ಗೋರಕ್ಷಣೆಯ ಕಾರ್ಯ ಮಾಡುವಾಗ ಶ್ರೀಕೃಷ್ಣನೇ ಮತಾಂಧರ ಆಕ್ರಮಣದಿಂದ ರಕ್ಷಿಸಿದ ಅನುಭವ ! - ಶ್ರೀ. ಮಧ್ವರಾಜ ಆಚಾರ್ಯ, ಅಧ್ಯಕರು, ವೀರ ಸಾವರಕರ ಸಂಘ ಮತ್ತು ಕರ್ನಾಟಕ ಕರಾವಳಿ ಸಂಸ್ಕೃತ ಸಂಘ

ಶ್ರೀ. ಮಧ್ವರಾಜ ಆಚಾರ್ಯ
ಗೋವಾದ ರಾಮನಾಥಿಯಲ್ಲಿ ೧೧ ರಿಂದ ೧೭ ಜೂನ್ ೨೦೧೫ ಈ ಅವಧಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಫೋಂಡಾದ ರಾಮನಾಥಿಯ ಶ್ರೀ ರಾಮನಾಥ ದೇವಸ್ಥಾನದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಚತುರ್ಥ ಅಖಿಲ ಭಾರತೀಯ ಹಿಂದೂ ಅಧಿವೇಶನದಲ್ಲಿ ಕರ್ನಾಟಕದ ವೀರ ಸಾವರಕರ್ ಸಂಘ ಮತ್ತು ಕರ್ನಾಟಕ ಕರಾವಳಿ ಸಂಸ್ಕೃತ ಸಂಘದ ಅಧ್ಯಕ್ಷ ಶ್ರೀ. ಮಧ್ವರಾಜ ಆಚಾರ್ಯ ಇವರು ಗೋರಕ್ಷಣೆಯ ಕಾರ್ಯ ಮಾಡುವಾಗ ಅನುಭವಿಸಿದ ಈಶ್ವರ ಕೃಪೆಯ ಬಗ್ಗೆ ಹೇಳಿದರು. ಅದನ್ನು ಅವರದ್ದೇ ಶಬ್ದಗಳಲ್ಲಿ ಇಲ್ಲಿ ಮುದ್ರಿಸುತ್ತಿದ್ದೇವೆ.
- ಶ್ರೀ. ಮಧ್ವರಾಜ ಆಚಾರ್ಯ, ಅಧ್ಯಕರು, ವೀರ ಸಾವರಕರ ಸಂಘ ಮತ್ತು ಕರ್ನಾಟಕ ಕರಾವಳಿ ಸಂಸ್ಕೃತ ಸಂಘ
. ಗೋರಕ್ಷಣೆಯ ವಿಷಯದಲ್ಲಿ ಜಾಗೃತಿ ಮೂಡಿಸಿದ್ದರಿಂದಲೇ ಹಿಂದುತ್ವವಾದಿ ಕಾರ್ಯಕರ್ತರು ಕಸಾಯಿಖಾನೆಗೆ ಒಯ್ಯುತ್ತಿರುವ ಹಸುಗಳನ್ನು ಮುಕ್ತಗೊಳಿಸುವುದು !
ರಾಜ್ಯದ ಕರಾವಳಿ ಪರಿಸರದಲ್ಲಿ ಗೋರಕ್ಷಣೆಗಾಗಿ ನಾನು ಬಹಳಷ್ಟು ಕೆಲಸ ಮಾಡಿದ್ದೇನೆ ಹಾಗೂ ಅಧಿವೇಶನವನ್ನೂ ನಡೆಸಿದ್ದೇನೆ. ಪ್ರತಿಯೊಂದು ಗ್ರಾಮದಲ್ಲಿ ಗೋರಕ್ಷಣೆಯ ಮಹತ್ವವನ್ನು ಹೇಳಿದ್ದೇನೆ. ಒಮ್ಮೆ ಕೆಲವು ಟ್ರಕ್‌ಗಳಲ್ಲಿ ೨೦೦ ಹಸುಗಳನ್ನು ತುಂಬಿಸಿ ಅವುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿರುವಾಗ ಆ ವಾಹನಗಳನ್ನು ನಮ್ಮ ಹಿಂದುತ್ವವಾದಿ ಯುವಕರು ಅಡ್ಡಗಟ್ಟಿದರು. ಟ್ರಕ್ ಅಡ್ಡಗಟ್ಟಿದ ಸ್ಥಳದಲ್ಲಿ ಒಂದು ಸಾವಿರಕ್ಕಿಂತಲೂ ಹೆಚ್ಚು ಮುಸಲ್ಮಾನರು ಒಟ್ಟಾಗಿದ್ದರು. ಅವರು ನನ್ನನ್ನು ಅಲ್ಲಿಗೆ ಕರೆದರು. ನಾನು ಅಲ್ಲಿನ ಓರ್ವ ಅಧಿಕಾರಿಯ ಜೀಪ್‌ನಲ್ಲಿ ಕುಳಿತು ಅಲ್ಲಿಗೆ ಹೋದೆನು. ಆ ಜನರ ಮಧ್ಯದಲ್ಲಿ ನಮ್ಮ ಜೀಪ್ ನಿಂತಿತ್ತು. ನಾಲ್ಕೂ ಬದಿಗಳಲ್ಲಿ ಮುಸಲ್ಮಾನರಿದ್ದರು. ಅಲ್ಲಿ ಆ ಟ್ರಕ್‌ಗಳಲ್ಲಿದ್ದ ಹಸುಗಳನ್ನು ಮುಕ್ತಗೊಳಿಸಲಾಗಿತ್ತು.
. ಲಾಲಸೆಯಿಂದ ಮತಾಂಧರ ಪಕ್ಷದಲ್ಲಿ ಮಾತನಾಡುವ ಹಿಂದೂ ಅಧಿಕಾರಿ !
ನಮ್ಮ ಜೊತೆಗೆ ಬಂದಿದ್ದ ಪೊಲೀಸ್ ಅಧಿಕಾರಿ ಹಿಂದೂ ಆಗಿದ್ದರೂ, ಅವನು ನಮಗೆ ಸಹಾಯ ಮಾಡಲಿಲ್ಲ. ಅವನು ಕೇವಲ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇನೆ ಎಂದು ತೋರಿಸುವ ಸಲುವಾಗಿ ನನ್ನ ಜೊತೆಗೆ ಬಂದಿದ್ದನು. ಅವನು ನನ್ನನ್ನು ಜೀಪ್‌ನಲ್ಲಿ ಕುಳ್ಳಿರಿಸಿ ತನ್ನ ಸಂಚಾರಿವಾಣಿಯಲ್ಲಿ ಯಾರೊಂದಿಗೋ ಮಾತನಾಡುತ್ತಾ ಸ್ವಲ್ಪ ದೂರ ಹೋದನು. ಹಸುಗಳ ವ್ಯಾಪಾರದಿಂದ ಅವನಿಗೆ ಲಂಚ ಸಿಗುತ್ತಿತ್ತು. ಈ ಲಂಚ ನನ್ನಿಂದಾಗಿ ಸಿಗುತ್ತಿರಲಿಲ್ಲ. ಅವನು ನನ್ನ ವಿರುದ್ಧ ವ್ಯಾಪಾರಿಗಳನ್ನು ಉದ್ರೇಕಿಸಿ ‘ಅವನಿಂದಾಗಿ ನಿಮ್ಮ ವ್ಯಾಪಾರಕ್ಕೆ ಅಡ್ಡಿಯಾಗುತ್ತಿದೆ’, ಎಂದು ವ್ಯಾಪಾರಿಗಳಿಗೆ ಹೇಳಿದನು.
. ಮತಾಂಧರು ಪ್ರಾಣಘಾತಕ ಆಕ್ರಮಣ ಮಾಡುವುದು !
ಪೊಲೀಸ್ ಅಧಿಕಾರಿಯ ಮಾತು ಕೇಳಿ ಗುಂಪಿನಲ್ಲಿ ಒಬ್ಬ ವ್ಯಕ್ತಿ ನನ್ನ ಸಂಚಾರಿವಾಣಿಯನ್ನು ಕಸಿದು ಕೊಂಡನು. ಇನ್ನೊಬ್ಬ ನನ್ನ ಚಿನ್ನದ ಸರವನ್ನು ಕಸಿದು ಕೊಂಡನು ಹಾಗೂ ಅದೇ ಕ್ಷಣದಲ್ಲಿ ಮೂರನೆಯವನು ನನ್ನ ತಲೆಗೆ ದೊಡ್ಡ ಕಲ್ಲನ್ನೆತ್ತಿ ಹಾಕಲು ಪ್ರಯತ್ನಿಸಿದನು; ಆದರೆ ಜಾಗರೂಕತೆಯಿಂದ ನಾನು ನನ್ನ ತಲೆಯನ್ನು ಬದಿಗೆ ಸರಿಸಿದ್ದರಿಂದ ಆ ಕಲ್ಲು ನನ್ನ ಕಾಲಿಗೆ ಬಿತ್ತು.
. ಮತಾಂಧರಿಂದ ಜೀಪ್ ಸುಟ್ಟು ಹಾಕುವ ಪ್ರಯತ್ನ !
ಒಂದು ಸಾವಿರ ಮತಾಂಧರು ಆಕ್ರೋಶಗೊಂಡು ನಮ್ಮ ಜೀಪ್ ಸುಟ್ಟು ಹಾಕಲು ಸಿದ್ಧತೆ ನಡೆಸಿದ್ದರು. ಅವರು ಪ್ರವೇಶದ್ವಾರದಲ್ಲಿ ಟ್ರಕ್ ನಿಲ್ಲಿಸಿದ್ದರು. ಆದ್ದರಿಂದ ನಾವು ನಮ್ಮ ಜೀಪ್ ಅಲ್ಲಿಂದ ತೆಗೆಯಲು ಸಾಧ್ಯವಿರಲಿಲ್ಲ. ಅಲ್ಲಿ ದೊಡ್ಡ ಪ್ರವೇಶದ್ವಾರದ ಬದಿಯಲ್ಲಿ ಒಂದು ಸಣ್ಣ ಪ್ರವೇಶದ್ವಾರವಿತ್ತು. ಅಲ್ಲಿ ನಮ್ಮ ಜೀಪ್‌ನ ಚಾಲಕ ನಿಂತಿದ್ದನು. ಅವನು ಸಹ ಮುಸಲ್ಮಾನನಾಗಿದ್ದನು; ಆದರೆ ಅವನು ಆ ಸಣ್ಣ ಪ್ರವೇಶದ್ವಾರದಿಂದ ಜೀಪನ್ನು ಹೊರಗೆ ತೆಗೆದನು. ಆದ್ದರಿಂದ ನಾನು ಮತ್ತು ಆ ಪೊಲೀಸ್ ಅಧಿಕಾರಿ ಇಬ್ಬರೂ ಅಲ್ಲಿಂದ ಹೊರಗೆ ಬರಲು ಸಾಧ್ಯವಾಯಿತು.
. ಮತಾಂಧರ ಪ್ರಾಣಘಾತಕ ದಾಳಿಯಿಂದ ಶ್ರೀಕೃಷ್ಣನೇ ರಕ್ಷಿಸುವುದು !
ಹಿಂದೂ ರಾಷ್ಟ್ರ ಸ್ಥಾಪನೆ ಮಾಡಲು ಅಥವಾ ಇಂತಹ ಯಾವುದೇ ಕಾರ್ಯಕ್ಕಾಗಿ ಭಗವಾನ್ ಶ್ರೀಕೃಷ್ಣನ ಆಶೀರ್ವಾದವು ನಮ್ಮೊಂದಿಗಿರುತ್ತದೆ, ಎಂದು ಸನಾತನದ ಸಾಧಕರು ನನಗೆ ಹೇಳಿದ್ದರು. ಮೇಲಿನ ಪ್ರಸಂಗದಲ್ಲಿ ನನಗೆ ಹಾಗೆ ಅನುಭವವಾಗಿದೆ. ನಾನು ಒಳ್ಳೆಯ ಕಾರ್ಯ ಮಾಡುತ್ತಿದ್ದೆ. ಅದರಲ್ಲಿ ನನ್ನ ಯಾವುದೇ ಸ್ವಾರ್ಥವಿರಲಿಲ್ಲ. ನಾನು ಗೋಮಾತೆಯ ಸೇವೆ ಮಾಡಲು ಹೋಗಿದ್ದೆನು. ಆದ್ದರಿಂದಲೇ ಆ ಪರಿಸ್ಥಿತಿಯಲ್ಲಿಯೂ ನನ್ನ ರಕ್ಷಣೆಯಾಯಿತು. ಆ ಸಮಯದಲ್ಲಿ ಶ್ರೀಕೃಷ್ಣ ನನ್ನ ಜೊತೆಗಿರುವ ಅನುಭೂತಿ ಬಂದಿತ್ತು, ಇಲ್ಲದಿದ್ದರೆ ನಾನು ಹಿಂತಿರುಗಿ ಬರಲು ಸಾಧ್ಯವೇ ಇರಲಿಲ್ಲ.
. ಹಿಂದೂಗಳೇ, ಸ್ವರಕ್ಷಣೆಯ ಸಿದ್ಧತೆ ನಡೆಸಿ !
ಒಂದು ಕಥೆ ಕೇಳಿದ್ದೇನೆ, ಒಂದು ಊರಿನಲ್ಲಿ ಒಂದು ಹಾವಿತ್ತು. ಅದು ಜನರಿಗೆ ಕಚ್ಚುತ್ತಿತ್ತು. ಒಮ್ಮೆ ಆ ಊರಿಗೆ ಓರ್ವ ಸಂತರು ಬಂದರು. ಗ್ರಾಮಸ್ತರು ಆ ಸಂತರಿಗೆ ಆ ಹಾವಿನ ವಿಷಯ ಹೇಳಿದರು. ಸಂತರು ಆ ಹಾವಿಗೆ ಜನರಿಗೆ ಕಚ್ಚಬಾರದೆಂದು ಆಜ್ಞೆ ನೀಡಿದರು. ಒಂದು ತಿಂಗಳ ನಂತರ ಆ ಸಂತರು ಆ ಊರಿಗೆ ಪುನಃ ಬಂದರು, ಆಗ ಆ ಹಾವಿನ ದುರ್ದೆಸೆಯಾಗಿತ್ತು. ಅದರ ಶರೀರದಿಂದ ರಕ್ತ ಹರಿಯುತ್ತಿತ್ತು. ಆಗ ಸಂತರು ಅದಕ್ಕೆ, ಏನಾಯಿತು ನಿನಗೆ ? ಎಂದು ಕೇಳಿದರು. ಆಗ ಹಾವು ನೀವು ನನಗೆ ಜನರಿಗೆ ಕಚ್ಚಬಾರದೆಂದು ಹೇಳಿದ್ದೀರಿ, ಆದ್ದರಿಂದ ನಾನು ಯಾರಿಗೂ ಕಚ್ಚಲಿಲ್ಲ. ಅದರ ಪರಿಣಾಮದಿಂದ ಜನರು ನನಗೆ ಕಲ್ಲುಗಳಿಂದ ಹೊಡೆದರು, ಎಂದಿತು. ಅದನ್ನು ಕೇಳಿ ಆ ಸಂತರು ಹಾವಿಗೆ, ನಾನು ನಿನಗೆ ಯಾರಿಗೂ ಕಚ್ಚಬೇಡ, ಎಂದು ಹೇಳಿದ್ದೆನು; ಆದರೆ ನೀನು ಬುಸುಗುಟ್ಟಬೇಡ, ಎಂದು ನಾನು ಹೇಳಿಲ್ಲ. ಆದ್ದರಿಂದ ನೀನು ಇನ್ನು ಮುಂದೆ ಬುಸುಗುಟ್ಟಲು ಆರಂಭಿಸು, ಎಂದರು.
ಅದೇ ರೀತಿ ಹಿಂದೂಗಳ ಮೇಲೆ ಯಾರಾದರೂ ದಾಳಿ ಮಾಡಿದರೆ, ಹಿಂದೂಗಳು ಬುಸುಗುಟ್ಟುವುದನ್ನಾದರೂ ಮಾಡಬೇಕು; ಇಲ್ಲದಿದ್ದರೆ, ಹಿಂದೂಗಳ ಅವಸ್ಥೆ ಆ ಹಾವಿನಂತೆ ಆಗುವುದು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗೋರಕ್ಷಣೆಯ ಕಾರ್ಯ ಮಾಡುವಾಗ ಶ್ರೀಕೃಷ್ಣನೇ ಮತಾಂಧರ ಆಕ್ರಮಣದಿಂದ ರಕ್ಷಿಸಿದ ಅನುಭವ ! - ಶ್ರೀ. ಮಧ್ವರಾಜ ಆಚಾರ್ಯ, ಅಧ್ಯಕರು, ವೀರ ಸಾವರಕರ ಸಂಘ ಮತ್ತು ಕರ್ನಾಟಕ ಕರಾವಳಿ ಸಂಸ್ಕೃತ ಸಂಘ