ಗ್ರಂಥ-ನಿರ್ಮಿತಿ ಮತ್ತು ಪ್ರಕಾಶನ ಕಾರ್ಯ

ಪರಾತ್ಪರ ಗುರು ಡಾ. ಆಠವಲೆಯವರು ಅಧ್ಯಾತ್ಮಶಾಸ್ತ್ರ, ದೇವತೆಗಳ ಉಪಾಸನೆ, ಸಾಧನೆ, ಆಚಾರಧರ್ಮ, ಬಾಲಸಂಸ್ಕಾರ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ, ಈಶ್ವರಪ್ರಾಪ್ತಿಗಾಗಿ ಕಲೆ, ಆಧ್ಯಾತ್ಮಿಕ ಉಪಾಯ, ಆಪತ್ಕಾಲೀನ ಉಪಚಾರ, ಸಮ್ಮೋಹನ ಉಪಚಾರ ಇತ್ಯಾದಿ ವಿವಿಧ ವಿಷಯಗಳ ಗ್ರಂಥಸಂಪತ್ತನ್ನು ಸಂಕಲನ ಮಾಡಿದ್ದಾರೆ. ಅವರು ೩೦.೪.೨೦೧೬ ರವರೆಗೆ ಸಂಕಲನ ಮಾಡಿದ ೨೮೭ ಗ್ರಂಥಗಳು ಭಾರತದ ಮರಾಠಿ, ಹಿಂದಿ, ಆಂಗ್ಲ, ಕನ್ನಡ, ತೆಲುಗು, ತಮಿಳು, ಮಲ್ಯಾಳಮ್, ಗುಜರಾತಿ, ಗುರುಮುಖಿ, ಒಡಿಯಾ, ಬಂಗಾಲಿ, ಅಸ್ಸಾಮಿ ಮುಂತಾದ ಭಾಷೆಗಳಲ್ಲಿ ಮತ್ತು ವಿದೇಶದಲ್ಲಿನ ನೇಪಾಳಿ, ಜರ್ಮನ್ ಮತ್ತು ಸರ್ಬಿಯನ್ ಮುಂತಾದ ೧೫ ಭಾಷೆಗಳಲ್ಲಿ ೬೫ ಲಕ್ಷದ ೫ ಸಾವಿರ ಪ್ರತಿಗಳ ಪ್ರಕಾಶನವಾಗಿದೆ. ಇನ್ನೂ ಸುಮಾರು ೪೫೦೦ ಗ್ರಂಥಗಳು ಪ್ರಕಾಶನವಾಗುವಷ್ಟು ಜ್ಞಾನ ಅವರಲ್ಲಿ ಸಂಗ್ರಹವಿದೆ. ಇದಕ್ಕಾಗಿ ಅವರು ಇವೆಲ್ಲ ವಿಷಯಗಳನ್ನು ೧೬,೦೦೦ ಸಂಕೇತಾಂಕಗಳನ್ನು ನೀಡಿ ವಿಭಜಿಸಿ ಸಂಗ್ರಹಿಸಿದ್ದಾರೆ.
ಪರಾತ್ಪರ ಗುರು ಡಾ. ಆಠವಲೆಯವರ ಗ್ರಂಥಗಳ ವೈಶಿಷ್ಟ್ಯಗಳು
ಅ. ಅಧ್ಯಾತ್ಮದ ವಿವಿಧ ಅಂಗಗಳ ಕಾರ್ಯಕಾರಣಭಾವ ಹಾಗೂ ಅದರಲ್ಲಿನ ಪ್ರತಿಯೊಂದು ಕೃತಿಯ ವಿಷಯದಲ್ಲಿ ‘ಏಕೆ ಮತ್ತು ಹೇಗೆ’ ಇವುಗಳ ಶಾಸ್ತ್ರೀಯ ಉತ್ತರಗಳು !
ಆ. ವಿಜ್ಞಾನಯುಗದಲ್ಲಿ ವಾಚಕರಿಗೆ ಅರ್ಥವಾಗುವಂತೆ ಆಧುನಿಕ ವೈಜ್ಞಾನಿಕ ಭಾಷೆಯಲ್ಲಿನ (ಉದಾ. ಕೋಷ್ಟಕ, ಶೇಕಡಾವಾರು) ಜ್ಞಾನ !
ಇ. ಕೇವಲ ತಾತ್ತ್ವಿಕ ವಿವೇಚನೆಯಲ್ಲ, ಕಾಲಾನುಸಾರ ಸಾಧನೆಯನ್ನು ಕೃತಿಯಲ್ಲಿ ತರುವ ವಿಷಯದಲ್ಲಿ ಮಾರ್ಗದರ್ಶನ !
ಈ. ಧಾರ್ಮಿಕ ಕೃತಿ ಮತ್ತು ಸಾಧನೆ ಇವುಗಳಿಂದ ವ್ಯಕ್ತಿ, ವಸ್ತು, ವಾಸ್ತು ಮತ್ತು ವಾತಾವರಣದ ಮೇಲಾಗುವ ಒಳ್ಳೆಯ ಹಾಗೂ ಕೆಟ್ಟ ಪರಿಣಾಮಗಳಿಗೆ ಸಂಬಂಧಿಸಿದ ಸೂಕ್ಷ್ಮ ಸ್ತರದ ಪ್ರಕ್ರಿಯೆಯನ್ನು ತೋರಿಸುವ ಚಿತ್ರಗಳು ಮತ್ತು ಲೇಖನಗಳು ಹಾಗೂ ವೈಜ್ಞಾನಿಕ ಉಪಕರಣಗಳ ಮೂಲಕ ಮಾಡಿದ ಪ್ರಯೋಗಗಳ ಲೇಖನಗಳೂ ಒಳಗೊಂಡಿವೆ !

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗ್ರಂಥ-ನಿರ್ಮಿತಿ ಮತ್ತು ಪ್ರಕಾಶನ ಕಾರ್ಯ