‘ಶೇರ್ಸ್‌’ ಮತ್ತು 'ಮ್ಯುಚ್ಯುವಲ್ ಫಂಡ್’ ಇವುಗಳಲ್ಲಿ ಹಣ ತೊಡಗಿಸುವುದರಿಂದ ಸಂಭವಿಸುವ ಆರ್ಥಿಕ ಹಾನಿಯನ್ನು ಗಮನದಲ್ಲಿಟ್ಟು ಅದರಲ್ಲಿ ತೊಡಗಿಸಿದ ಹಣವನ್ನು ಆದಷ್ಟು ಬೇಗ ತೆಗೆಯಿರಿ !

ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗಾಗಿ ಮಹತ್ವದ ಮಾಹಿತಿ
‘ಶೇರ್ಸ್‌’ ಮತ್ತು ‘ಮ್ಯುಚ್ಯುವಲ್ ಫಂಡ್’ ಇವುಗಳಲ್ಲಿ ಹಣವನ್ನು ತೊಡಗಿಸುವುದರಿಂದ ಅದರಿಂದ ದೊರೆಯುವ ರಿಟರ್ನ್ಸ್ (ಲಾಭ) ಬ್ಯಾಂಕ್‌ನಲ್ಲಿ ಹಣ ಇಟ್ಟರೆ ದೊರೆಯುವ ಬಡ್ಡಿಗಿಂತ ಹೆಚ್ಚಿರುತ್ತದೆ’, ಎಂದು ಅನೇಕ ಜನರು ಅದರಲ್ಲಿ ಹಣವನ್ನು ತೊಡಗಿಸುತ್ತಾರೆ. ಅನೇಕ ಪ್ರಸಂಗಗಳಲ್ಲಿ ಲಾಭವಂತು ಆಗುವುದೇ ಇಲ್ಲ; ಆದರೆ ಅದರಲ್ಲಿ ತೊಡಗಿಸಿದ ಮೊತ್ತವೂ ಮರಳಿ ದೊರೆಯದಿರುವುದರಿಂದ ಅನೇಕರ ಆರ್ಥಿಕ ಹಾನಿಯಾಗಿರುವ ಉದಾಹರಣೆಗಳಿವೆ.
ಸದ್ಯ ನಡೆಯುತ್ತಿರುವ ಆರ್ಥಿಕ ಕುಸಿತದಿಂದಾಗಿ ಬಹಳಷ್ಟು ಕಂಪನಿಗಳಿಗೆ ಆರ್ಥಿಕ ಹಾನಿ ಸಹಿಸಬೇಕಾಗುತ್ತಿದೆ. ಆದ್ದರಿಂದ ಅವರ ‘ಶೇಯರ್ ವ್ಯಾಲ್ಯು’ ಮೇಲೆ ವಿಪರೀತ ಪರಿಣಾಮವಾಗುತ್ತಿರುವುದರಿಂದ ತೊಡಗಿಸಿದವರ ‘ಶೇರ್ಸ್‌’ ಮತ್ತು ‘ಮ್ಯುಚ್ಯುವಲ್ ಫಂಡ್’ ಇವುಗಳಲ್ಲಿನ ಹಣ ಮುಳುಗುವ ಸಾಧ್ಯತೆಯಿದೆ. ಆದ್ದರಿಂದ ‘ಶೇಯರ್ಸ್’ ಮತ್ತು ಮ್ಯುಚ್ಯುಅಲ್ ಫಂಡ್’ ಇವುಗಳಲ್ಲಿ ಹಣವನ್ನು ತೊಡಗಿಸಿದ್ದರೆ ಅದನ್ನು ಆದಷ್ಟು ಬೇಗ ಹಿಂತಿರುಗಿ ಪಡೆಯುವುದು ಆವಶ್ಯಕವಾಗಿದೆ. ಭವಿಷ್ಯದಲ್ಲಿಯೂ ಅದರಲ್ಲಿ ಹಣವನ್ನು ತೊಡಗಿಸಬಾರದು.’ - (ಪೂ.) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೨.೫.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
‘ಶೇರ್ಸ್‌’ ಮತ್ತು 'ಮ್ಯುಚ್ಯುವಲ್ ಫಂಡ್’ ಇವುಗಳಲ್ಲಿ ಹಣ ತೊಡಗಿಸುವುದರಿಂದ ಸಂಭವಿಸುವ ಆರ್ಥಿಕ ಹಾನಿಯನ್ನು ಗಮನದಲ್ಲಿಟ್ಟು ಅದರಲ್ಲಿ ತೊಡಗಿಸಿದ ಹಣವನ್ನು ಆದಷ್ಟು ಬೇಗ ತೆಗೆಯಿರಿ !