಿ ತರಾಟೆಗೆ ತೆಗೆದುಕೊಂಡ ವ್ಯಕ್ತಿಗೆ ಈ ಪ್ರಕರಣ ಒಪ್ಪಿಸಿದೆ. ಆದ್ದರಿಂದ ಅವರು ಇಲ್ಲಿಯೂ ಸನಾತನವನ್ನು ಬಲಿಪಶುವನ್ನಾಗಿಸುವರು, ಎಂದು ಆರೋಪಿಸಿದ್ದೆವು. ಅದು ಇಂದು ನಿಜವಾಯಿತು. ಮೊನ್ನೆ ತಡರಾತ್ರಿ ಡಾ. ತಾವಡೆಯವರನ್ನು ಬಂಧಿಸಿ ಸನಾತನವನ್ನು ಬಲಿಪಶುವನ್ನಾಗಿಸುವಲ್ಲಿ ಸಿಬಿಐಯು ಒಂದು ಹೆಜ್ಜೆ ಮುಂದೆ ಇಟ್ಟಿದೆ. ಡಾ. ತಾವಡೆಯವರು ಅಮಾಯಕರಾಗಿದ್ದು ಅವರು ಸನಾತನದ ಪನವೆಲ್ ಆಶ್ರಮಕ್ಕೆ ಸಾಧನೆ ಮಾಡಲು ಬರುತ್ತಿದ್ದರು. ೨೦೦೭ ರ ಹಿಂದೆ ಅವರು ಹಿಂದೂ ಜನಜಾಗೃತಿ ಸಮಿತಿಯಲ್ಲಿ ಕಾರ್ಯನಿರತರಾಗಿದ್ದರು. ಕೆಲವು ಕೌಟುಂಬಿಕ ಕಾರಣ ಗಳಿಂದಾಗಿ ಅವರು ಮನೆಯಲ್ಲಿದ್ದು ಸಾಧನೆ ಮಾಡುತ್ತಿದ್ದರು. ನಾಳೆ ಕಲ್ಬುರ್ಗಿ ಹತ್ಯೆ ಪ್ರಕರಣದಲ್ಲಿಯೂ ಇನ್ನು ಕೆಲವು ನಿರಪರಾಧಿ ಸಾಧಕರನ್ನು ಸಿಲುಕಿಸಿ ಬಂಧಿಸುವ ಪ್ರಯತ್ನ ಖಂಡಿತ ನಡೆಯುವುದು ಎಂಬುದರಲ್ಲಿ ಸಂದೇಹವಿಲ್ಲ, ಎಂದರು.
ದಾಬೋಳ್ಕರ ಹತ್ಯೆ ಪ್ರಕರಣದ ಮೊದಲ ಬಂಧನ ಎಂಬ ತಪ್ಪು ಅಪಪ್ರಚಾರ !
ಶ್ರೀ. ವರ್ತಕ್‌ರವರು ಮುಂದೆ ಮಾತನಾಡುತ್ತಾ, ಡಾ. ದಾಭೋಳ್ಕರ ಹತ್ಯೆ ಪ್ರಕರಣದಲ್ಲಿ ನಾಗೋರಿ ಮತ್ತು ಖಂಡೆಲವಾಲ ಹೆಸರಿನ ಇಬ್ಬರು ಗೂಂಡಾಗಳನ್ನು ಇದಕ್ಕಿಂತ ಮೊದಲೇ ಬಂಧಿಸಲಾಗಿತ್ತು ಮತ್ತು ಅವರು ಹತ್ಯೆಗಾಗಿ ಉಪಯೋಗಿಸಿದ ಪಿಸ್ತೂಲ್ ವಶಪಡಿಸಿಕೊಂಡ ಬಗ್ಗೆಯೂ ನ್ಯಾಯಾಲಯದಲ್ಲಿ ಹೇಳಲಾಗಿತ್ತು. ಒಂದು ವೇಳೆ ಆ ಪಿಸ್ತೂಲ್ ಪೊಲೀಸರಲ್ಲೆೀ ಇದ್ದರೆ ಅದೇ ಪಿಸ್ತೂಲಿನಿಂದ ಮುಂದಿನ ಎರಡು ಹತ್ಯೆಗಳು ಹೇಗೆ ನಡೆಯುತ್ತದೆ ? ಇದರಲ್ಲಿ ನಾಗೋರಿಯು ನ್ಯಾಯಾಲಯದಲ್ಲಿ ರಾಕೇಶ ಮಾರಿಯಾ ಎಂಬವನ ಮೇಲೆ ಆರೋಪ ಮಾಡುತ್ತಾ, ‘ಅಪರಾಧ ಒಪ್ಪಿದರೆ ೨೫ ಲಕ್ಷ ನೀಡುತ್ತೇನೆ’ ಎಂದು ಒತ್ತಡ ಹೇರಿದ ಬಗ್ಗೆ ಕಳವಳಕಾರಿ ಆರೋಪ ಮಾಡಿದ್ದನು. ಈ ಆರೋಪಿಯ ಬಗ್ಗೆಯೂ ಮುಂದೆ ವಿಚಾರಣೆಯಾಗಲಿಲ್ಲ ಮತ್ತು ಇಬ್ಬರೂ ಜಾಮೀನಿನಲ್ಲಿ ಮುಕ್ತರಾದರು, ಎಂದರು.
ಗೋವಾದಲ್ಲಿ ರಾಜಕೀಯ ಕೇಂದ್ರ ನಿರ್ಮಿಸಲು ಆಮ್ ಆದ್ಮಿ ಪಾರ್ಟಿ (ಆಪ್)ಯಿಂದ ಆರೋಪದ ಷಡ್ಯಂತ್ರ !
ಶ್ರೀ. ವರ್ತಕ್‌ರವರು ಮುಂದೆ ಮಾತನಾಡುತ್ತಾ, ಆಪ್ ಗೋವಾದಲ್ಲಿ ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ನಿಲ್ಲುವುದಾಗಿ ಘೋಷಣೆ ಮಾಡಿದ್ದು, ಅದರಿಂದ ಗೋವಾದಲ್ಲಿ ಪ್ರಭಾವವಿರುವ ಹಿಂದುತ್ವವಾದಿ ಸಂಸ್ಥೆಗಳ ಮೇಲೆ ಆರೋಪ ಮಾಡಿ ಪುಕ್ಕಟೆ ಪ್ರಸಿದ್ಧಿಯೊಂದಿಗೆ ಮತಗಳನ್ನು ಒಳಹಾಕುವುದು ಅದರ ಉದ್ದೇಶವಾಗಿದೆ. ಅವರು ಮೊದಲು ಬಲಾತ್ಕಾರ, ದಂಗೆ, ಲಂಚ ಮುಂತಾದ ಪ್ರಕರಣದಲ್ಲಿ ಸಿಲುಕಿದ ಆಪ್‌ನ ನಾಯಕರ ಬಗ್ಗೆ ಕೇಜ್ರಿವಾಲ್ ಹಾಗೂ ಕಾಂಗ್ರೆಸ್‌ನವರ ಹಗರಣದಲ್ಲಿ ಸೋನಿಯಾಳನ್ನು ಬಂಧಿಸುವ ಆಗ್ರಹಿಸುವ ಧೈರ್ಯ ತೋರಿಸಲಿ!, ಎಂದರು.
ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಂಘಟಕ ಶ್ರೀ. ಸುನೀಲ ಘನವಟ್, ರಾಜ್ಯ ವಕ್ತಾರರಾದ ಶ್ರೀ. ಅರವಿಂದ ಪಾನಸಾರೆ ಉಪಸ್ಥಿತರಿದ್ದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನ ಸಂಸ್ಥೆ ವಿನಾಕಾರಣ ಬಲಿಪಶು ! - ಅಭಯ ವರ್ತಕ್‌