ದೇಶದಲ್ಲಿ ಪ್ರತಿದಿನ ರಸ್ತೆ ಅಪಘಾತಗಳಲ್ಲಿ ೪೦೦ ಜನರು ಸಾವನ್ನಪ್ಪುತ್ತಾರೆ !

ಸ್ವಾತಂತ್ರ್ಯದ ೬೮ ವರ್ಷಗಳ ನಂತರವೂ ರಸ್ತೆ ಅಪಘಾತವನ್ನು ನಿಯಂತ್ರಿಸಲು ಸಾಧ್ಯವಿಲ್ಲದಿರುವುದು ಚಿಂತಾಜನಕ !
ನವ ದೆಹಲಿ : ದೋಷಯುಕ್ತ ಮಾರ್ಗಗಳಿಂದಾಗಿ ದೇಶದಲ್ಲಿ ಪ್ರತಿದಿನ ರಸ್ತೆ ಅಪಘಾತಗಳಲ್ಲಿ ಕನಿಷ್ಠ ೪೦೦ ಜನರು ಸಾವನ್ನಪ್ಪುತ್ತಿದ್ದಾರೆ, ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದರು. ಕಳೆದ ೨ ವರ್ಷಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿಯೂ ಹೆಚ್ಚೇನೂ ಬದಲಾವಣೆಯಾಗಿಲ್ಲ, ಎಂದು ಅವರು ಒಪ್ಪಿದರು. ಇನ್ನು ಮುಂದೆ ನಾವು ಹಾಗಾಗಲು ಬಿಡುವುದಿಲ್ಲ. ಈ ವರದಿಯಿಂದ ನನಗೆ ಬಹಳ ನೋವಾಗುತ್ತಿದೆ, ಎಂದು ಸಹ ಅವರು ಹೇಳಿದರು. ಭಾರತದಲ್ಲಿ ರಸ್ತೆ ಅಪಘಾತಗಳ ವಿಷಯದ ೨೦೧೫ ರ ವರದಿಯನ್ನು ಸಾರ್ವಜನಿಕಗೊಳಿಸುವಾಗ ಅವರು ಮಾತನಾಡುತ್ತಿದ್ದರು. ೨೦೧೫ ರಲ್ಲಿ ಆಗಿರುವ ಒಟ್ಟು ರಸ್ತೆ ಅಪಘಾತಗಳಲ್ಲಿ ಶೇ. ೭೭.೧೨ ರಷ್ಟು ಅಪಘಾತಗಳಿಗೆ ಚಾಲಕರ ತಪ್ಪು ಕಾರಣವಾಗಿದೆ, ಎಂದು ಈ ವರದಿಯಲ್ಲಿ ನಮೂದಿಸಲಾಗಿದೆ.
ಗಡ್ಕರಿ ಮಾತು ಮುಂದುವರಿಸುತ್ತಾ ಹೀಗೆ ಹೇಳಿದರು -
೧. ದೇಶದಲ್ಲಿ ಪ್ರತಿ ಗಂಟೆಗೆ ೫೭ ಅಪಘಾತಗ ಳಾಗುತ್ತವೆ ಹಾಗೂ ಅದರಲ್ಲಿ ೧೭ ಜನರು ಮೃತಪಡುತ್ತಾರೆ. ಅಪಘಾತದಲ್ಲಿ ಮೃತರಾಗುವವರಲ್ಲಿ ಶೇ. ೫೪ ರಷ್ಟು ಜನರು ಯುವಕರು ಅಂದರೆ ೧೫ ರಿಂದ ೩೪ ವರ್ಷ ವಯಸ್ಸಿನವರಾಗಿರುತ್ತಾರೆ.
೨. ಕಾಂಗ್ರೆಸ್ ಸರಕಾರದ ಕಾಲದಲ್ಲಿ ಅಪಾರ ಹಣ ಖರ್ಚು ಮಾಡಿ ಸೇತುವೆ ಮತ್ತು ಸುರಂಗಮಾರ್ಗಗಳನ್ನು ನಿರ್ಮಿಸಲಾಯಿತು. ದೆಹಲಿ-ಗುರುಗ್ರಾಮ ಪ್ರದೇಶ ದಲ್ಲಿ ಮಹತ್ವದ ಮಾರ್ಗಗಳಲ್ಲಿ ಈ ಕೆಲಸಗಳನ್ನು ಮಾಡಲಾಗಿತ್ತು. ಅವುಗಳಲ್ಲಿಯೂ ಬೃಹತ್ಪ್ರಮಾಣದಲ್ಲಿ ಅಪಘಾತಗಳಾಗುತ್ತಿವೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೇಶದಲ್ಲಿ ಪ್ರತಿದಿನ ರಸ್ತೆ ಅಪಘಾತಗಳಲ್ಲಿ ೪೦೦ ಜನರು ಸಾವನ್ನಪ್ಪುತ್ತಾರೆ !