ಧರ್ಮಶಿಕ್ಷಣದ ಆವಶ್ಯಕತೆ

ಹಿಂದಿನ ಕಾಲದಲ್ಲಿ ಹಿಂದೂಗಳಿಗೆ ಧರ್ಮಶಿಕ್ಷಣವನ್ನು ನೀಡಲಾಗುತ್ತಿತ್ತು. ಆದುದರಿಂದ ಧರ್ಮವೇ ಹಿಂದೂ ಗಳ ಜೀವನದ ಕೇಂದ್ರಬಿಂದುವಾಗಿತ್ತು. ಕಾಲಾಂತರ ಹಿಂದೂಗಳಿಗೆ ಧರ್ಮಶಿಕ್ಷಣ ಸಿಗುವುದು ನಿಂತು ಹೋಯಿತು. ಆದುದರಿಂದ ಹಿಂದೂಗಳ ಧರ್ಮಾಚರಣೆಯ ಪ್ರವೃತ್ತಿಯೂ ಕಡಿಮೆಯಾಯಿತು. ಇತರ ಧರ್ಮೀಯರಿಗೆ ಧರ್ಮ ಶಿಕ್ಷಣವು ಸಿಗುತ್ತದೆ ಆದರೆ ಇಂದಿನ ಹಿಂದೂಗಳಿಗೆ ಧರ್ಮಶಿಕ್ಷಣವೇ ಸಿಗದಂತಾಗಿದೆ. ಆದುದರಿಂದ ಸರ್ವಶ್ರೇಷ್ಠವಾದ ಹಿಂದೂ ಧರ್ಮದ ಮೇಲೆ ಮೋಡಕವಿದಂತಾಗಿದೆ. ಯಾವುದರ ಆಚರಣೆಯಿಂದ ಪ್ರತಿೂಂದು ಪ್ರಾಣಿಮಾತ್ರರ ಐಹಿಕ, ಸಾಮಾಜಿಕ ಮತ್ತು ಪಾರಮಾರ್ಥಿಕ ಉನ್ನತಿಯು ನಿಶ್ಚಿತವಾಗಿ ಆಗುತ್ತದೆಯೋ ಅದುವೇ ಹಿಂದೂ ಧರ್ಮ. ಹಿಂದೂ ಧರ್ಮದಲ್ಲಿ ಹೇಳಲಾದ ಪ್ರತಿೂಂದು ಕೃತಿಯು ನಮ್ಮನ್ನು ಭಗವಂತನ ಸಮೀಪ ಕೊಂಡೊಯ್ಯಲಿಕ್ಕಾಗಿಯೇ ಇದೆ. ಅಂದರೆ ಹಿಂದೂ ಧರ್ಮವು ನಾವು ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಏನೆಲ್ಲ ಕೃತಿಗಳನ್ನು ಮಾಡುತ್ತೇವೆಯೋ ಅವು ಯಾವ ರೀತಿ ಇದ್ದರೆ ನಮಗೆ ಹೆಚ್ಚಿನ ಆನಂದ ಮತ್ತು ಶಾಂತಿ ಸಿಗುತ್ತದೆ ಎಂದು ತಿಳಿಸುತ್ತದೆ. ಇದುವೇ ಧರ್ಮ ಶಿಕ್ಷಣ. ಅದಕ್ಕನುಸಾರ ನಾವು ಧರ್ಮಾಚರಣೆ ಮಾಡಿದರೆ ನಮ್ಮ ಜೀವನವು ಆನಂದಮಯವಾಗುವು ದರಲ್ಲಿ ಸಂಶಯ ವಿಲ್ಲ. ಇತ್ತೀಚಿನ ಯುವ ಪೀಳಿಗೆಯು ಪ್ರತಿಯೊಂದು ವಿಷಯದ ಕಾರಣ ತಿಳಿದ ನಂತರವೇ ಅದನ್ನು ಸ್ವೀಕರಿಸುತ್ತದೆ. ಧಾರ್ಮಿಕ ಕೃತಿಗಳ ಹಿನ್ನೆಲೆಯ ಶಾಸ್ತ್ರೀಯ ಕಾರಣ ತಿಳಿದರೆ ಯುವ ಪೀಳಿಗೆಯೂ ಅಧ್ಯಾತ್ಮದತ್ತ ಆಕರ್ಷಿತವಾಗಬಹುದು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಧರ್ಮಶಿಕ್ಷಣದ ಆವಶ್ಯಕತೆ