ಪರಾತ್ಪರ ಗುರು ಡಾ. ಆಠವಲೆಯವರ ಜನ್ಮ ಮತ್ತು ಅವರ ಆಧ್ಯಾತ್ಮಿಕ ಪ್ರವೃತ್ತಿಯ ಕುಟುಂಬ

ತಾಯಿ ಪೂ. (ಸೌ.) ನಲಿನಿ (ಪೂ. ತಾಯಿ ) ಮತ್ತು ತಂದೆ
ಪೂ. ಬಾಳಾಜಿ (ಪೂ. ದಾದಾ) ಆಠವಲೆ (ಮುಂಬೈ, ವರ್ಷ ೧೯೮೬)
‘ಶುದ್ಧವಾದ ಬೀಜ ಬಿತ್ತಿದರೆ ನೀವು ಉತ್ತಮವಾದ ಹಣ್ಣುಗಳನ್ನು ಪಡೆಯುತ್ತೀರಿ’ ಎಂಬ ತುಕಾರಾಮ ಗಾಥಾ, ಅಭಂಗ ೩೭, ದ್ವಿಪದಿ ೧ ರ  ದ್ವಿಪದಿಗನುಸಾರ ೧೯೪೨ ರ ಮೇ ೬ ರಂದು (ವೈಶಾಖ ಕೃಷ್ಣ ಪಕ್ಷ ಸಪ್ತಮಿ, ಕಲಿಯುಗ ವರ್ಷ ೫೦೪೪) ಶ್ರೀ. ಬಾಳಾಜಿ ವಾಸುದೇವ ಆಠವಲೆ (೧೯೦೫ ರಿಂದ ೧೯೯೫) ಮತ್ತು ಸೌ. ನಲಿನಿ ಬಾಳಾಜಿ ಆಠವಲೆ (೧೯೧೬ ರಿಂದ ೨೦೦೩) ಇವರು ಪರಾತ್ಪರ ಗುರು ಡಾ. ಜಯಂತ ಆಠವಲೆಯವರಿಗೆ ಜನ್ಮ ನೀಡಿದರು. ಅವರಿಬ್ಬರೂ ನಂತರ ಸಂತ ಪದವಿಯನ್ನೇರಿದರು.
ಪೂ. ಬಾಳಾಜಿ (ಉರ್ಫ್ ಶ್ರೀಕೃಷ್ಣ) ವಾಸುದೇವ ಆಠವಲೆಯವರು ನನ್ನ ತಂದೆ. ಅವರನ್ನು ನಾವು ದಾದಾ ಎಂದು ಕರೆಯುತ್ತಿದ್ದೆವು. ಅವರು ೯.೯.೧೯೦೫ ರಂದು ನಾಸಿಕ್‌ನಲ್ಲಿ ಜನಿಸಿದರು. ೨೮.೧.೧೯೯೫ ರಂದು ಅವರು ದೇಹತ್ಯಾಗ ಮಾಡಿದರು.
ದಾದಾ (ಶೇ. ೮೩ ಮಟ್ಟ) ಮತ್ತು ತಾಯಿ (ನಾವು ಅಮ್ಮನಿಗೆ ತಾಯಿ (ಮರಾಠಿಯಲ್ಲಿ ತಾಯಿ ಎಂದರೆ ಅಕ್ಕ) ಎಂದು ಹೇಳುತ್ತಿದ್ದೆವು.) (ಶೇ. ೭೫ ಮಟ್ಟ) ಇವರು ಚಿಕ್ಕಂದಿನಿಂದಲೇ ತಮ್ಮ ಐವರು ಮಕ್ಕಳ ಮೇಲೆ ವ್ಯಾವಹಾರಿಕ ಶಿಕ್ಷಣದೊಂದಿಗೆ ಸಾತ್ತ್ವಿಕತೆ ಮತ್ತು ಸಾಧನೆಯ ಸಂಸ್ಕಾರ ನೀಡಿದ್ದರಿಂದ ನಾವು ಸಾಧನಾನಿರತರಾದೆವು. ತಂದೆ-ತಾಯಿಯವರ ನಡುವೆ ಜಗಳವಾಗಿರುವುದನ್ನು ನಾವು ಐವರು ಸಹೋದರರು ನಮ್ಮ ಆಯುಷ್ಯದಲ್ಲಿ ಎಂದೂ ನೋಡಲಿಲ್ಲ. ಅಷ್ಟೇ ಅಲ್ಲದೆ, ನಾವು ಐವರು ಸಹೋದರರ ನಡುವೆಯೂ ಪರಸ್ಪರ ಜಗಳವಾಗಲಿಲ್ಲ. ನಮಗೆ ಪರಸ್ಪರರ ಮೇಲೆ ಪ್ರೀತಿ ಇತ್ತು ಮತ್ತು ಇಂದಿಗೂ ಇದೆ. ನಮ್ಮೆಲ್ಲರ ಮೇಲೆ ದಾದಾ ಮತ್ತು ತಾಯಿಯವರು ಮಾಡಿದ ಸಂಸ್ಕಾರದಿಂದಲೇ ಇದು ಸಾಧ್ಯವಾಯಿತು. ೧೯೯೫ ರಲ್ಲಿ ದೇಹತ್ಯಾಗವಾಗುವ ವರೆಗೆ, ಅಂದರೆ ೧೯೬೬ ರಿಂದ ೧೯೯೫ ಈ ೩೦ ವರ್ಷಗಳ ಅವಧಿಯಲ್ಲಿ ದಾದಾರವರು ಬಹಳಷ್ಟು ಲೇಖನ ಬರೆದರು. ಜೀವನದ ಕೊನೆಯ ೫ ವರ್ಷಗಳ ಕಾಲ ಅವರು ಹಾಸಿಗೆ ಹಿಡಿದಿದ್ದರೂ ಅಧ್ಯಾತ್ಮಶಾಸ್ತ್ರದ ಬಗ್ಗೆ ಲೇಖನ ಬರೆಯುವ ಅವರ ಕೃತಿ ನಡೆಯುತ್ತಿತ್ತು. ಉಳಿದ ಸಮಯದಲ್ಲಿ ಅವರ ವಾಚನ ಮತ್ತು ನಾಮಜಪ ನಡೆಯುತ್ತಿತ್ತು. - (ಪರಾತ್ಪರ ಗುರು) ಡಾ. ಆಠವಲೆ
ಹಿಂದೆ ನಿಂತಿರುವವರು (ಎಡದಿಂದ) ಡಾ. ವಿಲಾಸ್, ಡಾ. ಸುಹಾಸ್; ಕುಳಿತಿರುವವರು (ಎಡದಿಂದ) ಪರಾತ್ಪರ ಗುರು ಡಾ. ಜಯಂತ ಆಠವಲೆ,
ಪೂ. ಡಾ. ವಸಂತ (ಅಪ್ಪಾಕಾಕಾ), ಶ್ರೀ ಅನಂತ (ಭಾವುಕಾಕಾ), ಅಭಿಯಂತ (ಮುಂಬಯಿ, ೯.೧೨.೨೦೦೨)
ಪರಾತ್ಪರ ಗುರು ಡಾ. ಆಠವಲೆಯವರ ಹಿರಿಯ ಸಹೋದರ ಹಾಗೂ ಸುಪ್ರಸಿದ್ಧ ಬಾಲರೋಗತಜ್ಞ ವೈದ್ಯಾಚಾರ್ಯ ಪೂ. ಡಾ. ವಸಂತ ಆಠವಲೆ (೧೯೩೩ ರಿಂದ ೨೦೧೩)ಯವರು ಸಹ ಸಾಧನೆ ಮಾಡಿ ಸಂತಪದವಿಯನ್ನು ತಲುಪಿದ್ದರು. ಎರಡನೇ ಹಿರಿಯ ಸಹೋದರ ಶ್ರೀ. ಅನಂತ ಆಠವಲೆಯವರ ಆಧ್ಯಾತ್ಮಿಕ ಮಟ್ಟ (ಟಿಪ್ಪಣಿ) ಸದ್ಯ ಶೇ. ೬೮ ರಷ್ಟಿದೆ ಹಾಗೂ ಕಿರಿಯ ಸಹೋದರ ದಿ. ಡಾ. ಸುಹಾಸ್ ಆಠವಲೆ (೧೯೪೪ ರಿಂದ ೨೦೦೭) ಇವರ ಆಧ್ಯಾತ್ಮಿಕ ಮಟ್ಟ ಶೇ. ೬೪ ರಷ್ಟಿತ್ತು. ಎಲ್ಲರಿಗಿಂತ ಕಿರಿಯ ಸಹೋದರ ಡಾ. ವಿಲಾಸ್ ಆಠವಲೆ ಇವರ ಆಧ್ಯಾತ್ಮಿಕ ಉನ್ನತಿಯೂ ಆಗಿದ್ದು ಅವರು ಸಹ ಎಲ್ಲೆಡೆ ಹೋಗಿ ಸಾಧನೆಯ ವಿಷಯದಲ್ಲಿ ಮಾರ್ಗದರ್ಶನ ಮಾಡುತ್ತಾರೆ.
(ಟಿಪ್ಪಣಿ : ಆಧ್ಯಾತ್ಮಿಕ ಮಟ್ಟ: ಕಲಿಯುಗದಲ್ಲಿ ಸಾಮಾನ್ಯ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಶೇ. ೨೦ ರಷ್ಟಿರುತ್ತದೆ ಹಾಗೂ ಮೋಕ್ಷವೆಂದರೆ ಶೇ. ೧೦೦ ರಷ್ಟು ಆಧ್ಯಾತ್ಮಿಕ ಮಟ್ಟ ಎಂದು ಗ್ರಹಿಸಿದರೆ, ಶೇ. ೬೦ ಕ್ಕಿಂತ ಹೆಚ್ಚಿನ ಆಧ್ಯಾತ್ಮಿಕ ಮಟ್ಟವಿರುವ ವ್ಯಕ್ತಿ ಸಂತತ್ವದ ದಿಕ್ಕಿನಲ್ಲಿ ಪ್ರಯಾಣ ಬೆಳೆಸುತ್ತಾನೆ ಹಾಗೂ ಸಂತರ ಆಧ್ಯಾತ್ಮಿಕ ಮಟ್ಟ ಶೇ. ೭೦ ಕ್ಕಿಂತ ಹೆಚ್ಚಿರುತ್ತದೆ.)
ಪರಾತ್ಪರ ಗುರು ಡಾ. ಆಠವಲೆಯವರ ಜೀವನಚರಿತ್ರೆಯನ್ನು
ತೆರೆದಿಡುವ ಪೂ. ಡಾ. ವಸಂತ ಬಾಳಾಜಿ ಆಠವಲೆ !
ಅಂತಾರಾಷ್ಟ್ರೀಯ  ಖ್ಯಾತಿಯ ಬಾಲರೋಗತಜ್ಞ ಪೂ. ಡಾ. ವಸಂತ ಬಾಳಾಜಿ ಆಠವಲೆಯವರು ೨೦೦೪ ನೇ ವರ್ಷದಲ್ಲಿ ಅವರ ಕಿರಿಯ ಸಹೋದರ ಮತ್ತು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ ಶಿಷ್ಯತ್ವವನ್ನು ಸ್ವೀಕರಿಸಿದರು. ಭಾವ, ತೀವ್ರ ತಳಮಳ, ಜಿಜ್ಞಾಸುವೃತ್ತಿ ಮತ್ತು ವಿನಯತೆ ಈ ಗುಣಗಳಿಂದಾಗಿ ಅವರು ೨೦೧೨ ರ ಡಿಸೆಂಬರ್ ೧೬ ರಂದು ಸಂತಪದವಿಯಲ್ಲಿ ವಿರಾಜಮಾನರಾದರು. ಪರಾತ್ಪರ ಗುರು ಡಾ. ಆಠವಲೆಯವರು ಪೂ. ಡಾ. ವಸಂತ ಆಠವಲೆ (ಪೂ. ಅಪ್ಪಾಕಾಕಾ) ಯವರ ಕಿರಿಯ ಸಹೋದರರಾಗಿದ್ದರೂ ಪೂ. ಅಪ್ಪಾಕಾಕಾರವರಿಗೆ ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಅಪಾರ ಭಾವವಿದೆ. ಆದ್ದರಿಂದಲೇ ಪರಾತ್ಪರ ಗುರು ಡಾ. ಆಠವಲೆಯವರಂತಹ ಅವತಾರಿ ಸಂತರ ಗುಣವೈಶಿಷ್ಟ್ಯಗಳ ವಿವಿಧ ಲಕ್ಷಣಗಳನ್ನು ತೆರೆಯುವ ಬಹಳಷ್ಟು ಲೇಖನಗಳನ್ನು ಪೂ. ಅಪ್ಪಾಕಾಕಾರವರು ಬರೆದಿದ್ದಾರೆ. ಪೂ. ಅಪ್ಪಾಕಾಕಾರವರು (ಪೂ. ವಸಂತ ಆಠವಲೆಯವರು) ಬರೆದ ಪರಾತ್ಪರ ಗುರು ಡಾ. ಆಠವಲೆಯವರ ವೈಶಿಷ್ಟ್ಯಗಳು ಮತ್ತು ಕಾರ್ಯ (ಸಂಕ್ಷಿಪ್ತ ಪರಿಚಯ) ಈ ಗ್ರಂಥವನ್ನು ಸನಾತನವು ಮರಾಠಿ ಭಾಷೆಯಲ್ಲಿ ಪ್ರಕಟಿಸಿದೆ. ಇದು ಪರಾತ್ಪರ  ಗುರು ಡಾ. ಜಯಂತ ಆಠವಲೆಯವರ ಅಧ್ಯಾತ್ಮಮಾರ್ಗದಲ್ಲಿನ ಪ್ರಯಾಣದ ಬಗ್ಗೆ ವರ್ಣಿಸುವ ಚರಿತ್ರೆಯಾಗಿದೆ. ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಿ ಜಗತ್ತಿನಾದ್ಯಂತ ಹಿಂದೂ ಧರ್ಮದ ಪ್ರಸಾರ ಮಾಡುವ ಧ್ಯೇಯವನ್ನು ಇಟ್ಟುಕೊಂಡಿರುವ ಪರಾತ್ಪರ ಗುರು ಡಾ. ಆಠವಲೆಯವರ ಸನಾತನ ಸಂಸ್ಥೆಯ ಸ್ಥಾಪನೆಯ ನಂತರದ ಜೀವನವನ್ನು ಇದರಲ್ಲಿ ಸರಳ ಭಾಷೆಯಲ್ಲಿ ತೆರೆದಿಡಲಾಗಿದೆ. ಬಣ್ಣದ ಛಾಯಾಚಿತ್ರಗಳಿರುವ ಈ ಚರಿತ್ರೆ-ಗ್ರಂಥವು ಪರಾತ್ಪರ ಗುರು ಡಾ. ಆಠವಲೆಯವರ ರಾಷ್ಟ್ರ ಮತ್ತು ಧರ್ಮ ಸಂಬಂಧಿಸಿದ ಅದ್ಭುತ ಕಾರ್ಯದ ಬಗ್ಗೆ ಜಿಜ್ಞಾಸೆಯಿರುವ ಯಾವುದೇ ವ್ಯಕ್ತಿಗೆ ಸಮಾಧಾನ ನೀಡಬಲ್ಲದು !
ಶ್ರೀಮದ್ಭವದ್ಗೀತೆಯ ಬಗ್ಗೆ ಸುಗಮ ವಿವೇಚನೆ ಇರುವ 'ಗೀತಾಜ್ಞಾನದರ್ಶನ' ಎಂಬ 
ಗ್ರಂಥವನ್ನು ಬರೆದ ತೀರ್ಥರೂಪ ಭಾವುಕಾಕಾ !
ಪರಾತ್ಪರ ಗುರು ಡಾ. ಆಠವಲೆಯವರ ಹಿರಿಯ ಸಹೋದರ ಹಾಗೆಯೇ ಶೇ. ೬೮ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ಶ್ರೀ. ಅನಂತ ಆಠವಲೆ (ತೀ. ಭಾವುಕಾಕಾ) ಇವರು ಭಗವದ್ಗೀತೆಯ ಬಗ್ಗೆ ‘ಗೀತಾಜ್ಞಾನದರ್ಶನ’ ಎಂಬ ಗ್ರಂಥವನ್ನು ಬರೆದಿದ್ದಾರೆ. ‘ಶ್ರೀಮದ್ಭವದ್ಗೀತೆಯು ಹಿಂದೂ ಧರ್ಮ ಮತ್ತು ನೀತಿಶಾಸ್ತ್ರಗಳ ಬಗೆಗಿನ ಮೂಲಭೂತ ಗ್ರಂಥ ಮತ್ತು ಮಹಾಭಾರತದ ಮುಕುಟಮಣಿಯಾಗಿದೆ’! ಹಿಂದೂಗಳ ಈ ಮಹಾನ್ ಧರ್ಮಗ್ರಂಥದಲ್ಲಿರುವ ಅಧ್ಯಾತ್ಮದ ಪ್ರತಿಯೊಂದು ತತ್ತ್ವಜ್ಞಾನ, ಸಾಧನೆ ಮತ್ತು ಅದರ ಫಲವನ್ನು ‘ಗೀತಾಜ್ಞಾನದರ್ಶನ’ ಈ ಗ್ರಂಥದಲ್ಲಿ ಹೇಳಲಾಗಿದೆ. ಅವಶ್ಯಕವಿರುವಲ್ಲಿ ವಿಷಯವನ್ನು ಸ್ಪಷ್ಟಪಡಿಸುವ ಸುಲಭ ವಿವೇಚನೆಯನ್ನೂ ಮಾಡಲಾಗಿದೆ. ಇದರಿಂದಾಗಿ ಸರ್ವಸಾಧಾರಣವಾಗಿ ಕಠಿಣವೆನಿಸುವ ಭಗವದ್ಗೀತೆಯನ್ನು ಅರಿತುಕೊಳ್ಳುವುದು ಜನಸಾಮಾನ್ಯನಿಗೂ ಸುಲಭವಾಗಿದೆ !

ಕಲಿಯುಗದ ಆದರ್ಶ ಕುಟುಂಬ :  ಪೂ. ಬಾಳಾಜಿ ಆಠವಲೆ  (ಪ.ಪೂ. ಡಾ. ಆಠವಲೆಯವರ ತಂದೆ) ಇವರ ಕುಟುಂಬ ಅವರ ಅಲೌಕಿಕ ಗುಣವೈಶಿಷ್ಟ್ಯಗಳಿಂದಾಗಿ ಎಲ್ಲರಿಗೂ ಆದರ್ಶಪ್ರಾಯವಾಗಿದೆ. ಅಧ್ಯಾತ್ಮದಲ್ಲಿನ ಅವರ ಅಪೂರ್ವ ಕೊಡುಗೆ ಮತ್ತು ಅವರು ಸಮಷ್ಟಿಗಾಗಿ ನೀಡಿದ ಅಮೂಲ್ಯ ಜ್ಞಾನಸಂಪತ್ತು ಇವುಗಳಿಂದಾಗಿ ಅಖಿಲ ಮನುಕುಲವು ಅವರಲ್ಲಿ ಋಣಿಯಾಗಿದೆ ! - ಓರ್ವ ಸಾಧಕ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪರಾತ್ಪರ ಗುರು ಡಾ. ಆಠವಲೆಯವರ ಜನ್ಮ ಮತ್ತು ಅವರ ಆಧ್ಯಾತ್ಮಿಕ ಪ್ರವೃತ್ತಿಯ ಕುಟುಂಬ