ದೇವಸ್ಥಾನಗಳ ಮೇಲೆಯೇ ಸರಕಾರದ ನಿಯಂತ್ರಣವೇಕೆ ? ಎಂಬ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಸಜ್ಜು

ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಇಂತಹ ವಿಷಯಗಳಿಗೆ ಹಿಂದೂಗಳು 
ಹೋರಾಡ ಬೇಕಾಗಿರುವುದು ಲಜ್ಜಾಸ್ಪದ !
ಬೆಂಗಳೂರು : ಸರಕಾರವು ಹಿಂದೂಗಳ ದೇವಸ್ಥಾನಗಳ ಹಣವನ್ನೇ ಏಕೆ ವಶಪಡಿಸಿಕೊಳ್ಳುತ್ತದೆ? ಇತರ ಪಂಥೀಯರ ಸಂಘಟನೆಗಳದ್ದೇಕೆ ತೆಗೆದುಕೊಳ್ಳುವುದಿಲ್ಲ? ಎಂಬ ವಿಷಯದಲ್ಲಿ ಆನ್‌ಲೈನ್ ಅರ್ಜಿಯನ್ನು ಚೇಂಜ್ ಡಾಟ್ ಆರ್ಗ್ ಎಂಬ ಜಾಲತಾಣದಲ್ಲಿಡಲಾಗಿದೆ. ಕಾಲಾಂತರದಲ್ಲಿ ಈ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾಗುವುದು. ಬೆಂಗಳೂರಿನ ಹಿಂದೂ ಧರ್ಮಾಭಿಮಾನಿ ಮೀನಾ ನಾರಾಯಣ ಎಂಬುವರು ಜನರ ಬೆಂಬಲ ಸಿಗಬೇಕೆಂದು ಸದರಿ ಅರ್ಜಿಯನ್ನು ಜಾಲತಾಣದಲ್ಲಿಟ್ಟಿದ್ದಾರೆ. (ಹಿಂದೂ ಧರ್ಮಾಭಿಮಾನಿ ಮಹಿಳೆ ಮೀನಾ ನಾರಾಯಣ ಇವರಿಗೆ ಅಭಿನಂದನೆ ! ಇಂತಹ ಧರ್ಮಾಭಿಮಾನ ಎಷ್ಟು ಹಿಂದೂಗಳಲ್ಲಿದೆ? - ಸಂಪಾದಕರು)
ಈ ಅರ್ಜಿಯ ಮೂಲಕ ನಿಷ್ಕ್ರಿಯ ಹಿಂದೂ ಮತ್ತು ಹಿಂದೂದ್ರೋಹಿ ಸರಕಾರದ ಕಣ್ಣಿಗೆ ಅಂಜನ ಹಾಕಿದಂತಾಗಿದೆ.
ಅರ್ಜಿಯಲ್ಲಿನ ಆಯ್ದ ಅಂಶಗಳು ಮುಂದಿವೆ -
. ಹಿಂದೂ ದೇವಸ್ಥಾನಗಳ ಹಣ ದೇವಸ್ಥಾನಗಳ ಅಭಿವೃದ್ಧಿಗಾಗಿ ಸಿಗು ವುದಿಲ್ಲ. ಆ ಹಣ ರಾಜ್ಯಸರಕಾರದ ಕಡೆಗೆ ಹೋಗುತ್ತದೆ, ಹೀಗಿರುವಾಗ, ಮಸೀದಿ ಮತ್ತು ಚರ್ಚುಗಳಿಗೆ ಇದರಿಂದ ವಿನಾಯಿತಿ ಏಕೆ ? ಇದನ್ನು ಬದಲಾಯಿಸುವ ಆವಶ್ಯಕತೆಯಿದೆ.
. ದೇವಸ್ಥಾನಗಳ ಹಣ ದೇವಸ್ಥಾನಗಳ ನಿಯಂತ್ರಣದಲ್ಲಿರಬೇಕು, ಸರಕಾರದ ಬಳಿಯಲ್ಲ ! ದೇವಸ್ಥಾನಗಳ ಸಂದರ್ಭದಲ್ಲಿ ಸರಕಾರದ ಧೋರಣೆಯು ಸಿ.ಪಿ. ರಾಮಸ್ವಾಮಿ ಅಯ್ಯರ್‌ರವರ ನೇತೃತ್ವದಲ್ಲಿ ಹಿಂದೂ ಧರ್ಮ ದೇವಸ್ವಮ್ ಆಯೋಗವು ಕ್ರಿ.. ೧೯೬೦ರಲ್ಲಿ ಮಾಡಿದ ಶಿಫಾರಸ್ಸಿನ ಮೇಲಾಧಾರಿತವಾಗಿದೆ. ಹಿಂದೂ ದೇವಸ್ಥಾನಗಳು ಮತ್ತು ಮಠಗಳು ಜನತೆಯದ್ದಾಗಿವೆ ಎಂದು ಈ ಆಯೋಗವು ಶಿಫಾರಸ್ಸು ಮಾಡಿತ್ತು. ನ್ಯಾಯಾಲಯವು ಅಸಮರ್ಪಕ ಮಾಹಿತಿಯ ಆಧಾರದ ಮೇಲೆ ನೀಡಿದ ತೀರ್ಪಿನಲ್ಲಿ ಸರಕಾರದ ಹೇಳಿಕೆಯನ್ನು ಎತ್ತಿ ಹಿಡಿಯಿತು ಮತ್ತು ದೇವಸ್ಥಾನಗಳ ಹಣದ ಮೇಲೆ ದೇವಸ್ವಮ್ ಮಂಡಳಿಯ ನಿಯಂತ್ರಣವನ್ನು ತಂದಿತು. ದೇವಸ್ಥಾನಗಳ ವ್ಯವಹಾರ ನಡೆಸಲು ವ್ಯವಸ್ಥಾಪಕರಿಗೆ ಹಣದ ಆವಶ್ಯಕತೆಯಿಲ್ಲ ಎಂಬುದನ್ನೂ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ನೀಡಿತು. (ತಮ್ಮನ್ನು ಹಿಂದುತ್ವನಿಷ್ಠರೆನಿಸಿಕೊಳ್ಳುವ ಆಡಳಿತಾರೂಢರು ಈಗಲಾದರೂ ಹಿಂದೂಗಳ ದೇವಸ್ಥಾನಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂಬುದು ಹಿಂದೂಗಳ ಇಚ್ಛೆಯಾಗಿದೆ. - ಸಂಪಾದಕರು)
. ದೇವಸ್ಥಾನದ ಸರಕಾರಿಕರಣ ಮಾಡಿದ ನಂತರ ಹೆಚ್ಚಿನ ರಾಜ್ಯಗಳ ಸರಕಾರವು ಮಂದಿರಗಳ ಆಡಳಿತವನ್ನು ನಡೆಸಲು ಸ್ವತಂತ್ರವಾದ ಇಲಾಖೆ ಯನ್ನು ಸ್ಥಾಪಿಸಿದವು. ಆಂಧ್ರಪ್ರದೇಶ ಸರಕಾರವು ೩೩ ಸಾವಿರ ಮಂದಿರಗಳ ಆಡಳಿತವನ್ನು ಸಂಭಾಳಿಸುತ್ತದೆ. ತಮಿಳುನಾಡು, ಕರ್ನಾಟಕ, ಕೇರಳ ರಾಜ್ಯಗಳಲ್ಲೂ ದೇವಸ್ಥಾನಗಳ ಆಡಳಿತವನ್ನು ಸರಕಾರದ ವತಿಯಿಂದ ನಡೆಸಲಾಗುತ್ತದೆ.
. ಸರಕಾರದ ನಿಯಂತ್ರಣದಲ್ಲಿರುವ ಹಿಂದೂಗಳ ಪ್ರಾಚೀನ ದೇವಸ್ಥಾನ ಗಳ ಗೋಡೆಗಳನ್ನು ಕೆಡವಲಾಗುತ್ತಿದೆ ಅಥವಾ ಇಡೀ ದೇವಸ್ಥಾನವನ್ನೇ ಕೆಡವಲಾಗುತ್ತಿದೆ. ಈ ಮೂಲಕ ಐತಿಹಾಸಿಕ ಶಿಲ್ಪಕಲೆಯನ್ನೇ ನಾಶಗೊಳಿಸ ಲಾಗುತ್ತಿದೆ. ತಮಿಳುನಾಡಿನ ಸಾಲಮ ಸಮೀಪದ ನಸಿಯಾಪುರದ ದೇವಸ್ಥಾನದ ಮಂಟಪವನ್ನೇ ಸಂಪೂರ್ಣವಾಗಿ ನಾಶಗೊಳಿಸಲಾಯಿತು. ಕೆಲವು ದೇವಸ್ಥಾನಗಳಲ್ಲಿ ರಾಜಕಾರಣಿಗಳ ಕಾರ್ಯಾಲಯಗಳಿವೆ.
. ದೇವಸ್ಥಾನಗಳ ದುರುಸ್ತಿ ಮಾಡುವುದಿದ್ದಲ್ಲಿ ಸರಕಾರಿ ಅಧಿಕಾರಿಗಳು ಪುರಾತನ ವಾಸ್ತುತಜ್ಞರಲ್ಲಿ ಅಥವಾ ಆ ಕ್ಷೇತ್ರದಲ್ಲಿ ತಜ್ಞರ ಸಲಹೆ ಕೇಳುವು ದಿಲ್ಲ. ಇತ್ತೀಚೆಗೆ ತಿರುವನಂತಪುರಮ್‌ನ ಶ್ರೀ ಪದ್ಮನಾಭ ದೇಗುಲದ ಸರಕಾರಿ ವ್ಯವಸ್ಥಾಪನೆಯು ಪುರಾತನ ವಾಸ್ತುತಜ್ಞರ ಸಲಹೆ ಪಡೆಯದೇ ದೇವಸ್ಥಾನದ ಕಲ್ಲಿನ ಮಂಟಪವನ್ನು ರಾತ್ರಿಯ ಸಮಯದಲ್ಲಿ ತೆಗೆಯಲು ಪ್ರಯತ್ನಿಸಿತು.
. ಪ್ರತಿಯೊಂದು ಪ್ರಮುಖ ದೇವಸ್ಥಾನವು ತಮ್ಮ ಕ್ಷೇತ್ರದಲ್ಲಿ ಹಿಂದೂ ಧರ್ಮದ ಪ್ರಸಾರ ಮಾಡುವ ಜವಾಬ್ದಾರಿ ವಹಿಸಬೇಕು. ಅದು ವಿಫಲವಾಗಿರುವುದರಿಂದ ದಲಿತರು ಮತಾಂತರಗೊಳ್ಳುತ್ತಿದ್ದಾರೆ. ಹಾಗೆಯೇ ಇತರ ವಿದ್ಯಾವಂತ ಹಿಂದೂಗಳೂ ಹಿಂದೂ ಧರ್ಮದಿಂದ ದೂರ ಹೋಗುತ್ತಿದ್ದಾರೆ. ಇದಕ್ಕಾಗಿ ಪುರೋಹಿತರಿಗೆ ತರಬೇತಿ ಕೊಡದಿದ್ದಲ್ಲಿ ಇಂತಹ ಘಟನೆಗಳು ಹೆಚ್ಚುತ್ತಲೇ ಹೋಗುತ್ತವೆ. ದೇವಸ್ಥಾನಗಳ ಹಣದ ದುರ್ಬಳಕೆ ತಡೆಗಟ್ಟಬೇಕು. ಈ ಹಣವನ್ನು ದೇವಸ್ಥಾನಗಳಿಗೇ ವ್ಯಯಿಸ ಬೇಕು. ಪುರೋಹಿತರಿಗೆ ತರಬೇತಿ ಕೊಡಬೇಕು. ದೇವಸ್ಥಾನಗಳು ಹಿಂದೂ ಧರ್ಮದ ಪ್ರಸಾರ ಮಾಡಬೇಕು. (ಈ ಬೇಡಿಕೆಗಳು ಭಾರತವು ಹಿಂದೂ ರಾಷ್ಟ್ರವಾದ ನಂತರವೇ ಸ್ವೀಕರಿಸಲಾಗುವುದು ಎಂಬುದನ್ನು ಗಮನದಲ್ಲಿಟ್ಟು ಹಿಂದೂಗಳು ಆ ನಿಟ್ಟಿನಲ್ಲಿ ಸಂಘಟಿತರಾಗಿ ಪ್ರಯತ್ನಿಸಬೇಕು. - ಸಂಪಾದಕರು)
. ಈ ದೇಶದಲ್ಲಿ ಚರ್ಚ್ ಎಲ್ಲಕ್ಕಿಂತ ದೊಡ್ಡ ಜಮೀನಿಗೆ ವಾರಸುದಾರ ವಾಗಿದೆ. ಸೊಸೈಟೀಸ್ ರಿಜಿಸ್ಟ್ರೇಶನ್ ಆಕ್ಟ್, ೧೯೬೦ ಕ್ಕನುಸಾರ ಬ್ರಿಟಿಷರಿಂದ ಚರ್ಚುಗಳ ಆಸ್ತಿಪಾಸ್ತಿಗಳನ್ನು ಸುರಕ್ಷಿತಗೊಳಿಸಲಾಗಿದೆ. ಹಿಂದೂ ದೇಗುಲ ಗಳೂ ಈ ಕಾಯಿದೆಯ ಲಾಭ ಪಡೆಯಬೇಕು. (ಇವೆಲ್ಲ ಬೇಡಿಕೆಗಳನ್ನು ಕೇಂದ್ರ ಸರಕಾರವು ಸ್ವೀಕರಿಸುವುದೇ ಎಂಬುದರ ಕಡೆ ಹಿಂದೂಗಳ ಗಮನವಿದೆ ! - ಸಂಪಾದಕರು)
.................................
ಆನ್‌ಲೈನ್ ಅರ್ಜಿಯ ಸಂಪರ್ಕಕೊಂಡಿ (ಲಿಂಕ್)
ಹಸ್ತಾಕ್ಷರ (ಆನ್‌ಲೈನ್ ಸಿಗ್ನೇಚರ್) ಹಾಕಲು ಅರ್ಜಿಯನ್ನು ಚೇಂಜ್ ಡಾಟ್ ಆರ್ಗ್ ಎಂಬ ಜಾಲತಾಣದಲ್ಲಿ ಮುಂದಿನ ಸಂಪರ್ಕಕೊಂಡಿ ಯಲ್ಲಿಡಲಾಗಿದೆ : goo.gl/yLTXt
ಟಿಪ್ಪಣಿ : ಗಮನಿಸಿ, ಈ ಸಂಪರ್ಕಕೊಂಡಿಯ ಕೆಲವು ಅಕ್ಷರಗಳು ಕ್ಯಾಪಿಟಲ್‌ನಲ್ಲಿವೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೇವಸ್ಥಾನಗಳ ಮೇಲೆಯೇ ಸರಕಾರದ ನಿಯಂತ್ರಣವೇಕೆ ? ಎಂಬ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಸಜ್ಜು