ಹುಬ್ಬಳ್ಳಿ, ಮಂಗಳೂರು, ಬೆಂಗಳೂರಿನಲ್ಲಿ ರಣರಾಗಿಣಿ ಶಾಖೆ ಉದ್ಘಾಟನೆ !

ಹುಬ್ಬಳ್ಳಿ
ಮಹಿಳೆಯರೇ ಹಿಂದೂ ಸಂಸ್ಕೃತಿಯನ್ನು ಪಾಲಿಸಿ !
- ಪೂಜ್ಯ ಮಾತಾ ತೇಜೋಮಯಿ
‘ಇಂದಿನ ಯುವತಿಯರು ಪಾಶ್ಚಾತ್ಯ ಪದ್ಧತಿಯಂತೆ ಉಡುಪುಗಳನ್ನು ಧರಿಸಿ ಸಂಸ್ಕೃತಿಯನ್ನು ಅಪಮಾನಿಸುತ್ತಿದ್ದರೆ. ಪಾಲಕರು ಮಕ್ಕಳಿಗಾಗಿ ನೈತಿಕ ಶಿಕ್ಷಣವನ್ನು ನೀಡಲು ವಿಫಲರಾಗುತ್ತಿದ್ದು, ಮಕ್ಕಳ ಮೇಲೆ ಸುಸಂಸ್ಕಾರಗಳನ್ನು ಬಿಂಬಿಸದ ಕಾರಣ ಇವತ್ತು ಅನೇಕ ಯುವತಿಯರು ದಿಶಾಹೀನರಂತೆ ವರ್ತಿಸುತ್ತಿದ್ದು, ಸ್ವೇಚ್ಛಾಚಾರಿಗಳಾಗುತ್ತಿದ್ದರೆ. ಆದ್ದರಿಂದ ಧರ್ಮಶಿಕ್ಷಣವನ್ನು ಪಡೆದು ಧರ್ಮಾಚರಣಿಗಳಾಗುವುದು ಅತ್ಯಂತ ಅವಶ್ಯಕವಾಗಿದೆ, ಎಂದು ಶ್ರೀಮಾತಾ ಆಶ್ರಮದ ಪೂಜ್ಯ ಮಾತಾ ತೇಜೋಮಯಿ ಇವರು ಹೇಳಿದರು. ಅವರು ಮೇ ೨೬ ರಂದು ಇಲ್ಲಿನ ಆರ್. ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ರಣರಾಗಿಣಿ ಶಾಖೆಯ ಉದ್ಘಾಟನೆಯ ಸಮಯದಲ್ಲಿ ಮಾತನಾಡುತ್ತಿದ್ದರು. ಇದರಲ್ಲಿ ಒಟ್ಟು ೧೧೦ ಮಹಿಳಾ ರಣರಾಗಿಣಿಯರು ಪಾಲ್ಗೊಂಡಿದ್ದರು. ಈ ಸಮಯದಲ್ಲಿ ರಣರಾಗಿಣಿಯ ಜಿಲ್ಲಾ ಸಮನ್ವಯಕರಾದ ಸೌ. ವಿದುಲಾ ಹಳದೀಪುರ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಇವರು ಉಪಸ್ಥಿತರಿದ್ದರು.
ಮನೆಯಿಂದ ಝಾನ್ಸಿ ರಾಣಿಯಂತೆ ಹೋರಾಡುವ ಮಹಿಳೆಯರು 
ತಯಾರಾಗಬೇಕು ! - ಸೌ.ವಿದುಲಾ ಹಳದೀಪುರ
ಸ್ತ್ರೀಯು ಆನಂದಿ ಮತ್ತು ಸಾತ್ತ್ವಿಕಳಾಗಿದ್ದರೆ ಕುಟುಂಬ, ರಾಷ್ಟ್ರದ ಉನ್ನತಿಯಾಗುತ್ತದೆ. ಸ್ತ್ರೀಯು ತನ್ನ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ರಾಷ್ಟ್ರದ ಚಾರಿತ್ರ್ಯವನ್ನು ನಿರ್ಮಿಸಲು ಸಾಧ್ಯ. ಈ ಶಕ್ತಿಯಿಂದಲೇ ಸ್ತ್ರೀಯನ್ನು ಶ್ರೇಷ್ಠಳೆಂದು ಪರಿಗಣಿಸಲಾಗುತ್ತದೆ.

ಮಂಗಳೂರು
ಮಂಗಳೂರಿನಲ್ಲಿ ರಣರಾಗಿಣಿ ಶಾಖೆಯ  ಉದ್ಘಾಟನೆಯ ಸಮಯದಲ್ಲಿ (ಎಡದಿಂದ) ರಣರಾಗಿಣಿ ಶಾಖೆಯ ಸೌ. ಲಕ್ಷ್ಮೀ ಪೈ,
ಸಮಾಜಸೇವಕಿ ಸೌ. ಪ್ರಸನ್ನ ರವಿ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಗುರುಪ್ರಸಾದ
ಮಹಿಳೆಯರು ರಾಷ್ಟ್ರ ಮತ್ತು ಧರ್ಮದ ರಕ್ಷಣೆಗಾಗಿ ರಣರಾಗಿಣಿಯಾಗಿ
ಹೋರಾಡಬೇಕು ! - ಸೌ. ಲಕ್ಷ್ಮಿ ಪೈ, ರಣರಾಗಿಣಿ ಶಾಖೆ
ಮಹಿಳೆಯರು ರಾಷ್ಟ್ರ ಮತ್ತು ಧರ್ಮದ ರಕ್ಷಣೆಗಾಗಿ ರಣರಾಗಿಣಿ ಯಾಗಿ ಹೋರಾಡಬೇಕಾಗಿದೆ ಎಂದು ರಣರಾಗಿಣಿಯ ಸೌ. ಲಕ್ಷ್ಮೀ ಪೈಯವರು ತಿಳಿಸಿದರು. ಅವರು ‘ರಣರಾಗಿಣಿ’ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮ ಇಲ್ಲಿನ ಶ್ರೀನಿವಾಸಕಲ್ಯಾಣ ಮಂಟಪದಲ್ಲಿ ಜರುಗಿತು. ಸಮಾಜಸೇವಕಿಯಾದ ಸೌ. ಪ್ರಸನ್ನ ರವಿ ಇವರು ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಯಲೇಬೇಕು ಎನ್ನುತ್ತಾ ‘ಲವ್ ಜಿಹಾದ್’ ಬಗ್ಗೆ ಜಾಗೃತಿಯನ್ನು ಮೂಡಿಸಿದರು.
ಬೆಂಗಳೂರು
ಬೆಂಗಳೂರಿನಲ್ಲಿ ರಣರಾಗಿಣಿ ಶಾಖೆಯ  ಉದ್ಘಾಟನೆಯ ಸಮಯದಲ್ಲಿ (ಎಡದಿಂದ) ಸೌ. ಅನುಪಮ ರೆಡ್ಡಿ,
ರಣರಾಗಿಣಿಯ ಕು. ಭವ್ಯ ಗೌಡ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಗುರುಪ್ರಸಾದ
ಜೂನ್ ೪ ರಂದು ಇಲ್ಲಿನ ವಿಜಯನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ರಣರಾಗಿಣಿ ಶಾಖೆ ಉದ್ಘಾಟಿಸಲಾಯಿತು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ರಾಜ್ಯ ಸಮನ್ವಯಕರಾದ ಗುರುಪ್ರಸಾದ, ಸಮಾಜಸೇವಕಿ ಹಾಗೂ ಅನುಬಂಧ ಟ್ರಸ್ಟ್‌ನ ಸೌ. ಅನುಪಮ ರೆಡ್ಡಿ,  ರಣರಾಗಿಣಿ ಶಾಖೆಯ ನಗರ ಸಮನ್ವಯಕಿ ಕು. ಭವ್ಯ ಗೌಡ ಮತ್ತು ಮೈಸೂರು, ತುಮಕೂರು ಮತ್ತು ಹಾಸನದ ರಣರಾಗಿಣಿ ಶಾಖೆಯ ಸಮನ್ವಯಕಿ ಸೌ. ಸುಮಾ ಮಂಜೇಶ್ ಉಪಸ್ಥಿತರಿದ್ದರು.
ರಣಾಂಗಣಕ್ಕೆ ಇಳಿದಾಗ ಪಟ್ಟುಹಿಡಿದು
ಹೋರಾಡುವವಳೇ ರಣರಾಗಿಣಿ ! - ಕು. ಭವ್ಯ ಗೌಡ
ಇತಿಹಾಸ ನೋಡಿದರೆ ನಮ್ಮ ಹಿಂದೂ ಸ್ತ್ರೀಯರು ಯಾವುದೇ ಕ್ಷೇತ್ರದಲ್ಲಿ ಕಡಿಮೆಯಿರಲಿಲ್ಲ. ಅದು ಯುದ್ಧ ಕ್ಷೇತ್ರವಿರಲಿ ವೇದಾಧ್ಯಯನ ವಿರಲಿ. ಅವರು ಧರ್ಮಾಚರಣೆ ಮಾಡುತ್ತಿದ್ದರು. ಇಂದಿಗೂ ಸ್ತ್ರೀಯರು ಎಲ್ಲ ಕ್ಷೇತ್ರಗಳಲ್ಲಿ ಮುಂದುವರಿದಿದ್ದರೂ ಅವರ ಮೇಲಿನ ದೌರ್ಜನ್ಯ ದಿನೇದಿನೇ ಹೆಚ್ಚುತ್ತಿದೆ. ಧರ್ಮಾಚರಣೆ ಮಾಡದಿರುವುದೇ ಇದಕ್ಕೆ ಕಾರಣ.
ಪುರುಷರು ರಾಷ್ಟ್ರರಕ್ಷಣೆಗೆ ನಿಂತರೆ ನಾವು ಸ್ತ್ರೀಯರು ನಮ್ಮ
ಹೆಣ್ಣುಮಕ್ಕಳ ರಕ್ಷಣೆಗಾಗಿ ಎದ್ದು ನಿಲ್ಲಬೇಕು ! - ಸೌ. ಅನುಪಮ ರೆಡ್ಡಿ
ಇಂದು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಪುರುಷರಲ್ಲ, ಮಹಿಳೆಯರೇ ಕಾರಣ. ಇಂದು ತಂದೆ ತಾಯಿಯರು ಮಕ್ಕಳಿಗೆ ಸರಿಯಾದ ಬಟ್ಟೆಗಳನ್ನು ಹಾಕಲು ಹೇಳುವುದಿಲ್ಲ. ಇಂದು ನಮಗೆ ನಮ್ಮ ಧರ್ಮದ ಬಗ್ಗೆ ಪ್ರೀತಿ ಅಭಿಮಾನವಿಲ್ಲದಿರುವುದರಿಂದ ನಮ್ಮ ಹೆಣ್ಣುಮಕ್ಕಳು ಲವ್-ಜಿಹಾದ್‌ನಂತಹ ಬಲೆಯಲ್ಲಿ ಸಿಲುಕುತ್ತಿದ್ದಾರೆ. ಆದುದರಿಂದ ಪ್ರತಿಯೊಬ್ಬ ಸ್ತ್ರೀಯರೂ ನಮ್ಮ ಹೆಣ್ಣುಮಕ್ಕಳ ರಕ್ಷಣೆಗೆ ಎದ್ದುನಿಲ್ಲಬೇಕು.
ಗಮನಾರ್ಹ ಅಂಶ
ಈ ಕಾರ್ಯಕ್ರಮದಲ್ಲಿ ಈ-ಟಿವಿ ನ್ಯೂಸ್, ಪಬ್ಲಿಕ್ ಟಿವಿ ಮತ್ತು ಸುದ್ದಿ ಟಿವಿಯವರು ಸಭೆಯ ಚಿತ್ರೀಕರಣ ಮಾಡಿದರು. ಪಬ್ಲಿಕ್ ಟಿವಿ ಮತ್ತು ಸುದ್ದಿ ಟಿವಿಯವರು ವಕ್ತಾರರ ಸಂದರ್ಶನ (ಬೈಟ್ಸ್) ತೆಗೆದುಕೊಂಡರು ಹಾಗೂ ಸಭಿಕರಿಂದ ಕಾರ್ಯಕ್ರಮದ ಅಭಿಪ್ರಾಯಗಳನ್ನು ಕೇಳಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹುಬ್ಬಳ್ಳಿ, ಮಂಗಳೂರು, ಬೆಂಗಳೂರಿನಲ್ಲಿ ರಣರಾಗಿಣಿ ಶಾಖೆ ಉದ್ಘಾಟನೆ !