ಸಿಬಿಐಯು ಎದುರು ತಂದ ಸಾಕ್ಷಿದಾರನೇ ಬೋಗಸ್ ಹಾಗೂ ಭ್ರಷ್ಟಾಚಾರಿ ! - ಸನಾತನ ಸಂಸ್ಥೆ

ಚಿತ್ರದಲ್ಲಿ ಎಡದಿಂದ ಡಾ. ಉದಯ ಧುರಿ, ಶ್ರೀ. ಅಭಯ ವರ್ತಕ್,
ನ್ಯಾಯವಾದಿ ಸಂಜೀವ ಪುನಾಳೆಕರ್, ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ್
ಮುಂಬೈ : ಹಿಂದೂ ವಿಧಿಜ್ಞ ಪರಿಷತ್ತು ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಸಹಿತ ಇತರ ೩೦೬೬ ದೇವಸ್ಥಾನಗಳ ಭೂಮಿ, ಗಣಿಗಾರಿಕೆ, ಬೆಲೆಬಾಳುವ ಆಭರಣಗಳು ಹೀಗೆ ಎಷ್ಟೋ ಹಗರಣಗಳನ್ನು ಹೊರತೆಗೆದಿದೆ. ಅದರಲ್ಲಿ ಈ ಬೆಳ್ಳಿಯ ರಥದ ವಿಷಯವೂ ಇತ್ತು. ಶ್ರೀ ಮಹಾಲಕ್ಷಿ ್ಮೀ ದೇವಸ್ಥಾನದ ಬೆಳ್ಳಿಯ ರಥದ ಗುತ್ತಿಗೆಯಲ್ಲಿ ಬೆಳ್ಳಿ ಅಪಹರಿಸಿದ್ದಾನೆ ಎಂಬ ಆರೋಪ ಸಂಜಯ ಸಾಡವಿಲಕರ್ ಮೇಲಿದೆ. ಈ ಹಗರಣವನ್ನು ಹೊರಗೆಡಹಿದ ನಂತರ ಆ ಬಗ್ಗೆ ಸಿಐಡಿ ತನಿಖೆಗಾಗಿ ದೊಡ್ಡ ಆಂದೋಲನ ಮಾಡಲು ಹಿಂದೂ ಜನಜಾಗೃತಿ ಸಮಿತಿ, ಅಲ್ಲದೇ ಸನಾತನ ಸಂಸ್ಥೆಯ ಸ್ಥಳೀಯ ಸಾಧಕರು ಸಹಾಯ ಮಾಡಿದ್ದರು.
ಹಾಗಾಗಿ ‘ಸನಾತನ ಸಂಸ್ಥೆಯಿಂದಾಗಿ ತಮ್ಮ ಈ ಅಕ್ರಮ ಆದಾಯ ನಿಲ್ಲುವುದು ಮತ್ತು ತಾವು ಜೈಲಿಗೆ ಹೋಗಬೇಕಾಗಬಹುದು’, ಎಂದು ಅನೇಕರಿಗೆ ಭಯವಾಗುತ್ತಿದೆ. ಈ ಭಯದಿಂದಲೇ ಸನಾತನದ ಮೇಲೆ ಸುಳ್ಳು ಆರೋಪ ಮಾಡಲು ಸಾಡವಿಲಕರ್ ಈ ರೀತಿ ಆರೋಪ ಮಾಡುತ್ತಿದ್ದಾರೆ. ಡಾ. ತಾವಡೆ ವಿರುದ್ಧ ಸುಳ್ಳು ಪುರಾವೆ ನೀಡುವ ಸಾಡವಿಲಕರ್ ಕೇಂದ್ರೀಯ ತನಿಖಾ ದಳವು (ಸಿಬಿಐ) ಖರೀದಿಸಿದ ಸಾಕ್ಷಿದಾರನಾಗಿದ್ದಾರೆ ಎಂಬ ರಹಸ್ಯವನ್ನು ಸನಾತನ ಸಂಸ್ಥೆಯ ವಕ್ತಾರ ಶ್ರೀ. ಅಭಯ ವರ್ತಕ್‌ರವರು ಜೂನ್ ೧೭ ರಂದು ಮುಂಬೈ ಪ್ರೆಸ್‌ಕ್ಲಬ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಬಯಲಿಗೆಳೆದರು. ಈ ಪತ್ರಿಕಾ ಪರಿಷತ್ತಿನಲ್ಲಿ ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ಸಂಜೀವ ಪುನಾಳೆಕರ್, ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರಾದ ವೀರೇಂದ್ರ ಇಚಲಕರಂಜೀಕರ್ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಮುಂಬೈ ಪ್ರವಕ್ತಾ ಉದಯ ಧುರಿ ಉಪಸ್ಥಿತರಿದ್ದರು.
ಕೇಂದ್ರೀಯ ತನಿಖಾ ದಳ (ಸಿಬಿಐ) ಡಾ. ದಾಬೋಲಕರ್ ಹತ್ಯೆ ಪ್ರಕರಣದಲ್ಲಿ ಸನಾತನದ ಸಾಧಕ ಡಾ. ವಿರೇಂದ್ರಸಿಂಗ್ ತಾವಡೆಯವರನ್ನು ಬಂಧಿಸಿದ ನಂತರ ಮಾಧ್ಯಮದವರು ಡಾ. ತಾವಡೆ ವಿಷಯದಲ್ಲಿ ದಾಖಲೆಗಳಿವೆ ಎಂದು ಅಪ್ಪಟ ಸುಳ್ಳು ವಾರ್ತೆ ಬಿತ್ತರಿಸಿದವು. ಈ ವಾರ್ತೆಗಳನ್ನು ಕೇಂದ್ರೀಯ ತನಿಖಾ ದಳವು ಎದುರು ತಂದ ಸಂಜಯ ಸಾಡವಿಲಕರ್ ಈ ಸುಳ್ಳು ಸಾಕ್ಷಿದಾರನ ಸಹಾಯದಿಂದ ಸಿದ್ಧಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸನಾತನ ಸಂಸ್ಥೆಯು ಪತ್ರಿಕಾ ಪರಿಷತ್ತನ್ನು ಕರೆದು ಮೇಲಿನ ವಿಷಯವನ್ನು ಸ್ಪಷ್ಟಪಡಿಸಿತು.
ಶ್ರೀ. ವರ್ತಕ್ ಮುಂದೆ ಮಾತನಾಡುತ್ತಾ,
. ಒಬ್ಬ ಭ್ರಷ್ಟ ವ್ಯಕ್ತಿಯ ಸಾಕ್ಷಿಯ ಆಧಾರದಲ್ಲಿ ಒಬ್ಬ ನಿರಪರಾಧಿ ವ್ಯಕ್ತಿಯನ್ನು ಸಿಲುಕಿಸುವ ಪ್ರಯತ್ನವು ಭವಿಷ್ಯದಲ್ಲಿ ಸಿಬಿಐ ಮತ್ತು ಭಾಜಪ ಸರಕಾರದ ಹೆಸರಿಗೆ ಕಳಂಕ ತರುವಂತಿದೆ.
. ಸಿಬಿಐ ವತಿಯಿಂದ ಡಾ. ತಾವಡೆಯವರ ವಿರುದ್ಧ ಸಾಕ್ಷಿದಾರರೆಂದು ಸದ್ಯ ಕೆಲವು ಮಾಧ್ಯಮಗಳು ತರಾತುರಿಯಿಂದ ಸಂಜಯ ಸಾಡವಿಲಕರ್‌ನನ್ನು ತೋರಿಸುತ್ತಿವೆ. ಈ ವ್ಯಕ್ತಿಯ ಚಾರಿತ್ರ್ಯದ ಬಗ್ಗೆ ಪೂರ್ಣ ಕೊಲ್ಹಾಪುರದವರಿಗೆ ಮಾಹಿತಿಯಿದ್ದು, ಆತನ ಕುಕೃತ್ಯ ಗಳು ಪೊಲೀಸ್ ಠಾಣೆಯಲ್ಲಿಯೂ ದಾಖಲಾಗಿವೆ.
. ಡಾ. ತಾವಡೆಯವರು ಹಿಂದೆ ಕೊಲ್ಹಾಪುರದಲ್ಲಿ ವಾಸಿಸುತ್ತಿದ್ದರು, ಈ ಕಾರಣದಿಂದ ಕೇವಲ ಪರಿಚಯ ದವರೆಂಬ ಲಾಭ ಪಡೆಯುತ್ತಾ ಮನಬಂದಂತೆ ಆರೋಪಿಸುತ್ತಿದ್ದಾರೆ.
. ಸಂಜಯ ಸಾಡವಿಲಕರ್ ಮತ್ತು ಅವರ ಸಹಚರರಿಗೆ ಸನಾತನ ಸಂಸ್ಥೆಯ ಬಗ್ಗೆ ಮೊದಲಿನಿಂದಲೇ ಸಿಟ್ಟಿತ್ತು. ಹಾಗಾಗಿ ಸೇಡಿನ ಭಾವನೆಯಿಂದ ಈ ಸಾಕ್ಷಿ ನೀಡಲಾಗಿದೆ.
. ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಹೆಚ್ಚುತ್ತಿರುವ ಪ್ರಭಾವವನ್ನು ಸಹಿಸಲಾಗದೇ ಹಿಂದೂ ಜನಜಾಗೃತಿ ಸಮಿತಿಯ ಮೂಲಕ ಆಯೋಜಿಸಿದ ಆಂದೋಲನದಲ್ಲಿ ಸಾಡವಿಲಕರ್ ಮತ್ತು ಅವರ ಸಹಚರರು ಕೋಲಾಹಲವೆಬ್ಬಿಸಿದ್ದರು.
. ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತ ಶ್ರೀ. ಶಿವಾನಂದ ಸ್ವಾಮಿ ಮೇಲೆ ದಾಳಿ ನಡೆಸುವುದಾಗಿ ಸಾಡವಿಲಕರ್ ದೂರವಾಣಿಯಲ್ಲಿ ಬೆದರಿಕೆ ಹಾಕಿದ್ದರು. ಆಗ ಸ್ವಾಮಿಯವರು ಪೊಲೀಸರಲ್ಲಿ ದೂರನ್ನೂ ದಾಖಲಿಸಿದ್ದರು. (ಆ ದೂರನ್ನೂ ಅಭಯ ವರ್ತಕರು ಪತ್ರಕರ್ತರಿಗೆ ತೋರಿಸಿದರು.)
ಹಗರಣದಿಂದ ಗಮನ ವಿಚಲಿತಗೊಳಿಸಲು ಸನಾತನದ ಹೆಸರು ಕೆಡಿಸಲು ಸಂಜಯ ಸಾಡವಿಲಕರ್ ಸಂಚು !
- ನ್ಯಾಯವಾದಿ ಸಂಜೀವ ಪುನಾಳೆಕರ್, ರಾಷ್ಟ್ರೀಯ ಕಾರ್ಯದರ್ಶಿ, ಹಿಂದೂ ವಿಧಿಜ್ಞ ಪರಿಷತ್ತು
ಸಂಜಯ ಸಾಡವಿಲಕರ್ ಈತನೇ ರಥಕ್ಕೆ ಬೆಳ್ಳಿ ಕೂರಿಸಿದ್ದನು. ಈ ಬೆಳ್ಳಿ ರಥದ ಪ್ರಕರಣದಲ್ಲಿ ಅವ್ಯವಹಾರವಾಗಿದ್ದ ವರದಿಯನ್ನು ಅಂದಿನ ಜಿಲ್ಲಾಧಿಕಾರಿಯವರೇ ೨೦೧೨ ರಲ್ಲಿ ನೀಡಿದ್ದರು. ಆದರೆ ಕಾಂಗ್ರೆಸ್ ಮತ್ತು ರಾಷ್ಟ್ರವಾದಿ ಇವರ ಕೃಪಾಛತ್ರದಲ್ಲಿ ಈ ಅವ್ಯವಹಾರವಾಗಿದ್ದು ೨೦೧೨ ರ ನಂತರವೂ ಅವರ ಮೇಲೆ ಯಾವುದೇ ಕ್ರಮಕೈಗೊಂಡಿಲ್ಲ. ಅದರ ಅವ್ಯವಹಾರದ ಬಗ್ಗೆ ತನ್ನ ವಿಚಾರಣೆಯಾಗಬಹುದು ಎಂಬ ಭಯ ಆತನಿಗಿತ್ತು. ಹಾಗಾಗಿ ಸಂಸ್ಥೆಯ ಮಾನಹಾನಿ ಮಾಡುವುದು ಮತ್ತು ಅದು ಸಾಧ್ಯವಾಗದಿದ್ದರೆ ಕಡಿಮೆಪಕ್ಷ ದೇವಸ್ಥಾನದ ಹಗರಣದಿಂದ ಜನರ ಗಮನವನ್ನು ವಿಚಲಿತಗೊಳಿಸುವುದು, ಇದು ಆತನ ಸಂಚಾಗಿತ್ತು, ಎಂದು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿಗಳಾದ ನ್ಯಾಯವಾದಿ ಸಂಜೀವ ಪುನಾಳೆಕರ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. ದೇವಸ್ಥಾನದ ಹಗರಣ ಹೊರಗೆಡಹಿದ್ದರಿಂದ ನಾಳೆ ಜೈಲಿಗೆ ಹೋಗಬೇಕಾಗಬಹುದೆಂದು ದೊಡ್ಡ ದೊಡ್ಡ ಕುಳಗಳು ಅಸ್ವಸ್ಥರಾಗಿವೆ. ಈ ಭ್ರಷ್ಟಾಚಾರದ ಪ್ರಕರಣದಲ್ಲಿ ಶ್ರೀ ಮಹಾಲಕ್ಷ್ಮಿe ೀ ದೇವಿಯ ಬೆಳ್ಳಿ ರಥದ ಗುತ್ತಿಗೆಯನ್ನು ಸಂಜಯ ಸಾಡವಿಲಕರರಿಗೆ ಟೆಂಡರ್ ಕರೆಯದೇ ೨೦೧೨ ರಲ್ಲಿಯೇ ವಹಿಸಲಾಗಿತ್ತು, ಅದರ ಶುದ್ಧತೆ ಎಷ್ಟಿರಬೇಕೆಂದು ಮೊದಲೇ ನಿರ್ಧರಿಸಿರಲಿಲ್ಲ. ೨೮೬ ಕಿಲೋ ಬೆಳ್ಳಿ ನೀಡಲಾಯಿತು; ಆದರೆ  ಈ ಬೆಳ್ಳಿ ಎಷ್ಟು ಶುದ್ಧವಿತ್ತು ಮತ್ತು ಸಾಡವಿಲಕರರಿಂದ ದೊರೆತ ಬೆಳ್ಳಿ ಎಷ್ಟು ಶುದ್ಧವಾಗಿದೆ, ಇದರ ತನಿಖೆ ಆಗಿಲ್ಲ, ಇಂತಹ ಅಪರಾಧಿವೃತ್ತಿಯ ಹಗರಣಕೋರ ವ್ಯಕ್ತಿಗೆ ಹಣ ಕೊಟ್ಟು ಈ ಸಾಕ್ಷಿಯನ್ನು ಖರೀದಿಸ ಲಾಯಿತು. ಏಕೆಂದರೆ ಸಾಕ್ಷಿದಾರ, ತನಿಖೆಯ ಕಾಗದಪತ್ರ, ಇವೆಲ್ಲವನ್ನು ನಾನು ಮೊದಲೇ ನೋಡಿದ್ದೇನೆ, ಎಂದು ಆಶಿಷ ಖೇತಾನ್ ಸ್ಪಷ್ಟವಾಗಿ (ವಾಹಿನಿಯಲ್ಲಿ ಎಲ್ಲರೆದುರು) ಹೇಳಿದ್ದನು. ಸಿಬಿಐ ಜೊತೆ ಕೆಲಸ ಮಾಡುವ ರಾಜ್ಯದ ಪೊಲೀಸ್ ಉಪಾಯುಕ್ತ ಶ್ರೇಣಿಯ ಅಧಿಕಾರಿಗಳಿಗೂ ಸಿ.ಬಿ.. ತನಿಖೆಯ ಮಾಹಿತಿ ನೀಡುವುದಿಲ್ಲ. ಅವರೊಂದಿಗೆ ಕೆಲಸದವರಂತೆ ವ್ಯವಹರಿಸುತ್ತಾರೆ; ಆದರೆ ಖೇತಾನ್‌ಗೆ ಇದೆಲ್ಲ ಮೊದಲೇ ತಿಳಿಯುತ್ತದೆ ಇದರರ್ಥ ಖೇತಾನ್‌ನೇ ಸಿಬಿಐ.ನ ಬಾಸ್ ಆಗಿದ್ದು ಗೃಹಸಚಿವ ರಾಜನಾಥ ಸಿಂಗ್‌ರನ್ನು ಕತ್ತಲೆಯಲ್ಲಿಟ್ಟು ಸಿಬಿಐ. ಈ ಪೂರ್ಣ ಸಂಚು ರೂಪಿಸುತ್ತಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಿಬಿಐಯು ಎದುರು ತಂದ ಸಾಕ್ಷಿದಾರನೇ ಬೋಗಸ್ ಹಾಗೂ ಭ್ರಷ್ಟಾಚಾರಿ ! - ಸನಾತನ ಸಂಸ್ಥೆ