ಮಹರ್ಷಿಗಳ ದಿವ್ಯವಾಣಿ

. ಸಂತರ ಭೂಮಿಯಾಗಿರುವ ಮಹಾರಾಷ್ಟ್ರದಂತಹ ಪುಣ್ಯ ಭೂಮಿಯಲ್ಲಿ ನೀರಿಲ್ಲ, ಇದಕ್ಕೆ ದೇವರು ಕಾರಣರಾಗಿರದೇ ಪ.ಪೂ. ಡಾಕ್ಟರರನ್ನು ವಿರೋಧಿಸುವ ವಿರೋಧಿಗಳೇ ಕಾರಣರಾಗಿರುವುದು ಮತ್ತು ಮುಂದೆ ಆಹಾರವೂ ದೊರೆಯದಿರುವುದು
ಸಂತರ ಭೂಮಿಯಾಗಿರುವ ಮಹಾರಾಷ್ಟ್ರ ರಾಜ್ಯದಲ್ಲಿ ಗುರುಗಳು (.ಪೂ. ಡಾಕ್ಟರರು) ಜನಿಸಿದರು. ಇಂತಹ ಈ ಪುಣ್ಯ ಭೂಮಿಯಲ್ಲಿಯೇ ಅವರನ್ನು ವಿರೋಧಿಸುತ್ತಿರುವುದರಿಂದ ಇಂದು ಮಹಾರಾಷ್ಟ್ರ ರಾಜ್ಯದಲ್ಲಿ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದೆ ಈ ಭೂಮಿಯಲ್ಲಿ ಆಹಾರಕ್ಕಾಗಿ ಜನರು ಹೊಡೆದಾಡಿ ಹಸಿವಿನಿಂದ ಸಾಯುವರು. ಇದರಲ್ಲಿ ದೇವರ ತಪ್ಪಿಲ್ಲ. (ಆಧಾರ : ಮಹರ್ಷಿ, ೭೨ ನೇ ನಾಡಿವಾಚನ, ಚೆನ್ನೈ, ತಮಿಳುನಾಡು (೨೬..೨೦೧೬)

೧ ಅ. ಈ ಆಪತ್ಕಾಲದಲ್ಲಿ ಸಾಧಕರಿಗೆ ನೀರು ದೊರೆಯುತ್ತಿರುವುದರಿಂದ ಸಾಧಕರು ನೀರು ಕುಡಿಯುವಾಗ ಸತತವಾಗಿ ಗುರುದೇವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು, ಹಾಗೆಯೇ ಜಯ ಗುರುದೇವ ಎಂದು ನಾಮಜಪ ಮಾಡಬೇಕು ! : ನೀರಿಲ್ಲದೇ ನಾವು ಬದುಕಲಾರೆವು. ಇತ್ತೀಚೆಗೆ ಜನರು ನೀರಿಗಾಗಿ ಹೊಡೆದಾಡುತ್ತಿದ್ದಾರೆ; ಆದರೆ ಗುರುಗಳು ಎಲ್ಲ ಸಾಧಕರಿಗೆ ಜೀವಜಲವನ್ನು ಒದಗಿಸಿಕೊಟ್ಟಿದ್ದಾರೆ. ಆದ್ದರಿಂದ ಸಾಧಕರು ನೀರು ಕುಡಿಯುವಾಗ ನಿರಂತರವಾಗಿ ಗುರುದೇವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು ಹಾಗೆಯೇ ಜಯ ಗುರುದೇವ ಎಂದು ನಾಮಜಪವನ್ನು ಮಾಡಬೇಕು. ಇದರಿಂದ ಸಾಧಕರ ಶರೀರದಲ್ಲಿರುವ ವಿಷಯುಕ್ತ ಘಟಕಗಳು ಹೊರಬೀಳಲು ಸಹಾಯಕವಾಗುತ್ತದೆ.
(ಆಧಾರ : ಮಹರ್ಷಿ, ೭೧ ನೇ ನಾಡಿವಾಚನ, ಚೆನ್ನೈ, ತಮಿಳುನಾಡು (೨೩..೨೦೧೬))
೧ ಆ. ಈ ಆಪತ್ಕಾಲದಲ್ಲಿ ಸಾಧಕರಿಗೆ ಆಹಾರ ದೊರೆಯುತ್ತಿರುವುದರಿಂದ ಅವರು ಪ್ರತಿಯೊಂದು ತುತ್ತನ್ನು ಸ್ವೀಕರಿಸುವಾಗ ಗುರುದೇವರಿಗೆ ನಿರಂತರವಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು ! : ಇಂತಹ ಆಪತ್ಕಾಲ ದಲ್ಲಿಯೂ ಗುರುಗಳು ಎಲ್ಲ ಸಾಧಕರಿಗೆ ಆಹಾರವನ್ನು ಒದಗಿಸಿದ್ದಾರೆ; ಆದ್ದರಿಂದ ಸಾಧಕರು ಪ್ರತಿಯೊಂದು ತುತ್ತನ್ನು ಬಾಯಿಗಿಡುವಾಗ ಗುರುಗಳನ್ನು ಸ್ಮರಿಸಬೇಕು ಮತ್ತು ನಿರಂತರವಾಗಿ ಗುರುದೇವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು. (ಆಧಾರ : ಮಹರ್ಷಿ, ೭೨ನೇ ನಾಡಿವಾಚನ, ಚೆನ್ನೈ, ತಮಿಳು ನಾಡು (೨೬..೨೦೧೬))
. ಹಾಲಿನಿಂದ ಮೊಸರು, ಮೊಸರಿನಿಂದ ಶುದ್ಧ ಬೆಣ್ಣೆ ಹಾಗೂ ಬೆಣ್ಣೆಯಿಂದ ಪರಿಶುದ್ಧ ತುಪ್ಪ ತಯಾರಾಗುತ್ತದೆ, ಅದರಂತೆಯೇ ಪ.ಪೂ. ಡಾಕ್ಟರರ ಪರಿಶ್ರಮದಿಂದ ಮೊದಲು ಹಾಲಿನಂತಿದ್ದ ಸಾಧಕರು ಈಗ ಪರಿಶುದ್ಧ ಮತ್ತು ರುಚಿ ಬದಲಾಗದ ತುಪ್ಪದಂತೆ ಸಿದ್ಧರಾಗಿದ್ದಾರೆ !
ನಮಗೆ ದೇವರ ಕೃಪೆಯಿಂದ ಆಕಳ ಹಾಲು ಸಿಗುತ್ತದೆ. ಹಾಲಿನಿಂದ ಮೊಸರು ಮಾಡಲು ಸಾಧ್ಯವಾಗುತ್ತದೆ. ಮುಂದೆ ಮೊಸರಿನಿಂದ ಬೆಣ್ಣೆ ಹಾಗೂ ಆ ಶುದ್ಧ ಬೆಣ್ಣೆಯಿಂದ ಪರಿಶುದ್ಧ ತುಪ್ಪ ತಯಾರಾಗುತ್ತದೆ. ಈ ತುಪ್ಪದ ರುಚಿ ಎಂದೂ ಬದಲಾಗುವುದಿಲ್ಲ. ಗುರುಗಳೆಡೆಗೆ (.ಪೂ. ಡಾಕ್ಟರರ ಬಳಿಗೆ) ಬಂದಂತಹ ಎಲ್ಲ ಸಾಧಕರು ಮೊದಲು ಹಾಲಿನಂತಿದ್ದರು. ಗುರುಗಳು ಅವರನ್ನು ಮೊದಲು ಮೊಸರಾಗಿ ಪರಿವರ್ತನೆ ಮಾಡಿದರು, ಬಳಿಕ ಬೆಣ್ಣೆಯಂತೆ ಶುದ್ಧ ಮತ್ತು ಮೃದುವಾಗಿ ಮಾಡಿದರು. ಈಗ ಗುರುಗಳ ಪರಿಶ್ರಮದಿಂದ ಎಲ್ಲ ಸಾಧಕರು ತುಪ್ಪದಂತೆ ತಯಾರಾಗಿದ್ದಾರೆ.
(ಆಧಾರ : ಮಹರ್ಷಿ, ೭೨ ನೇ ನಾಡಿವಾಚನ, ಚೆನ್ನೈ, ತಮಿಳುನಾಡು (೨೬..೨೦೧೬))
. .ಪೂ. ಡಾಕ್ಟರರ ಬಳಿಗೆ ಬಂದಂತಹ ಪ್ರತಿಯೊಬ್ಬ ಸಾಧಕನೂ ವಜ್ರದಂತಿರುವುದು, ವಜ್ರದ ವ್ಯಾಪಾರಿಯೂ ವಜ್ರಕ್ಕೆ ಹೊಳಪು ಬರಲು ಅದನ್ನು ಸಾಣೆ ಹಿಡಿಯುವಂತೆ ಪ.ಪೂ. ಡಾಕ್ಟರರು ಕಳೆದ ಅನೇಕ ವರ್ಷಗಳಿಂದ ಸಾಧಕರಿಂದ ಸಾಧನೆಯನ್ನು ಮಾಡಿಸಿಕೊಂಡು ಅವರಲ್ಲಿ ಸಂಸ್ಕಾರವನ್ನು ಮಾಡಿರುವುದರಿಂದ ಅವರು ವಜ್ರದಂತೆ ಪ್ರಕಾಶಮಾನ(ಉನ್ನತ)ರಾಗಿರುವುದು
ವಜ್ರದ ಬೆಲೆಯು ವಜ್ರಕ್ಕೆ ತಿಳಿದಿರುವುದಿಲ್ಲ; ಆದರೆ ವಜ್ರದ ವ್ಯಾಪಾರಿಗೆ ಸರಿಯಾಗಿ ತಿಳಿದಿರುತ್ತದೆ. .ಪೂ. ಡಾಕ್ಟರರ ಬಳಿಗೆ ಬಂದಂತಹ ಪ್ರತಿಯೊಬ್ಬ ಸಾಧಕನು ವಜ್ರದಂತಿದ್ದಾನೆ ಮತ್ತು ಪ.ಪೂ. ಡಾಕ್ಟರರು ವಜ್ರಪರೀಕ್ಷಕರಾಗಿದ್ದಾರೆ. ವಜ್ರವನ್ನು ಕಂಡುಹಿಡಿಯಲು ವಜ್ರಪರೀಕ್ಷಕನು ಬಹಳಷ್ಟು ಶ್ರಮಪಡುತ್ತಾನೆ. ಭೂಗರ್ಭದಿಂದ ವಜ್ರವನ್ನು ಹುಡುಕಲು ಭೂಗರ್ಭವನ್ನು ಅಗೆಯುವಾಗ ಒಂದೊಂದು ಹಂತವನ್ನು ದಾಟಬೇಕಾಗುತ್ತದೆ. .ಪೂ. ಡಾಕ್ಟರರು ಪೃಥ್ವಿಯ ಮೇಲಿನ ವಜ್ರದಂತಿರುವ ಒಬ್ಬೊಬ್ಬ ಸಾಧಕನನ್ನು ಹುಡುಕಿ ತೆಗೆದಿದ್ದಾರೆ. ಭೂಗರ್ಭದಿಂದ ದೊರೆತ ವಜ್ರವು ಕಲ್ಲಿನಂತಿರುತ್ತದೆ. ಆ ಕಲ್ಲನ್ನು ವಜ್ರದ ವ್ಯಾಪಾರಿಯು ಕತ್ತರಿಸುತ್ತಾನೆ. ಅದಕ್ಕೆ ಆಕಾರವನ್ನು ನೀಡಿ ಹೊಳಪು ಬರುವಂತೆ ಮಾಡುತ್ತಾನೆ. ಆಗ ಆ ವಜ್ರಕ್ಕೆ ಬೆಲೆ ಬರುತ್ತದೆ. ಅದೇರೀತಿ ಪ.ಪೂ. ಡಾಕ್ಟರರು ಕಳೆದ ಅನೇಕ ವರ್ಷಗಳಿಂದ ಸಾಧಕರ ಮೇಲೆ ಮಾಡಿರುವ ಒಳ್ಳೆಯ ಸಂಸ್ಕಾರದಿಂದ (ಸಾಧನೆಯನ್ನು ಮಾಡಿಸಿಕೊಂಡಿರುವುದರಿಂದ) ಇಂದು ಸಾಧಕರು ವಜ್ರದಂತೆ ಹೊಳೆಯುತ್ತಿದ್ದಾರೆ. (ಸಾಧಕರ ಆಧ್ಯಾತ್ಮಿಕ ಉನ್ನತಿಯಾಗಿದೆ.) (ಆಧಾರ : ಮಹರ್ಷಿ, ೨೨..೨೦೧೬, ೬೯ ನೇ ನಾಡಿವಾಚನ, ಮಂಗಳೂರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮಹರ್ಷಿಗಳ ದಿವ್ಯವಾಣಿ